For Quick Alerts
ALLOW NOTIFICATIONS  
For Daily Alerts

ನಿಮ್ಮ ಹುಡುಗಿ ಈ ರೀತಿ ವರ್ತಿಸುತ್ತಿದ್ದರೆ ಎಚ್ಚರ!

By ಲೇಖಕ
|

ನಿಮ್ಮ ಗೆಳತಿಯೊಂದಿಗಿನ ನಿಮ್ಮ ಸಂಬಂಧವು ಹಳ್ಳ ಹಿಡಿಯುತ್ತಿದೆಯೇ ಅಥವಾ ನಿಮ್ಮ ಗೆಳತಿಯು ನಿಮ್ಮನ್ನು ತ್ಯಜಿಸಿ ಬಿಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ ಎಂದು ನಿಮಗೆ ಅನಿಸುತ್ತಿದೆಯೇ ?! ಈ ವಿಚಾರವಾಗಿ ನೀವು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರುವಿರಾ ? ಹಾಗಿದ್ದಲ್ಲಿ, ಬಹುಶಃ ಇದು ಆತ್ಮವಿಮರ್ಶೆಗೆ ಸಕಾಲ ಎಂದು ನೀವು ತಿಳಿಯಬೇಕು. ಈ ಕೆಳಗೆ ನೀಡಲಾಗಿರುವ ಅಂಶಗಳು ಬಹುಕಾಲದ ನಂತರ ನಿಮ್ಮ ಗಮನಕ್ಕೆ ಬಂದಿವೆಯೇ ಎಂಬುಂದನ್ನು ಪರಿಶೀಲಿಸಲು ಪ್ರಯತ್ನಿಸಿರಿ.

1 . ಸಂಭಾಷಣೆಗಳು ನೀರಸವಾಗಿರುವುದು.

ಇತ್ತೀಚಿನ ದಿನಗಳಲ್ಲಿ ನೀವು ನಿಮ್ಮ ಗೆಳತಿಯೊಂದಿಗೆ ಮಾತನಾಡುವಾಗ ಆಕೆಯು ಅನಾಸಕ್ತಿ ತೋರುವುದು, ಇಷ್ಟು ದಿನಗಳ ಕಾಲ ನಿಮ್ಮೊಂದಿಗೆ ಸಂಭಾಷಿಸುವಾಗ ತೋರುತ್ತಿದ್ದ ಹುಸಿಮುನಿಸು ಅಥವಾ ನಿಮ್ಮನ್ನು ಚುಡಾಯಿಸುವಂತಹ ಪ್ರಕ್ರಿಯೆಗಳು ಇತ್ತೀಚಿನ ದಿನಗಳಲ್ಲಿ ಮಾಯವಾಗಿರುವುದು, ಮೊದಲಿನಂತೆ ನಿಮ್ಮ ಮಾತುಗಳಲ್ಲಿನ ಸಣ್ಣ ಸಣ್ಣ ತಪ್ಪುಗಳನ್ನೂ ಕೂಡ ಸರಸದಿಂದ ಎತ್ತಿ ಹಿಡಿಯದೆ, ಅತೀ ಸಹನಶೀಲ ಸನ್ಯಾಸಿನಿಯಂತೆ ವರ್ತಿಸುವುದು, ನಿಮ್ಮ ಮಾತುಗಳು;

7 Signs She's Going to Dump You

ಸಂಭಾಷಣೆಯು ಗೊತ್ತುಗುರಿಯಿಲ್ಲದೆ ದಿಕ್ಕೆಟ್ಟು ಅಲೆದಾಡುತ್ತಿದ್ದರೂ ಸಹ ಆಕೆ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದಿರುವುದು, ಒಂದು ವೇಳೆ ನೀವು ಆಕೆಗೆ ಕರೆ ಮಾಡಲು ಮರೆತಾಗಲೂ ಕೂಡ ಆಕೆ ಅಷ್ಟಾಗಿ ಸಿಡುಕದಿರುವುದು ಇತ್ಯಾದಿ. ಸರ್ವೇಸಾಮಾನ್ಯವಾಗಿ, ಮುಖಭಾವ ಮತ್ತು ಕಣ್ಣುಗಳು ಇಬ್ಬರು ಪ್ರೇಮಿಗಳ ನಡುವಿನ ಆಸಕ್ತಿಯ ಮಟ್ಟದ ಕುರಿತು ಸಾಕಷ್ಟು ಹೇಳುತ್ತವೆ. ಒಂದು ವೇಳೆ ನಿಮ್ಮ ಗೆಳತಿಯು ಎಲ್ಲಾ ಕಾಲದಲ್ಲಿಯೂ ಕೂಡ ಮ್ಲಾನವದನಳಾಗಿ, ಅನಾಸಕ್ತಿಯಿಂದ ಕೂಡಿರುವಂತೆ ತೋರುತ್ತಿದ್ದರೆ, ಖಂಡಿತವಾಗಿಯೂ ಆಕೆಯು ಮೊದಲಿನ ಹಾಗೆ ನಿಮ್ಮವಳಾಗಿಯೇ ಉಳಿದಿಲ್ಲ ಎಂಬುದರ ಸೂಚನೆಯಾಗಿದೆ.

2 . ನಿಮ್ಮನ್ನು ಟೀಕಿಸಲು ಆಕೆಗೆ ಯಾವುದೇ ಕಾರಣದ ಅವಶ್ಯಕತೆ ಇಲ್ಲದಿರುವುದು.

ಇರಲಿ, ನೀವು ಪ್ರೇಮಿಗಳು ಯಾವಾಗಲೂ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಕೆಲವೊಮ್ಮೆ ಆಕೆಯು ಅದನ್ನು ನಿಮ್ಮದುರಿಗೆಯೇ ನೇರವಾಗಿ ಖಂಡಿಸಿರಬಹುದು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಇತ್ತೀಚಿನ ಬೆಳವಣಿಗೆಯಂತೆ, ನಿಮ್ಮ ಕುರಿತಾದ ಎಲ್ಲಾ ವಿಷಯಗಳೂ ಕೂಡ ಆಕೆಗೆ ಗೊಂದಲಮಯವಾಗಿರುವುದು ಅಥವಾ ನಿಮ್ಮಲ್ಲಿರುವ ಎಲ್ಲಾ ಕೊರತೆಗಳು ಅಥವಾ ದೋಷಗಳ ಬಗ್ಗೆ ಆಕೆಯಿಂದ ಒಂದು ಬಗೆಯ ನಿಕೃಷ್ಟವಾದ, ತಿರಸ್ಕಾರಯುಕ್ತ ಪ್ರತಿಕ್ರಿಯೆ ವ್ಯಕ್ತವಾಗುವುದು ಇತ್ಯಾದಿ. ಸಣ್ಣ ಪುಟ್ಟ ವಾಗ್ವಾದವು ಒಂದು ಸಂಬಂಧವನ್ನು ಗಟ್ಟಿಗೊಳಿಸಬಹುದಾದರೂ ಸಹ, ವಾದ ಮಾಡಿದ್ದಕ್ಕಾಗಿ ನೀಡುವ ತಪ್ಪು ತಪ್ಪಾದ, ಅರ್ಥಹೀನ, ಕ್ಷುಲ್ಲಕ ಕಾರಣಗಳು, ಅತಿ ಕಟುವಾಗಿ ಟೀಕಿಸುವ ಪ್ರವೃತ್ತಿ ಇತ್ಯಾದಿಗಳು, ಸಂಬಂಧವು ಒಡೆಯುವುದರ ಸೂಚಕಗಳಾಗಿರಬಹುದು.

3 . ಆಕೆಯು ನಿಮ್ಮ ಆಪ್ತರನ್ನು ಭೇಟಿಯಾಗಲು ಇಷ್ಟಪಡುವುದಿಲ್ಲ.

ನಿಮ್ಮ ಸಂಗಾತಿಯು, ನಿಮ್ಮ ಸ್ನೇಹಿತ ವರ್ಗವನ್ನು ಇಷ್ಟ ಪಡುವಂತೆ ಮಾಡಲು ನೀವು ಶತಪ್ರಯತ್ನವನ್ನು ಮಾಡಿದ್ದಾಗ್ಯೂ, ಇತ್ತೀಚಿನ ದಿನಗಳಲ್ಲಿ ಆಕೆಯು ನಿಮ್ಮ ಆಪ್ತರೊಂದಿಗೆ ಬೆರೆಯಲು ಸ್ವಲ್ಪಮಟ್ಟಿಗಾದರೂ ತಯಾರಿರುವುದಿಲ್ಲ. ಒಮ್ಮಿಂದೊಮ್ಮೆಲೇ, ನಿಮ್ಮ ಇಡೀ ಅಪ್ತವರ್ಗದ ಕುರಿತಾಗಿ ಆಕೆಯು ಇನ್ನಿಲ್ಲದ ತಕರಾರುಗಳನ್ನು ಮಾಡುತ್ತಾಳೆ ಹಾಗೂ ನೀವು ತಪ್ಪಾದ ರೀತಿಯಲ್ಲಿ, ದೋಷಪೂರಿತ ವಾತಾವರಣದಲ್ಲಿ ಬೆಳೆಸಲ್ಪಟ್ಟಿದ್ದೀರಿ ಎಂದು ನಿಮಗೆ ಸಲಹೆ ಮಾಡಲೂ ಸಹ ಹಿಂಜರಿಯುವುದಿಲ್ಲ. ಒಂದು ವೇಳೆ ಇಂತಹ ವಿಷಯಗಳ ಕುರಿತು ಆಕೆಯ ಪ್ರತಿಕ್ರಿಯೆಯು ಅವಮಾನಕರವಾಗಿದ್ದರೆ, ಖಂಡಿತವಾಗಿಯೂ ಕೂಡ ನಿಮ್ಮ ಕುರಿತಾಗಿ ಇದುವರೆಗೆ ಆಕೆಯು ಇರಿಸಿಕೊಂಡಿದ್ದ ಕನಿಷ್ಟ ಮಟ್ಟದ ಗೌರವವೂ ಕೂಡ ಇಂದಿಗೆ ಮಾಯವಾಗಿದೆ ಎಂದು ನೀವು ತಿಳಿಯಬೇಕು ಹಾಗೂ ಇದು ನಿಮ್ಮೀರ್ವರ ಸಂಬಂಧವು ಕಳಚಿ ಬೀಳುವುದರ ಸೂಚಕ ಎಂದು ತಿಳಿಯಬೇಕು.

4 . ಆ ಸ್ನೇಹದ ಕಿಡಿಗಳು ಈಗ ಮಾಯವಾಗಿವೆ.

ಅದು ಕೇವಲ ದೈಹಿಕ ಆಕರ್ಷಣೆಯು ಮಾತ್ರವಾಗಿರದೇ, ಭೌದ್ಧಿಕ ಮಟ್ಟದ ಆಕರ್ಷಣೆಯೂ ಸಹ ನಿಮ್ಮ ಸಂಬಂಧವು ಇದುವರೆಗೆ ಮುಂದುವರೆದುಕೊಂಡು ಬರಲು ಕಾರಣವಾಗಿತ್ತು. ನೀವು ಸಿಡಿಸುತ್ತಿದ್ದ ಹಾಸ್ಯ ಚಟಾಕಿ, ಕೆಲವೊಂದು ಪದಗಳನ್ನು ನೀವು ಹಾಸ್ಯಭರಿತವಾಗಿ ಉಚ್ಚರಿಸುತ್ತಿದ್ದ ರೀತಿ, ಅಥವಾ ನಿಮ್ಮಾಕೆಯು ನಾಚಿ ನೀರಾಗುವಂತೆ ನೀವು ಅಭಿನಂದಿಸುತ್ತಿದ್ದ ರೀತಿ ಇವೆಲ್ಲವೂ ಕೂಡ ಭೌದ್ಧಿಕ ಮಟ್ಟದ ಆಕರ್ಷಣೆಗಳು. ಆದರೆ, ಇತ್ತೀಚಿನ ದಿನಗಳಲ್ಲಿ ನಿಮ್ಮ ಈ ಉತ್ಸಾಹದ ಪ್ರಚೋದಕಗಳು ಆಕೆಯ ಮೇಲೆ ಯಾವುದೇ ಪರಿಣಾಮವನ್ನು ಉಂಟು ಮಾಡುವುದಿಲ್ಲ ಹಾಗೂ ಇದು ನಿಮ್ಮ ನಡುವಿನ ಆಕರ್ಷಣೆಯ ಪ್ರಮಾಣವು ವಿವಿಧ ಆಯಾಮಗಳಲ್ಲಿ ಕಡಿಮೆಯಾಗಿರುವುದರ ಸೂಚಕವಾಗಿರಬಹುದು.

5 . ಕೇವಲ ನಿಮ್ಮ ದೈಹಿಕ ಉಪಸ್ಥಿತಿಯು ಆಕೆಗಿನ್ನು ಸಾಕಾಗಿರಬಹುದು.

ಇಂದಿನವರೆಗೂ ನೀವೀರ್ವರು ಶಯ್ಯಾಗೃಹದಲ್ಲಿ ಭಾವನಾರಹಿತವಾಗಿಯೋ ಅಥವಾ ಪ್ರಾಣಿಗಳಂತಲ್ಲದ ರೀತಿಯಲ್ಲಿ ಗಾಢವಾದ ಆಲಿಂಗನ, ಚುಂಬನ, ಮತ್ತು ಪರಸ್ಪರ ಕಾಳಜಿಪೂರ್ವಕ ಕ್ರಿಯೆಗಳ ಮೂಲಕ ವ್ಯಕ್ತಪಡಿಸುತ್ತಿದ್ದ ಆ ನಿಮ್ಮ ಪ್ರೀತಿಯು ಇತ್ತೀಚಿನ ದಿನಗಳಲ್ಲಿ ಮಾಯವಾಗಿರುತ್ತದೆ. ಇಂದು ನೀವು ಇಂತಹ ಚಟುವಟಿಕೆಗಳಲ್ಲಿ ತೊಡಗಲು ಯತ್ನಿಸಿದಾಗ, ಆಕೆಯು ಸನ್ಯಾಸಿನಿಯಂತೆ ಇಂತಹ ಕ್ರಿಯೆಗಳ ವಿರುದ್ಧ ಪ್ರತಿಭಟನಾಶೀಲಳಾಗಿರುತ್ತಾಳೆ. ಇವೆಲ್ಲಾ ಲಕ್ಷಣಗಳೂ ಕೂಡ, ಇದುವರೆಗೂ ನಿಮ್ಮೀರ್ವರ ನಡುವೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ದೈಹಿಕ ಸಮೀಕರಣವು ಈಗ ಆಕೆಗೆ ಅರ್ಥಹೀನವಾಗಿ ಕಾಣತೊಡಗಿವೆ ಎಂಬುದರ ದಟ್ಟ ಸೂಚನೆಗಳಾಗಿವೆ.

6 . ಭವಿಷ್ಯದ ಬಗ್ಗೆ ಮಾತುಗಳೇ ಇರದಿರುವುದು.

ತೀರಾ ಇತ್ತೀಚಿಗಿನವರೆಗೆ ಆಕೆಗೆ ನಾಡಿದ್ದಿನ ಬಗ್ಗೆ ಅಥವಾ ವಾರಾಂತ್ಯದ ಬಗ್ಗೆ ಯೋಜನೆಗಳನ್ನು ರೂಪಿಸುವುವುದನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ ಅಥವಾ ನಿಮ್ಮಂತಹ ವಿಶೇಷ ವ್ಯಕ್ತಿಯೋರ್ವನನ್ನು ಮದುವೆಯಾಗಿ ಒಂದು ಹೆಣ್ಣು ಮಗುವನ್ನು ಪಡೆಯುವ ಯೋಚನೆಯ ಕುರಿತು ಆಕೆಗೆ ಮಾತನಾಡದಿರಲು ಸಾಧ್ಯವಿರಲಿಲ್ಲ. ಆದರೆ, ಇಂದಿನ ದಿನಗಳಲ್ಲಿ ಭವಿಷ್ಯದ ಕುರಿತಾದ ಯಾವುದೇ ರೀತಿಯ ಯೋಜನೆಯಗಳು ಆಕೆ ಮಾತುಗಳಲ್ಲಿ ಕೇಳಿಬರುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆಯೆಂದರೆ, ಈ ನಿಮ್ಮ ಭಾಂಧವ್ಯವು ಇನ್ನಷ್ಟು ಧೀರ್ಘಕಾಲ ಮುಂದುವರೆಯುವುದು ಆಕೆಗೆ ಬೇಕಿಲ್ಲ ಎಂದು.

7 . ಆಕೆಯು ತನ್ನ ಅಲಂಕಾರದ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುತ್ತಿಲ್ಲ.

ಇಂದಿನವರೆಗೂ ಕೂಡ, ಆಕೆಯೊಂದಿಗೆ ನೀವು ಆಚರಿಸುತ್ತಿದ್ದ ಅತೀ ಸಾಮಾನ್ಯವಾದ ಸಂದರ್ಭಗಳಲ್ಲಿಯೂ ಸಹ, ಆಕೆಯು ತನ್ನ ಅಲಂಕಾರದ ಬಗ್ಗೆ ಅತ್ಯಂತ ಕಾಳಜಿಯುಳ್ಳವಳಾಗಿ ಕಾಣಿಸುತ್ತಿದ್ದಳು ಮಾತ್ರವಲ್ಲದೇ, ಅದೆಷ್ಟೋ ಬಾರಿ ನಿಮ್ಮೊಂದಿಗೆ ಸಿನೆಮಾ ವೀಕ್ಷಣೆಯಂತಹ ಸಾಮಾನ್ಯವಾದ ಸಂದರ್ಭದಲ್ಲಿಯೂ ಸಹ ಆಕೆಯು ತನ್ನ ಅಲಂಕಾರಕ್ಕಾಗಿ ಅತ್ಯಧಿಕ ಸಮಯವನ್ನು ಹಾಗೂ ಪರಿಶ್ರಮವನ್ನು ಹಾಕುವವಳಂತೆ ಕಾಣುತ್ತಿದ್ದಳು. ಆದರೆ, ಇಂದಿನ ದಿನಗಳಲ್ಲಿ ಆಕೆಯು ತನ್ನ ಬಾಹ್ಯ ಸೌoರ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿದ್ದಾಳೆ. ಇತ್ತೀಚಿಗಿನ ದಿನಗಳಲ್ಲಿ ಆಕೆಯು ಕಾಣಿಸಿಕೊಳ್ಳುವ ರೀತಿಯು ಹೇಗಿದೆಯೆಂದರೆ, ಈಗ ತಾನೇ ಕೋಮಾ ಸ್ಥಿತಿಯಿಂದ ಎದ್ದು ಬಂದವಳಂತೆ. ಈ ಬೆಳವಣಿಗೆಯು ಖಂಡಿತವಾಗಿಯೂ ಒಂದು ಕಾಲದಲ್ಲಿ ಬಲಯುತವಾಗಿದ್ದ ಭಾವನಾತ್ಮಕ ಬೆಸುಗೆಯ ಸಡಿಲಿಕೆಗೆ ಹೇತುವಾಗುತ್ತದೆ.

English summary

7 Signs She's Going to Dump You

If you been left scratching your head, unsure whether your relationship is just going through a difficult patch or if your girlfriend is about to dump you, it is time to do some introspection. Try to analyze if the following signs have surfaced lately:
Story first published: Monday, October 21, 2013, 16:57 [IST]
X
Desktop Bottom Promotion