For Quick Alerts
ALLOW NOTIFICATIONS  
For Daily Alerts

ಸಂಗಾತಿಯ ಗಮನಸೆಳೆಯುವುದು ಹೇಗೆ?

By Hemanth Amin
|

ವೈವಾಹಿಕ ಸಂಬಂಧದಲ್ಲಿ ಪ್ರತೀ ಸಂಗಾತಿ ಪರಸ್ಪರ ಸಮಾನ ಗಮನ ಹರಿಸಬೇಕಾದ ಅರ್ಹತೆ ಹೊಂದಿದ್ದಾರೆ. ಆದರೆ ಪತಿಯಾಗಿ ನೀವು ಪತ್ನಿ ಕಡೆ ಕೊಡುವ ಗಮನಕ್ಕಿಂತ ಆಕೆ ನಿಮ್ಮ ಕಡೆ ಹೆಚ್ಚಿನ ಗಮನಹರಿಸಬೇಕೆಂದು ಬಯಸಬಹುದು. ನಿಮ್ಮ ಪತ್ನಿ ನಿಮ್ಮ ಬಗ್ಗೆ ಕಾಳಜಿ ವಹಿಸಲು ಮತ್ತು ಅಗತ್ಯತೆಗಳನ್ನು ಪೂರೈಸಲು ಹೆಚ್ಚಿನ ಶ್ರಮ ವಹಿಸುತ್ತಿರಬಹುದು.

ವಿಶೇಷವಾಗಿ ಗಮನಹರಿಸುವಂತಾಗಲು ಸಂಗಾತಿಯ ಅಗತ್ಯತೆಗಳೇನು ಎನ್ನುವುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಆಕೆ ಸಂತೋಷವಾಗಿದ್ದಾಳೆ ಮತ್ತು ನಿಮ್ಮೊಂದಿಗೆ ಮದುವೆಯಾಗಿ ತೃಪ್ತಿಯಿಂದ ಇದ್ದಾಳೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಿ.

ಸಂಬಂಧದಲ್ಲಿ ನಿಮ್ಮ ಸಂಗಾತಿ ಯಾವ ರೀತಿಯ ಪ್ರಯತ್ನ ಹಾಕುತ್ತಿದ್ದಾಳೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಕೆಲವೊಂದು ಸಲ ಸಂಬಂಧಕ್ಕೆ ನಿಮ್ಮ ಪತ್ನಿಯ ಕಾಣಿಕೆ ಕಡೆಗಣಿಸಿರಬಹುದು ಮತ್ತು ವಿಶೇಷಗಮನಹರಿಸುವಂತೆ ಕಾರಣವಿಲ್ಲದ ಬೇಡಿಕೆಯನ್ನಿಡಬಹುದು. ಪ್ರೀತಿಸುವ ಪತ್ನಿ ತನಗೆ ಸಾಧ್ಯವಿದ್ದಷ್ಟು ಮಟ್ಟಿಗೆ ಪತಿಯ ಕಡೆ ಗಮನಹರಿಸಲು ಪ್ರಯತ್ನಿಸುತ್ತಾಳೆ. ನಿರೀಕ್ಷಿಸುವ ಮೊದಲು ನೀವು ಎಷ್ಟು ನಿರೀಕ್ಷಿಸುತ್ತೀರಿ ಎನ್ನುವುದು ಮುಖ್ಯ.

ವೈವಾಹಿಕ ಜೀವನವು ನಿಭಾಯಿಸಬೇಕಾದ ನಾಜೂಕಿನ ವಿಷಯ. ಪತಿಯಾಗಿ ನೀವು ನಿಮ್ಮ ಪ್ರೀತಿ-ವಾತ್ಸಲ್ಯ ಪತ್ನಿಯೆಡೆಗೆ ತೋರಿಸಬೇಕು ಮತ್ತು ಇದನ್ನೇ ಆಕೆಯಿಂದಲೂ ನಿರೀಕ್ಷಿಸಬೇಕು. ನೀವು ಅನಾರೋಗ್ಯಕ್ಕೆ ಒಳಗಾದಾಗ ಪತ್ನಿ ಜತೆಗಿರಬೇಕೆಂದು ನೀವು ನಿರೀಕ್ಷಿಸುತ್ತೀರಿ. ಇದಕ್ಕೆ ಪ್ರತಿಯಾಗಿ ಆಕೆಯ ನಿಸ್ವಾರ್ಥ ಸೇವೆಗೆ ನೀವು ಮಮತೆ ಮತ್ತು ಕೃತಜ್ಞತೆ ಸೂಚಿಸಿ ಆಕೆ ಸಂತೋಷ ಮತ್ತು ವಿಶೇಷವೆನಿಸುವಂತೆ ಮಾಡಬಹುದು.

ಮಾತು

ಮಾತು

ಮಹಿಳೆಯರು ಸಾಮಾನ್ಯವಾಗಿ ಮಾತನಾಡಲು ಬಯಸುತ್ತಾರೆ. ಅವರು ತಮ್ಮ ಭಾವನೆ ಮತ್ತು ಹೃದಯದಲ್ಲಿರುವುದನ್ನು ಹೇಳಲು ಮಾತನಾಡುತ್ತಾರೆ. ನಿಮ್ಮ ಸಂಗಾತಿ ಮಾತನಾಡಲು ನಿಮಗೆ ಏನನ್ನೂ ನೀಡಬಹುದು. ಆಕೆಯೊಂದಿಗೆ ಮಾತನಾಡುವಾಗ ಪ್ರೀತಿ ಮತ್ತು ಆಕೆಯ ಕಡೆಗಿರುವ ದೈಹಿಕ ಆಕರ್ಷಣೆ ಬಗ್ಗೆ ಹೇಳಿ.

ಆಕೆಗೆ ಹೆಚ್ಚಿನ ಗಮನ ನೀಡಿ

ಆಕೆಗೆ ಹೆಚ್ಚಿನ ಗಮನ ನೀಡಿ

ನಿಮ್ಮ ಸಂಗಾತಿಯಿಂದ ನಿಮ್ಮ ಪಾಲಿನ ಗಮನ ಪಡೆಯಲು ನೀವು ಕೂಡ ಆಕೆಯ ಕಡೆ ಗಮನಹರಿಸುವುದು ಮತ್ತು ಆಕೆಗೆ ಅರ್ಹವಾಗಿರುವ ಪ್ರೀತಿ ನೀಡುವುದು ತುಂಬಾ ಮುಖ್ಯ. ಆಕೆಯ ಭಾವನೆ ಮತ್ತು ಅಗತ್ಯತೆಗಳ ಬಗ್ಗೆ ನಿಯಮಿತವಾಗಿ ತಿಳಿದುಕೊಳ್ಳಿ. ನಿಮ್ಮ ವೈವಾಹಿಕ ಸಂಬಂಧದಲ್ಲಿ ಆಕೆ ಏಕಾಂಗಿ ಎನ್ನುವ ಭಾವನೆ ಮೂಡಬಾರದು.

ಗಮನ ಮನವರಿಕೆ ಮಾಡಿಕೊಳ್ಳಿ

ಗಮನ ಮನವರಿಕೆ ಮಾಡಿಕೊಳ್ಳಿ

ಕೆಲವೊಮ್ಮೆ ನಿಮ್ಮ ಸಂಗಾತಿಯಿಂದ ಪಡೆಯುತ್ತಿರುವ ಹೆಚ್ಚಿನ ಗಮನ ಮತ್ತು ಪ್ರೀತಿಯನ್ನು ನೀವು ಮನವರಿಕೆ ಮಾಡಿಕೊಳ್ಳದಿರಬಹುದು. ನಿಮ್ಮನ್ನು ವಿಶೇಷವಾಗಿಸಲು ಸಂಗಾತಿ ಮಾಡುತ್ತಿರುವ ಸಣ್ಣಸಣ್ಣ ವಿಷಯಗಳತ್ತ ನೀವು ಗಮನಹರಿಸಿ ಮತ್ತು ಅದನ್ನು ಆನಂದಿಸಿ.

ವೈಯಕ್ತಿಕ ಸಮಯ

ವೈಯಕ್ತಿಕ ಸಮಯ

ಆಕೆ ನಿಮ್ಮ ಅಗತ್ಯತೆ ಪೂರೈಸಲು ಮತ್ತು ಆರೈಕೆ ಮಾಡುವಲ್ಲೇ ಸಮಯ ಕಳೆಯುತ್ತಿದ್ದರೆ ಆಕೆಗೆ ನೀವು ವೈಯುಕ್ತಿಕ ಸಮಯ ನೀಡಿ. ಒಂದು ವಾರ ತನಕ ಆಕೆಯನ್ನು ಪೋಷಕರ ಮನೆಗೆ ಕಳುಹಿಸಿ ಅಥವಾ ಗೆಳತಿಯರೊಂದಿಗೆ ಹೊರಹೋಗಲು ಅವಕಾಶ ನೀಡಿ. ಇದರಿಂದ ಆಕೆ ರಿಫ್ರೆಶ್ ಆಗಿ ನಿಮ್ಮ ಆರೈಕೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುತ್ತದೆ.

ಪ್ರೀತಿ ವ್ಯಕ್ತಪಡಿಸಿ

ಪ್ರೀತಿ ವ್ಯಕ್ತಪಡಿಸಿ

ಆಕೆ ಮೇಲಿರುವ ನಿಮ್ಮ ಭಾವನೆ ಮತ್ತು ಪ್ರೀತಿ ವ್ಯಕ್ತಪಡಿಸಿ, ಅದೇ ವೇಳೆ ಸಂಬಂಧದಲ್ಲಿನ ನ್ಯೂನತೆಯ ಬಗ್ಗೆ ಚರ್ಚಿಸಿ. ಇದು ಆಕೆಯ ಕಡೆ ನಿಮಗಿರುವ ಕಾಳಜಿ ತೋರಿಸುತ್ತದೆ ಮತ್ತು ನೀವು ಆಕೆಯ ಮತ್ತು ಸಂಬಂಧದ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದೀರಿ ಎನ್ನುವುದನ್ನು ತೋರಿಸುತ್ತದೆ. ನೀವು ಹೆಚ್ಚಿನ ಗಮನ ಬಯಸುವುದಾದರೆ ಇದರ ಬಗ್ಗೆ ಆಕೆಗೆ ಹೇಳಿ.

ಪ್ರಾಮಾಣಿಕತೆ

ಪ್ರಾಮಾಣಿಕತೆ

ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿ ಜತೆಗೆ ಯಾವಾಗಲೂ ಪ್ರಾಮಾಣಿಕವಾಗಿರಬೇಕಾಗುತ್ತದೆ. ಒಳ್ಳೆಯ ಸಂಬಂಧಕ್ಕೆ ಇದು ಭದ್ರ ಬುನಾದಿ. ನಿಮ್ಮ ಬಗ್ಗೆ ಪತ್ನಿಗೆ ಹೆಚ್ಚಿನ ವಿಶ್ವಾಸ ಮೂಡಿದರೆ ಆಗ ಆಕೆ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ, ಆರೈಕೆ ಮತ್ತು ಗಮನಹರಿಸಬಹುದು.

ಅನ್ಯೋನ್ಯತೆ

ಅನ್ಯೋನ್ಯತೆ

ಇದು ಸಂಬಂಧದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಸಂಗಾತಿಯೊಂದಿಗೆ ಅನ್ಯೋನ್ಯವಾಗಿರುವುದರಿಂದ ಸಂಗಾತಿ ನಿಮ್ಮ ಕಡೆ ವಿಶೇಷ ಗಮನ ಮತ್ತು ಪ್ರೀತಿ ತೋರಿಸಬಹುದು. ಅನ್ಯೋನ್ಯವಾಗಿ ಸಮಯ ಕಳೆಯುವುದರಿಂದ ಪರಸ್ಪರರನ್ನು ಅರ್ಥ ಮಾಡಿಕೊಂಡು ಸಂಗಾತಿಯ ಅಗತ್ಯತೆಗಳನ್ನು ತಿಳಿದುಕೊಳ್ಳಬಹುದು. ಆಕೆಯಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ ಎನ್ನುವುದು ಆಕೆಗೆ ತಿಳಿಯುತ್ತದೆ.

ಜತೆಯಾಗಿ ಸಮಯ ಕಳೆಯಿರಿ

ಜತೆಯಾಗಿ ಸಮಯ ಕಳೆಯಿರಿ

ನಿಯಮಿತವಾಗಿ ನಿಮ್ಮ ಸಂಗಾತಿ ಜತೆ ಹೆಚ್ಚಿನ ಸಮಯ ಕಳೆಯಿರಿ. ಆಕೆಗಾಗಿ ನಿಮಗೆ ಸಮಯವೇ ಸಿಗದಿದ್ದರೆ ಆಕೆಯ ಕಡೆ ಗಮನಹರಿಸಲು ಹೇಗೆ ಸಾಧ್ಯ. ಅನ್ಯೋನ್ಯ ಮತ್ತು ಪ್ರೀತಿ ತೋರಿಸಿ ಅಮೂಲ್ಯ ಸಮಯವನ್ನು ಜತೆಯಾಗಿ ಕಳೆಯುವುದರಿಂದ ಪರಸ್ಪರ ಗಮನಹರಿಸಲು ಮತ್ತು ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗುತ್ತದೆ.

English summary

How to get your spouse's attention

In a married relationship, each partner is entitled to get equal attention from each other. As a husband you may want a lot of attention from your wife, may be more than the attention you give her.
Story first published: Saturday, November 30, 2013, 15:51 [IST]
X
Desktop Bottom Promotion