For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿನ ನ್ಯೂನತೆ ಚರ್ಚಿಸುವುದು

By Hemanth Amin
|

ಸಂಬಂಧಗಳು ಎಷ್ಟೇ ನಿಕಟ ಮತ್ತು ಬಲವಾಗಿದ್ದರೂ ಸಾಮಾನ್ಯವಾಗಿ ಎಲ್ಲಾ ಸಂಬಂಧಗಳಲ್ಲಿ ಕೆಲವೊಂದು ದೋಷ ಮತ್ತು ನ್ಯೂನತೆ ಇದ್ದೇ ಇರುತ್ತದೆ. ಸಂಬಂಧದಲ್ಲಿರುವ ನ್ಯೂನತೆ ಒಪ್ಪಿಕೊಳ್ಳುವುದಕ್ಕೆ ಮುಜುಗರಪಡಬಾರದು ಮತ್ತು ಈ ನ್ಯೂನತೆ ಸರಿಪಡಿಸಲು ಪ್ರಯತ್ನಿಸಬೇಕು. ಇಂತಹ ನ್ಯೂನತೆಯನ್ನು ಮುಕ್ತವಾಗಿ ಚರ್ಚಿಸಿ ಅದನ್ನು ಪರಿಹರಿಸಿದರೆ ಅದು ಶ್ರೇಷ್ಠ ಸಂಬಂಧದ ಲಕ್ಷಣ. ಇದು ನಿಮ್ಮನ್ನು ಮತ್ತಷ್ಟು ಹತ್ತಿರವಾಗಿಸಿ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.

ನಿಮ್ಮ ಸಂಬಂಧದಲ್ಲಿ ಯಾರು ನ್ಯೂನತೆ ಬಗ್ಗೆ ಮೊದಲು ಚರ್ಚಿಸುತ್ತಾರೆ ಎನ್ನುವುದು ಮುಖ್ಯವಲ್ಲ, ಅದು ಆರೋಗ್ಯಕರ ಚರ್ಚೆಯೊಂದಿಗೆ ಪರಿಹಾರವಾಗುವುದು ಮುಖ್ಯ. ಪುರುಷನಾಗಿ ನೀವು ಆರಂಭ ಮಾಡಬೇಕು ಮತ್ತು ಇದು ನೀವು ಆದೇಶ ಸ್ಥಾನದಲ್ಲಿದ್ದೀರಿ ಎನ್ನುವುದನ್ನು ತೋರಿಸುತ್ತದೆ. ಹೇಗೆ ಮುಂದುವರಿಬೇಕೆಂಬ ಬಗ್ಗೆಯೂ ನಿಮಗೆ ತಿಳಿದಿರುತ್ತದೆ. ಇದರಿಂದ ನಿಮ್ಮ ಜತೆಗಾರ್ತಿಗೆ ಆಕೆ ಸುರಕ್ಷಿತ ಕೈಗಳಲ್ಲಿದ್ದಾಳೆ ಎಂದು ಮನವರಿಕೆಯಾಗುತ್ತದೆ. ಸಂಬಂಧದಲ್ಲಿನ ನ್ಯೂನತೆ ಬಗ್ಗೆ ಚರ್ಚಿಸುವಾಗ ಸಭ್ಯತೆಯಿಂದ ಇರುವುದು ತುಂಬಾ ಮುಖ್ಯ.

ಭಿನ್ನಾಭಿಪ್ರಾಯ ಅಥವಾ ಪರಸ್ಪರರಿಂದ ಬಯಸುವ ವಿಷಯಗಳಲ್ಲಿ ಭಿನ್ನತೆ ಕಂಡುಬರುವಾಗ ಸಂಬಂಧದಲ್ಲಿ ನ್ಯೂನತೆ ಉಂಟಾಗುತ್ತದೆ. ಸಂಬಂಧದ ಆರಂಭಿಕ ಹಂತದಲ್ಲಿ ಈ ನ್ಯೂನತೆ ಸ್ವಲ್ಪ ಕಡೆಗಣಿಸಲ್ಪಟ್ಟಿದ್ದರೂ ಸಮಯ ಕಳೆದಂತೆ ಸಂಬಂಧದಲ್ಲಿ ಬಿರುಕು ಕಾಣಿಸುತ್ತದೆ. ಬದ್ಧತೆಯೊಂದಿಗೆ ಸಂಬಂಧದಲ್ಲಿ ಜವಾಬ್ದಾರಿ ಕೂಡ ಹೆಚ್ಚುವುದರಿಂದ ಇಬ್ಬರು ನ್ಯೂನತೆ ಪತ್ತೆಹಚ್ಚಿ ಅದನ್ನು ಪರಿಹರಿಸುವುದು ತುಂಬಾ ಮುಖ್ಯ. ಕೆಲವೊಮ್ಮೆ ನೀವು ದೈಹಿಕ ಆಕರ್ಷಣೆಗೆ ಒಳಗಾಗಿರಬಹುದು ಮತ್ತು ಸಮಯ ಕಳೆದಂತೆ ಆಕೆ ನಿಮಗೆ ಸರಿಹೊಂದುವ ಮಹಿಳೆಯಲ್ಲವೆಂದು ನಿಮಗನಿಸಬಹುದು.

ಸಂಬಂಧದಲ್ಲಿನ ಕೆಲವೊಂದು ನ್ಯೂನತೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1.ಕೇವಲ ದೈಹಿಕ

1.ಕೇವಲ ದೈಹಿಕ

ಕೆಲವೊಂದು ಸಲ ನೀವು ದೈಹಿಕ ಆಕರ್ಷಣೆಯನ್ನೇ ಪ್ರೀತಿಯೆಂದು ಭಾವಿಸಿ ಅದನ್ನೇ ಸಂಬಂಧವನ್ನಾಗಿಸಿರಬಹುದು. ನಿಮ್ಮ ಸಂಬಂಧ ಮತ್ತು ಜೊತೆಗಾರರ ಹಿತಾಸಕ್ತಿಯಿಂದ ಸಂಬಂಧದ ನ್ಯೂನತೆ ಹೇಳಿ ಅದನ್ನು ನಿಮ್ಮ ಜತೆಗಾರರೊಂದಿಗೆ ಸೇರಿ ಹೇಗೆ ಪರಿಹರಿಸಬಹುದೆಂಬುವುದನ್ನು ನೋಡಿಕೊಳ್ಳಿ.

2.ಲಿಂಗ ಆಧಾರಿತ

2.ಲಿಂಗ ಆಧಾರಿತ

ಸಂಬಂಧದಲ್ಲಿನ ಕೆಲವೊಂದು ನ್ಯೂನತೆಗಳು ಸಂಬಂಧಕ್ಕೆ ಹೊರತಾಗಿ ಸಂಪೂರ್ಣವಾಗಿ ಲಿಂಗ ಸಂಬಂಧಿತವಾಗಿದೆ. ನಿಮ್ಮ ಹುಡುಗಿ ತುಂಬಾ ದೀರ್ಘ ಸಮಯದ ತನಕ ಯಾರೊಂದಿಗಾದರೂ ಮಾತನಾಡುವುದು ಅಥವಾ ಪಾರ್ಟಿಗಳಿಗೆ ಹೋಗುವ ಅಭ್ಯಾಸವಿರಿಸಿಕೊಂಡಿರುವಾಕೆ ಆಗಿರಬಹುದು. ಮಹಿಳೆಯರ ಸ್ವಭಾವ ಈ ರೀತಿಯಾಗಿರುವ ಕಾರಣ ಇಂತಹ ನ್ಯೂನತೆ ಪ್ರತಿಯೊಂದು ಸಂಬಂಧದಲ್ಲೂ ಇರುತ್ತದೆ.

3. ದಾಂಪತ್ಯ ದ್ರೋಹ

3. ದಾಂಪತ್ಯ ದ್ರೋಹ

ಇದು ಯಾವುದೇ ಸಂಬಂಧದಲ್ಲೂ ಬಹುದೊಡ್ಡ ನ್ಯೂನತೆಯಾಗಿರುತ್ತದೆ. ರೋಮಾಂಚನ ಮತ್ತು ಇತರ ಪಾಪದ ಮನರಂಜಗಾಗಿ ವಂಚನೆ ಮಾಡುತ್ತಿದ್ದರೆ ಇದರ ಬಗ್ಗೆ ತಕ್ಷಣ ಗಮನಹರಿಸುವುದು ತುಂಬಾ ಮುಖ್ಯ. ಕೆಲವೊಮ್ಮೆ ದಾಂಪತ್ಯ ದ್ರೋಹವು ಚಿಕಿತ್ಸೆ ಮಾಡಬಹುದಾದ ಮಾನಸಿಕ ಸಮಸ್ಯೆಯಾಗಿರಬಹುದು. ವಿಶ್ವಾಸದ್ರೋಹಕ್ಕಿಂತ ದೊಡ್ಡ ಸಮ್ಯಸ್ಯೆ ಬೇರೊಂದಿಲ್ಲ. ನ್ಯೂನತೆ ಒಪ್ಪಿಕೊಂಡು ಅದನ್ನು ಬಗೆಹರಿಸಲು ಪ್ರಯತ್ನಿಸಿದರೆ ಆಗ ಅರ್ಧ ಸಮಸ್ಯೆ ಬಗೆಹರಿದಂತೆ.

4. ಹೊಂದಾಣಿಕೆ

4. ಹೊಂದಾಣಿಕೆ

ನ್ಯೂನತೆಗಳು ಸಂಬಂಧದಲ್ಲಿ ಮಾತ್ರವಲ್ಲದೆ ಅದರಲ್ಲಿರುವ ಜನರಲ್ಲೂ ಇರುತ್ತದೆ. ನಿಮ್ಮಲ್ಲಿರುವ ಯಾವುದಾದರೂ ನ್ಯೂನತೆ ಸಂಬಂಧದ ಮೇಲೆ ಭಾರೀ ಪರಿಣಾಮ ಬೀರಿರಬಹುದು ಮತ್ತು ನಿಮ್ಮ ಜೊತೆಗಾರ್ತಿ ಸಂಬಂಧ ಉತ್ತಮವಾಗಿ ಸಾಗಲು ಹೊಂದಾಣಿಕೆ ಮಾಡಿಕೊಂಡಿರಬಹುದು. ನಿಮ್ಮ ಜತೆಗಾರ್ತಿಯ ನಡವಳಿಕೆ ಸ್ವಲ್ಪ ಕಿರಿಕಿರಿಯಾದರೂ ನೀವು ಹೊಂದಾಣಿಕೆ ಮಾಡಿಕೊಂಡು ಸಂಬಂಧ ಮುಂದುವರಿಸಬೇಕಾಗುತ್ತದೆ.

5. ತ್ಯಾಗ

5. ತ್ಯಾಗ

ಇದು ಒಳ್ಳೆಯ ಸಂಬಂಧದ ಮೂಲಭೂತ ವಿಷಯಗಳಲ್ಲಿ ಒಂದು. ಬದ್ಧತೆಯ ಜೊತೆಗಾರರಾಗಿರುವ ಕಾರಣ ಕೆಲವೊಂದು ಸಲ ನಿಮ್ಮ ಜತೆಗಾರರಿಗಾಗಿ ಮತ್ತು ಸಂಬಂಧಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ. ನಿಮ್ಮ ಜತೆಗಾರ್ತಿಯ ಮುಖದಲ್ಲಿ ನಗು ಮತ್ತು ಸಂತೋಷ ಕಾಣಲು ಕೆಲವೊಂದು ಸಲ ನಿಮ್ಮ ಫೇವರಿಟ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ ನೋಡುವುದನ್ನು ಬಿಡಬೇಕಾಗುತ್ತದೆ.

6. ಸಂವಹನ

6. ಸಂವಹನ

ಯಶಸ್ವಿ ಸಂಬಂಧಕ್ಕಾಗಿ ಉತ್ತಮ ಸಂವಹನ ಅಗತ್ಯ. ಆರೋಗ್ಯಕರ ಸಂವಹನವು ಯಾವುದೇ ನ್ಯೂನತೆ ಹೋಗಲಾಡಿಸಿ ಅದಕ್ಕೆ ಪರಿಹಾರ ಸೂಚಿಸಬಹುದು. ಪರಸ್ಪರ ಯಾವ ರೀತಿ ಸಂವಹನ ನಡೆಸುತ್ತಾರೆ ಎನ್ನುವುದು ಒಳ್ಳೆಯ ಸಂಬಂಧದ ಒಂದು ಲಕ್ಷಣವಾಗಿದೆ. ಸರಿಯಾದ ಸಂವಹನವಿಲ್ಲದಿದ್ದರೆ ಸಂಬಂಧದಲ್ಲಿ ನ್ಯೂನತೆ ಉಂಟಾಗಬಹುದು ಮತ್ತು ಇದು ಬಗೆಹರಿಸಲಾರದಷ್ಟು ಮಟ್ಟಕ್ಕೆ ತಲುಪಬಹುದು.

English summary

Discussing Flaws In A Relationship

All relationships in general will have some flaws and shortcomings no matter how intimate and strong the bond is. There is no embarrassment in admitting the flaws in your relationship and trying to rectify those flaws.
Story first published: Thursday, November 28, 2013, 9:54 [IST]
X
Desktop Bottom Promotion