For Quick Alerts
ALLOW NOTIFICATIONS  
For Daily Alerts

ದಂಪತಿಗಳೇ 7 Year Itch ರೋಗದ ಬಗ್ಗೆ ಎಚ್ಚರ!

By Reena
|

ಅವರಿಬ್ಬರ ಸಂಸಾರ ಹಾಲು-ಜೇನಿನಂತೆ ಇತ್ತು. ಮದುವೆಯಾಗಿ ವರುಷಗಳು ಉರುಳಿದ್ದೇ ಅವರ ಗಮನಕ್ಕೆ ಬಂದಿರಲಿಲ್ಲ. ಅವರಿಬ್ಬರ ಪ್ರೀತಿಯ ಪ್ರತಿ ಫಲವಾಗಿ ಒಂದು ಅಥವಾ ಎರಡು ಮುದ್ದಾದ ಮಕ್ಕಳಿರುತ್ತದೆ. ಹೀಗೆ ಸಾಗುತ್ತಿರುವ ಬದುಕಿನಲ್ಲಿ ಯಾವುದೋ ಒಂದು ಕಾರಣದಿಂದ ಅಪಸ್ವರ ಎದ್ದೇಳುತ್ತದೆ. ಅವರಿಬ್ಬರಿಗೆ ಸಂಸಾರ ಬದುಕಿನ ಮೇಲೆ ಒಂಥರಾ ಜಿಗುಪ್ಸೆ ಮೂಡಿರುತ್ತದೆ. ಅವಳಿಗೆ ಅವನ ಬೇಕು ಬೇಡಗಳನ್ನು ತಿಳಿಯುವ ಪುರುಸೊತ್ತು ಇರುವುದಿಲ್ಲ, ಅವನಿಗೆ ಅವಳ ಭಾವನೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ದಾಂಪತ್ಯ ಬದುಕು ಒಂಥರಾ ಯಾಂತ್ರಿಕವಾಗುವುದು.

ಈ ರೀತಿಯಾಗಿ ಪ್ರತಿಯೊಬ್ಬರ ದಾಂಪತ್ಯ ಬದುಕಿನಲ್ಲಿ ಕಂಡು ಬರುತ್ತದೆ, ಇದನ್ನೇ ಅನ್ನುವುದು 7 year itch. ದಾಂಪತ್ಯದಲ್ಲಿ ಈ ರೀತಿ ಕಂಡು ಬಂದಾಗ ಕೆಲವರು ಬೇಗನೆ ಎಚ್ಚೆತ್ತುಕೊಂಡು ತಮ್ಮ ತಪ್ಪನ್ನು ತಿದ್ದಿಕೊಂಡು, ಪುನಃ ತನ್ನ ಸಂಗಾತಿಯನ್ನು ಪ್ರೀತಿಸಲಾರಂಭಿಸುತ್ತಾರೆ. ಈ ರೀತಿಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಈ ರೀತಿ ಎಚ್ಚೆತ್ತುಕೊಂಡಿಲ್ಲವೆಂದರೆ ಮಾತ್ರ ಕಷ್ಟ! ಈ ಸಮಯದಲ್ಲಿಯೇ ಹೆಚ್ಚಿನವರು ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಿತರಾಗುತ್ತಾರೆ, ಅದರಲ್ಲೂ ಗಂಡಸರು ಪರಸ್ತ್ರೀಯೆಡೆಗೆ ಆಕರ್ಷಿತರಾಗುತ್ತಾರೆ. ಇಲ್ಲದಿದ್ದರೆ ಸದಾ ಜಗಳ, ಇದರಿಂದಾಗಿ ಇಬ್ಬರ ಸಂಬಂಧ ಮತ್ತಷ್ಟು ಹದಗೆಡುವುದು.

ಆದ್ದರಿಂದ ನಿಮ್ಮ ದಾಂಪತ್ಯ ಬದುಕು ಯಾಂತ್ರಿಕವಾಗಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ, ಇವು ನಿಮ್ಮ ದಾಂಪತ್ಯ ಜೀವನವನ್ನು ಮತ್ತೆ ಕಲರ್ ಫುಲ್ ಮಾಡುವಲ್ಲಿ ಖಂಡಿತ ಸಹಾಯಮಾಡುತ್ತದೆ.

ಮದುವೆಯಾದ ಹೊಸದರಲ್ಲಿ

ಮದುವೆಯಾದ ಹೊಸದರಲ್ಲಿ

ಮದುವೆಯಾದ ಹೊಸದರಲ್ಲಿ ನೋಡಿ, ಅವನು ಬಯಸಿದಂತೆ ಇವಳು ಅಲಂಕಾರ ಮಾಡಿಕೊಳ್ಳುವುದು, ಅವನ ಇಷ್ಟದ ಡ್ರೆಸ್ ಹಾಕುವುದು, ಅವನ ಮೆಚ್ಚಿನ ತಿಂಡಿ ಮಾಡುವುದು ಹೀಗೆ ಅವನ ಪ್ರತೀಯೊಂದು ವಿಷಯದಲ್ಲಿ ಇವಳು ಆಸಕ್ತಿವಹಿಸಿದರೆ, ಅವನು ಇವಳ ಭಾವನೆಯನ್ನು ಅವಳು ಹೇಳದೆಯೇ ಅರ್ಥೈಸಿಕೊಳ್ಳುವುದು, ಕೆಲವೊಮ್ಮೆ ಸರ್ ಫ್ರೈಸ್ ಗಿಫ್ಟ್ ನೀಡುವುದು ಹೀಗೆ ತನ್ನ ಮುದ್ದಿನ ಮಡದಿಯನ್ನು ಸಂತೋಷದಿಂದ ಇಡಲು ಎಲ್ಲಾ ಸರ್ಕಸ್ ಮಾಡುತ್ತಿರುತ್ತಾನೆ.

ದಾಂಪತ್ಯ ಯಾಂತ್ರಿಕವಾಗುವುದು

ದಾಂಪತ್ಯ ಯಾಂತ್ರಿಕವಾಗುವುದು

ಆದರೆ ಮದುವೆಯಾಗಿ ಕೆಲವು ವರ್ಷಗಳ ಬಳಿಕ ಇಬ್ಬರೂ ಚಲ್ತಾ ಹೈ ಎಂಬ ಆಟಿಟ್ಯೂಡ್ ಬೆಳೆಸಿಕೊಳ್ಳುತ್ತಾರೆ. ಅವಳು ಮಗುವಿನ ಆರೈಕೆಯಲ್ಲಿ ಗಂಡನ ಆರೈಕೆಯನ್ನು ಕಡೆಗಣಿಸಿದರೆ, ಈತ ದುಡಿಬೇಕು, ಸಂಪಾದನೆ ಮಾಡಬೇಕು ಎಂಬ ಆಲೋಚನೆಯಲ್ಲಿಯೇ ಇರುವುದರಿಂದ ಹೆಂಡತಿಗೆ ಸರ್ ಫ್ರೈಸ್ ಗಿಫ್ಟ್ ಕೊಡಲು ತಾನೂ ಮರೆಯುತ್ತಾನೆ, ಅಲ್ಲಿಗೆ ದಾಂಪತ್ಯ ಬದುಕು ಯಾಂತ್ರಿಕವಾಗುವುದು.

ಮತ್ತೆ ಪ್ರೀತಿಯನ್ನು ನಟಿಸಿ

ಮತ್ತೆ ಪ್ರೀತಿಯನ್ನು ನಟಿಸಿ

ಮರೆಯಾಗುತ್ತಿರುವ ಮಧುರ ಕ್ಷಣಗಳನ್ನು ಮತ್ತೆ ಹಿಂತಿರುಗಿ ತರಲು ನೀವು ನಟನೆ ಮಾಡಬೇಕಾಗುತ್ತದೆ! ಹೌದು ಜೀವನವೇ ಒಂದು ನಾಟಕ ರಂಗವಾದ ಮೇಲೆ ನಟಿಸುವುದರಲ್ಲಿ ತಪ್ಪೇನು. ಮೊದಲು ನಿಮ್ಮ ಸಂಗಾತಿಯ ಮೇಲೆ ಪ್ರೀತಿಯನ್ನು ನಟಿಸಿ, ಆಗ ನಿಮ್ಮಲ್ಲಿ ಮರೆಯಾದ ಪ್ರೀತಿ ಮತ್ತೆ ಮೊಳಕೆಯೊಡೆಯುವುದು.

ನಿಮ್ಮಬ್ಬರಿಗೋಸ್ಕರವೇ ಸಮಯ ಮೀಸಲಿಡಿ

ನಿಮ್ಮಬ್ಬರಿಗೋಸ್ಕರವೇ ಸಮಯ ಮೀಸಲಿಡಿ

ಟ್ರಿಪ್ ಹೋಗುವುದು ಅಥವಾ ಇಬ್ಬರೇ ಮೈಲಿ ವಾಕ್ ಹೋಗುವುದು ಮಾಡಿ, ನಿಮ್ಮ ಹಳೆಯ ಬದುಕನ್ನು ಮರಳಿ ಪಡೆಯಲು ನೀವಿಬ್ಬರೂ ಮನಸ್ಸು ಮಾಡಬೇಕು, ನಿಮ್ಮಬ್ಬರಿಗೋಸ್ಕರವೇ ಇಂತಿಷ್ಟು ಸಮಯ ಮೀಸಲಿಡಿ.

ಮನಸ್ಸು ಬಿಚ್ಚಿ ಮಾತನಾಡಿ

ಮನಸ್ಸು ಬಿಚ್ಚಿ ಮಾತನಾಡಿ

ಇಬ್ಬರು ಮನಸ್ಸು ಬಿಚ್ಚಿ ಮಾತನಾಡಿ, ಹಿಂದೆ ನಡೆದಂತಹ ಸವಿ ಘಟನೆಗಳ ಬಗ್ಗೆ, ಹುಸಿ ಮುನಿಸ್ಸುಗಳ ಬಗ್ಗೆ ಮಾತನಾಡಿ, ಆಗ ನಿಮಗೆ ಈ ಹಿಂದೆ ನೀವು ಬಾಳಿದ ಬದುಕಿಗೂ, ಈಗ ನೀವು ಬಾಳುತ್ತಿರುವ ಬದುಕಿಗೂ ವ್ಯತ್ಯಾಸ ಗೊತ್ತಾಗುತ್ತದೆ.

ರೊಮ್ಯಾಂಟಿಕ್ ಜೋಡಿಗಳಾಗಿ

ರೊಮ್ಯಾಂಟಿಕ್ ಜೋಡಿಗಳಾಗಿ

ಮಕ್ಕಳಾದ ಬಳಿಕ ರೊಮ್ಯಾಂಟಿಕ್ ಜೋಡಿಗಳಂತೆ ಬಾಳುವುದನ್ನು ಹೆಚ್ಚಿನ ದಂಪತಿಗಳು ಮರೆತು ಬಿಡುತ್ತಾರೆ, ಆದ್ದರಿಂದಲೇ ದಾಂಪತ್ಯ ಬದುಕಿನ ಮೇಲೆ ಒಂಥರಾ ಜಿಗುಪ್ಸೆ ಮೂಡುವುದು. ಆದ್ದರಿಂದ ಅಪರೂಪಕ್ಕೆ ಹೊರಗಡೆ ಡಿನ್ನರ್ ಗೆ ಹೋಗುವುದು, ಮೂವಿ ಹೀಗೆ ಸ್ವಲ್ಪ ಸಮಯವನ್ನು ಕಳೆಯಿರಿ, ಕಳೆದು ಹೋದ ಯೌವನ ಮರಳಿ ಬರದಿದ್ದರೆ ಮತ್ತೆ ಕೇಳಿ?

ಎಮೋಷನಲ್ ಸಪೋರ್ಟ್

ಎಮೋಷನಲ್ ಸಪೋರ್ಟ್

ದಾಂಪತ್ಯ ಜೀವನದಲ್ಲಿ ಬಿರುಕು ಕಂಡು ಬರಲು ಮುಖ್ಯ ಕಾರಣವೆಂದರೆ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳದಿರುವುದು. ನಿಮ್ಮ ಸಂಗಾತಿ ಯಾವುದಾದರೂ ಪ್ರೊಜೆಕ್ಟ್ ಮಾಡುತ್ತಿರುತ್ತಾರೆ, ಅದರ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿರುತ್ತಾರೆ, ನಿಮಗೆ ಆ ಪ್ರೊಜೆಕ್ಟ್ ಬಗ್ಗೆ ಎನೂ ಗೊತ್ತಿರದಿದ್ದರೆ ಸಲಹೆ ಕೊಡಲು ಸಾಧ್ಯವಾಗುವುದಿಲ್ಲ, ಆದರೆ ಏನು ವಿಷಯ? ಎಲ್ಲಾ ಸರಿಹೋಗುತ್ತೆ ಅಂತ ಬೆಂಬಲ ನೀಡಬಹುದಲ್ವಾ? ಅವರು ಕೂಡ ನಿಮ್ಮಿಂದ ಅದನ್ನೇ ಬಯಸುತ್ತಾರೆ. ಎಮೋಷನಲ್ ಸಪೋರ್ಟ್ ನೀಡುವುದರಿಂದ ದಾಂಪತ್ಯ ಬದುಕು ಮತ್ತಷ್ಟು ಗಟ್ಟಿಯಾಗುತ್ತದೆ.

ಲೈಂಗಿಕ ತೃಪ್ತಿ

ಲೈಂಗಿಕ ತೃಪ್ತಿ

ಇದರ ಬಗ್ಗೆ ಅವರಿಗೆ ಇತರರ ಜೊತೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ, ದಾಂಪತ್ಯ ಜೀವನ ಗಟ್ಟಿಯಾಗಿಸುವಲ್ಲಿ ಲೈಂಗಿಕ ಜೀವನ ಕೂಡ ಪ್ರಮುಖವಾದ ಅಂಶ ಎಂಬುದನ್ನು ಮರೆಯದಿರಿ.

 ಸಮಧಾನ ಪಡಿಸುವುದು

ಸಮಧಾನ ಪಡಿಸುವುದು

ಒಬ್ಬರು ಕೋಪಗೊಂಡಾಗ, ಮತ್ತೊಬ್ಬರು ಸಮಧಾನ ಪಡಿಸುವುದು, ಚಿಕ್ಕ-ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿ ದೊಡ್ಡದು ಮಾಡುವ ಬದಲು ಮನ್ನಿಸುವ ಗುಣ ಬೆಳೆಸಿಕೊಳ್ಳುವುದು, ಪರಸ್ಪರ ಗೌರವ ಇವುಗಳಿಂದ 7 year itch ಎಂಬ ಶನಿಯಿಂದ ಕಳಚಿಕೊಳ್ಳಬಹುದು.

ಸುಂದರ ಕ್ಷಣಗಳು ಮರಳುವುದು

ಸುಂದರ ಕ್ಷಣಗಳು ಮರಳುವುದು

ನಿಮ್ಮ ದಾಂಪತ್ಯದಲ್ಲಿ ಈ 7 year itch ಶುರುವಾಗಿದ್ದರೆ, ಈ ಟಿಪ್ಸ್ ಪಾಲಿಸಿ, ಸುಂದರವಾದ ಬದುಕು ಮರಳಿ ದೊರೆಯುವುದು. ಆಲ್ ದಿ ಬೆಸ್ಟ್....

English summary

Tips To Deal With The 7 Year Itch

A loving couple, a happy marriage – however around 7 years down the line, love and happiness seem light years away.First the play, then the famous Marilyn Monroe starrer – the 7-Year Itch is also a dilemma some couples have to deal with in their married lives.
X
Desktop Bottom Promotion