For Quick Alerts
ALLOW NOTIFICATIONS  
For Daily Alerts

ಪ್ರೀತಿ ನಿಮ್ಮನ್ನು ಜೀವನ ಪರ್ಯಂತ ಕಾಡುವುದೇ?

By Super
|

ನಮಗೆ ಬಹಳ ವಿಶೇಷವಾದ, ಖಾಸಾ ವ್ಯಕ್ತಿಯನ್ನು ಕಂಡಾಗ ಅಥವಾ ಅವರ ಕುರಿತು ಯೋಚಿಸುತ್ತಿರುವಾಗ ಉಕ್ಕಿ ಬರಬಹುದಾದ, ಆ ಹತ್ತಿಕ್ಕಲಾರದ ಭಾವನೆಯಾದರೂ ಯಾವುದದು? ನೀವು ಪ್ರೇಮಪಾಶಕ್ಕೆ ಸಿಲುಕಿದ್ದೀರಿ ಎಂದು ನಿಮಗೆ ತಿಳಿಯುವುದು ಹೇಗೆ? ಅದು ಅಷ್ಟೊಂದು ಅಪ್ಯಾಯಮಾನವಾಗಿ ಕಾಣುವುದು ಏಕೆ ? ಅದು ನಿಮ್ಮನ್ನು ಜೀವನ ಪರ್ಯಂತ ಕಾಡುವುದೇ?

ಈ "ಪ್ರೀತಿ" ಅಥವಾ "ಪ್ರೇಮ" ಎಂದು ಕರೆಯಲ್ಪಡುವ, ತಲೆತಲಾಂತರಗಳ ರಹಸ್ಯದ ಕುರಿತು ಒಂದು ನೋಟವನ್ನು ಹರಿಸೋಣ ಹಾಗೂ "ಪ್ರೇಮ" ಎಂದು ಕರೆಯಲ್ಪಡುವ ಈ ಒಂದು ಪುಟ್ಟ, ವಿಸ್ಮಯಕರವಾದ ವಿಚಾರದ ಕುರಿತು ಅರೆಕ್ಷಣ ಮೈಮರೆಯೋಣ.

ಗಾಢವಾದ ಅನುರಕ್ತಿ

ಗಾಢವಾದ ಅನುರಕ್ತಿ

ನಮಗೆ ಇಷ್ಟವಾಗುವ ಯಾರಾದರೊಬ್ಬ ವ್ಯಕ್ತಿಯೊಡನೆ ಆಪ್ತವಾಗುವ ರೀತಿಯಲ್ಲಿ ವ್ಯಕ್ತವಾಗುವ, ಗಾಢವಾದ ಅನುರಕ್ತಿಯನ್ನು "ಪ್ರೀತಿ" ಅಥವಾ "ಪ್ರೇಮ" ಎಂದು ವ್ಯಾಖ್ಯಾನಿಸಬಹುದು. ಇದರ ತೀವ್ರತೆ ಬೇರೆ ಬೇರೆಯಾಗಿರಬಹುದು. ಯಾವ ವ್ಯಕ್ತಿಯ ವಿಚಾರದಲ್ಲಿ ಎಂಬುದರ ಮೇಲೆ ಹೊಂದಿಕೊಂಡು, ಈ ಪ್ರೀತಿಯು ದುರ್ಬಲವಾಗಿರಬಹುದು, ಪ್ರಬಲವಾಗಿರಬಹುದು, ಭ್ರಾoತಿಯಂತೆ ಬಿಟ್ಟಿರಲಾರದಷ್ಟು ಅವಿಚ್ಛಿನ್ನವಾಗಿದ್ದು ನಿಯಂತ್ರಿಸಲು ಅಸಾಧ್ಯವಾಗಿರಬಹುದು. ನಿಮ್ಮ ಆ ವಿಶೇಷವಾದ ವ್ಯಕ್ತಿಯನ್ನು ನೀವು ಕಂಡಾಗ ಅಥವಾ ಅವರ ಕುರಿತು ನೀವು ಯೋಚಿಸುವಾಗ, ಅವರ ಬಗ್ಗೆ ಅರಳುತ್ತಿರುವ ನಿಮ್ಮ ಪ್ರೀತಿಯು; ತೀವ್ರವಾದ ಹೃದಯ ಬಡಿತ, ಗಂಟಲು ತುಂಬಿ ಬಂದಂತಾಗುವುದು, ಅಂಗೈಗಳು ಬೆವರುವುದು, ವರ್ಣಿಸಲಸದಳವಾದ ಸಂತಸವುoಟಾಗುವುದು ಇವೇ ಮೊದಲಾದ ತಡೆಹಿಡಿಯಲಾಗದ, ತೀವ್ರವಾದ ಲಕ್ಷಣಗಳ ಮೂಲಕ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಈ ಮೂಲಕ ನೀವು ಪ್ರೀತಿ ಮತ್ತು ಗೆಳೆತನದ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು.

ಪ್ರೇಮದ ಸಹಜವಾದ ಪ್ರಕ್ರಿಯೆ.

ಪ್ರೇಮದ ಸಹಜವಾದ ಪ್ರಕ್ರಿಯೆ.

ಮನಶಾಸ್ತ್ರಜ್ಞರು ಹಾಗೂ ಮನೋವಿಶ್ಲೇಶಕರು ಈ ಪ್ರೀತಿಯನ್ನು ಮತ್ತೂ ಮುಂದುವರೆದ ರೀತಿಯಲ್ಲಿ ವಿವರಿಸುತ್ತಾರೆ. ಅವರ ಪ್ರಕಾರ, ಈ ಪ್ರೀತಿಯೆನ್ನುವುದು ಆಕಸ್ಮಿಕವಲ್ಲ, ಅತಾರ್ಕಿಕವಲ್ಲ, ಬದಲಾಗಿ ನಮ್ಮ ಸುಪ್ತ ಮನಸ್ಸು ಆ ವಿಶೇಷವಾದ ವ್ಯಕ್ತಿಯೊಂದಿಗೆ ನಮ್ಮನ್ನು ಪ್ರೀತಿಯಲ್ಲಿ ಕೆಡವುತ್ತದೆ. ಮುಖಭಾವ, ಧ್ವನಿ, ಅಥವಾ ಆಂಗಿಕ ಭಾವಗಳು ನಮ್ಮಲ್ಲಿ ಪ್ರೀತಿಯ ಕುರಿತಾದ ಸಕಾರಾತ್ಮಕ ಲಕ್ಷಣಗಳನ್ನು ವ್ಯಕ್ತಪಡಿಸುತ್ತವೆ.

ನೀವು ಪ್ರೇಮಜ್ವರದಿಂದ ಬಳಲುತ್ತಿರುವಾಗ, ನೀವು ಪ್ರಬಲವಾದ ಭಾವನೆಗಳು ಹಾಗೂ ಅತಿಯಾದ, ಅವ್ಯಕ್ತವಾದ ಸಂತೋಷವನ್ನು ಅನುಭವಿಸುವುದು ಸುಸ್ಪಷ್ಟ. ನಿಮಗೆ ಲೋಕವೆಲ್ಲವೂ ಗುಲಾಬಿ ವರ್ಣದ ಗಾಜಿನ ನೋಟದoತೆ ಮಧುರವಾಗಿ ಕಾಣಿಸುತ್ತದೆ. ನೀವು ಪ್ರೀತಿಗಾಗಿ ಹಂಬಲಿಸುತ್ತಿರುವಾಗ, ನಿಮ್ಮ ಕಣ್ಣುಗಳು ಹಾಗೂ ಕಿವಿಗಳು ನಿಮ್ಮ ನಿರೀಕ್ಷೆಗೆ ಅನುಗುಣವಾದ ವ್ಯಕ್ತಿಯ ಕುರಿತು ಹುಡುಕುತ್ತಿರುತ್ತವೆ ಹಾಗೂ ಕೇಳುತ್ತಿರುತ್ತವೆ.

ಪ್ರೀತಿಸುವ ವ್ಯಕ್ತಿಯಲ್ಲಿರಬಹುದಾದ ದೋಷಗಳು ಲೆಕ್ಕಕ್ಕೆ ಬರುವುದಿಲ್ಲ ಹಾಗೂ ಕೇವಲ ನಮ್ಮ ಪ್ರಬಲ ಅಸೆ, ಆಕಾಂಕ್ಷೆಗಳು ಮಾತ್ರವೇ ಪ್ರೇಮಿಯ ಕುರಿತು ವ್ಯಕ್ತವಾಗುತ್ತದೆ. (ಪ್ರೇಮ ಕುರುಡು ಎನ್ನುವುದು ಇದಕ್ಕೇ...) ಪ್ರೇಮವು ನಮ್ಮ ನಡವಳಿಕೆಯನ್ನು ಬದಲಿಸುತ್ತದೆ. ನಮ್ಮ ಪ್ರೇಮಿಯ ಕುರಿತು ನಾವು ಹೆಚ್ಚು ತಾಳ್ಮೆ, ಸಹನೆಯುಳ್ಳವರಾಗುತ್ತೇವೆ. ಫ್ರಾಡ್ ಅವರ ಪ್ರಕಾರ, ಕೀಳರಿಮೆಯುಳ್ಳ ಕೆಲವು ಸ್ತ್ರೀಯರು, ತಮ್ಮ ಸಂಗಾತಿಯು ದೊರೆತಾಗ, ತಮ್ಮ ವ್ಯಕ್ತಿತ್ವ ಹಾಗೂ ಅಭಿರುಚಿಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬಲ್ಲರು.

ಮನಸ್ಥಿತಿಯಲ್ಲಿ ತೀವ್ರ ಬದಲಾವಣೆ

ಮನಸ್ಥಿತಿಯಲ್ಲಿ ತೀವ್ರ ಬದಲಾವಣೆ

ಸಂಶೋಧಕರು ಪ್ರೀತಿಯ ಕುರಿತು ಇನ್ನೂ ಅನೇಕ ವಿಚಾರಗಳನ್ನು ಹೇಳಬಲ್ಲರು. ಪ್ರೀತಿಯ ಸುರಕ್ಷತೆ ಹಾಗೂ ದೈಹಿಕ ಸುಖದ ಕುರಿತ ಗಾಢವಾದ ಇಚ್ಛೆಯೊಂದಿಗೆ, ಈ ಪ್ರೀತಿಯೆoಬುದು ನಿಮ್ಮ ಶರೀರದಲ್ಲಿ ಹಾರ್ಮೋನುಗಳ ಪ್ರಮಾಣದಲ್ಲಿ ನಿಜಕ್ಕೂ ಅಗಾಧ ಬದಲಾವಣೆಯನ್ನು ಉಂಟು ಮಾಡಬಲ್ಲುದು.

Endorphins, luliberine, oxytocin, ವಿಶೇಷವಾಗಿ testosterone, ಲೈಂಗಿಕ ಹಾರ್ಮೋನು ಇವೆಲ್ಲವೂ ನೀವು ಪ್ರೇಮದಲ್ಲಿ ಬಿದ್ದಾಗ ಅಗಾಧ ಪ್ರಮಾಣದಲ್ಲಿ ಉತ್ಪನ್ನವಾಗುತ್ತವೆ.

ಇವುಗಳು ನೀವು ಹಿಂಜರಿತವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ ಹಾಗೂ ನಿಮ್ಮ ಪ್ರೇಮಿಯಲ್ಲಿನ ಪ್ರೀತಿಯನ್ನು ಹುಡುಕುತ್ತವೆ. ಈ ಎಲ್ಲ ಹಾರ್ಮೋನುಗಳು dopamine ನನ್ನು ಉತ್ತೇಜಿಸುತ್ತವೆ ಹಾಗೂ ಇದು ನಿಮ್ಮ ಅಭೀಪ್ಸೆಗೆ ನಿಜವಾದ ಕಾರಣವಾಗಿದೆ.

ಪುರುಷರು ಮತ್ತು ಸ್ತ್ರೀಯರ ನಡುವಿನ ವ್ಯತ್ಯಾಸ

ಪುರುಷರು ಮತ್ತು ಸ್ತ್ರೀಯರ ನಡುವಿನ ವ್ಯತ್ಯಾಸ

ಪ್ರೇಮದಿಂದ ಉಂಟಾಗುವ ಭಾವನೆಗಳು ಹಾಗೂ ಬಿಡುಗಡೆಯಾಗುವ ಚೋದಕಗಳು ಪುರುಷರು ಮತ್ತು ಸ್ತ್ರೀಯರಲ್ಲಿ ಹೆಚ್ಚು ಕಡಿಮೆ ಒಂದೇ ತೆರನಾಗಿರುತ್ತದೆ. ಆದರೆ, ಅವು ಉಂಟು ಮಾಡುವ ಬದಲಾವಣೆಗಳು ಬೇರೆ ಬೇರೆ ರೀತಿಯಲ್ಲಿ ಗ್ರಾಹ್ಯವಾಗಿರುತ್ತವೆ.

ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಉದ್ರೇಕಕ್ಕೆ ಒಳಗಾಗುತ್ತಾರೆ. ಇನ್ನೂoದು ರೀತಿಯಲ್ಲಿ ಹೇಳುವುದಾದರೆ testosterone ಹಾರ್ಮೋನು, ಅವರ ಆಲೋಚನೆ, ಮೌಲ್ಯಗಳ ಕುರಿತಾದ ಅವರ ಉದ್ದೇಶ, ಸಾಮರ್ಥ್ಯಗಳ ಮೇಲೆ ಅಗಾಧ ಪ್ರಭಾವವನ್ನು ಉಂಟು ಮಾಡುತ್ತವೆ.

ಸ್ತ್ರೀಯರು ವಿಭಿನ್ನವಾಗಿ ವರ್ತಿಸುತ್ತಾರೆ. ಅವರೂ ಕೂಡ ಇಂತದ್ದೇ ಭಾವನೆಗಳಿಗೊಳಗಾಗುತ್ತಾರೆಯಾದರೂ (ವಿಶೇಷವಾಗಿ, ಲೈಂಗಿಕ ಇಚ್ಚೆಯ ಕುರಿತು) ಪ್ರೇಮವು ಅವರ ಮೇಲೆ ಔಷಧಿಯಂತೆ ಕೆಲಸ ಮಾಡುತ್ತದೆ. ಸ್ತ್ರೀಯೋರ್ವಳು ತನ್ನ ಪ್ರೇಮಿಯೊಡನಿರುವಾಗ ಆಕೆಯ ಜಾಗೃತ ಸ್ಥಿತಿಯು ಕಾರ್ಯರೂಪಕ್ಕೆ ಬರುತ್ತದೆ ಹಾಗೂ ಪ್ರೇಮಿಯು ಸನಿಹ ಇಲ್ಲದಿದ್ದಾಗ ಆಕೆ ವಿರಹವನ್ನು ಅನುಭವಿಸುತ್ತಾಳೆ.

ಪ್ರೇಮವು ಎಷ್ಟು ಕಾಲದವರೆಗೆ ಮುಂದುವರಿಯಬಹುದು ?

ಪ್ರೇಮವು ಎಷ್ಟು ಕಾಲದವರೆಗೆ ಮುಂದುವರಿಯಬಹುದು ?

ಮೊದಮೊದಲು ಈ ಪ್ರೇಮವು ಖಯಾಲಿಗಾಗಿ ಕಾಣಿಸಿಕೊಳ್ಳಬಹುದು (ಕೆಲವೊಮ್ಮೆ ಇದು ವ್ಯತಿರಿಕ್ತವಾಗಿಯೂ ಇರಬಹುದು), ಆದರೆ ಇದು ಕೇವಲ ಖಯಾಲಿ ಮಾತ್ರವೇ ಆಗಿರಲು ಆಗದು. ಪ್ರೀತಿಯ ಮನಸ್ಥಿತಿಯು ಕೇವಲ ಸುಮಾರು 3 ವರ್ಷಗಳವರೆಗೆ ಮುಂದುವರೆಯಬಹುದು ಎಂದು ವಿಜ್ಞಾನಿಗಳು ಹಾಗೂ ಮನಶ್ಯಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಇದರರ್ಥ 3 ವರ್ಷಗಳ ನಂತರ ಈ ಪ್ರೀತಿಯು ರಿಕ್ತವಾಗುತ್ತದೆ ಎಂದಲ್ಲ, ಆದರೆ ಅದು ರೂಪಾಂತರಗೊಳ್ಳುತ್ತದೆ. (ಪರಸ್ಪರ ಗೌರವ, ಮನೆಯನ್ನು ಕಟ್ಟಿಕೊಂಡು, ನೀವು ಪ್ರೀತಿಸಿದವರಿoದ ಮಕ್ಕಳನ್ನು ಪಡೆಯುವ ಹಂಬಲ ಈ ರೀತಿಯ ನವಿರಾದ ಪ್ರೀತಿ). ಹೀಗೆ, ಈ ಖಯಾಲಿ ಎಂಬುದು ಸಕಾರಣಾತ್ಮಕ ಹಾಗೂ ಸ್ಥಿರತೆಯಾಗಿ ಬದಲಾದ ನoತರವೂ ಕೂಡ ಲೈಂಗಿಕ ಬಯಕೆಗಳು ಹಾಗೆಯೇ ಇರುತ್ತವೆ.

ಮರೆತವರನ್ನು ಮತ್ತೆ ಪ್ರೀತಿಸಲು ಸಾಧ್ಯವೇ?

ಮರೆತವರನ್ನು ಮತ್ತೆ ಪ್ರೀತಿಸಲು ಸಾಧ್ಯವೇ?

ಈಗ ಹಾಗೆಯೇ ಉಳಿದುಕೊಳ್ಳುವ ಒಂದು ಪ್ರಶ್ನೆ ಏನೆಂದರೆ, ಒಮ್ಮೆ ನೀವು ಯಾರಾದರೊಬ್ಬರನ್ನು ಮರೆತ ಬಳಿಕವೂ ಸಹ, ಅವರನ್ನು ಮತ್ತೊಮ್ಮೆ ಪ್ರೀತಿಸಲು ಸಾಧ್ಯವೇ ? ನಿಮ್ಮನ್ನು ನೋಯಿಸಿದ ಅಥವಾ ನಿಮ್ಮನ್ನು ವಂಚಿಸಿದ ವ್ಯಕ್ತಿಯೊಡನೆ ಪುನ: ನೀವು ಉತ್ಸಾಹದಿಂದ ಪ್ರೇಮದಿಂದ ಇರಲು ಸಾಧ್ಯವೇ ? ಇದು ಆಯಾ ವ್ಯಕ್ತಿಯನ್ನು ಅವಲಂಬಿಸಿರುತ್ತದೆ ಹಾಗೂ ಸಂಬಂಧಗಳ ನಡುವಿನ ಸಮಸ್ಯೆಗಳ ಕಾರಣವನ್ನು ಅವಲಂಬಿಸಿರುತ್ತದೆ ಹಾಗೂ ಬೇರೆಯಾದುದರ ಕಾರಣವನ್ನು ಅವಲಂಬಿಸುತ್ತದೆ.

ಪ್ರೀತಿ ಉಳಿಯಲು ಬೇಕು ನಂಬಿಕೆ

ಪ್ರೀತಿ ಉಳಿಯಲು ಬೇಕು ನಂಬಿಕೆ

ನಮ್ಮ ಮಾನಸಿಕ ಹಾಗೂ ಬೌಧ್ಧಿಕ ಸುಸ್ಥಿತಿಗೆ ಪ್ರೀತಿಯ ಅವಶ್ಯಕತೆ ಇದೆ. ಪ್ರೀತಿಯ ವ್ಯಕ್ತಿಯನ್ನು ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅಥವಾ ಮತ್ತೊಮ್ಮೆ ಭೇಟಿಯಾಗಬಹುದು ಅಥವಾ ಪ್ರೀತಿಯ ಸನ್ನಿವೇಶವು ಜೀವನದಲ್ಲಿ ಅನೇಕ ಬಾರಿ ಎದುರಾಗಬಹುದು ಎಂಬುದು ನಿಮ್ಮ ನoಬಿಕೆಯಾಗಿದ್ದರೂ ಕೂಡ, ಕ್ಲಿಷ್ಟಕರವಾದ ಸಂಗತಿಯೆಂದರೆ, ಪ್ರೀತಿಯ ಜ್ವಾಲೆಯನ್ನು ಪ್ರತಿದಿನವೂ ಜೀವoತವಾಗಿರಿಸುವುದು. ಪ್ರೇಮಿಯ ಬಗ್ಗೆ ಕಾಳಜಿ ವಹಿಸುವುದು, ಪ್ರೇಮಿಗಳಿಬ್ಬರ ನಡುವೆ ಬಯಕೆಗಳ ಪ್ರವಾಹದ ನಿರಂತರತೆ, ಅಭಿರುಚಿಗಳನ್ನು ಪರಸ್ಪರ ಹಂಚಿಕೊಳ್ಳುವುದು, ಇವೇ ಮೊದಲಾದವುಗಳು ಪ್ರೇಮದ ಚಿರಂತನದ, ನಿತ್ಯನೂತನದ ರಹಸ್ಯಗಳಾಗಿವೆ.

English summary

How Do You Tell You Are In Love

How do you know you're in love? Why does it feel so good? Does it last for a lifetime? We take a look at the age-old mystery and wonder of that crazy little thing called love.
X
Desktop Bottom Promotion