For Quick Alerts
ALLOW NOTIFICATIONS  
For Daily Alerts

ಪ್ರಪೋಸಲ್ ತಿರಸ್ಕರಿಸುವ ಕೆಲ ವಿಧಾನಗಳು

By Hemanth Amin
|

ಹದಿಹರೆಯದಲ್ಲಿ ಪ್ರಪೋಸ್ ಮಾಡುವುದು ಸಾಮಾನ್ಯ. ಶಾಲೆ ಅಥವಾ ಕಾಲೇಜು ಆಗಿರಲಿ, ಈ ಒಂದು ಶಬ್ದ ಅಲ್ಲಿ ಸುತ್ತುತ್ತಾ ಇರುತ್ತದೆ. ನೀವು ಸುಂದರವಾಗಿ ಕಾಣಿಸುತ್ತಿದ್ದರೆ ಆಗ ಗುಲಾಬಿ ಹಿಡಿದುಕೊಂಡು ನಿಮ್ಮ ಹಿಂದಿನಿಂದ ಬರುವ ಹುಡುಗರಿಗೇನೂ ಕಡಿಮೆಯಿರುವುದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಯ್ಕೆ ಇರುತ್ತದೆ. ಕೆಲವರನ್ನು ನಾವು ಇಷ್ಟಪಟ್ಟರೆ, ಮತ್ತೆ ಕೆಲವರನ್ನು ಇಷ್ಟಪಡದಿರಬಹುದು. ಈ ವಿಶ್ವದಲ್ಲಿ ಪ್ರತಿಯೊಬ್ಬರೊಂದಿಗೆ ಪ್ರೀತಿಗೆ ಬೀಳಲು ಸಾಧ್ಯವಿಲ್ಲ. ಕೆಲವರಲ್ಲಿರುವ ಮೋಡಿ ಮಾಡುವ ಗುಣ ಮತ್ತು ಮಾತಿನ ಚತುರತೆಯಿಂದ ನೀವು ತಕ್ಷಣ ಅವರತ್ತ ಆಕರ್ಷಿತರಾಗಬಹುದು. ಯಾವಾಗಲೂ ಇದು ಆಗುತ್ತದೆಯೆಂದಲ್ಲ, ಕೆಲವೊಮ್ಮೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.

ಪ್ರಪೋಸಲ್ ನ್ನು ತಿರಸ್ಕರಿಸುವುದು ಅಷ್ಟು ಸುಲಭವಲ್ಲ ಮತ್ತು ಇದನ್ನು ನೀವು ಚಾಕಚಕ್ಯತೆಯಿಂದ ಅಥವಾ ಸಮಯಸ್ಫೂರ್ತಿಯಿಂದ ನಿಭಾಯಿಸುವ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿರುತ್ತಾನೆ ಮತ್ತು ವ್ಯಕ್ತಿಯನ್ನು ನಿಭಾಯಿಸಲು ಭಿನ್ನ ಮಾರ್ಗಗಳಿವೆ. ನೀವು ಇಷ್ಟಪಡುವುದಿಲ್ಲವೆನ್ನುವ ಸಣ್ಣ ಸುಳಿವು ಕೆಲವರಿಗೆ ಸಾಕು, ಮತ್ತೆ ಕೆಲವರಿಗೆ ಒರಟಾಗಿಯೇ ಹೇಳಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಕೆಟ್ಟವನಾಗಿರುವುದಿಲ್ಲ. ಆ ವ್ಯಕ್ತಿಗೆ ನಿಮ್ಮಲ್ಲಿ ಯಾವುದೇ ಭಾವನೆಯಿಲ್ಲವೆಂದು ಕೆಲವರು ಅರ್ಥಮಾಡಿಕೊಳ್ಳಬಹುದು. ಪರಿಸ್ಥಿತಿ ಮತ್ತು ವ್ಯಕ್ತಿಯ ಬಗ್ಗೆ ತಿಳಿಯಿರಿ. ಈಗಲೂ ನಿಮಗೆ ಕಷ್ಟವಾಗುತ್ತಿದೆಯೆಂದಾದರೆ ಭವಿಷ್ಯದ ಬಗ್ಗೆ ನಿರ್ಧರಿಸಿ ಮತ್ತು ನಿರಾಕರಿಸಿ. ಇಂತಹ ಪರಿಸ್ಥಿತಿ ನಿಭಾಯಿಸಲು ಕೆಲವೊಂದು ಮಾರ್ಗ ಮತ್ತು ಸಂಬಂಧದ ಸಲಹೆಗಳನ್ನು ನೀಡಲಾಗಿದೆ.

Ways To Reject A Proposal Effectively

1. ನೇರವಾಗಿ ಹೇಳಿಬಿಡಿ
ಇದು ಪ್ರಪೋಸಲ್ ತಿರಸ್ಕರಿಸಲು ಇರುವ ಒಳ್ಳೆಯ ವಿಧಾನ. ನೀವು ನೇರವಾಗಿ ಆ ವ್ಯಕ್ತಿಗೆ ಅಥವಾ ಆಕೆಗೆ ಸತ್ಯವನ್ನು ಸಭ್ಯತೆಯಿಂದ ಹೇಳಿ. ನಿಮ್ಮ ಪ್ರೀತಿಯಲ್ಲಿ ಬೀಳುವ ಪ್ರತಿಯೊಬ್ಬರಿಗೂ ವಿವರಣೆ ನೀಡಬೇಕೆಂದಿಲ್ಲ, ನೇರವಾಗಿ ಹೇಳಿ, ತುಂಬಾ ಅಪರೂಪದ ಪರಿಸ್ಥಿತಿಯಲ್ಲಿ ನಿಮ್ಮ ಭಾವನೆ ಕೆಲಸ ಮಾಡಲ್ಲವೆಂದು ಆತನಿಗೆ ಹೇಳಬೇಕಾಗಬಹುದು.

2. ಸ್ನೇಹ ಹಸ್ತ ಚಾಚಿ
ಆ ವ್ಯಕ್ತಿ ತುಂಬಾ ಒಳ್ಳೆಯ ಸ್ನೇಹಿತನೆಂದು ನಿಮಗನಿಸಿದರೆ, ನಿಮ್ಮಲ್ಲಿ ಆತ/ಆಕೆಯ ಬಗ್ಗೆ ಬೇರೆ ಯಾವುದೇ ಭಾವನೆ ಇಲ್ಲದಿದ್ದರೆ ಆಗ ಸ್ನೇಹ ಹಸ್ತವನ್ನು ಚಾಚಿ. ನೀವಿಬ್ಬರು ಒಳ್ಳೆಯ ಗೆಳೆಯರೆಂದು ಅವರಿಗೆ ವಿವರಿಸಿ ಹೇಳಿ. ಒಳ್ಳೆಯ ಸ್ನೇಹಿತ/ಸ್ನೇಹಿತೆ ಜೀವನದ ಅಮೂಲ್ಯ ಭಾಗ. ಇದು ಯಾವುದೇ ಶ್ರಮವಿಲ್ಲದೆ ಪ್ರಪೋಸಲ್ ತಿರಸ್ಕರಿಸುವ ವಿಧಾನ

3. ಅಚಲವಾಗಿರಿ
ನೀವು ನಿರಾಕರಿಸಿದ ಬಳಿಕವೂ ಆ ವ್ಯಕ್ತಿ ಮತ್ತೆ ಕೇಳುತ್ತಿದ್ದಾನೆ ಎಂದಾದರೆ ಆಗ ಅಚಲವಾಗಿರಿ. ಇದನ್ನು ನಿಭಾಯಿಸಲು ಇದೇ ಮಾರ್ಗ. ತುಂಬಾ ಒರಟಾಗಿ ಪ್ರಪೋಸಲ್ ನ್ನು ತಿರಸ್ಕರಿಸಬೇಕಾಗುತ್ತದೆ. ನಿಮ್ಮನ್ನು ಇಷ್ಟಪಡುವ ಯಾವುದೇ ಸಾಧ್ಯತೆಯಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಡಿ. ನಿಮಗೆ ಆಗುತ್ತಿರುವ ಕಿರಿಕಿರಿಯ ಬಗ್ಗೆ ತಿಳಿಸಿ.

4. ತಿರಸ್ಕಾರ ಹೆಚ್ಚಾಗುತ್ತದೆ ಎಂದು ಹೇಳಿ
ಗಂಭೀರವಾಗಿರುವ ವ್ಯಕ್ತಿಗಳಿಗೆ ಇದರಿಂದ ತುಂಬಾ ಭಯವಾಗಬಹುದು. ಇದು ಪುನರಾವರ್ತನೆಯಾದರೆ ತಿರಸ್ಕಾರ ಭಾವನೆ ಹೆಚ್ಚಾಗುತ್ತದೆಯೆಂದು ಆತ/ಆಕೆಗೆ ಹೇಳಿ. ಇದು ಪ್ರಪೋಸಲ್ ನ್ನು ಸ್ಪಷ್ಟವಾಗಿ ನಿರಾಕರಿಸುವ ವಿಧಾನ. ತುಂಬಾ ಒರಟಾಗಬೇಡಿ, ಇದು ಸಂಬಂಧದ ಸಲಹೆ.

5. ಅಭಿನಯ ಮಾಡಿ
ನೀವು ಪ್ರಪೋಸಲ್ ತಿರಸ್ಕರಿಸಲು ಒಳ್ಳೆಯ ಐಡಿಯಾ ಹಾಕಿಕೊಂಡಿದ್ದರೆ, ಇದು ಪ್ರಪೋಸಲ್ ತಿರಸ್ಕರಿಸಲು ಅತ್ಯುತ್ತಮ ದಾರಿ. ಸ್ವಲ್ಪ ಮಟ್ಟಿನ ನಟನೆ ಅಗತ್ಯವಿರುತ್ತದೆ. ಈ ಪ್ರಪೋಸಲ್ ನಿಂದ ತುಂಬಾ ಬೇಸರವಾಗಿದೆ. ಇದು ಅನಿರೀಕ್ಷಿತ ವ್ಯಕ್ತಿಯಿಂದ, ಅನಿರೀಕ್ಷಿತ ಸಮಯದಲ್ಲಿ ಬಂದಿದೆ ಎಂದು ಹೇಳಿ.

6. ಕಡೆಗಣಿಸಿ
ಯಾವುದೂ ಕೆಲಸ ಮಾಡದಿದ್ದರೆ ಮತ್ತು ಪ್ರಪೋಸಲ್ ನ್ನು ಹೇಗೆ ತಿರಸ್ಕರಿಸಬೇಕೆಂದು ನಿಮಗೆ ತಿಳಿಯದಿದ್ದರೆ, ಇದು ಕೆಲಸ ಮಾಡುತ್ತದೆ. ಕಡೆಗಣಿಸುವುದು ಇದಕ್ಕೆ ಒಳ್ಳೆಯ ಮದ್ದು. ನೀವು ಕಡೆಗಣಿಸುತ್ತಿದ್ದೀರಿ ಎಂದು ಆ ವ್ಯಕ್ತಿಗೆ ತಿಳಿಯುವ ಹಾಗೆ ಕಡೆಗಣಿಸಿ. ಕೆಲವರು ಇದನ್ನು ಅವಮಾನವೆಂದು ಪರಿಗಣಿಸಿ ದೂರವಾಗುತ್ತಾರೆ. ಈ ಸಂಬಂಧ ಸಲಹೆ ಖಂಡಿತವಾಗಿಯೂ ಕೆಲಸ ಮಾಡುತ್ತದೆ.

7. ಆತ/ಆಕೆಯ ಸಂಪರ್ಕದಿಂದ ದೂರಾಗಿ
ಪ್ರಪೋಸಲ್ ನಿರಾಕರಿಸುವುದು ಹೇಗೆಂದು ನೀವು ಯೋಚಿಸುತ್ತಿದ್ದರೆ ಆ ವ್ಯಕ್ತಿಯೊಂದಿಗೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಳ್ಳಿ ಮತ್ತು ಸಾಮಾಜಿಕ ಜಾಲತಾಣಗಳಿಂದಲೂ ಅವರನ್ನು ತೆಗೆದುಹಾಕಿ. ನೀವು ಇನ್ನು ಸ್ನೇಹಿತರಲ್ಲವೆನ್ನುವುದನ್ನು ಸ್ಪಷ್ಟವಾಗಿ ಹೇಳಿಬಿಡಿ.

ಎದುರಿನ ವ್ಯಕ್ತಿ ನಿಮ್ಮನ್ನು ಸ್ನೇಹಿತನೆಂದು ಪರಿಗಣಿಸಿದರೆ ಮಾತ್ರ ನೀವು ಕೂಡ ಸ್ನೇಹಿತನಾಗಿ ಉಳಿದುಕೊಳ್ಳಿ ಮತ್ತು ಸ್ನೇಹಿತನಂತೆ ವರ್ತಿಸಿ. ಸಂಬಂಧದ ಸಲಹೆಗಳು ಹೆಚ್ಚಾಗಿ ಕೆಲಸ ಮಾಡುತ್ತದೆ. ಪ್ರಯತ್ನಿಸಿ ನೋಡಿ.!

English summary

Ways To Reject A Proposal Effectively

Everyone has a taste; we may like some, may not like some. It is a true fact that we cannot fall in love with everyone in this world. Some people have the charm and vibe in them that they may sweep you off your feet. This may not be always the case; there may be tougher situations you may have to deal with.
Story first published: Monday, December 2, 2013, 13:09 [IST]
X
Desktop Bottom Promotion