For Quick Alerts
ALLOW NOTIFICATIONS  
For Daily Alerts

ಅಪ್ಪಾ ... ನೀ ಹೀಗಿದ್ದರೆ ನನಗೆ ತುಂಬಾ ಇಷ್ಟ

By ಲೇಖಕ
|

ಪ್ರತಿಯೊಬ್ಬ ಹುಡುಗಿಯ ಜೀವನದಲ್ಲಿ ತಂದೆಯ ಸ್ಥಾನ ಬಹು ಪ್ರಮುಖವಾದುದು. ಅವನು ಆಕೆಯ ಜೀವನದಲ್ಲಿ ಬಹು ಪ್ರಭಾವಶಾಲಿಯಾದ ವ್ಯಕ್ತಿಯಾಗಿರುತ್ತಾನೆ. ಅವಳ ಬಾಲ್ಯದಿಂದ ಹರೆಯದವರೆಗೂ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತಾನೆ. ತಂದೆಯು ತನ್ನ ಪುಟ್ಟ ಮಗಳ ಬದುಕಿನ ಅಭಿವೃದ್ಧಿಯಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿ ಆಕೆಯನ್ನು ಆತ್ಮವಿಶ್ವಾಸ ಉಳ್ಳ ಮಹಿಳೆಯನ್ನಾಗಿ ರೂಪಿಸುತ್ತಾನೆ.

ತಂದೆಯ ಈ ಪ್ರಭಾವವು ಆಕೆಯ ಜೀವನದ ಶೈಲಿ, ಜೀವನದ ಉದ್ದೇಶ, ಆಕೆಯ ಸ್ವಯಂ ಚಿತ್ರ, ಆತ್ಮವಿಶ್ವಾಸ ಮತ್ತು ಆಭಿಪ್ರಾಯಗಳಲ್ಲಿ ಕಾಣಿಸುತ್ತದೆ. ತಂದೆ ಮಗಳ ಸಂಬಂಧ ಒಂದು ಸುಮಧುರ ಸಂಬಂಧವಾಗಿದೆ. ಇಂತಹ ಸಂಬಂಧಗಳನ್ನು ಆರೋಗ್ಯಪೂರ್ಣವಾಗಿ ನಿರ್ವಹಿಸಬೇಕಾಗಿರುವುದು ಪ್ರತಿಯೊಬ್ಬ ತಂದೆಯ ಕರ್ತವ್ಯವಾಗಿದೆ. ಈ ಕೆಳಗೆ ಅಂತಹ ತಂದೆ ಮಗಳ ಸುಮಧುರ ಸಂಬಂಧಕ್ಕೆ ನೆರವಾಗಲೆಂದು ಕೆಲವು ಸೂಚನೆಗಳನ್ನು ನೀಡಲಾಗಿದೆ.

1) ಸ್ನೇಹಿತರಂತೆ ವರ್ತಿಸಿ

1) ಸ್ನೇಹಿತರಂತೆ ವರ್ತಿಸಿ

ನೀವು ನಿಮ್ಮ ಮಗಳ ಸ್ನೇಹಿತನಂತೆ ವರ್ತಿಸಬೇಕು. ಅವಳ ಆಲೋಚನೆಗಳು ಮತ್ತು ಆಭಿಪ್ರಾಯಗಳ ಕುರಿತು ತಿಳಿದುಕೊಳ್ಳಬೇಕು.

2) ಅವಳನ್ನು ನಿಮ್ಮ ಸಮಾನಳಂತೆ ಕಾಣಿ

2) ಅವಳನ್ನು ನಿಮ್ಮ ಸಮಾನಳಂತೆ ಕಾಣಿ

ನೀವು ಅವಳಗೆ ಏನೂ ತಿಳಿಯುವುದಿಲ್ಲ ಎಂದು ಭಾವಿಸಬೇಡಿ. ಆವಳನ್ನು ನಿಮ್ಮ ಸಮಾನಳಂತೆ ಕಾಣಿ. ಈಗಿನ ಮಕ್ಕಳು ತುಂಬಾ ಜಾಣರಾಗಿದ್ದು ಅವರಿಗೆ ನಾವು ಏನು ಮಾಡುತ್ತಿದ್ದೇವೆ ಎಂದು ತಿಳಿದಿರುತ್ತದೆ.

3) ಮಧ್ಯವರ್ತಿಯಾಗಿ

3) ಮಧ್ಯವರ್ತಿಯಾಗಿ

ಯಾವಾಗಲಾದರೂ ನಿಮ್ಮ ಮಗಳು ತನ್ನ ತಾಯಿ ಅಥವಾ ನಿಮ್ಮ ಹೆಂಡತಿಯೊಂದಿಗೆ ಜಗಳವನ್ನು ಮಾಡಿದಾಗ ಆಗ ನೀವು ಮಧ್ಯವರ್ತಿಯಂತೆ ವರ್ತಿಸಿ. ಸಮಸ್ಯೆಯನ್ನು ಇಬ್ಬರಿಗೂ ನೋವಾಗದಂತೆ ಪರಿಹರಿಸಲು ಮುಂದಾಗಿ

4) ಉತ್ತಮ ಸಂವಹನಕಾರರಾಗಿ

4) ಉತ್ತಮ ಸಂವಹನಕಾರರಾಗಿ

ನೀವು ಒಂದು ವೇಳೆ ಉತ್ತಮ ಸಂವಹನಕಾರರಾಗದಿದ್ದರೆ, ಭಾವನಾತ್ಮಕ ಸಂಬಂಧಗಳನ್ನು ನಿಭಾಯಿಸಲು ನೀವು ಶಕ್ಯರಲ್ಲದಿದ್ದರೆ, ಈಗಿಂದಲೇ ಅಂತಹ ಸ್ವಭಾವವನ್ನು ಬೆಳೆಸಿಕೊಳ್ಳಲು ಆರಂಭಿಸಿ. ನಿಮ್ಮ ಮಗಳಿಗೆ ಸಣ್ಣ ಸಣ್ಣ ವಿಷಯಗಳಲ್ಲಿ ಆಕೆಗೆ ಸಹಾಯ ಮತ್ತು ಸಲಹೆ ನೀಡುತ್ತಾ ಈ ಸ್ವಭಾವವನ್ನು ನಿಮ್ಮದಾಗಿಸಿಕೊಳ್ಳಿ. ಒಂದೊಂದು ಸಲ ಆಕೆಯ ಜೊತೆಗೆ ನೀವು ಶಾಪಿಂಗನಲ್ಲಿಯೂ ಭಾಗಿಯಾಗಿ

5) ಅವಳನ್ನು ಸಂಪೂರ್ಣವಾಗಿ ನಂಬಿ

5) ಅವಳನ್ನು ಸಂಪೂರ್ಣವಾಗಿ ನಂಬಿ

ನಿಮ್ಮ ಮಗಳು ಹದಿ ಹರೆಯಲ್ಲಿದ್ದರೆ ಅವಳನ್ನು ಸಂಪೂರ್ಣವಾಗಿ ನಂಬಿ. ಅವಳೊಂದಿಗೆ ಗಂಭಿರತೆಯಿಂದ ವರ್ತಿಸಿ. ಅವಳನ್ನು ಚಿಕ್ಕ ಹುಡುಗಿಯಂದು ಭಾವಿಸಬೇಡಿ. ನಿಮ್ಮ ಈ ಸ್ವಭಾವವು ಆಕೆಯನ್ನು ನಿಮ್ಮಿಂದ ದೂರವಿರುವಂತೆ ಮಾಡುತ್ತದೆ. ನಿಮ್ಮ ಮಗಳ ವರ್ತನೆಗಳ ಬಗೆಗೆ ಅನವಶ್ಯಕ ಸಂದೇಹವನ್ನು ಪಡಬೇಡಿ.

6) ಅವಳನ್ನು ಸ್ವತಂತ್ರವಾಗಿರಲು ಬಿಡಿ

6) ಅವಳನ್ನು ಸ್ವತಂತ್ರವಾಗಿರಲು ಬಿಡಿ

ನಿಮ್ಮ ಮಗಳು ಯಾವಾಗಲೂ ಚಿಕ್ಕವರಾಗಿರುವುದಿಲ್ಲ. ಅವಳು ತಾನು ಮಾಡಿದ ತಪ್ಪಿನಿಂದ ಕಲಿಯಲು ಬಿಡಿ. ಕೆಲವು ಸಲ ಅವಳು ಮಾಡಿದ ತಪ್ಪುಗಳ ಕುರಿತು ಅವಳೊಂದಿಗೆ ಆರೋಗ್ಯಪೂರ್ಣವಾಗಿ ಚರ್ಚಿಸಿ. ನಿಮ್ಮ ಮಾತಿನಿಂದ ಅವಳನ್ನು ನೋಯಿಸಬೇಡಿ. ನೀವು ಅವಳ ಹಿತವನ್ನು ಬಯಸುತ್ತೀರಿ. ಅವಳಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತಿರಿ ಎಂದು ಆಕೆಗೆ ಮನದಟ್ಟು ಮಾಡಿಸಿ.

7) ಅವಳನ್ನು ನಿಯಮರಹಿತರಾಗಿ ಪ್ರೀತಿಸಿ

7) ಅವಳನ್ನು ನಿಯಮರಹಿತರಾಗಿ ಪ್ರೀತಿಸಿ

ಇಷ್ಟಕ್ಕೂ ಅವಳು ನಿಮ್ಮ ಸ್ವಂತ ಮಗಳೇ ತಾನೇ. ತಮ್ಮ ಸ್ವಂತ ಮಕ್ಕಳನ್ನು ಯಾರು ತಾನೇ ಪ್ರೀತಿಸುವುದಿಲ್ಲ. ನಿಮ್ಮ ಮಗಳು ಏನೇ ತಪ್ಪು ಮಾಡಿರಲಿ ಅಥವಾ ನೀವು ಹೇಳಿದಂತೆ ಕೇಳದೇ ಇರಲಿ, ನಿಮಗೆ ಆದರ್ಶ ಮಗಳಾಗದೇ ಇದ್ದರೂ ಸಹ ನೀವು ಅವಳನ್ನು ನಿಯಮ ರಹಿತರಾಗಿ ಪ್ರೀತಿಸಿ. ಅಲ್ಲಿ ಯಾವುದೇ ಅಡೆತಡೆಗಳು , ಶರತ್ತುಗಳು ಬೇಡ. ಈ ನಿಮ್ಮ ಪ್ರೀತಿಯೇ ಆಕೆಯ ತಪ್ಪುಗಳನ್ನು ಆಕೆಗೆ ಮನದಟ್ಟು ಮಾಡಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದ ಜೀವನದ ಸರಿಯಾದ ಆಯ್ಕೆಗಳ ಕುರಿತು ತಿಳಿದುಕೊಳ್ಳುತ್ತಾಳೆ.

8) ಅವಳ ಸ್ನೇಹಿತರನ್ನು ಸ್ವೀಕರಿಸಿ

8) ಅವಳ ಸ್ನೇಹಿತರನ್ನು ಸ್ವೀಕರಿಸಿ

ಅವಳ ಸ್ನೇಹಿತರನ್ನು ಸ್ವೀಕರಿಸಿ. ಕೆಲವು ಸಲ ಇದು ಸಮಸ್ಯೆಯನ್ನು ತಂದೊಡ್ಡಬಹುದು. ಇದರಿಂದ ನಿಮ್ಮ ಮಗಳ ಸಾಮಾಜಿಕ ಸಂಪರ್ಕ ಹೇಗಿದೆ? ಅವಳ ಸ್ನೇಹಿತರು ಎಂತಹವರು? ಎಂಬುದು ನಿಮಗೆ ತಿಳಿಯುತ್ತದೆ. ಇದರಿಂದ ಮುಂದೆ ನೀವು ಅವಳ ಸ್ನೇಹಿತರನ್ನು ಕಂಡು ಆಶ್ಚರ್ಯಚಕಿತರಾಗುವುದನ್ನು ತಪ್ಪಿಸಬಹುದು.

9) ತಾಳ್ಮೆಯಿಂದಿರಿ

9) ತಾಳ್ಮೆಯಿಂದಿರಿ

ಹಾರ್ಮೋನಗಳು ನಿಮ್ಮ ಸಹನೆ ಮತ್ತು ಕೋಪಗಳ ಮೇಲೆ ತೀವೃ ಪರಿಣಾಮವನ್ನು ಬೀರುತ್ತವೆ. ಕೆಲವು ಸಲ ನಿಮ್ಮ ಮಗಳು ನಿಮ್ಮ ಎದುರಿಗೆ ಧ್ವನಿ ಏರಿಸಿ ಮಾತನಾಡಿದಾಗ ನೀವು ತಾಳ್ಮೆ ಕಳೆದುಕೊಳ್ಳದೇ ಸಹನೆಯಿಂದ ವರ್ತಿಸಿ, ಆಕೆಗೆ ಬುದ್ಧಿ ಹೇಳಿ. ಅಥವ ಕೆಲವು ಸಲ ಪರಿಸ್ಥಿತಿ ಕೈ ಮೀರಿದಾಗ ನೀವು ಸಹ ಸ್ವಲ್ಪ ಮಟ್ಟಗೆ ಧ್ವನಿ ಏರಿಸಿ. ಆಗ ನಿಮ್ಮ ಮಗಳು ಸಹಜವಾಗಿ ಸಹನೆಯ ಸ್ಥಿತಿ ತಲುಪುತ್ತಾಳೆ. ಆಗ ಆಕೆಯನ್ನು ಕೂಡಿಸಿಕೊಂಡು ಬುದ್ಧಿವಾದ ಹೇಳಿ. ತಾಳ್ಮೆಯಿದ್ದರೆ ಎಲ್ಲ ಕೆಲಸಗಳು ಆಗುತ್ತವೆ.

10) ಒಟ್ಟಿಗೆ ಕೆಲವು ಸಮಯವನ್ನು ಕಳೆಯಿರಿ

10) ಒಟ್ಟಿಗೆ ಕೆಲವು ಸಮಯವನ್ನು ಕಳೆಯಿರಿ

ಸಮಯವು ಒಂದು ಅಮೂಲ್ಯವಾದ ವಸ್ತು. ಇದು ಸಬಂಧವನ್ನು ಗಾಢವಾಗಿ ಬೆಸೆಯಲು ಸಹಾಯ ಮಾಡುತ್ತದೆ. ಇದು ಎಲ್ಲದರ ಮೂಲತತ್ವ. ನಿಮ್ಮ ಮಗಳೊಂದಿಗೆ ಕೆಲವು ಗಂಟೆಗಳ, ಕೆಲವು ದಿನಗಳ ಸಮಯವನ್ನು ಕಳೆಯಿರಿ. ಇದರಿಂದ ನೀವಿಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ನಿಮ್ಮಿಬ್ಬರ ಭಾವನಾತ್ಮಕ ಸಂಬಂಧ ವೃದ್ದಿಗೊಳ್ಳಲು ಅನುಕೂಲವಾಗುತ್ತದೆ. ನಿಮ್ಮಿಬ್ಬರ ನಡುವಿನ ವ್ಯತ್ಯಾಸಗಳೇನು? ನಿಮ್ಮ ಮಗಳು ಏನನ್ನು ಇಷ್ಟಪಡುತ್ತಾಳೆ ಎಂಬುದು ನಿಮಗೆ ತಿಳಿಯುತ್ತದೆ. ನಿಮ್ಮ ಮುದ್ದಿನ ಮಗಳು ನಿಮ್ಮ ಹಾದಿಯಲ್ಲಿ ನಡೆಯಲು ಸಹಾಯಕವಾಗುತ್ತದೆ.

English summary

For A Good Father-Daughter Relationship

A father's influence in his daughter's life shapes her self-esteem, self-image, confidence and opinions of men. Here are some tips to maintain a healthy father-daughter relationship
Story first published: Wednesday, August 28, 2013, 17:56 [IST]
X
Desktop Bottom Promotion