For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯ ನಂತರ ಸಂಬಂಧ ಸ್ಪೆಷಲ್ ಆಗಿರುತ್ತದೆ

By Super
|

ಗರ್ಭಧಾರಣೆಯಿಂದ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ನಿಂತ ನೀರಿನಂತಾಗುತ್ತದೆ ಎನ್ನೋದು ನಿಮ್ಮ ಯೋಚನೆಯಾ? ನಿಮ್ಮ ಜೀವನ ಸಂಗಾತಿಯೊಂದಿಗೆ ಶಾಪಿಂಗ್ ಮಾಡೋದಕ್ಕೆ, ತಿರುಗಾಡುವುದಕ್ಕೆ ಕತ್ತರಿ ಬೀಳಲಿದೆ ಅನ್ನೋದು ನಿಮ್ಮ ಸಂಕಟವಾ? ಗರ್ಭಾವಸ್ಥೆಯಲ್ಲಿ ನಿಮ್ಮ ಜೊತೆಗಾರರೊಂದಿಗೆ ಮರೆಯದ ಕ್ಷಣಗಳನ್ನು ಕಳೆಯುವುದು ಸಾದ್ಯವಿಲ್ಲ ಅಂದುಕೊಳ್ಳುತ್ತಿದ್ದೀರಾ? ಈ ಎಲ್ಲ ಯೋಚನೆಗಳಿಗೆ ಫುಲ್ ಸ್ಠಾಪ್ ಹಾಕಿ. ನಿಮ್ಮ ಯೋಚನಾ ಧಾಟಿಯನ್ನು ಬದಲಾಯಿಸಿಕೊಳ್ಳಬೇಕಾದ ಸಮಯ ಇದು. ಗರ್ಭಿಣಿಯಾದ ಮುಂದಿನ ಒಂಭತ್ತು ತಿಂಗಳು ನೀವು ಮತ್ತು ನಿಮ್ಮ ಸಂಗಾತಿ ಹೇಗೆ ಸಮಯವನ್ನು ಆಸ್ವಾದಿಸಬೇಕು ಅನ್ನೋದಕ್ಕೆ ಟಿಪ್ಸ್ ಇಲ್ಲಿವೆ ನೋಡಿ:

ಗರ್ಭಾವಸ್ಥೆಯ ಸಂದರ್ಭದಲ್ಲಿ ವಾಂತಿ ಮತ್ತು ಎದೆಯುರಿ ಹೆಚ್ಚಾಗಬಹುದು. ಆದರೆ ಅದೆಷ್ಟೋ ಮಹಿಳೆಯರಿಗೆ ಈ ವೇಳೆಯಲ್ಲಿ ಕಾಮದ ಹಸಿವು ಹೆಚ್ಚಾಗಬಹುದು. ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ, ಸೆಕ್ಸುವಲ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾದ ವರದಿಯಂತೆ, ಸುಮಾರು 40% ಭಾವೀ ಅಮ್ಮಂದಿರಿಗೆ ಗರ್ಭಧರಿಸಿದ ನಂತರ ಮೊದಲಿಗಿಂತ ಹೆಚ್ಚು ಕಾಮದಾಹ ಉಂಟಾಗುತ್ತದೆ. ಹೀಗಾಗಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಗಟ್ಟಿ ಇರಬೇಕು.

Pregnancy Could Improve Your Relationship

ಹೆಚ್ಚು ರಕ್ತದ ಹರಿವು ಅಂದರೆ ಹೆಚ್ಚೆಚ್ಚು ಮೋಜು:

ಗರ್ಭಧಾರಣೆಯ ನಂತರ ಹೆಚ್ಚೆಚ್ಚು ರಕ್ತದ ಹರಿವಿನ ಉತ್ತಮ ಪರಿಣಾಮವೆಂದರೆ ನಿಮ್ಮ ಭಾವೋತ್ಕರ್ಷ ಹೆಚ್ಚುತ್ತದೆ ಮತ್ತು ಹೆಚ್ಚು ಸೂಕ್ಷ್ಮತೆ ಬರುತ್ತದೆ. ನಿಮ್ಮ ಲೈಂಗಿಕ ಹಾರ್ಮೋನ್ ಗಳು ಇದರಿಂದ ಹೆಚ್ಚು ಕ್ರಿಯಾಶೀಲಗೊಳ್ಳುತ್ತವೆ.

ಗರ್ಭಿಣಿಯರು ಹೆಚ್ಚು ಆಕರ್ಷಕ:

ಗಂಡಸರಿಗೆ ಹೆಂಗಸರ ದೇಹದ ಉಬ್ಬುತಗ್ಗುಗಳೆಂದರೆ ಇಷ್ಟ. ದೇಹದ ಕೆಳಭಾಗ ೆದೆ ಗರ್ಭಧಾರಣೆಯ ಸಂದರ್ಭದಲ್ಲಿ ಹೆಚ್ಚು ದೊಡ್ಡದಾಗಿ ಆಕರ್ಷಕವಾಗಿ ಕಾಣುತ್ತದೆ.

ಹಲವರಿಗೆ ಗರ್ಭಧಾರಣೆಯ ಸಂದರ್ಭದಲ್ಲಿ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದು ಉತ್ತಮವೆನಿಸುವುದಿಲ್ಲ. ನಿಮ್ಮ ದಿನಚರಿಯಿಂದ ಅದನ್ನು ತೆಗೆದುಹಾಕಿದರೆ ಕಡ್ಲಿಂಗ್ ಹೆಚ್ಚಾಗುತ್ತದೆ. ನಿಮ್ಮ ಸಂಬಂಧದ ಬೆಸುಗೆಗೆ ಇದು ಅತ್ಯಗತ್ಯ.

ಆಕ್ಸಿಟೋಸಿನ್ ಕೇವಲ ಲವ್ ಹಾರ್ಮೋನ್ ಮಾತ್ರವಲ್ಲ. ೀ ಹಾರ್ಮೋನ್ ನಿಮ್ಮ ಎದೆಯಲ್ಲಿ ಹಾಲು ಉತ್ಪಾದನೆಗೂ ಸಹಕಾರಿ. ಇದರ ಜೊತೆಗೆ ನಿಮ್ಮಲ್ಲಿ ಪ್ರೀತಿಯ ಭಾವನೆಯನ್ನೂ ಹೆಚ್ಚೆಚ್ಚು ಹುಟ್ಟಿಸಿ ನಿಮ್ಮನ್ನು ಶಾಂತವಾಗಿರಿಸುತ್ತದೆ.

ನೀವು ಗರ್ಭಿಣಿಯಾದ ಮೇಲೆ ನಿಮ್ಮ ಮೇಲೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿ ಹೆಗಲ ಮೇಲೆ ಬೀಳುತ್ತದೆ. ಒಳ್ಳೆಯ ಆಹಾರಗಳನ್ನೇ ಸೇವಿಸಿ. ಕಡಿಮೆ ಆಲ್ಕೋಹಾಲ್ ಸೇವಿಸಿ. ನಿಮ್ಮ ಮಗುವಿಗಾಗಿ ಒಳ್ಳೆಯ ಕೆಲಸಗಳನ್ನೇ ಮಾಡಿ. ಕೇವಲ ನೀವು ಮಾತ್ರವಲ್ಲ, ತಂದೆಯಾದವನಿಗೂ ಈ ಜವಾಬ್ದಾರಿಯಿರುತ್ತದೆ.

ಇತ್ತೀಚಿಗಿನ ಬ್ರಿಟಿಷ್ ಮತ್ತು ನಾರ್ವೇಯನ್ ವರದಿಗಳು ಹೇಳುವಂತೆ ಮಕ್ಕಳಾದವರಿಗೆ ಸ್ತನಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಇನ್ನುಳಿದ ಹೃದಯ ಸಂಬಂಧಿ ಖಾಯಿಲೆಗಳನ್ನೂ ಕೂಡ ಇದು ಕಡಿಮೆ ಮಾಡುತ್ತದೆ.

ನಿಮ್ಮದೀಗ ಕುಟುಂಬ:

ಮಕ್ಕಳನ್ನು ಹೊಂದುವುದರಿಂದ ನವವಿವಾಹಿತರಿಗೆ ತ್ರಪ್ತಿ ಸಿಗುತ್ತದೆ. ಗ್ಲಾಸ್ಗೋ ಯುನಿವರ್ಸಿಟಿ ನಡೆಸಿದ ಸಮೀಕ್ಷೆಯ ಪ್ರಕಾರ 90000 ಬ್ರಟಿಷ್ ತಂದೆ ತಾಯಿಯರು ಈ ಮಾತನ್ನು ಒಪ್ಪಿಕೊಂಡಿದ್ದಾರೆ.

English summary

Pregnancy Could Improve Your Relationship

You might be thinking that pregnancy means a stagnant spell for your relationship with the only special couple time you'll spend together being shopping for a pram, but it's time to change that mind-set!
Story first published: Tuesday, October 1, 2013, 18:03 [IST]
X
Desktop Bottom Promotion