For Quick Alerts
ALLOW NOTIFICATIONS  
For Daily Alerts

ಅಪ್ಪಿ ತಪ್ಪಿಯೂ ಹೆಂಡತಿ ಬಳಿ ಆಡಬಾರದ ಮಾತುಗಳಿವು!

|

ಹೆಂಡತಿಗೆ ಹೇಳಬಾರದಂತಹ ವಿಚಾರಗಳು ಯಾವುವು ಎಂದು ಯಾರು ಹೇಳಲು ಸಾಧ್ಯ? ಎಂದು ಹೇಳಬೇಡಿ. ಎಲ್ಲರೂ ಒಂದಲ್ಲ ಒಂದು ವಿಚಾರವನ್ನು ತಮ್ಮ ಹೆಂಡತಿಯರಿಂದ ಮುಚ್ಚಿಟ್ಟಿರುತ್ತಾರೆ. ಇದು ಅವರವರ ಭಾವ ಭಕುತಿಗೆ ಸಂಬಂಧಿಸಿದ ವಿಚಾರ. ಕೆಲವರು ತುಂಬಾ ಸರಳವಾದ ವಿಚಾರಗಳನ್ನು ಮುಚ್ಚಿಟ್ಟರೆ, ಇನ್ನು ಕೆಲವರು ಗಹನವಾದ ವಿಚಾರಗಳನ್ನು ಮಾತ್ರ ಮುಚ್ಚಿಟ್ಟಿರುತ್ತಾರೆ.

ಇನ್ನು ಕೆಲವರು ತಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವು ವಿಚಾರಗಳನ್ನು ಹೇಳುವುದಿಲ್ಲ. ಇರಲಿ ಬಿಡಿ, ಯಾಕೆ ಹೇಳಬಾರದು ಎಂಬ ವಿಚಾರ ನಮಗೆ ಬೇಡ. ಆದರೆ ಯಾವ ವಿಚಾರವನ್ನು ಹೇಳಬಾರದು ಎಂದು ಇಲ್ಲಿ ಚರ್ಚಿಸಲಾಗಿದೆ. ಅದನ್ನು ಓದಿ.

1.

1. "ಬಹುಶಃ ನೀನು ಡಯಟ್ ಮಾಡಬೇಕಾಗುತ್ತದೆ"

ನಿಮ್ಮ ಮನೆಯ ಕೆಲಸ ಕಾರ್ಯಗಳಲ್ಲಿ ನಿಮ್ಮಾಕೆಯ ಗಾತ್ರ ಹೆಚ್ಚು ಕಡಿಮೆ ಆಗುವುದು ಸಹಜ. ಆಕೆ ಚೆನ್ನಾಗಿ ಕಾಣುತ್ತಿದ್ದಾಗ ಯಾವಾಗಲೋ ನೀವು ಆಕೆಯನ್ನು ಹೊಗಳಿರಬಹುದು. ಆದರೆ ಈಗ ದಪ್ಪ ಆದರೆಂದು ಅವರನ್ನು ತೆಗಳುವುದು ತರವಲ್ಲ. ಅದರಲ್ಲು ನಿಮ್ಮ ಸೊಂಟದ ಸುತ್ತ ಬೊಜ್ಜು ಬೆಳೆಸಿಕೊಂಡು ಮಾತ್ರ ಈ ಮಾತನ್ನು ಆಡಬೇಡಿ. ಆಡಿದರೆ ಯಾವ ಪ್ರತ್ಯುತ್ತರ ಬರಬಹುದು ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ.

2.

2. " ನೀನೇಕೆ ನನ್ನಷ್ಟು ಕೆಲಸ ಮಾಡ್ತೀಯಾ?"

ನಮ್ಮ ನಮ್ಮ ಮಧ್ಯೆ ವಾಗ್ವಾದಗಳು ಬಂದಾಗ ಅಪ್ಪಿ ತಪ್ಪಿ ಈ ಮಾತು ಬಂದು ಬಿಡುತ್ತದೆ. ಆದರೆ ಇದನ್ನು ಆಡಲು ಹೋಗಬೇಡಿ. ಅದರಲ್ಲೂ ಆಕೆಯೇನಾದರು ಮಕ್ಕಳು ಮತ್ತು ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ ತನ್ನ ಕೆಲಸಕ್ಕೆ ರಾಜಿನಾಮೆಯನ್ನು ನೀಡಿದ್ದಲ್ಲಿ ಈ ಮಾತು ಆಡಬೇಡಿ. ಎಲ್ಲರಿಗು ಅವರ ಕೆಲಸ ತ್ರಾಸದಾಯಕವಾಗಿರುತ್ತದೆ. ಅದನ್ನು ಅನುಸರಿಸಿಕೊಂಡು ಸಮರಸವೇ ಜೀವನವೆಂದು ಸಾಗಬೇಕು ಅಷ್ಟೇ.

3.

3. "ಆ ಅಕೌಂಟೆಂಟ್ ಆನಂದ್ ಇದ್ದಾನಲ್ಲ.........."

ಹೌದು ಇದ್ದಾನೆ, ಅದಕ್ಕೇನಿಗಾ? ಈ ಪ್ರತಿ ಪ್ರಶ್ನೆ ನಿಮ್ಮಾಕೆಯಿಂದ ಬಂದಿದೆಯೇ? ಹೌದು ನಿಮ್ಮ ಆಫೀಸ್ ಕತೆ ಆಫೀಸಿಗಿರಲಿ. ಮನೆ ಕತೆ ಮನೆಗಿರಲಿ. ಯಾವುದಾದರು ಸ್ವಾರಸ್ಯಕರ ಸಂಗತಿ,ಅದರಲ್ಲೂ ಆಕೆಗು ಇಷ್ಟವಾಗುವ ಸಂಗತಿಗಳನ್ನು ಮಾತ್ರ ಆಕೆಯ ಮುಂದೆ ಚರ್ಚಿಸಿ. ಆದರೆ ದಿನ ನಿಮ್ಮ ಕಚೇರಿಯಲ್ಲಿ ನಡೆಯುವ ಗಾಸಿಪ್‍ಗಳನ್ನು ಯಾವುದೇ ಕಾರಣಕ್ಕು ಚರ್ಚಿಸಬೇಡಿ. ಅದರಲ್ಲು ನಿಮ್ಮ ಕಚೇರಿಯ ಸಮಸ್ಯೆಗಳನ್ನು ಆಕೆಯ ಮುಂದೆ ಚರ್ಚಿಸಲು ಹೋಗಬೇಡಿ.

4.

4. "ಆಕೆ ನೋಡಲು ಸಖತ್ತಾಗಿದ್ದಾಳೆ"

ಈ ಮಾತನ್ನು ಹೇಳಿದರೆ ಏನಾಗುತ್ತದೆಂದು ಬಹುಶಃ ಬಹಳಷ್ಟು ಗಂಡಸರಿಗೆ ಗೊತ್ತು. ಯಾವ ಹೆಣ್ಣು ತನ್ನ ಗಂಡ ತನ್ನ ಮುಂದೆಯೇ ಇನ್ನೊಬ್ಬಾಕೆಯ ಸೌಂದರ್ಯವನ್ನು ಹೊಗಳುವುದನ್ನು ಸಹಿಸಿಕೊಳ್ಳುವುದಿಲ್ಲ. ಈ ಮಾತು ಹೇಳಿದಿರಿ, ಅಷ್ಟೇ ನಿಮ್ಮ ಮನೆಯಲ್ಲಿ ಅಂದಿನಿಂದಲೆ ಮೂರನೆಯ ಮಹಾಯುದ್ಧ ಪ್ರಾರಂಭಗೊಳ್ಳಬಹುದು!

5.

5. " ನನಗೆ ಮಾತನಾಡೋದಿಕ್ಕೆ ಮನಸ್ಸಿಲ್ಲ"

ಈ ಮಾತನ್ನು ಯಾವಗಲೋ ಒಮ್ಮೆ ಹೇಳಿದರೆ ಓ ಕೆ. ಆದರೆ ನಿಮ್ಮಾಕೆಯ ಮಾತನ್ನು ಕೇಳುವುದರಿಂದ ಉದ್ದೇಶಪೂರ್ವಕವಾಗಿ ನುಣುಚಿಕೊಳ್ಳಲು ಈ ಮಾತು ಹೇಳಬೇಡಿ. ಯಾವಾಗಲು ನಿಮ್ಮ ಮತ್ತು ನಿಮ್ಮಾಕೆಯ ಮಧ್ಯೆ ಒಂದು ಸಂವಹನದ ಮಾರ್ಗವನ್ನು ಸದಾ ತೆರೆದಿಡಿ.

6.

6. " ಸಣ್ಣ ಸಣ್ಣ ವಿಷಯಕ್ಕು ತಪ್ಪು ಕಂಡು ಹಿಡಿಯುತ್ತೀಯಾ"

ಈ ಮಾತು ಎಲ್ಲರ ಮನೆಯಲ್ಲು ನಾವು ಕೇಳುವಂತದ್ದೆ. ಈಗಾಗಲೇ ನಿಮ್ಮ ಮೇಲಿರುವ ಆಕೆ ಬೇಸರ ವ್ಯಕ್ತಪಡಿಸುತ್ತಿದ್ದಾಳೆ, ಅದರಲ್ಲಿ ಆಕೆಯದೇ ತಪ್ಪು ಎಂದು ನೀವು ವಾದಿಸಲು ಹೋದರೆ ನೀವಿರಲಿ, ವಿಶ್ವದ ಯಾವುದೇ ಖ್ಯಾತ ವಕೀಲನು ನಿಮ್ಮ ವಾದವನ್ನು ಗೆಲ್ಲಿಸಲಾರ! ಹಾಗಾಗಿ ಈ ಮಾತು ಹೇಳಲೆ ಹೋಗಬೇಡಿ. ನಿಮ್ಮ ಅಸಮಾಧಾನವನ್ನು ನುಂಗಿಕೊಳ್ಳಿ ಅಥವಾ ಬೇರೆ ರೂಪದಲ್ಲಿ ಹೇಳಿ.

7.

7. " ಮತ್ತೆ ಏಕೆ ಶಾಪಿಂಗ್ ಹೋಗಬೇಕು ಅಂತ ಹೇಳುತ್ತೀಯಾ?"

ಆಕೆಗೂ ಇದು ಗೊತ್ತು! ಇದು ನಿಮಗೆ ಹಿಡಿಸೊಲ್ಲವೆಂದು. ಆದರು ಆಕೆ ಹೋಗುತ್ತಾಳೆ. ಆಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೋದಷ್ಟು ಆಕೆ ನಿಯಂತ್ರಣ ತಪ್ಪಿದ ಭಾವನೆಯನ್ನು ನಿಮ್ಮಲ್ಲಿ ಮೂಡಿಸುತ್ತಾಳೆ. ಅದಕ್ಕಾಗಿ ಆಕೆ ಶಾಪಿಂಗ್‍ಗೆ ಹೋಗುವುದಾದಲ್ಲಿ ಬೆಂಬಲ ನೀಡಿ. ದೂರಬೇಡಿ.

8.

8. " ನಿನ್ನ ಈ ಬಟ್ಟೆ ನನಗೆ ಹಿಡಿಸೊಲ್ಲ"

ನೀವೇನು ನರೇಂದ್ರ ಕುಮಾರ್ ಅಹಮದ್ ಅಥವಾ ಸಬ್ಯಸಾಚಿ ಮುಖರ್ಜಿ ಅಲ್ಲವಲ್ಲ. ಹಾಗಾದಲ್ಲಿ ಮತ್ತೇಕೆ ನಿಮ್ಮ ಹೆಂಡತಿ ತನಗಿಷ್ಟವಾದ ಬಟ್ಟೆ ತೊಟ್ಟರೆ, ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಬೊಟ್ಟು ಮಾಡುತ್ತೀರಿ. ಆಕೆಗು ತನ್ನದೇ ಆದ ಬಯಕೆಗಳಿರುತ್ತವೆ ಎಂಬುದನ್ನು ಮರೆಯಬೇಡಿ. ನಿಮಗೆ ಏನಾದರು ತೊಂದರೆ ಇದ್ದರೆ, ಅದನ್ನು ನಯವಾಗಿ ಆಕೆಗೆ ತಿಳಿಸಿ ಹೇಳಿ. ಎಷ್ಟಾದರು ಆಕೆಯ ಸೌಂದರ್ಯ ಇಮ್ಮಡಿಗೊಳಿಸುವ ಸಲಹೆ ತಾನೇ ನೀಡುತ್ತಿರುವುದು. ಇಲ್ಲವಾದಲ್ಲಿ ಇದೇ ವಿಷಯ ಮನೆಯಲ್ಲಿ ರಂಪಾಟವನ್ನು ತಂದಿಕ್ಕುತ್ತದೆ.

9.

9. " ತಿಂಗಳ ಆ ದಿನಗಳಲ್ಲಿ ನನಗೆ ........ಬೇಕೆ ಬೇಕು"

ನೀವು ಈ ಸಾಲನ್ನು ನಿಮ್ಮ ಪ್ರತೀಕಾರವಾಗಿಯೊ ಅಥವಾ ಇನ್ಯಾವುದಕ್ಕೊ ಹೇಳಲು ಹೋಗಿರುತ್ತೀರಿ. ಇದು ನಿಜಕ್ಕು ಸ್ತ್ರೀಯರನ್ನು ಅವಮಾನಕ್ಕೆ ಈಡು ಮಾಡುವ ಒಂದು ಮಾತಾಗಿರುತ್ತದೆ. ಇದರಲ್ಲಿ ನಿಮ್ಮ ಲೈಂಗಿಕ ಬಯಕೆಗಳಿಗಿಂತಲು, ಅದರಲ್ಲಿರುವ ದಬ್ಬಾಳಿಕೆಯ ಭಾವನೆಗೆ ನಿಮ್ಮ ಹೆಂಡತಿ ನಲುಗಿ ಹೋಗುತ್ತಾಳೆ. ಆಕೆಯ ಮನಃಸ್ಥಿತಿ ಪ್ರಕ್ಷುಬ್ಧ ಸಾಗರದಂತೆ ಇರುವ ಆ ದಿನಗಳಲ್ಲಿ, ಯಾವುದೇ ಕಾರಣಕ್ಕು ಆಕೆಯ ಕಷ್ಟವನ್ನು ಮತ್ತಷ್ಟು ಕೆರಳಿಸುವ ಈ ಮಾತನ್ನು ಆಡಲು ಹೋಗಬೇಡಿ.

10.

10. " ನೀನು ನಿಮ್ಮ ಅಮ್ಮನ ರೀತಿ ಆಡುತ್ತಿದ್ದೀಯಾ"

'ತಾಯಿಯಂತೆ ಮಗಳು, ನೂಲಿನಂತೆ ಸೀರೆ' ಇದು ಗಾದೆ ಮಾತಾಯಿತು. ಇರಲಿ, ಆದರೆ ಈ ಮಾತನ್ನು ಅಪ್ಪಿ-ತಪ್ಪಿ ಸಹ ನಿಮ್ಮ ಹೆಂಡತಿಯ ಕುರಿತಾಗಿ " ನೀನು ನಿಮ್ಮ ಅಮ್ಮನ ರೀತಿ ಆಡುತ್ತಿದ್ದೀಯಾ" ಎಂದು ಹೇಳಲೆ ಬೇಡಿ. ಒಂದು ವೇಳೆ ಇದು ನಿಜವಿದ್ದರು ಸರಿ, ನಮಗೇಕೆ ಅವರ ಅಮ್ಮನ ವಿಚಾರ! ಹೀಗೇನಾದರು ನೀವು ಹೇಳಿದ್ದಾದಲ್ಲಿ ಅದಕ್ಕಾಗಿ ವರ್ಷ ಪೂರ್ತಿ ಕ್ಷಮೆ ಕೇಳುತ್ತಲೆ ಸಾಗುವಂತೆ ಮಾಡುತ್ತಾರೆ, ನಿಮ್ಮ ಮಡದಿ! ಅದಕ್ಕಾಗಿ ಈ ಸಾಲನ್ನು ಮಾತನಾಡಲು ಹೋಗಲೆ ಬೇಡಿ.

ದಾಂಪತ್ಯದಲ್ಲಿ ಸೋಲುವವರು ಯಾರು ಇಲ್ಲ, ಮತ್ತು ಗೆಲ್ಲುವವರು ಸಹ ಯಾರು ಇಲ್ಲ

ದಾಂಪತ್ಯದಲ್ಲಿ ಸೋಲುವವರು ಯಾರು ಇಲ್ಲ, ಮತ್ತು ಗೆಲ್ಲುವವರು ಸಹ ಯಾರು ಇಲ್ಲ

ಮದುವೆ ಎನ್ನುವುದು ಎರಡು ಭಿನ್ನ ವ್ಯಕ್ತಿಗಳು ಸಂಬಂಧವೆಂಬ ಬಂಧನದಿಂದ ಬೆಸೆದುಕೊಳ್ಳುವಂತೆ ಮಾಡುವ ಒಂದು ಪ್ರಕ್ರಿಯೆ. ಅದು ಗಟ್ಟಿಯಾಗಿರಬೇಕೋ? ಅಥವಾ ಇಲ್ಲವೋ? ಎಂಬುದು ನಿಮ್ಮಿಬ್ಬರ ಮೇಲು ಆಧಾರಪಟ್ಟಿದೆ. ನಿಮ್ಮ ಮಾತಿನಿಂದ ನಿಮ್ಮ ಸಂಬಂಧದಲ್ಲಿ ಹುಳಿ ಹಿಂಡಿದಂತಾಗುತ್ತದೆಯೆಂದರೆ ಏಕೆ ತಾನೆ ನಾವದನ್ನು ಮಾತನಾಡಬೇಕು. ಬೇಡ ಬಿಡಿ, ನಮಗೆ ಆಗದ ವಿಚಾರಗಳನ್ನು ನಾವು ಹೇಳುವುದನ್ನು ಮೊದಲು ತಪ್ಪಿಸಬೇಕು.

ಎಲ್ಲದಕ್ಕು ಕಡೆಯದಾಗಿ ಒಂದು ವಿಚಾರ, " ದಾಂಪತ್ಯದಲ್ಲಿ ಸೋಲುವವರು ಯಾರು ಇಲ್ಲ, ಮತ್ತು ಗೆಲ್ಲುವವರು ಸಹ ಯಾರು ಇಲ್ಲ" ಎಂಬ ಮಾತಿದೆ. ಹಾಗಾದರೆ ಏಕೆ ನಮಗೆ ಈ ಅನಾವಶ್ಯಕ ಮಾತು ಕತೆಗಳು!

English summary

10 Things You Should Never Say to Your Wife

If we had to had to bribe the pundit to read out the top 10 commandments of what a husband must never mention to his wife instead of wedding vows, this is what it would look like.
X
Desktop Bottom Promotion