For Quick Alerts
ALLOW NOTIFICATIONS  
For Daily Alerts

ಹಿಂಜರಿಕೆಯಾದರೂ ಇವುಗಳನ್ನು ಸಂಗಾತಿಯಲ್ಲಿ ಹೇಳಿಬಿಡಿ

|

ನಾವು ಇಷ್ಟ ಪಡುತ್ತಿರುವ, ನಮ್ಮನ್ನು ಇಷ್ಟ ಪಡುತ್ತಿರುವ ವ್ಯಕ್ತಿ ಜೊತೆ ಯಾವ ವಿಷಯ ಹೇಳಬೇಕು, ಯಾವುದನನ್ನು ಹೇಳಬಾರದು ಎಂಬ ಗೊಂದಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಉತ್ತಮ ಸಂಬಂಧಕ್ಕಾಗಿ ಸಂಗಾತಿ ಹತ್ತಿರ ಯಾವುದನ್ನು ಮರೆ ಮಾಚಬಾರದಾದರೂ ಕೆಲವೊಮ್ಮೆ ನಮ್ಮ ಸಂಬಂಧ ಉತ್ತಮವಾಗಿರಲು ಕೆಲವೊಂದು ವಿಷಯವನ್ನು ಹೇಳದಿರುವುದೇ ಒಳ್ಳೆಯದಾಗಿರುತ್ತದೆ. ಆದ್ದರಿಂದಲೇ ಯಾವ ವಿಷಯ ಹೇಳಬೇಕು, ಯಾವುದನ್ನು ಹೇಳಬಾರದು ಎಂಬ ಗೊಂದಲ ಹೆಚ್ಚಿನವರಲ್ಲಿ ಇರುತ್ತದೆ.

ನಾವು ಹೇಳುವ ಕೆಲವೊಂದು ವಿಷಯಗಳು ಅವರಿಗೆ ಇಷ್ಟವಾಗದೆ ಹೋಗಬಹುದು, ಅಥವಾ ಆ ಬಗ್ಗೆ ಹೇಳಲು ನಿಮಗೆ ಮುಜುಗರವಾಗಬಹುದು ಆದರೆ ಹೇಳದೆ ಹೋದರೆ ಅದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಉಂಟಾಗಬಹುದು. ಅದರ ಬದಲು ಹೇಳಬೇಕಾದ ವಿಷಯವನ್ನು ಹೆಳಿದರೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಯಾವ ವಿಷಯವನ್ನು ಹೇಳಿಕೊಳ್ಳಲು ಹಿಂಜರಿಯಬಾರದು ಎಂದು ತಿಳಿಯಲು ಮುಂದೆ ಓದಿ:

ನಿಮ್ಮ ಫ್ರೀಡಂ

ನಿಮ್ಮ ಫ್ರೀಡಂ

ಹೆಚ್ಚಿನ ಜೋಡಿಗಳಲ್ಲಿ ಕಂಡು ಬರುವ ಸಮಸ್ಯೆ ಇದಾಗಿದೆ. ಪ್ರೀತಿ ಎನ್ನುವ ಹೆಸರಿನಲ್ಲಿ ಓವರ್ ಪೊಸೆಸಿವ್ ಆಗಿ ತನ್ನ ಸಂಗಾತಿಯ ಫ್ರೀಡಂಗೆ ಅಡ್ಡವಾಗುತ್ತಾರೆ. ಇದರ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಮೊದ ಮೊದಲು ಸಹಿಸುತ್ತೇವೆ, ಕೊನೆಗೆ ಈ ವಿಷಯಕ್ಕೆ ಜಗಳ ಬೆಳೆಯುತ್ತದೆ. ಆದ್ದರಿಂದ ಈ ಬಗ್ಗೆ ಅವರ ಹತ್ತಿರ ತಿಳಿಹೇಳುವುದು ಒಳ್ಳೆಯದು.

ಖರ್ಚು

ಖರ್ಚು

ದಂಪತಿಗಳ ನಡುವೆ ಜಗಳ ತರುವ ಮತ್ತೊಂದು ಪ್ರಮುಖ ಕಾರಣ ಹಣ. ಒಬ್ಬರಿಗೊಬ್ಬರು ತಮ್ಮ ಖರ್ಚು ವೆಚ್ಛಗಳ ಬಗ್ಗೆ ಮರೆಮಾಚದೆ ಹೇಳಿಕೊಳ್ಳವುದು ಒಳ್ಳೆಯದು. ಅದರಲ್ಲೂ ಹೆಂಗಸರು ಈ ವಿಷಯದಲ್ಲಿ ಹೆಚ್ಚು ಗಮನ ಹರಿಸಬೇಕು. ಗಂಡನ ಆರ್ಥಿಕ ಸ್ಥಿತಿಯ ಅರಿವು ಹೆಂಡತಿಗಿದ್ದರೆ ಅಂತಹ ಕುಟುಂಬದಲ್ಲಿ ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇರುತ್ತದೆ.

ಮೂಡ್

ಮೂಡ್

ಮೂಡ್ ಸರಿಯಿಲ್ಲವೆಂದರೆ ಯಾವ ಕಾರಣಕ್ಕಾಗಿ ಮೂಡ್ ಸರಿಯಿಲ್ಲ ಎಂದು ಹೇಳಿ ಬಿಡಿ. ನಿಮ್ಮ ಮೂಡ್ ಹಾಳಾಗಲು ಅವರೇ ಕಾರಣವಾಗಿದ್ದರೂ ಅದನ್ನು ಹೇಳಿ ಬಿಡಿ. ಸುಮ್ಮನೆ ಮುನಿಸಿಕೊಂಡು ಕೂತರೆ ಬಿರುಕು ಮತ್ತಷ್ಟು ಹೆಚ್ಚಾಗುವುದು.

ಇಷ್ಟ-ಕಷ್ಟಗಳ ಬಗ್ಗೆ

ಇಷ್ಟ-ಕಷ್ಟಗಳ ಬಗ್ಗೆ

ನಿಮ್ಮ ಸಂಗಾತಿಯ ಕೆಲವೊಂದು ಗುಣ, ನಡುವವಳಿಕೆ ಇಷ್ಟವಾಗುತ್ತದೆ, ಮತ್ತೆ ಕೆಲವೊಂದು ಇಷ್ಟವಾಗುವುದಿಲ್ಲ, ಏನು ಇಷ್ಟವಾಗುತ್ತಿಲ್ಲ ಎಂದು ಹೇಳಿದರೆ ಅವರು ನಿಮಗೋಸ್ಕರ ಬದಲಾಗಬಹುದು. ಹೇಳದೆ ಇದ್ದರೆ ನಿಮ್ಮ ನಡುವೆ ಅಂತರ ಉಂಟು ಮಾಡುವುದು.

ಬೆಡ್ ರೂಂ ವಿಷಯ

ಬೆಡ್ ರೂಂ ವಿಷಯ

ಬೆಡ್ ರೂಂ ವಿಷಯದಲ್ಲಿ ನಿಮಗೆ ಏನಾದರೂ ಹೇಳಬೇಕೆನಿಸಿದರೆ ಯಾವುದೇ ಮುಜುಗರವಿಲ್ಲದೆ ಹೇಳಿ. ದೈಹಿಕ ತೃಪ್ತಿ ಇಲ್ಲದಿದ್ದಾಗ ದಾಂಪತ್ಯ ಕಲಹ ಉಂಟಾಗುವುದು.

 ನಿರೀಕ್ಷೆ

ನಿರೀಕ್ಷೆ

ನಾವು ನಮ್ಮ ಸಂಗಾತಿಯ ಬಗ್ಗೆ ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಅದರಂತೆ ಅವರು ನಡೆಯದಿದ್ದರೆ ನೊಂದುಕೊಳ್ಳುತ್ತೇವೆ. ನಿಮ್ಮ ನಿರೀಕ್ಷೆಯ ಬಗ್ಗೆ ಅವರಲ್ಲಿ ಹೇಳುವುದು ಒಳ್ಳೆಯದು. ಆದರೆ ನಿಮ್ಮ ನಿರೀಕ್ಷೆ ಅತಿಯಾದರೆ ಮಾತ್ರ ಅವರ ಫ್ರೀಡಂಗೆ ದಕ್ಕೆ ಉಂಟಾಗುತ್ತದೆ ಎಂಬ ಕಿವಿಮಾತು ಹೇಳಲು ಇಚ್ಛಿಸುತ್ತೇನೆ.

ಮನೆಯವರ ಮಧ್ಯಸ್ಥಿಕೆ

ಮನೆಯವರ ಮಧ್ಯಸ್ಥಿಕೆ

ನಿಮ್ಮಿಬ್ಬರ ಸಮಸ್ಯೆಗಳನ್ನು ನೀವಿಬ್ಬರೇ ಪರಿಹರಿಸಿಕೊಳ್ಳಿ, ಮನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ಆದರೆ ಸಂಗಾತಿಯ ಮನೆಯವರನ್ನು ಗೌರವಿಸಿ.

English summary

Things You Should Share With Partner

Experts say that there are certain things which needs to be shared with your partner no matter what. When you express these certain things with your partner, you will see that your relationship will grow much deeper.
X
Desktop Bottom Promotion