For Quick Alerts
ALLOW NOTIFICATIONS  
For Daily Alerts

ನಿಮ್ಮ ಹುಡುಗನ ಮುನಿಸು ಹೋಗಿಸಬೇಕೆ?

By Super
|

ಏನು ನಿಮ್ಮ ಹುಡುಗನು ನಿಮ್ಮೊಂದಿಗೆ ಮುನಿಸಿಕೊಂಡಿರುವನೇ? ಅಥವಾ ನೀವೇ ನಿಮ್ಮ ಹುಡುಗನ ಜೊತೆಗೆ ಮುನಿಸಿಕೊಂಡಿದ್ದೀರಾ? ಏನೇ ಇರಲಿ ಈಗ ನೀವು ಆತನ ಜೊತೆಗೆ ಮಾತನಾಡುವ ಮೂಡ್‍ನಲ್ಲಿ ಇಲ್ಲ. ಆದರೂ ಆತನೇ ನಿಮಗೆ ಕಾಲ್ ಮಾಡಬೇಕು. ಕರೆ ಮಾಡಿ ಅದೂ ಇದೂ ಮಾತನಾಡಲಿಲ್ಲವಾದರು ಪರವಾಗಿಲ್ಲ, " ಹಾಯ್" ಅಥವಾ ಹೇಗಿದ್ದೀಯಾ? ಏನ್ ಮಾಡ್ತಾ ಇದ್ದೀಯಾ? ಎಂಬ ಪ್ರಶ್ನೆಗಳನ್ನು ಕೇಳಿದರು ಸಾಕು. ಅದು ಅರ್ಥಕ್ಕೆ ನಿಲುಕದಂತಹ ಅನೇಕ ವಿಚಾರಗಳನ್ನು ಮನಸ್ಸಿನಿಂದ ಮನಸ್ಸಿಗೆ ತಿಳಿಸಿಬಿಡುತ್ತದೆ. ಇಂತಹ ಕರೆಗಳಿಗಾಗಿ ನೀವು ಅದೆಷ್ಟೋ ಬಾರಿ ಕಾದು ಕುಳಿತಿದ್ದೀರಾ, ಕೆಲವೊಮ್ಮೆ ನೀವು ಅಂದುಕೊಂಡಂತೆ ಖುಷಿಯಾಗಿಸುವ ಕರೆಗಳು ಬಂದಿವೆ. ಇನ್ನು ಕೆಲವೊಮ್ಮೆ ಬರದೆ ನಿರಾಸೆಪಡಿಸಿವೆ.

ಯಾವುದೇ ಸಂಬಂಧದ ಆರಂಭದಲ್ಲಿ ಒಂದು ಗಂಡು -ಹೆಣ್ಣಿನ ನಡುವೆ ಹಲವಾರು ಕರೆಗಳು ಹರಿದಾಡಿರುತ್ತವೆ. ಸಂಬಂಧದ ಆರಂಭ ಘಟ್ಟದಲ್ಲಿ ಇದು ಸಹಜ. ಅದಾದ ನಂತರ ಮುಂದೆ ನಿಮ್ಮಿಬ್ಬರ ನಡುವೆ ಈ ಕರೆಗಳು ಹರಿದಾಡುವುದು ಕಡಿಮೆಯಾಗುತ್ತ ಬರುತ್ತದೆ. ಇದೂ ಸಹ ಸಹಜವಾದ ಪ್ರಕ್ರಿಯೆಯೆ, ಆದರೆ ಇದರಲ್ಲಿ ನೀವು ಮಾತ್ರ ಆತನ ಕರೆಗೆ ಬಾರಿ ನಿರೀಕ್ಷೆಯಿಂದ ಕಾಯ್ದು ಕುಳಿತಿರುತ್ತೀರಿ. ನೋಡ ನೋಡುತ್ತ, ಮಾತನಾಡುತ್ತ ಮಾತನಾಡುತ್ತ ಕ್ಲೀಷೆಯುಂಟಾಗುತ್ತಿದ್ದರು, ಸಹ ಸಂಬಂಧವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಕುತೂಹಲ ಇಬ್ಬರಲ್ಲಿಯೂ ಇರಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಸಂಬಂಧದ ತಾಜಾತನವನ್ನು ಕಾಪಾಡಬೇಕು.

ನಿಮ್ಮ ಹುಡುಗ ನಿಮ್ಮನ್ನು ಇತರ ಹೆಂಗಸರಿಗಿಂತ ಹೆಚ್ಚಾಗಿ ಇಷ್ಟಪಡಬೇಕೆಂದರೆ, ಮೊದಲು ನಿಮ್ಮ ವರ್ತನೆಯಲ್ಲಿ ಬದಲಾವಣೆಯನ್ನು ತಂದು ಕೊಳ್ಳಬೇಕು. ಅದಕ್ಕೆ ಮೊದಲು ನೀವೇನು ಬಯಸುತ್ತೀರೋ? ಹಾಗೆಯೇ ನೀವು ಇರುವುದನ್ನು ಅಭ್ಯಾಸ ಮಾಡಿ. ಯಾವೊಬ್ಬ ಗಂಡಸು ಸಹ ಖಾಲಿ ಕಪ್ಪೆ ಚಿಪ್ಪನ್ನು ಇಷ್ಟಪಡುವುದಿಲ್ಲ. ಅದಕ್ಕಾಗಿ ನೀವು ಸ್ವಲ್ಪ ಅಚ್ಚರಿಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಉತ್ತಮ. ಆಗ ನಿಮ್ಮ ಹುಡುಗನು ನಿಮ್ಮಲ್ಲಿ ಕುತೂಹಲ ಮತ್ತು ಆಸಕ್ತಿಯನ್ನು ಉಳಿಸಿಕೊಳ್ಳುತ್ತಾನೆ. ಇಲ್ಲಿ ಆತನೇ ನಿಮಗೆ ಕರೆ ಮಾಡಲು ಕೆಲವೊಂದು ಮಾರ್ಗೋಪಾಯಗಳನ್ನು ನಾವು ಇಲ್ಲಿ ಸೂಚಿಸಿದ್ದೇವೆ.

1. ನಿಮ್ಮ ಹುಡುಗನಿಗೆ ಸುಲಭವಾಗಿ ದೊರಕಬೇಡಿ.

1. ನಿಮ್ಮ ಹುಡುಗನಿಗೆ ಸುಲಭವಾಗಿ ದೊರಕಬೇಡಿ.

ನಿಜ, ನಿಮ್ಮ ಹುಡುಗನಿಗೆ ನೀವು ಸಿಗುವುದು ಕಡಿಮೆಯಾದಷ್ಟು, ಆತ ನಿಮ್ಮನ್ನು ಹೆಚ್ಚು ಬಯಸುತ್ತಾನೆ. ಆದರೆ ಇದು ಒಂದು ಮಿತಿಯಲ್ಲಿ ಇದ್ದರೆ ನಿಮಗೂ ಉತ್ತಮವೆಂಬುದನ್ನು ಮರೆಯಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಕುತೂಹಲವು ಉಳಿದುಕೊಳ್ಳುತ್ತದೆ ಹಾಗು ಸಂಬಂಧವು ಸಹ ತಾಜಾವಾಗಿ ಉಳಿಯುತ್ತದೆ.

2. ತಾಳ್ಮೆ

2. ತಾಳ್ಮೆ

ನೀವು ನಿಮ್ಮ ಸಂಗಾತಿಗೆ ದೊರೆಯದೆ ಆಟವಾಡುತ್ತಿದ್ದಾಗ, ನಿಮ್ಮ ಸಂಗಾತಿಯು ಸಹ ಅದೇ ಆಟವನ್ನು ನಿಮ್ಮೊಂದಿಗೆ ಆಡುತ್ತಿರಬಹುದು. ಆದರೂ ಸಹ ಸಮಾಧಾನ ಚಿತ್ತದಿಂದ ಕರೆಗಾಗಿ ಕಾಯಿರಿ. ಈ ಕಾಯುವಿಕೆಯು ನಿಮ್ಮನ್ನು ನೀವು ಎಷ್ಟು ಅರ್ಥ ಮಾಡಿಕೊಂಡಿದ್ದೀರಿ ಎಂಬುದನ್ನು ತಿಳಿಸುವ ಜೊತೆಗೆ, ನಿಮ್ಮ ಸಂಗಾತಿಯು ನಿಮಗೆ ಎಷ್ಟು ಅವಶ್ಯಕ ಎಂಬುದನ್ನು ಸಹ ತಿಳಿಸುತ್ತದೆ. ಅಲ್ಲಿಯವರೆಗೆ ಕರೆಗೆ ಅಥವಾ ಒಂದು ಸಂದೇಶಕ್ಕೆ ಕಾಯಿರಿ.

3. ದೈಹಿಕ ಸ್ಪರ್ಷದಿಂದ ದೂರವಿರಿ

3. ದೈಹಿಕ ಸ್ಪರ್ಷದಿಂದ ದೂರವಿರಿ

ಹೌದು, ದೈಹಿಕ ಸ್ಪರ್ಷದಿಂದ ಅಥವಾ ಬಾಂಧವ್ಯದಿಂದ ದೂರವಿದ್ದಷ್ಟು ನಿಮ್ಮ ಸಂಬಂಧವು ಮತ್ತಷ್ಟು ಗಾಢವಾಗಿರುತ್ತದೆ. ಬಹುತೇಕ ಉತ್ತಮ ಸಂಬಂಧಗಳು ದೈಹಿಕ ಸಂಪರ್ಕದಿಂದ ದೂರವಿರುತ್ತವೆ. ನೀವು ನಿಮ್ಮ ಸಂಗಾತಿಯ ದೈಹಿಕ ಸ್ಪರ್ಷದಿಂದ ದೂರವಿದ್ದಷ್ಟು ನಿಮಗೆ ಆತ ಕರೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ.

4. ಗ್ರಹಿಕೆ

4. ಗ್ರಹಿಕೆ

ನಿಮ್ಮ ಸಂಗಾತಿಯು ನಿಮ್ಮನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾನೆ ಹಾಗು ನೀವು ನಿಮ್ಮ ಸಂಗಾತಿಯನ್ನು ಹೇಗೆ ಅರ್ಥೈಸಿಕೊಂಡಿದ್ದೀರಿ ಎಂಬುದರ ಮೇಲೆ ನಿಮ್ಮ ಸಂಬಂಧ ರೂಪುಗೊಳ್ಳುತ್ತದೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡರೆ, ತಪ್ಪುಗಳ ವಿಚಾರದಲ್ಲಿ ರಾಜೀ ಮಾಡಿಕೊಳ್ಳುವ ಮನೋಭಾವ ಬೆಳೆಯುತ್ತದೆ. ನೀವು ನಿಮ್ಮ ಹುಡುಗನಿಗೆ ಅರ್ಥವಾಗುವಂತೆ ನಡೆದುಕೊಳ್ಳಲು ಆರಂಭಿಸಿದರೆ, ಆತನೇ ನಿಮಗೆ ಕರೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

5. ಭಾವನಾತ್ಮಕವಾಗಿ ದೊರೆಯಬೇಕು.

5. ಭಾವನಾತ್ಮಕವಾಗಿ ದೊರೆಯಬೇಕು.

ಗಂಡಸರಿಗು ಸಹ ಭಾವನೆಗಳು ಎಂಬುದು ಇರುತ್ತವೆ. ಆತನಿಗು ಬೇಜಾರಾದಾಗ, ದುಃಖವಾದಾಗ ಸಾಂತ್ವಾನ ಪಡೆಯಲು ಒಂದು ಹೆಗಲಿನ ನೆರವು ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಆತನಿಗೆ ನೈತಿಕ ಸ್ಥೈರ್ಯವನ್ನು ತುಂಬಬೇಕು. ಹೀಗೆ ಮಾಡಿದರೆ ಮುನಿಸಿಕೊಂಡ ನಿಮ್ಮ ಹುಡುಗ ತಪ್ಪದೇ ನಿಮ್ಮನ್ನೆ ಹುಡುಕಿಕೊಂಡು ಬರುತ್ತಾನೆ.

6. ಆತನಿಗೆ ಬೇಸರ ತರಿಸಬೇಡಿ.

6. ಆತನಿಗೆ ಬೇಸರ ತರಿಸಬೇಡಿ.

ನಿಮ್ಮ ಹುಡುಗನ ಬೇಕು ಮತ್ತು ಬೇಡಗಳನ್ನು ಕುರಿತು ಒಂದು ಸಣ್ಣ ಸಂಶೋಧನೆ ಮಾಡುವುದು ತಪ್ಪಲ್ಲ. ಇದನ್ನು ತಿಳಿದುಕೊಂಡರೆ ಆತನು ತನ್ನ ಸ್ನೇಹಿತರ ಜೊತೆಗೆ ಮಾತನಾಡುವ ಬದಲು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾನೆ. ಏಕೆಂದರೆ ನೀವು ಆತನ ನಡವಳಿಕೆಯನ್ನು ಅರ್ಥ ಮಾಡಿಕೊಂಡು ಆತನೊಂದಿಗೆ ವ್ಯವಹರಿಸುತ್ತೀರಿ. ಅದಕ್ಕಾಗಿ ಆತ ನಿಮಗೆ ತಪ್ಪದೆ ಕರೆ ಮಾಡುತ್ತಾನೆ.

7. ಅರ್ಥಪೂರ್ಣವಾಗಿರಬೇಕು.

7. ಅರ್ಥಪೂರ್ಣವಾಗಿರಬೇಕು.

ನಿಮ್ಮ ಸಂಬಂಧ ಚೆನ್ನಾಗಿರಬೇಕು ಎನ್ನುವುದಕ್ಕಿಂತ ಅರ್ಥಪೂರ್ಣವಾಗಿರಬೇಕು. ನಿಮ್ಮಿಬ್ಬರಲ್ಲಿ ಒಬ್ಬರು ಸಂಬಂಧದ ಕುರಿತು ಅಧಿಕ ಕಾಳಜಿಯನ್ನು ಹೊಂದಿರಬೇಕು. ನಿಮ್ಮ ಅಭಿರುಚಿ, ಮಾತು ಮತ್ತು ನಡವಳಿಕೆಗಳು ಅರ್ಥಪೂರ್ಣವಾಗಿದ್ದರೆ, ಜಗಳ ಭಿನ್ನಾಭಿಪ್ರಾಯಗಳು ಎಂದಿಗು ನಿಮ್ಮತ್ತ ಸುಳಿಯುವುದಿಲ್ಲ.

X
Desktop Bottom Promotion