For Quick Alerts
ALLOW NOTIFICATIONS  
For Daily Alerts

ಮನೋವಿಕಾರಿಗಳೊಂದಿಗೆ ವ್ಯವಹರಿಸುವ ವಿಧಾನಗಳು

By Super
|

ತನ್ನ ಸುತ್ತಲು ಇರುವ ಪ್ರತಿಯೊಂದನ್ನು ಮತ್ತು ಪ್ರತಿಯೊಬ್ಬರನ್ನು ನಿಯಂತ್ರಿಸುವ ವ್ಯಕ್ತಿಯೊಂದಿಗೆ ಯಾವತ್ತಾದರೂ ವ್ಯವಹರಿಸಿದ್ದೀರಾ? ತಾನು ಹೇಳಿದಂತೆ ಎಲ್ಲವೂ ಆಗಬೇಕು ಎನ್ನುವ ವ್ಯಕ್ತಿಯ ಜತೆಗೆ ನೀವು ಯಾವತ್ತಾದರೂ ಇದ್ದೀರಾ? ಇಂತಹ ವ್ಯಕ್ತಿಯನ್ನು ಜೀವನದಲ್ಲಿ ಒಂದು ಸಲವಾದರೂ ಎದುರಿಸಿರಬಹುದು. ಇಂತಹ ವ್ಯಕ್ತಿಗಳು ನಿಮ್ಮ ಮೇಲೆ ಅಧಿಪತ್ಯ ಸ್ಥಾಪಿಸಿ, ನಿಮ್ಮ ಜೀವನ ಕೆಟ್ಟದಾಗಿ ಮಾಡಿ, ಅವರು ಆಡಿಸುವಂತೆ ನೀವು ಕುಣಿಯುವಂತೆ ಮಾಡುತ್ತಾರೆ.

ಇಂತಹ ಜನರ ಮನವೊಲಿಸುವುದು ಮತ್ತು ಜತೆಗೆ ಇರುವುದು ಸ್ವಲ್ಪ ಕಷ್ಟ. ಅವರು ಯಾರದ್ದೇ ಸಲಹೆ ಕೇಳುವುದಿಲ್ಲ ಮತ್ತು ತಮ್ಮದೇ ರೀತಿಯಲ್ಲಿ ಎಲ್ಲವನ್ನು ನಿಯಂತ್ರಿಸಲು ಬಯಸುತ್ತಾರೆ. ಇಂತಹ ವ್ಯಕ್ತಿಗಳನ್ನು ಕೆಲವು ಸಮಯದವರೆಗೆ ಮಾತ್ರ ಸಹಿಸಿಕೊಳ್ಳಲು ಸಾಧ್ಯ. ಬಳಿಕ ಎಲ್ಲಾ ನಿಯಂತ್ರಣ ರಗಳೆಯಾಗುತ್ತದೆ. ನಿಯಂತ್ರಣ ಮನೋವಿಕಾರವಿರುವವರ ಬೇಡಿಕೆ ಮತ್ತು ಅಭ್ಯಾಸಗಳಿಂದಾಗಿ ಯಾರಲ್ಲೂ ಸಿಟ್ಟು ಭರಿಸುತ್ತದೆ.

Best Ways To Deal With A Control Freak

ನಿಯಂತ್ರಣ ಮನೋವಿಕಾರ ಹೊಂದಿರುವವರ ಮೇಲೆ ನಿಯಂತ್ರಣ ಸಾಧಿಸಲು ಜಾಣ ನಡೆ ಮತ್ತು ಆಲೋಚನೆ ಬೇಕಾಗುತ್ತದೆ. ನಿಯಂತ್ರಣ ಮನೋವಿಕಾರಿಗಳ ಬೇಡಿಕೆ ಮತ್ತು ಅಹಂನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವುದರಿಂದ ಇಂತಹ ವ್ಯಕ್ತಿಗಳನ್ನು ನಿಯಂತ್ರಿಸಬಹುದು. ನಿಯಂತ್ರಣ ಮನೋವಿಕಾರಿಗಳನ್ನು ಎದುರಿಸಲು ಇರುವ ಕೆಲವು ಮಾರ್ಗಗಳ ಬಗ್ಗೆ ನಾನಿಲ್ಲಿ ಚರ್ಚಿಸುತ್ತಿದ್ದೇನೆ. ಅದಕ್ಕಿರುವ ಕೆಲವು ವಿಧಾನಗಳು ಇಲ್ಲಿದೆ.

1. ವಾದ ಮಾಡಬೇಡಿ
ನಿಯಂತ್ರಣ ಮನೋವಿಕಾರಿಗಳೊಂದಿಗೆ ಯಾವತ್ತಿಗೂ ವಾದ ಮಾಡಬೇಡಿ. ಅವರು ವಾದದಲ್ಲಿ ಸೋಲುವುದನ್ನು ಬಯಸುವುದಿಲ್ಲ. ನಿಯಂತ್ರಣ ಮನೋವಿಕಾರಿಗಳೊಂದಿಗೆ ವಾದ ಮಾಡದೆ ಅವರೇ ಸರಿ ಎನ್ನುವಂತೆ ವರ್ತಿಸಿ ಮತ್ತು ಅವರ ಅಗತ್ಯಕ್ಕೆ ತಕ್ಕಂತೆ ಮಾತನಾಡಿ. ಇದು ಅವರನ್ನು ತುಂಬಾ ಮುಖ್ಯವೆಂಬ ಭಾವನೆ ಮೂಡಿಸುತ್ತದೆ ಮತ್ತು ಅವರ ಕೆಲಸ ಮಾಡಲು ಯಾವುದೇ ನಿಯಂತ್ರಣವಿಲ್ಲದೆ ಸ್ವತಂತ್ರ ಸಿಗುತ್ತದೆ.

2. ನಕಾರಾತ್ಮಕವಾಗಿ ಯೋಚಿಸಬೇಡಿ
ನಿಯಂತ್ರಣ ಮನೋವಿಕಾರಿಗಳು ಕೆಲವು ಸಲ ಜೀವನವನ್ನು ಸರಿ ಮಾಡುತ್ತಾರೆ. ಆದರೆ ಇವರು ಉತ್ತಮ ಸಂಘಟನೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದ ಅವರ ಬಗ್ಗೆ ನಕಾರಾತ್ಮಕವಾಗಿ ಚಿಂತಿಸದೆ ಒಳ್ಳೆಯದರತ್ತ ಗಮನಹರಿಸಬೇಕು.

3. ಜೋಕ್ ಗಳನ್ನು ಬಳಸಿ
ಪ್ರತಿಯೊಬ್ಬರ ಮೂಡ್ ನ್ನು ಬದಲಾಯಿಸಲು ಏನಾದರೊಂದು ವೀಕ್ ಪಾಯಿಂಟ್ ಇದ್ದೇ ಇರುತ್ತದೆ. ಸ್ವಲ್ಪ ಜಾಣ್ಮೆಯಿಂದ ಮೂಡ್ ನ್ನು ಬದಲಾಯಿಸಲು ಪ್ರಯತ್ನಿಸಿ. ಒಳ್ಳೆಯ ಜೋಕ್ ಗೆ ಪ್ರತಿಯೊಬ್ಬರು ನಗುತ್ತಾರೆ. ನಿಯಂತ್ರಣ ಮನೋವಿಕಾರಿಗಳೊಂದಿಗೆ ವ್ಯವಹರಿಸಲು ಇದು ಒಳ್ಳೆಯ ವಿಧಾನ

4. ಯಾವುದೇ ಪ್ರತಿಕ್ರಿಯೆ ನೀಡಬೇಡಿ
ಜೀವನದಲ್ಲಿ ಏನು ಬಳಸಬೇಕು ಮತ್ತು ಏನು ಮಾಡಬೇಕು ಎನ್ನುವುದರ ಬಗ್ಗೆ ಕೆಲವು ನಿಯಂತ್ರಣ ಮನೋವಿಕಾರಿಗಳು ಸಲಹೆ ಮಾಡುತ್ತಾರೆ. ಇದು ಶಾಂಪೂ ಆಗಿರಬಹುದು, ನಿಮ್ ಗರ್ಲ್ ಫ್ರೆಂಡ್ ಅಥವಾ ಆಹಾರವಾಗಿರಬಹುದು. ಅವರು ಪ್ರತಿಯೊಂದು ಸಣ್ಣ ವಸ್ತುಗಳ ಬಗ್ಗೆ ಸಲಹೆ ನೀಡುತ್ತಾರೆ. ಇದನ್ನು ಬದಲಾಯಿಸಲು ಅಥವಾ ಇಂತಹ ನಿಯಂತ್ರಣ ಮನೋವಿಕಾರಿಗಳೊಂದಿಗೆ ವ್ಯವಹರಿಸಲು ಒಳ್ಳೆಯ ವಿಧಾನವೆಂದರೆ ಸುಮ್ಮನಿದ್ದು ಬಿಡಿ ಅಥವಾ ಯಾವುದೇ ಪ್ರತಿಕ್ರಿಯೆ ನೀಡಬೇಡಿ. ಸಲಹೆಗಳಿಗೆ ನೀವು ಪ್ರತಿಕ್ರಿಯಿಸುತ್ತಾ ಇದ್ದರೆ ನಿಯಂತ್ರಣ ಮನೋವಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿಕ್ರಿಯೆ ನೀಡದಿರುವುದು ಒಳ್ಳೆಯದು. ಇದು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತದೆ.

5. ಎದ್ದು ಹೋಗಿ
ನಿಯಂತ್ರಣ ಮನೋವಿಕಾರಿಗಳು ನಿಮ್ಮ ಜೀವನದ ಮೇಲೆ ಹಿಡಿತ ಸಾಧಿಸಿ ಕೆಡುಕನ್ನು ಉಂಟುಮಾಡುತ್ತಿದ್ದರೆ ಎಲ್ಲವನ್ನು ಅನುಭವಿಸುವ ತನಕ ನಿಲ್ಲಬೇಡಿ. ನಿಯಂತ್ರಣ ಮನೋವಿಕಾರಿಗಳೊಂದಿಗೆ ವ್ಯವಹರಿಸುವ ಒಳ್ಳೆಯ ವಿಧಾನವೆಂದರೆ ಅವರಿಂದ ದೂರ ಹೋಗಿ ಮತ್ತು ಕಡೆಗಣಿಸಿ. ಅವರು ಮಧ್ಯಪ್ರವೇಶಿಸುವುದು ನಿಮಗೆ ಇಷ್ಟವಿಲ್ಲವೆನ್ನುವುದು ಆ ನಿಯಂತ್ರಣ ಮನೋವಿಕಾರಿಗಳಿಗೆ ತಿಳಿಯುತ್ತದೆ.
ನಿಯಂತ್ರಣ ಮನೋವಿಕಾರಿಗಳೊಂದಿಗೆ ವ್ಯವಹರಿಸಲು ಇವು ಕೆಲವು ಟಿಪ್ಸ್ ಗಳು. ಇದು ಅಷ್ಟೊಂದು ಕಠಿಣವಲ್ಲ. ಆದರೆ ಆರಂಭದಲ್ಲಿ ನಿಯಂತ್ರಣ ಮನೋವಿಕಾರಿಗಳೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ. ಈ ಎಲ್ಲಾ ಟಿಪ್ಸ್ ಗಳಿಂದ ನೀವು ನಿಯಂತ್ರಿತರಾಗುವುದನ್ನು ಕೂಡ ತಪ್ಪಿಸಲು ಪ್ರಯತ್ನಿಸಬಹುದು. ಇದು ನಿಮಗೆ ನೆರವಾಗುತ್ತದೆ.
ನಿಯಂತ್ರಣ ಮನೋವಿಕಾರದ ಜತೆಗಾರರನ್ನು ಹೊಂದಿರುವವರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಈ ಟಿಪ್ಸ್ ಗಳನ್ನು ಪ್ರಯತ್ನಿಸಿ. ಎಲ್ಲಾ ನಿಯಂತ್ರಣ ಮತ್ತು ಒಳಗೊಳ್ಳುವುದಕ್ಕಿಂತ ನಿಮ್ಮನ್ನು ನಿಯಂತ್ರಿಸುತ್ತದೆ. ನಿಯಂತ್ರಣ ಮನೋವಿಕಾರಿಗಳೊಂದಿಗೆ ವ್ಯವಹರಿಸುವಾಗ ತುಂಬಾ ಎಚ್ಚರಿಕೆ ವಹಿಸಿ.
ನಿಮಗೆ ಶುಭವಾಗಲಿ...

English summary

Best Ways To Deal With A Control Freak

To keep a control on control freaks can be doe only by people with snart moves and thinking. Understanding the needs and ego of these control freaks and reacting likewise is the key to control these people.
X
Desktop Bottom Promotion