For Quick Alerts
ALLOW NOTIFICATIONS  
For Daily Alerts

ಜೊತೆಯಿರುವ ನಿರ್ಧಾರಕ್ಕೆ ಆತುರ ಸಲ್ಲದು

|

ಒಂದೇ ಮನೆಯಲ್ಲಿ ವಾಸಿಸುವ ನಿರ್ಧಾರ ಮಹತ್ವದ್ದು. ಹೆಜ್ಜೆಯಿಡುವ ಮುನ್ನ ಚೆನ್ನಾಗಿ ಆಲೋಚಿಸಿ. ಪ್ರೀತಿಯಲ್ಲಿ ಬಿದ್ದಾಗ ಒಟ್ಟಿಗಿರಲು ಆರಂಭದಲ್ಲಿ ಮನಸ್ಸು ಹೆಚ್ಚು ಹಾತೊರೆಯುತ್ತದೆ.

ಒಟ್ಟಿಗಿರುವುದರಿಂದ ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವಿರಿ. ಆದರೆ ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಸಲ್ಲದು. ಆದ್ದರಿಂದ ಒಟ್ಟಿಗಿರುವ ನಿರ್ಧಾರ ಮಾಡುವ ಮುನ್ನ ಸ್ವಲ್ಪ ಯೋಚಿಸಿ ಮುಂದಿನ ಹೆಜ್ಜೆ ಇಡಿ.

ಸಾಮಾನ್ಯವಾಗಿ ಗಾಢ ಪ್ರೀತಿಯಲ್ಲಿ ಮುಳುಗಿದ ಜೋಡಿಗಳು ಒಟ್ಟಿಗೆ ಇರಲು ಆರಂಭಿಸಿದ ನಂತರ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಪ್ರೀತಿಯ ಅಮಲು ಬೇರೆ ಬದುಕಿನ ವಾಸ್ತವ ಬೇರೆ. ವಾಸ್ತವದ ಅಗ್ನಿದಿವ್ಯದಲ್ಲಿ ಹಾದು ಉಳಿದರೆ ಮಾತ್ರ ಸಂಬಂಧ ಗಟ್ಟಿಯಾಗುತ್ತದೆ. ಇದನ್ನು ಅರಿಯದೆ ಹೋದರೆ ಸಂಬಂಧ ವಿರಸದಲ್ಲಿ ಕೊನೆಯಾಗುತ್ತದೆ. ಒಟ್ಟಿಗಿರುವ ನಿರ್ಧಾರ ತಪ್ಪಲ್ಲ ಆದರೆ ಆ ಹೆಜ್ಜೆ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ. ನೀವು ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುವಂತೆ ನಿಮ್ಮ ಸಂಬಂಧವೇ ಕೆಲವು ಸೂಚನೆಗಳನ್ನು ನೀಡುತ್ತದೆ.
ಅವು ಹೀಗಿವೆ:

ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸದಿದ್ದರೆ..

ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸದಿದ್ದರೆ..

ಸಾಮಾನ್ಯವಾಗಿ ಸಂಬಂಧಗಳಲ್ಲಿ ಹೆಣ್ಣು ಅಥವ ಗಂಡು ಒಬ್ಬರನ್ನು ಮತ್ತೊಬ್ಬರು ನಿಯಂತ್ರಿಸುತ್ತಿದ್ದರೆ ಅಲ್ಲಿ ಸ್ವಾತಂತ್ರವಿರುವುದಿಲ್ಲ. ನಿಮ್ಮಸಂಗಾತಿ ನಿಮ್ಮ ಯಾವುದೇ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರೆ ನೀವು ಒಟ್ಟಿಗಿರಬಹುದು.

ದೈಹಿಕ ಆಕರ್ಷಣೆ ಮುಖ್ಯವಾಗಬಾರದು

ದೈಹಿಕ ಆಕರ್ಷಣೆ ಮುಖ್ಯವಾಗಬಾರದು

ದೈಹಿಕ ಆಕರ್ಷಣೆ ಗಂಡು-ಹೆಣ್ಣಿನ ಸಂಬಂಧದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದು ನೀವು ಒಟ್ಟಿಗಿರುವ ನಿರ್ಧಾರಕ್ಕೆ ಪ್ರಮುಖ ಕಾರಣವಾಗಬಾರದು. ಕಾಮವೆನ್ನುವುದು ಕೆಲವು ದಿನಗಳ ನಂತರ ತನ್ನ ತೀವ್ರತೆಯನ್ನು ಕಳೆದುಕೊಂಡುಬಿಡುತ್ತದೆ. ಆದ್ದರಿಂದ ಈ ಆಕರ್ಷಣೆಯನ್ನು ಮುಖ್ಯವಾಗಿಸಿಕೊಂಡು ಇಂತಹ ನಿರ್ಧಾರಕ್ಕೆ ಬರಬೇಡಿ.

ಪ್ರಣಯದಲ್ಲಿ ಅನ್ಯೋನ್ಯತೆ

ಪ್ರಣಯದಲ್ಲಿ ಅನ್ಯೋನ್ಯತೆ

ನೀವಿಬ್ಬರೂ ದೈಹಿಕವಾಗಿ ಕೂಡ ಒಂದಾಗಲೂ ಎಲ್ಲ ರೀತಿಯಲ್ಲೂ ಸಿದ್ಧರೆ? ಹಾಗಿದ್ದರೆ ಸಂಬಂಧಕ್ಕೆ ಆ ಹೊಸ ತಿರುವು ನೀಡಲು ನೀವು ಮುಂದಾಗಬಹುದು.

ಉತ್ತಮ ಆರ್ಥಿಕ ಪರಿಸ್ಥಿತಿ

ಉತ್ತಮ ಆರ್ಥಿಕ ಪರಿಸ್ಥಿತಿ

ನೀವು ಆರ್ಥಿಕವಾಗಿ ಸದೃಢರಾಗಿದ್ದರೆ ನಿಮ್ಮ ಸಂಗಾತಿಯೊಡನೆ ಇರಲು ನಿರ್ಧರಿಸಬಹುದು.

ಮೊದಲೇ ನಿರ್ಧರಿಸಿ

ಮೊದಲೇ ನಿರ್ಧರಿಸಿ

ಸಾಮಾನ್ಯವಾಗಿ ಒಟ್ಟಾಗಿರುವಾಗ ಮನೆಯ ಖರ್ಚು ವೆಚ್ಚಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕೆ ಬೇಡವೇ ಎನ್ನುವುದೇ ಮುಂದೆ ಸಮಸ್ಯೆಯಾಗಿ ಸಂಬಂಧ ಕೊನೆಗಾಣಬಹುದು. ಆದ್ದರಿಂದ ಒಟ್ಟಿಗಿರಲು ಹೋಗುವ ಮುನ್ನವೇ ಈ ವಿಷಯಗಳ ಕುರಿತು ಬಿಚ್ಚು ಮನಸ್ಸಿನಿಂದ ಚರ್ಚಿಸಿ ಮೊದಲೇ ನಿರ್ಧಾರ ಮಾಡಿಕೊಳ್ಳಿ. ಇವುಗಳ ಚರ್ಚೆ ಮತ್ತು ನಿರ್ಧಾರಗಳೇ ನಿಮಗೆ ಮುಂದಿನ ಹಾದಿಯನ್ನು ತೋರುತ್ತದೆ.

ಒಟ್ಟಿಗೆ ಸಮಯ ಕಳೆಯಿರಿ

ಒಟ್ಟಿಗೆ ಸಮಯ ಕಳೆಯಿರಿ

ಸಾಮಾನ್ಯವಾಗಿ ಜೋಡಿಗಳು ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಒಟ್ಟಿಗಿರುವ ನಿರ್ಧಾರ ಮಾಡುತ್ತಾರೆ. ಆದರಿದು ಸಮಸ್ಯೆಗೆ ಪರಿಹಾರವಲ್ಲ. ಆದ್ದರಿಂದ ಮೊದಲೇ ಪರಸ್ಪರರಿಗೆ ನೀಡಬಹುದಾದ ಸಮಯ ಮತ್ತು ಅವಕಾಶದ ಬಗ್ಗೆ ಚಿಂತಿಸಿ ನಿರ್ಧರಿಸಿ.

ಮನೆಗೆಲಸ ಹಂಚಿಕೊಳ್ಳಿ

ಮನೆಗೆಲಸ ಹಂಚಿಕೊಳ್ಳಿ

ನಿಮ್ಮ ಸಂಗಾತಿ ಮನೆಯನ್ನು ಶುಚಿಯಾಗಿಟ್ಟುಕೊಳ್ಳಲು ಮತ್ತು ಅಡುಗೆ ಮಾಡಲು ನೆರವಾಗುತ್ತಿದ್ದಾರೆ ಎಂದರೆ ನೀವು ಅವರೊಡನಿರುವ ನಿರ್ಧಾರ ಮಾಡಬಹುದು.

ಭವಿಷ್ಯದ ಬಗ್ಗೆ ನಿರ್ಧರಿಸಿ

ಭವಿಷ್ಯದ ಬಗ್ಗೆ ನಿರ್ಧರಿಸಿ

ಇದು ಅತ್ಯಂತ ವ್ಯಕ್ತಿಗತವಾದ ವಿಷಯ. ನೀವಿಬ್ಬರೂ ನಿಮ್ಮ ಸಂಬಂಧದ ಭವಿಷ್ಯದ ರೂಪುರೇಷೆಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿರಬೇಕು. ನಿಮಗೆ ಈ ಕುರಿತು ಸ್ಪಷ್ಟತೆಯಿದ್ದಲ್ಲಿ ಮುಂದುವರೆಯಿರಿ.

English summary

Signs You Are Ready To Move In Together

Moving in together in house is a big step which requires a lot of attention. You need to look at both the pros and cons of moving in. It is one of the phases of a love relationship where you do not think much and in a haste decide to stay together.
Story first published: Saturday, November 23, 2013, 11:42 [IST]
X
Desktop Bottom Promotion