For Quick Alerts
ALLOW NOTIFICATIONS  
For Daily Alerts

ತಂದೆಯಾಗುತ್ತಿದ್ದೇನೆಂದು ಗೊತ್ತಾದ ಕ್ಷಣ ಕಾಡುವ ಭಯ

By Super
|

ಪ್ರತಿ ನಿರೀಕ್ಷಿಸುತ್ತಿರುವ ತಂದೆಯು ತಾನು ವಿಭಿನ್ನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ನಿಜವಾಗಿಯೂ ಆಗುತ್ತದೆಯೇ ಎಂದು ಭಾವಿಸುವುದು ಸಹಜ. ಹಾಗೆ ನೋಡಿದರೆ ನಿಜವಾಗಿಯೂ ಗರ್ಭಿಣಿಯಾಗಿ ಮಗುವಿಗೆ ಜನ್ಮನೀಡುವುದರಲ್ಲಿ ತಾಯಿಗೇ ಹೆಚ್ಚು ಪ್ರಧಾನತೆ ಇರುತ್ತದೆ. ಆದರೂ ತಂದೆಯಾಗುವವನು ತಾನು ಮುಂದೆ ಬರುವ ಜವಾಬ್ದಾರಿಗಳಿಗೆ ಸ್ಪಂದಿಸಲು ಇನ್ನೂ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಲು ಬಹಳಷ್ಟು ಸಾಧ್ಯತೆಗಳಿವೆ.

ತಂದೆಯಾಗುವವನು ಮುಂಬರುವ ಆತಂಕಗಳು ಅಥವ ಕಷ್ಟಗಳನ್ನು ಪರಿಹರಿಸುವುದು ಅವನ ಕರ್ತವ್ಯವಾಗಿದೆಯಾದರೂ ಅನೇಕರು (ತಂದೆಯಾಗುವವರು) ಮುಂಬರುವ ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ನಿಭಾಯಿಸಲು ನಿಜವಾಗಿಯೂ ಕಷ್ಟವೆಂದು ತಿಳಿದಿದ್ದಾರೆ. ನಿರೀಕ್ಷಕ ತಂದೆಯು ಆತಂಕ ಮತ್ತು ಚಿಂತೆಗಳಲ್ಲಿ ಮುಳುಗಿದ್ದರೂ ಸಹ ಅವರು ಬೇರೊಬ್ಬರೊಂದಿಗೆ ತಮ್ಮಲ್ಲಿರುವ ವಿವರಗಳನ್ನು ಹಂಚಿಕೊಳ್ಳಲು ಇಷ್ಟವಿಲ್ಲದಿರಬಹುದು.

ಗಾಢವಾದ ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಿರೀಕ್ಷಕ ತಂದೆಯು ಎದುರಿಸಬಹುದಾದ 10 ಹೆಚ್ಚು ಸಾಮಾನ್ಯವಾದ ಭಯಗಳು ಯಾವುದೆಂದು ನೋಡೋಣ ಬನ್ನಿ:

ಸುರಕ್ಷಿತತೆಯ ಭಯ

ಸುರಕ್ಷಿತತೆಯ ಭಯ

ಓರ್ವ ನಿರೀಕ್ಷಕ ತಂದೆಗೆ ತಾನು ತನ್ನ ಮಗುವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳಲು ಸಾಧ್ಯತೆಯಿದೆಯೇ, ಸರಿಯಾಗಿ ಒರಸುವ ಬಟ್ಟೆಗಳನ್ನು ಬದಲಾಯಿಸಲು ಆಗುತ್ತದೆಯೇ, ಮಗುವಿನ ಸುರಕ್ಷತೆಯನ್ನು ಕಾಪಾಡಬಲ್ಲೆನೇ, ತನ್ನ ಮಗುವಿನ ಸುರಕ್ಷತೆಗೆ ಮನೆಯು ಎಲ್ಲಾ ರೀತಿಯಲ್ಲಿ ಸರಿಯಾಗಿದೆಯೇ, ಇತ್ಯಾದಿ, ಇಂತಹ ಚಿಂತೆಗಳು ಕಾಡಬಹುದು. ಇಂತಹ ಚಿಂತೆಗಳು ಸಾಮಾನ್ಯ ಮತ್ತು ನಿಜವಾಗಿಯೂ ಇರಬಹುದಾದರೂ ಅವುಗಳ ಉತ್ಪ್ರೇಕ್ಷೆ ಮಾಡದಿರುವುದು ಬಹಳ ಒಳ್ಳೆಯದು.

ನಿಮ್ಮ ಉದ್ಯೋಗ ಮತ್ತು ಸಂಸಾರದ ಜವಾಬ್ದಾರಿಗಳ ಸಮತೋಲನ

ನಿಮ್ಮ ಉದ್ಯೋಗ ಮತ್ತು ಸಂಸಾರದ ಜವಾಬ್ದಾರಿಗಳ ಸಮತೋಲನ

ನೀವು ತಂದೆಯಾಗಿ ನಿಮ್ಮ ಕೆಲಸ ಮತ್ತು ಜೀವನಗಳ ಸಮತೋಲನ ಮಾಡುವುದು ಅತ್ಯಂತ ಮುಖ್ಯ ಸವಾಲಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ಕಳೆಯುವ ಸಮಯಕ್ಕಿಂತಾ ಬೇರೆ ಯಾವುದನ್ನೂ ಹೋಲಿಸಬಾರದು. ನಿರೀಕ್ಷಕ ತಂದೆಗಳು ತಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗುವುದಿಲ್ಲವೆಂಬ ಆತಂಕದಲ್ಲಿರುತ್ತಾರೆ. ಹಾಗೆಯೇ ಮಗುವಿನ ಬೆಳವಣಿಗೆ ಮತ್ತು ಘಟನೆಗಳಿಗೆ ಲಕ್ಷ್ಯವಿಟ್ಟಿರುವಾಗ ತಮ್ಮ ಉದ್ಯೋಗದಲ್ಲಿ ಸಾಮರ್ಥ್ಯದಿಂದ ಕೆಲಸಮಾಡಲು ಸಾಧ್ಯವಾಗುವಿದಿಲ್ಲವೆಂಬ ಚಿಂತೆನೆಯೂ ಇರಬಹುದು. ಕೆಲಸದಲ್ಲಿರುವಾಗ ತಮ್ಮ ಮಗುವಿನ ಜೀವನದ ವಿಶೇಷ ಘಟನೆಗಳು ನಡೆವಾಗ ತಾವಿಲ್ಲದೇ ಇರಬಹುದು ಎಂಬ ಚಿಂತೆಯೂ ಇರಬಹುದು. ಈ ಎರಡು ಜವಾಬ್ದಾರಿಗಳ ಹೊಂದಾಣಿಕೆ ಅತ್ಯಂತ ಮುಖ್ಯ.

ಮಗುವಿನ ಮೇಲೆ ವೈವಾಹಿಕ ಜೀವನ ಬೀರುವ ಪ್ರಭಾವ

ಮಗುವಿನ ಮೇಲೆ ವೈವಾಹಿಕ ಜೀವನ ಬೀರುವ ಪ್ರಭಾವ

ಒಂದು ತಂದೆಯ ಜೀವನದಲ್ಲಿ ಒಂದು ಮಗುವನ್ನು ಪಡೆದಾಗ ಅವನ ಜೀವನ ಶೈಲಿಯು ಖಚಿತವಾಗಿ ಬದಲಾವಣೆಗೊಳ್ಳುತ್ತದೆ ಹಾಗೂ ತನ್ನ ಜೀವನ ಸಂಗಾತಿಯು ಗರ್ಭಧಾರಣೆಗೊಂಡಾಗಲೂ ಸಹ ಇಂತಹ ಬದಲಾವಣೆಯನ್ನು ಕಾಣಬಹುದು. ಹೊಸದಾಗಿ ಮಗುವಾದಾಗ ನಿಮ್ಮ ಜೀವನ ಸಂಗಾತಿಯ ಸಮಯ ಮತ್ತು ಗಮನಗಳ ಬೇಡಿಕೆಗಳು ಹೆಚ್ಚಾಗಿರುವುದರಿಂದ ನಿಮ್ಮ ಹೆಂಡತಿಯು ದಣಿದಿರುತ್ತಾಳೆ. ಹಾಗಿದ್ದಾಗ ನಿಮ್ಮ ಹೆಂಡತಿಯು ನಿಮ್ಮ ನಿಕಟತೆಯನ್ನ ಪಡೆಯಲು ಬಯಸದೇ ಇರುವುದು ಸಾಧ್ಯ. ಆದರೆ, ಸಮಯ ಕಳೆಯುತ್ತಂತೆಯೇ ಈ ಪರಿಸ್ಥಿತಿ ಬದಲಾಗುವುದು ಮತ್ತು ಅದಕ್ಕೆ ನಿಮ್ಮ ತಾಳ್ಮೆ ಅಗತ್ಯ.

ನಿಮ್ಮ ಸಾಮಾಜಿಕ ಜೀವನದ ಮೇಲೆ ಪರಿಣಾಮ

ನಿಮ್ಮ ಸಾಮಾಜಿಕ ಜೀವನದ ಮೇಲೆ ಪರಿಣಾಮ

ಓರ್ವ ನಿರೀಕ್ಷಕ ತಂದೆಯು ಪೋಷಕತ್ವದ ಕೆಲಸದಲ್ಲಿ ಹೆಚ್ಚು ಸಮಯ ಕಳೆಯಬೇಕಾಗಿರುವುದರಿಂದ ತನ್ನ ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರಬಹುದು. ಅವರು ತಮ್ಮ ಸ್ನೇಹಿತರೊಂದಿಗೆ ಹೊರಗಡೆ ಹೋಗಲು ಮತ್ತು ಸಕ್ರಿಯ ಸಾಮಾಜಿಕ ಜೀವನವನ್ನು ಅನುಭವಿಸಲು ಸಮಯದ ಅಭಾವದ ಚಿಂತೆಯಿರುತ್ತದೆ. ಹಾಗೂ ಅವರಿಗೆ ತಮ್ಮ ಎಲ್ಲಾ ಸ್ನೇಹಿತರು ಮತ್ತು ಸಾಮಾಜಿಕ ಜೀವನವನ್ನು ಕಳೆದುಕೊಳ್ಳಬಹುದೆಂಬ ಹೆದರಿಕೆಯೂ ಇರುತ್ತದೆ.

ಸಂಬಂಧಗಳ ಆತಂಕ

ಸಂಬಂಧಗಳ ಆತಂಕ

ಕೆಲವು ಪುರುಷರು ತಮ್ಮ ಕುಟುಂಬಗಳಲ್ಲಿ ಕಂಡುಬಂದಿರುವುದನ್ನು ಆಧರಿಸಿ ತಮ್ಮ ವಿನೋದಪ್ರಿಯಳಾದ ಮತ್ತು ಸದಾ ಜೊತೆಯಲ್ಲಿಯೇ ಇರುತ್ತಿದ್ದ ಜೀವನ ಸಂಗಾತಿಯು ಮಗುವಾದ ಮೇಲೆ ಬದಲಾವಣೆಗೊಂಡು ದೂರ ಸರಿಯುವರೆಂದು ಆತಂಕಪಡುತ್ತಾರೆ. ನಿರೀಕ್ಷಿಸುತ್ತಿರುವ ತಂದೆಯರು ತಮ್ಮ ಸಂಗಾತಿಯರು ತಮ್ಮ ಮಗುವನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಮಾಡುವುದರಿಂದ ಅವರು ಕ್ರಮೇಣ ತಮ್ಮ ನಿಕಟ ಸಂಬಂಧದಿಂದ ದೂರವಿರಬಹುದೆಂದು ಆತಂಕಪಡುತ್ತಾರೆ. ಇದು ತಮ್ಮ ಮೇಲೆ ಇರುವ ಪ್ರೀತಿ ವಿಶ್ವಾಸಗಳು ಶಾಶ್ವತವಾಗಿ ಮಗುವಿನಮೇಲೆ ಹೋಗಿಬಿಡುತ್ತದೆಯೆಂಬ ಚಿಂತೆ.

ಕಾರ್ಯ ನಿರ್ವಹಣೆಯ ಚಿಂತೆ

ಕಾರ್ಯ ನಿರ್ವಹಣೆಯ ಚಿಂತೆ

ನಿರೀಕ್ಷಿಸುತ್ತಿರುವ ತಂದೆಯರು ತಮ್ಮ ಸಂಗಾತಿಗೆ ಅಗತ್ಯವಾದಾಗ ಬಲ ಬೆಂಬಲ ನೀಡಲು ಸಾಧ್ಯವಾಗುವುದಿಲ್ಲಬಹುದೆಂಬ ಚಿಂತನೆಯಲ್ಲಿರುತ್ತಾರೆ. ಅವರಿಗೆ ತಾವು ಎಲ್ಲಿ ಕಣ್ಮರೆಯಾಗಿಬಿಡುತ್ತಾರೋ, ಎಲ್ಲಿ ಅಸಮರ್ಥನಾಗಿಬಿಡುತ್ತಾರೋ ಎಂಬುವ ಚಿಂತೆಯೂ ಬಂದಿರುತ್ತದೆ. ಇನ್ನೂ ಸರಳವಾಗಿ ಹೇಳಬೇಕಂದರೆ ಅವರಿಗೆ ತಮ್ಮ ಸಂಗಾತಿಗೆ ಅಗತ್ಯವಿದ್ದಾಗ ಬೆಂಬಲ ನೀಡಲು ಸಾಧ್ಯವಾಗುದಿಲ್ಲವೆಂಬ ಚಿಂತೆಯಿರುತ್ತದೆ.

ತಮ್ಮ ಮರಣದ ಹೆದರಿಕೆ

ತಮ್ಮ ಮರಣದ ಹೆದರಿಕೆ

ಒಂದು ಹೊಸ ಜೀವನವು ಆರಂಭವಾದಾಗ ಅದರ ಕೊನೆಯಬಗ್ಗೆ ಚಿಂತನೆಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅನೇಕಬಾರಿ ನಿರೀಕ್ಷಿಸುತ್ತಿರುವ ತಂದೆಯರು ತಮಗೆ ಬದಲಿಯಾಗಿ ಮಗು ಬಂದಿರುವುದರಿಂದ ತಾವು ಇನ್ನು ಚಿಕ್ಕವರಲ್ಲವಲ್ಲಾ ಎಂಬ ಯೋಚನೆಗಳು ತಲೆಯಲ್ಲಿ ತುಂಬುತ್ತವೆ. ಅವರು ಈಗ ತಂದೆಯಾದಮೇಲೆ ತಮಗಿಂತ ತಮ್ಮ ಮಗುವಿನ ಮತ್ತು ಕುಟುಂಬದ ಅಗತ್ಯಗಳಿಗೆ ಪ್ರಾಧಾನ್ಯತೆ ಕೊಡುವುದರಿಂದ ಮತ್ತು ತಮಗಿಂತ ಮತ್ತೊಬ್ಬರನ್ನು ಪ್ರೀತಿಮಾಡಬೇಕಾಗಿದೆಯೆಂಬ ಹೆದರಿಕೆ ಬರುತ್ತದೆ.

 ನಿಮ್ಮ ಸಂಗಾತಿಯ ಮತ್ತು ನಿಮ್ಮ ಮಗುವಿನ ಆರೋಗ್ಯದಬಗ್ಗೆ ಚಿಂತೆ

ನಿಮ್ಮ ಸಂಗಾತಿಯ ಮತ್ತು ನಿಮ್ಮ ಮಗುವಿನ ಆರೋಗ್ಯದಬಗ್ಗೆ ಚಿಂತೆ

ನಿರೀಕ್ಷಿಸುತ್ತಿರುವ ತಂದೆಯವರು ಎಲ್ಲಿ ತನ್ನ ಮಗುವನ್ನು ಕಳೆದುಕೊಳ್ಳಬಹುದೋ ಅಥವಾ ಎಲ್ಲಿ ತಮ್ಮ ಸಂಗಾತಿಯನ್ನು ಕಳೆದುಕೊಳ್ಳಬಹುದೋ ಎಂಬ ಚಿಂತೆಯಗುತ್ತದೆ. ಒಂದು ಪಕ್ಷ ತನ್ನ ಸಂಗಾತಿಯನ್ನು ಕಳೆದುಕೊಂಡರೆ, ಮಗುವನ್ನು ತಾನೊಬ್ಬನೇ ಬೆಳೆಸುವ ಚಿಂತೆ ಬರಬಹುದು. ಹೆರಿಗೆ ಎನ್ನುವುದು ತಂದೆಯರಿಗೆ ಒಂದು ಘೋರ ಬೆದರಿಕೆಯನ್ನೊಡ್ಡುವ ಅನುಭವ ಮತ್ತು ಆ ಸಮಯದಲ್ಲಿ ಗಾಬರಿಪಡಿಸುವ ಘಟನೆಗಳ ಚಿಂತೆ ವ್ಯಕ್ತಿಗೆ ಸಂಭವಿಸಬಹುದು. ಆದರೆ ಮುಖ್ಯವಾಗಿ ಅಂತಹ ಹೆದರಿಕೆ ಹುಟ್ಟಿಸುವ ಸಂದರ್ಭಗಳು ತರ್ಕಬಾಹಿರವಾಗಿರುತ್ತದೆಯೇ ಹೊರತು ಅವುಗಳ ಮೇಲೆ ಚಿಂತನೆ ಮಾಡುವುದು ಅನಗತ್ಯ.

ಒಂದು ಒಳ್ಳೆಯ ತಂದೆಯಾಗಿರುವ ಚಿಂತೆ

ಒಂದು ಒಳ್ಳೆಯ ತಂದೆಯಾಗಿರುವ ಚಿಂತೆ

ಕೆಲವು ನಿರೀಕ್ಷಿಸುತ್ತಿರುವ ತಂದೆಯರು ಬಹಳ ಆಳವಾಗಿ ಯೋಚನೆಮಾಡುತ್ತಾ, ತಾವು ಒಂದು ಒಳ್ಳೆಯ ತಂದೆಯಾಗಿರುವುದಕ್ಕೆ ಸಾಧ್ಯತೆ ಇಲ್ಲವೆಂಬ ಚಿಂತನೆಯಲ್ಲಿರುತ್ತಾರೆ ಹಾಗೂ ತಾವು ತನ್ನ ಮಗುವನ್ನು ಒಳ್ಳೆಯ ಆರ್ಥಿಕ ಸ್ಥಿರವಾದ ಮನೆಯಲ್ಲಿ ಬೆಳೆಸಲು ಸಾಮರ್ಥವಿರುವಿದಿಲ್ಲವೋ ಎಂಬ ಚಿಂತೆಯೂ ಕೂಡ ಬಾಧಿಸುತ್ತದೆ.

 ಹಣಕಾಸಿನ ಆತಂಕಗಳು

ಹಣಕಾಸಿನ ಆತಂಕಗಳು

ನಿರೀಕ್ಷಿಸುತ್ತಿರುವ ತಂದೆಯವರು ಆರ್ಥಿಕವಾಗಿ ತನ್ನ ಕುಟುಂಬದ ಬೆಂಬಲ ಮತ್ತು ತನ್ನ ಮಗುವಿನ ಶಿಕ್ಷಣ ಲಾಲನೆ ಸಾಧ್ಯವಾಗುವುದಿಲ್ಲ ಎಂಬ ಚಿಂತನೆ ಇರುತ್ತಾರೆ. ಅನೇಕ ಕುಟುಂಬಗಳಲ್ಲಿ ಪತ್ನಿಯು ಮಗು ಹುಟ್ಟಿದಮೇಲೆ ತನ್ನ ಕೆಲಸದಿಂದ ವಿಶ್ರಾಂತಿ ತೆಗೆದುಕೊಂಡರೆ ಆ ಸಮಯದಲ್ಲಿ ಪತಿಗೆ ಬರುವ ಆದಾಯದಲ್ಲಿ, ತಾತ್ಕಾಲಿಕವಾಗಿಯೂ ಸಹ, ಇಬ್ಬರ ಆದಾಯಗಳ ಬದಲಾಗಿ ಒಬ್ಬರ ಆದಾಯವೇ ಇದ್ದು, ಮೂರು ಮಂದಿಗೆ ಸಾಕಾಗುವುದಿಲ್ಲವೆಂಬ ಚಿಂತೆ ಕಾಡುತ್ತದೆ.

English summary

10 Fears that Expectant Fathers Face

The truth is that when it comes to being pregnant and giving birth, the mother is the star of the show but there are ways for the expectant father to feel more engaged throughout the journey to parenthood.
X
Desktop Bottom Promotion