For Quick Alerts
ALLOW NOTIFICATIONS  
For Daily Alerts

ನೀನೊಂದು ತೀರ, ನಾನೊಂದು ತೀರ

By Super
|

ಸಂಬಂಧಗಳಲ್ಲಿ ಅಂತರವಿದ್ದರೆ ಅದು ಎಂದಿಗೂ ಬೆಸೆಯುವುದಿಲ್ಲ ಎಂದು ಅನ್ನಿಸುವುದುಂಟು.ಆದರೆ ಸಂಬಂಧ ತಜ್ಞರು ಇದನ್ನು ಒಪ್ಪುವುದಿಲ್ಲ.ಎರಡೂ ಕಡೆಗಳಲ್ಲಿ ಒಮ್ಮತದ ಭಾಗವಹಿಸುವಿಕೆ ಅಂದರೆ ಸಂವಹನ ಕ್ರಿಯೆ ನಡೆಯುತ್ತಿದ್ದಲ್ಲಿ ಸಂಬಂಧಗಳು ಅರ್ಥಪೂರ್ಣ ವಾಗಿಯೇ ಇರುತ್ತದೆ ಎನ್ನಲಾಗುತ್ತದೆ. ನೀವು ನಿಮ್ಮ ಸಂಗಾತಿಯಿಂದ ದೂರವಿದ್ದರೆ ಅಥವಾ ನಿಮ್ಮ ಜೊತೆಗಾರ ಅನಿವಾರ್ಯ ಕಾರಣದಿಂದ ದೂರದಲ್ಲಿ ಇರಬೇಕಾದ ಪರಿಸ್ಥಿತಿ ಇದ್ದರೆ ಅದಕ್ಕಾಗಿ ಚಿಂತಿಸಬೇಡಿ.ಇದರ ಬಗ್ಗೆ ತಜ್ಞರು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಈಗ ಕಾಲ ಬದಲಾಗಿದೆ.ಅನಿವಾರ್ಯ ಕಾರಣಗಳಿಂದ ಒಬ್ಬರಿಗೊಬ್ಬರು ದೂರ ಇರಬೇಕಾದ ಅನಿವಾರ್ಯತೆ ಬರಬಹುದು.ಆಗ ನಂಬಿಕೆ,ವಿಶ್ವಾಸ,ಪ್ರೀತಿ ಜೊತೆಗೆ ಸಾಕಷ್ಟು ವಿಷಯಗಳು ನಿಮಗೆ ಸಹಾಯಕ್ಕೆ ಬರಬಹುದು. ಅಂತರದ ಸಂಬಂಧಗಳು ಸರಿಯಾಗಿ ಇರುವಂತೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಅನುಮಾನ ಹೋಗಲಾಡಿಸಿ

1. ಅನುಮಾನ ಹೋಗಲಾಡಿಸಿ

ಒಬ್ಬರಿಗೊಬ್ಬರು ಅನುಮಾನ ಹೋಗಲಾಡಿಸಲು ಪ್ರಶ್ನೆಗಳನ್ನು ಕೇಳಿಕೊಳ್ಳಿ ಮತ್ತು ಸಂಬಂಧವನ್ನು ಖಚಿತಪಡಿಸಿಕೊಳ್ಳಿ.

ನೀವು ಹೊಂದಿದ ಸಂಬಂಧ ದ ಬಗ್ಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ಕೇಳಿ ಅನುಮಾನವಿದ್ದರೆ ಕೇಳಿ ಖಚಿತಪಡಿಸಿಕೊಳ್ಳಿ.ಅದು ಬಾಯ್ ಫ್ರೆಂಡ್,ಸಂಗಾತಿ,ನಿಶ್ಚಿತಾರ್ಥವಾದ ನಂತರ ಇವುಗಳಲ್ಲಿ ಯಾರಾದರೂ ಆಗಿರಬಹುದು.ಆ ರೀತಿ ಪ್ರಶ್ನೆ ಕೇಳುವುದು ವಿಚಿತ್ರ ಎನಿಸಬಹುದು ಆದರೆ ಅಪಾರ್ಥವನ್ನು ಹೋಗಲಾಡಿಸಿಕೊಂಡರೆ ನಿಮ್ಮ ಸಂಬಂಧ ಕೆಡುವುದಿಲ್ಲ.

2.ಸಂಪರ್ಕ ಮಾಡುತ್ತಿರಿ

2.ಸಂಪರ್ಕ ಮಾಡುತ್ತಿರಿ

ಪ್ರತಿದಿನ ಅಥವಾ ಸಮಯ ಸಿಕ್ಕಾಗಲೆಲ್ಲ ವಿಡಿಯೋ ಚಾಟ್, ಸ್ಕೈಪ್ ನಲ್ಲಿ ಮಾತನಾಡುತ್ತಿರಿ.ಅಥವಾ ಮೆಸೇಜ್ ಮಾಡುವುದು,ಫೋನ್ ಅಥವಾ ಇಮೇಲ್ ಮಾಡಿಕೊಳ್ಳಿ.ದಿನನಿತ್ಯದ ಆಗುಹೋಗುಗಳ ಬಗ್ಗೆ ಮಾತನಾಡಿಕೊಳ್ಳುವುದು,ಸಂಪರ್ಕ ಹೊಂದಿರುವುದು ಅತಿ ಅವಶ್ಯಕ.

3.ಮಾತನಾಡಿ

3.ಮಾತನಾಡಿ

ನೀವು ಒಬ್ಬರನ್ನೊಬ್ಬರು ಭೇಟಿ ಮಾಡಲಾಗದಷ್ಟು ದೂರ ಇರುವುದರಿಂದ ಭಾವನಾತ್ಮಕವಾಗಿ ಹೊಂದಿಕೊಂಡಿರುವುದು ಅವಶ್ಯಕ.ನಿಮ್ಮ ಸೋಲು ಮತ್ತು ದುರಂತಗಳ ಬಗ್ಗೆ ಒಬ್ಬರಿಗೊಬ್ಬರು ಹೇಳಿಕೊಳ್ಳಿ.ಅದಕ್ಕೆ ಏನಾದರೂ ಪರಿಹಾರ ಇದೆಯೇ ಎಂಬುದರ ಬಗ್ಗೆ ಚರ್ಚಿಸಿ.ಮೆಸೆಂಜರ್ ಮೂಲಕ ಚಾಟ್ ಮಾಡಬಹುದು ಅಥವಾ ವೀಡಿಯೊ ಚಾಟ್ ಮಾಡಬಹುದು.ವಿದೇಶ ಅಥವಾ ಅತಿ ದೂರದಲ್ಲಿ ಇರುವವರಿಗೆ ಪ್ರತಿದಿನ ಕಾಲ್ ಮಾಡುವುದರಿಂದ ಬಜೆಟ್ ನಲ್ಲಿ ಕಡಿತವಾಗುತ್ತದೆ ಆದ್ದರಿಂದ ಇಮೇಲ್ ಗಳನ್ನು ಬಳಸುತ್ತಿರಿ, ಆ ಮೂಲಕ ಸದಾ ಸಂಪರ್ಕದಲ್ಲಿರಿ.

4.ಆಸಕ್ತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ

4.ಆಸಕ್ತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ

ನಿಮ್ಮ ಜೊತೆಗಾರರಿಗೆ ಇಷ್ಟವಾದ ಚಲನಚಿತ್ರದ ಬಗ್ಗೆ ತಿಳಿದುಕೊಳ್ಳಿ ನೀವು ಹೋಗಿ ಅದನ್ನು ನೋಡಿ ಮತ್ತು ಅದರ ಬಗ್ಗೆ ಚರ್ಚಿಸಿ.ನಿಮ್ಮಿಬ್ಬರ ಮಧ್ಯೆ ಸಲುಗೆ ಹೆಚ್ಚಿಸಿಕೊಳ್ಳಲು ಚಟುವಟಿಕೆ ಗಳ ಬಗ್ಗೆ ಗಮನವಿರಲಿ.

5.ಪರಸ್ಪರ ಒಬ್ಬರನ್ನೊಬ್ಬರು ನಿಯಂತ್ರಿಸುವುದನ್ನು ತಪ್ಪಿಸಿ

5.ಪರಸ್ಪರ ಒಬ್ಬರನ್ನೊಬ್ಬರು ನಿಯಂತ್ರಿಸುವುದನ್ನು ತಪ್ಪಿಸಿ

ನಿಮಗೆ ಸಂಬಂಧಗಳು ಮುಖ್ಯ ಎಂದಾದಲ್ಲಿ ನೀವು ದೂರ ಇದ್ದರೂ ಅದು ಚೆನ್ನಾಗೆ ಇರುತ್ತದೆ ಮತ್ತು ಅಂತರ ನಿಮಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟು ಮಾಡುವುದಿಲ್ಲ.ಪ್ರತಿಯೊಬ್ಬರಿಗೂ ಅವರದೇ ಆದ ಬದುಕುವ ಶೈಲಿ ಇರುತ್ತದೆ.ಒಬ್ಬರ ಮೇಲೆ ಒಬ್ಬರು ಒತ್ತಡ ಹೇರಬೇಡಿ.ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಬೇಡಿ.ನಿಮ್ಮಿಬ್ಬರಿಗೆ ಹೊಂದಾಣಿಕೆ ಬರದಿದ್ದಲ್ಲಿ ಅದು ಎಷ್ಟೆಂದರೂ ಕಡಿದು ಹೋಗುತ್ತದೆ.ಅದೇ ನಿಮಗೆ ಇಷ್ಟವಿದ್ದರೆ ನೀವು ನಿಜವಾಗಿ ಪ್ರೀತಿಸುತ್ತಿದ್ದರೆ ಅವರು ಎಷ್ಟೇ ದೂರ ಇದ್ದರೂ ಸಂಬಂಧ ಚೆನ್ನಾಗೇ ಇರುತ್ತದೆ.

6.ನಿಮ್ಮ ಭವಿಷ್ಯದ ಬಗ್ಗೆ ಮಾತನಾಡಿಕೊಳ್ಳಿ

6.ನಿಮ್ಮ ಭವಿಷ್ಯದ ಬಗ್ಗೆ ಮಾತನಾಡಿಕೊಳ್ಳಿ

ನಾಳೆನ ಭವಿಷ್ಯದ ಬಗ್ಗೆ ಮಾತನಾಡಿಕೊಳ್ಳಿ.ನೀವು ಎಷ್ಟು ಸಮಯ ದೂರ ಇರಬೇಕಾಗಬಹುದು ಎಂಬುದು ಖಚಿತವಾಗಿ ತಿಳಿದಿಲ್ಲವಾದರೆ ಆದಷ್ಟು ಬೇಗ ಒಟ್ಟಿಗೆ ಇರುವಂತೆ ಗುರಿ ಇಟ್ಟುಕೊಳ್ಳಿ.

7.ನಂಬಿಕೆ ಇರಲಿ

7.ನಂಬಿಕೆ ಇರಲಿ

ಯಾವಾಗಲು ಇಂದು ಇದ್ದಂತೆ ನಾಳೆ ಇರುವುದಿಲ್ಲ.ನಿಮಗೆ ಒಳ್ಳೆಯ ಕಾಲ ಬರುತ್ತದೆ ಹಾಗೆಯೇ ಸಂಬಂಧಗಳು ಕೂಡ ಹೆಚ್ಚು ಬೆಸೆಯುತ್ತದೆ ಎಂಬುದರ ಬಗ್ಗೆ ನಂಬಿಕೆ ಇರಲಿ.

8.ಆಗಾಗ ಭೇಟಿ ನೀಡಿ

8.ಆಗಾಗ ಭೇಟಿ ನೀಡಿ

ಸಾಧ್ಯವಾದಾಗಲೆಲ್ಲ ಭೇಟಿ ಮಾಡುವ ಪ್ರಯತ್ನ ಮಾಡಿ.ಕೇವಲ ಫೋನ್ ಕಾಲ್ ನಲ್ಲಿ ಮಾತ್ರ ನಿಮ್ಮ ಸಂಬಂಧ ಗಟ್ಟಿಯಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ.ಸಮಯ ಸಿಕ್ಕಾಗಲೆಲ್ಲ ಸಾಧ್ಯವಾದರೆ ಒಬ್ಬರನ್ನೊಬ್ಬರು ಭೇಟಿ ಮಾಡುವ ಪ್ರಯತ್ನ ಮಾಡಿ.

9.ಅಸೂಯೆ ಪಡಬೇಡಿ ಮತ್ತು ನಂಬಿಕೆ ಕಳೆದುಕೊಳ್ಳಬೇಡಿ

9.ಅಸೂಯೆ ಪಡಬೇಡಿ ಮತ್ತು ನಂಬಿಕೆ ಕಳೆದುಕೊಳ್ಳಬೇಡಿ

ನಿಮ್ಮ ಪಾರ್ಟ್ನರ್ ಬಗ್ಗೆ ನಂಬಿಕೆ ಇರಲಿ.ಅವರು ಹೊರಗೆ ಹೋದರೆ ಅಥವಾ ಯಾರೊಂದಿಗೋ ಕುಡಿಯಲು ಹೋದರೆ ಅಥವಾ ಅವರು ನಿಮಗೆ ಕಾಲ್ ಅಥವಾ ಮೆಸೇಜ್ ಮಾಡಿಲ್ಲ ಎಂಬುದರ ಬಗ್ಗೆ ಅಸೂಯೆ ಪಡಬೇಡಿ.ನೀವು ಅಂತರದಲ್ಲಿದ್ದೀರಿ ಎಂದ ಮಾತ್ರಕ್ಕೆ ನಿಮ್ಮ ಸಂಬಂಧದಲ್ಲಿ ಅಂತರ ಬರಬಾರದು. ಅಸೂಯೆ ಪಡುವುದನ್ನು ಬಿಟ್ಟು ನಂಬಿಕೆ ಬೆಳೆಸಿಕೊಳ್ಳಿ.

10.ನಿಮ್ಮ ವೈಯಕ್ತಿಕ ವಸ್ತುಗಳನ್ನು ಅವನಿಗೆ/ಅವಳಿಗೆ ನೀಡಿ

10.ನಿಮ್ಮ ವೈಯಕ್ತಿಕ ವಸ್ತುಗಳನ್ನು ಅವನಿಗೆ/ಅವಳಿಗೆ ನೀಡಿ

ಅವರು ನಿಮ್ಮವರು ನಿಮಗೆ ಸೇರಿದವರು ಎಂದು ನಿಮ್ಮ ವೈಯಕ್ತಿಕ ವಸ್ತುಗಳನ್ನು ಅವರಿಗೆ ನೀಡಿ ಇದರಿಂದ ಅವರ ಬಗ್ಗೆ ನಿಮಗೆ ಹೆಚ್ಚು ನಂಬಿಕೆ ಬರುತ್ತದೆ.ಸಂತೋಷವಾಗುತ್ತದೆ.

English summary

How to Make a Long Distance Relationship Work

Long distance relationships have always had the stigma that they don't work. Some relationships experts disagree. It's important that you both understand what's involved and that you're dedicated to working at communicating.
Story first published: Monday, August 26, 2013, 18:27 [IST]
X
Desktop Bottom Promotion