For Quick Alerts
ALLOW NOTIFICATIONS  
For Daily Alerts

ಒಳ್ಳೆಯ ಸಂಗಾತಿ ಅನ್ನಿಸಿಕೊಳ್ಳಲು ಇರಬೇಕಾದ ಗುಣಗಳು

By Super
|

ಉತ್ತಮ ಸಂಗಾತಿಯನ್ನು ಆಯ್ಕೆ ಮಾಡುವಲ್ಲಿ ಹೆಚ್ಚಾಗಿ ಜನರು ಮಾಡುವ ತಪ್ಪೆಂದರೆ ಅವರು ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚಾಗಿ ಕಾಳಜಿವಹಿಸಿ ಮದುವೆಯಾದ ಮೇಲೆ ಇರ ಬೇಕಾಗಿರುವ ಇತರ ಪ್ರಮುಖ ಅಂಶಗಳ ಬಗ್ಗೆ ಗಮನ ಕೊಡುವುದಿಲ್ಲ. ಬಾಹ್ಯ ಸೌಂದರ್ಯವನ್ನು ನೋಡಿ ಯಾವ ಜೋಡಿಯನ್ನಾದರೂ ಒಳ್ಳೆಯ ಸಂಗಾತಿಗಳು ಎಂದು ಹೇಳಲು ಸಾಧ್ಯವೇ? ಬಹುಷ: ಸಾಧ್ಯವಿಲ್ಲ.

ಒಬ್ಬ ಸಂಗಾತಿಗೆ ಸೌಂದರ್ಯ ಎಲ್ಲವೂ ಅಲ್ಲ. ಬಾಹ್ಯ ಸೌಂದರ್ಯವೂ ಒಂದು ಭಾಗವಾದರೂ ಅದಕ್ಕೆ ಸ್ವಲ್ಪ ಭಾಗವನನ್ನು ಮಾತ್ರ ನೀಡಬಹುದು.ಕೆಳಗಿನ ಕೆಲವು ಪ್ರಮುಖ ಮಜಲುಗಳು ಒಂದು ಒಳ್ಳೆಯ ಸಂಗಾತಿಯಲ್ಲಿ ಇರಬೇಕಾದ ಗುಣಗಳನ್ನು ವಿವರಿಸುತ್ತದೆ.

ಒಂದು ಒಳ್ಳೆಯ ಸಂಗಾತಿಯಲ್ಲಿ ಇರಬೇಕಾದ ಗುಣಗಳು ಈ ಕೆಳಗಿನಂತಿವೆ.

ನೀವು ಯಾರಿಗಾಗಿ ಎನ್ನುವ ಸಂಗತಿಯನ್ನು ಮೊದಲು ಒಪ್ಪಿಕೊಳ್ಳಿ

ನೀವು ಯಾರಿಗಾಗಿ ಎನ್ನುವ ಸಂಗತಿಯನ್ನು ಮೊದಲು ಒಪ್ಪಿಕೊಳ್ಳಿ

ಇದು ಒಂದು ಒಳ್ಳೆಯ ಸಂಗಾತಿಗೆ ಇರಬೇಕಾದ ಪ್ರಮುಖ ಗುಣಗಳಲ್ಲಿ ಒಂದು. ಉತ್ತಮ ಸಂಗಾತಿಯಾದವರು ಜೀವನದ ಎರಡೂ ಮುಖವನ್ನು ಒಪ್ಪಿಕೊಳ್ಳುತ್ತಾರೆ, ಹಾಗಾಗಿ ಕಷ್ಟದ ಸಮಯದಲ್ಲೂ ನಿಮ್ಮ ಜೊತೆಗಿರಬೇಕು.

ಅವರ ಮಾತನ್ನು ಗೌರವಿಸಿ

ಅವರ ಮಾತನ್ನು ಗೌರವಿಸಿ

ಉತ್ತಮವಾದ ಸಂಗಾತಿ ತನ್ನ ಪ್ರೇಮಿಗೆ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಯಾವತ್ತಿಗೂ ತನ್ನ ಸಂಗಾತಿಗೆ ಸುಳ್ಳು ಹೇಳಬಾರದು. ಯಾವುದೋ ಒಂದು ವಿಷಯಕ್ಕೆ ಸುಳ್ಳು ಹೇಳಿ ಮತ್ತೆ ಗೊತ್ತಾದರೆ ಕಷ್ಟ ಅನ್ನುವುದನ್ನು ಮರೆಯದಿರಿ.

 ಬೆಂಬಲ

ಬೆಂಬಲ

ಒಳ್ಖೆಯ ಸಂಗಾತಿಯ ಮತ್ತೊಂದು ಗುಣವೆಂದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಬೆಂಬಲಿಸುತ್ತಾರೆ. ಸುಖದಲ್ಲಿ ಜೊತೆಗೆ ಇದ್ದು, ಕಷ್ಟ ಬಂದಾಗ ಬಿಟ್ಟು ಹೋಗುವವರು ಒಳ್ಳೆಯ ಸಂಗಾತಿ ಆಗಲು ಸಾಧ್ಯವಿಲ್ಲ.

ಪ್ರೀತಿಯನ್ನು ವ್ಯಕ್ತ ಪಡಿಸಲು ಸಂದರ್ಭಕ್ಕೆ ಕಾಯುವುದಿಲ್ಲ

ಪ್ರೀತಿಯನ್ನು ವ್ಯಕ್ತ ಪಡಿಸಲು ಸಂದರ್ಭಕ್ಕೆ ಕಾಯುವುದಿಲ್ಲ

ಸ್ವಾಭಾವಿಕ ಪ್ರೀತಿ ವ್ಯಕ್ತ ಪಡಿಸುವವರು ಸಂದರ್ಭಕ್ಕೆ ಕಾಯುವುದಿಲ್ಲ. ತನ್ನ ಸಂಗಾತಿ ಮಾನಸಿಕವಾಗಿ ಸೋತಾಗ ಅವರಿಗೆ ಬೆಂಬಲವಾಗಿ ನಿಲ್ಲುತ್ತಾಳೆ/ನೆ.

 ನಾನು ಪ್ರೀತಿಸಿದ ವ್ಯಕ್ತಿ ಸದಾ ಜೊತೆ ಇರಬೇಕೆಂದು ಬಯಸುವುದಿಲ್ಲ

ನಾನು ಪ್ರೀತಿಸಿದ ವ್ಯಕ್ತಿ ಸದಾ ಜೊತೆ ಇರಬೇಕೆಂದು ಬಯಸುವುದಿಲ್ಲ

ನನ್ನ ಪ್ರೇಮಿ ಸದಾ ಜೊತೆಯಲ್ಲಿರಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ, ಆದರೆ ಅದಕ್ಕಾಗಿ ಒತ್ತಾಯ ಪಡಿಸುವುದಿಲ್ಲ. ಅವರ ಪರಿಸ್ಥಿತಿಯನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ.

ಕ್ಷಮೆ ಕೇಳುವುದು

ಕ್ಷಮೆ ಕೇಳುವುದು

ತಪ್ಪು ಮಾಡಿದರೆ ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ, ಒಣ ಜಂಬದಿಂದ ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಸಂಬಂಧ ಹಾಳಾಗುವುದು. ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವ ಗುಣ ಮಾತ್ರವಲ್ಲ, ನಿಮ್ಮ ಸಂಗಾತಿಯ ತಪ್ಪನ್ನು ಮನ್ನಿಸುವ ಗುಣವೂ ನಿಮ್ಮಲ್ಲಿರಬೇಕಾಗುತ್ತದೆ.

ಅವರಿಗಾಗಿ ನಿಮ್ಮ ಸಮಯವನ್ನು ಇಡಿ

ಅವರಿಗಾಗಿ ನಿಮ್ಮ ಸಮಯವನ್ನು ಇಡಿ

ಎಷ್ಟೋ ಸಂಸಾರಗಳು ಹಾಳಾಗುತ್ತಿರುವುದು ಸಮಯದ ಅಭಾವದಿಂದ. ಪರಸ್ಪರ ಮಾತನಾಡಲು ಸಮಯವಿರುವುದಿಲ್ಲ, ಇಬ್ಬರು ತಮ್ಮ ಕೆಲಸ ಕಾರ್ಯದಲ್ಲಿ ಮಗ್ನವಾಗಿರುತ್ತಾರೆ. ಈ ರೀತಿಯಿದ್ದರೆ ನಿಮಗೇ ಗೊತ್ತಾಗದಂತೆ ಪ್ರೀತಿಯಲ್ಲಿ ಅಂತರ ಉಂಟಾಗುವುದು. ಆದ್ದರಿಂದ ನಿಮ್ಮಬ್ಬರಿಗೋಸ್ಕರವೇ ಸ್ವಲ್ಪ ಹೊತ್ತು ಬಿಡುವು ಮಾಡಿಕೊಳ್ಳಲು ಮರೆಯಬೇಡಿ.

English summary

7 qualities of a good partner

Physical appearance is not all a person can consider in a partner. It’s just a small percentage of it. The following steps will explain some of the main qualities of a good partner. Here are the qualities of a good partner
X
Desktop Bottom Promotion