For Quick Alerts
ALLOW NOTIFICATIONS  
For Daily Alerts

ಪತ್ನಿ ಈ ರೀತಿಯಿದ್ದರೆ ಗಂಡ ಅನ್ಯಳ ಸಂಗ ಬಯಸುತ್ತಾನೆ

By Super
|

ತನ್ನ ಪ್ರೀತಿಯ ಹೆಂಡತಿಗಾಗಿ ತಾಜ್ ಮಹಲ್ ಕಟ್ಟಿಸಿರುವುದು ಇತಿಹಾಸ. ಇವತ್ತಿಗೂ ತಮ್ಮ ನಲ್ಮೆಯ ಪತ್ನಿಗಾಗಿ ಏನೆಲ್ಲ ಮಾಡುವ ಗಂಡಂದಿರು ನಮ್ಮ ಸುತ್ತಲಿದ್ದಾರೆ. ಹಾಗೆಯೇ ನಂಬಿ ಬಂದ ಪತ್ನಿಯನ್ನು ತಿರುಗಿಯೂ ನೋಡದೆ ತ್ಯಜಿಸಿ ಹೋಗುವ ಗಂಡಂದಿರೂ ಇದ್ದಾರೆ. ಜೊತೆಗೆ ಸಂಸಾರ ಮಾಡಿದ, ತಮ್ಮ ಕಷ್ಟ - ಸುಖದಲ್ಲಿ ಭಾಗಿಯಾಗಿದ್ದ, ತಮ್ಮ ಬೇಕು ಬೇಡಗಳನ್ನು ಈಡೇರಿಸುತ್ತಿದ್ದ ಜೀವನವನ್ನು ಕಡೇಪಕ್ಷ ಕರುಣೆಯಿಂದಲೂ ಕಾಣದೆ ಬಿಟ್ಟು ಹೋಗುವವರಿದ್ದಾರೆ.

ಅದರಲ್ಲೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂತಹ ಮಹಿಳಾ ಯಾತನೆಗಳು ಹೆಚ್ಚಾಗಿದ್ದು, ಇಲ್ಲಿನ ಬಹುತೇಕ ಮಹಿಳೆಯರು ಆರ್ಥಿಕ ವಿಷಯದಲ್ಲಿ ಪತಿಯನ್ನೇ ಅವಲಂಭಿಸಿರುವುದು ಈ ನೋವಿಗೆ ಮುಖ್ಯ ಕಾರಣ ಎನ್ನಬಹುದು. ಪತಿಯಿಂದ ಪರಿತ್ಯಕ್ತಳಾದ ಹೆಣ್ಣು ತಮ್ಮ ಮುಂದಿನ ಜೀವನ ನಿರ್ವಹಣೆಗೆ ದಾರಿ ಕಾಣದೇ ಕಂಗಾಲಾಗುತ್ತಾಳೆ. ಅದರಲ್ಲೂ ಮಕ್ಕಳ ಅಥವಾ ತವರಿನ ಒತ್ತಾಸೆ ಇರದವರು ಹಾಗೂ ಸಮಾಜದ ಕೊಂಕುನುಡಿಗಳಿಂದ ನೊಂದವರು, ಆತ್ಮಹತ್ಯೆಗೂ ಪ್ರಯತ್ನಿಸುವುದುಂಟು.

ಒಬ್ಬ ಪುರುಷ ತನ್ನ ಪತ್ನಿಯನ್ನು ಬಿಟ್ಟು ಹೋದರೆ ಅವನದ್ದೇ ತಪ್ಪೆಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಹೆಂಡತಿಯ ದರ್ಪಯುತ ನಡುವಳಿಕೆ, ಗಂಡ ಅಥವಾ ಅವನ ಮನೆಯವರ ಮೇಲೆ ಅಧಿಕಾರ ಚಲಾಯಿಸಲು ಯತ್ನಿಸುವುದು, ದುರಾಸೆ, ಅಥವಾ ತನ್ನ ಮದುವೆಯ ಬಂಧವನ್ನು - ತನ್ನ ಜೊತೆಗಾರನನ್ನು ನಿರ್ಲಕ್ಷಿಸುವದರಿಂದ ದಾಂಪತ್ಯದ ಕೊಂಡಿಕಳಚಬಹುದು. ಹಾಗೆಯೇ ಪತಿಯು ತನ್ನ ಪತ್ನಿಯ ಮೇಲಿನ ಆಕರ್ಷಣೆಯನ್ನು ಕಳೆದುಕೊಂಡರೆ, ಬೇರೆ ಯುವತಿಯರ ಬಯಕೆ ಆತನಿಗಿದ್ದರೆ ಅಥವಾ ಬೇರೆ ತರುಣಿಯೊಂದಿಗೆ ಅನುಚಿತ ಪ್ರೇಮಾಂಕುರವಾದಾಗಲೂ ಪತಿ ತನ್ನವಳನ್ನು ಬಿಟ್ಟು ಹೋಗುವ ಸಂಭವವಿದೆ.

ಪತಿಯ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲಳಾದಾಗ, ಪತ್ನಿ ಹೊಂದಾಣಿಕೆ ಸ್ವಭಾವದವಳಾಗಿರದೇ ಅಧಿಕಾರ ಚಲಾಯಿಸುವವಳಾಗಿದ್ದರೆ ಅಂತಹ ದಾಂಪತ್ಯದಲ್ಲಿ ಪ್ರೀತಿ - ಅನುರಾಗಗಳು ಕಮರಿ ಹೋಗುತ್ತವೆ. ದಂಪತಿಗಳು ಪರಸ್ಪರರ ಬೇಡಿಕೆಗಳನ್ನು ಪೂರೈಸಲಾಗದೇ ಪತಿಗೆ ಬೇರೆ ಸಂಗಾತಿಯನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಅಷ್ಟಕ್ಕೂ ಬಹುತೇಕ ಪುರುಷರು ಸಾಮಾನ್ಯವಾಗಿ ತಾವು ಮದುವೆಯಾಗಿದ್ದರೂ ಬೇರೆ ಮಹಿಳೆಯರಿಗೆ ಆಕರ್ಷಿತರಾಗುವ ಸ್ವಭಾವದವರಾಗಿದ್ದು , ಕೆಲವೊಂದು ಪುರುಷನ "ಸಂಚಾರಿ ನೇತ್ರಗಳು" ಇರುವವಳಲ್ಲಿ ತೃಪ್ತಿ ಇಲ್ಲದಿದ್ದರೆ ಇನ್ನೊಬ್ಬಳನ್ನು ಹುಡುಕುವಲ್ಲಿ ಅತಿ ಶೀಘ್ರವಾಗಿ ಕೆಲಸ ಪ್ರಾರಂಭಿಸುತ್ತವೆ. ಆ ಇನ್ನೊಬ್ಬಳಿಗೋಸ್ಕರ ಅವನು ತನ್ನವಳನ್ನು ಬಿಟ್ಟು ಬಿಡುತ್ತಾನೆ. ಯಾವ ಸುಳಿವೂ ಇಲ್ಲದೆ, ಒಮ್ಮೆಯೂ ಹಿಂತಿರುಗಿ ನೋಡದೆ ಮರೆಯಾಗಿ ಬಿಡುತ್ತಾನೆ.

ಹೀಗೆಲ್ಲಾ ಯಾಕಾಗುವುದು?

ಇಲ್ಲಿವೆ ಕೆಲವು ಕಾರಣಗಳು -

ಮಹಿಳೆಯ ಅಸೂಯೆ ಸ್ವಭಾವ

ಮಹಿಳೆಯ ಅಸೂಯೆ ಸ್ವಭಾವ

ಮಹಿಳೆ ತನ್ನ ಅಸೂಯೆಯ ಸ್ವಭಾವದಿಂದಾಗಿ ತನ್ನ ಜೊತೆಗಾರನ ಪ್ರೀತಿಯನ್ನು ಕಳೆದುಕೊಳ್ಳುತ್ತಾಳೆ. ಅವಳು ಸಾಮಾನ್ಯವಾಗಿ ತನ್ನ ಬಾಳಸಂಗಾತಿಯನ್ನು ಸಂದೇಹದಿಂದ ಕಾಣಲು ಪ್ರಾರಂಭಿಸುತ್ತಾಳೆ. ಇಂತಹ ಸಂಶಯಗ್ರಸ್ತ ವರ್ತನೆಯಿಂದ ರೋಸಿಹೋಗುವ ಆಕೆಯ ಸಂಗಾತಿ ಅಥವಾ ಗೆಳೆಯ ಆಕೆಯೊಂದಿಗಿನ ಸಂಬಂಧವನ್ನು ಅಂತ್ಯಗೊಳಿಸಲು ನಿರ್ಧರಿಸಬಹುದು.

ಅವನನ್ನು ಗೆಲ್ಲಲು ಅವಳು ಸೋತರೆ

ಅವನನ್ನು ಗೆಲ್ಲಲು ಅವಳು ಸೋತರೆ

ನನ್ನನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತರೆ ಅಂತಹ ಮಹಿಳೆಯನ್ನು ಪುರುಷ ತಿರಸ್ಕರಿಸುತ್ತಾನೆ. ಬದಲಿಗೆ ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಓರ್ವ ಸಹವರ್ತಿಯ ಅಗತ್ಯ ಅವನಿಗಿರುವುದರಿಂದ ಆಗ ಮತ್ತೋರ್ವ ಮಹಿಳೆಯ ಜೊತೆ ಇರಲು ಬಯಸುತ್ತಾನೆ.

ಮದುವೆಯ ಜೀವನದ ಬಗ್ಗೆ ನಿರ್ಲಕ್ಷ್ಯ

ಮದುವೆಯ ಜೀವನದ ಬಗ್ಗೆ ನಿರ್ಲಕ್ಷ್ಯ

ಒಬ್ಬ ಮಹಿಳೆಯು ತನ್ನ ಮದುವೆಯ ಜೀವನವನ್ನು ನಿರ್ಲಕ್ಷಿಸುವುದರಿಂದಲೂ ಅವಳು ಪರಿತ್ಯಕ್ತಳಾಗಬಹುದು.ಒಬ್ಬ ಮಹಿಳೆ ತನ್ನ ಮದುವೆಯನ್ನು ಸದಾಕಾಲ ಜೀವಂತವಾಗಿರಿಸಬೇಕು. ಅವಳು ತನ್ನ ಸೌಂದರ್ಯ ಮತ್ತು ಆರೋಗ್ಯದ ಕಡೆ ಗಮನವಹಿಸಬೇಕು. ಪತಿ ಮತ್ತೊಬ್ಬ ಮಹಿಳೆಗೆ ಆಕರ್ಷಿತನಾಗದಂತೆ ಆಕೆ ಮೋಡಿಮಾಡಬೇಕು. ಆದ್ದರಿಂದ ಮಹಿಳೆ ತನ್ನ ಮದುವೆಯನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ.

ಮಹಿಳೆಯ ಸೊಕ್ಕಿನ ವರ್ತನೆ

ಮಹಿಳೆಯ ಸೊಕ್ಕಿನ ವರ್ತನೆ

ಹೆಂಡತಿಯ ಅಧಿಕಾರಶಾಹಿ ನಡುವಳಿಕೆಯನ್ನು ಸಹಿಸದ ಪತಿ ಅವಳನ್ನು ತ್ಯಜಿಸಿಬಿಡುವನು.

ವಿಚಿತ್ರ ನಡುವಳಿಕೆ

ವಿಚಿತ್ರ ನಡುವಳಿಕೆ

ಪತ್ನಿ ಅಥವಾ ಗೆಳತಿ ತನ್ನ ಜೊತೆಗಾರನಿಗೆ ತನ್ನ ಮಾತು ಅಥವಾ ವರ್ತನೆಯಿಂದ ಬೇಸರವಾಗುವಂತೆ ಮಾಡದೇ ಅವರು ಯಾವಾಗಲೂ ಆಸಕ್ತಿಕರ ಮತ್ತು ಉತ್ಸಾಹಭರಿತರಾಗಿರುವಂತೆ ನೋಡಿಕೊಳ್ಳಬೇಕು.

ಮಾನಸಿಕ ಸೌಂದರ್ಯ

ಮಾನಸಿಕ ಸೌಂದರ್ಯ

ಯಾವುದೇ ಆಕರ್ಷಣೆ ಅಥವಾ ಕಟ್ಟಳೆಗೊಳಗಾಗಿ ಮದುವೆಯಾದ ಸುಂದರಿ ಯಾವುದಕ್ಕೂ ಪ್ರತಿಕ್ರಯಿಸದ, ಎಲ್ಲದರಲ್ಲೂ ನಿರಾಸಕ್ತಿತೋರುವವಳೆಂದು ತಿಳಿದಾಗ ಅವಳ ಬಗೆಗಿನ ಆಸಕ್ತಿ ಕಡಿಮೆಯಾಗಿ ಅವಳನ್ನು ಪರಿತ್ಯಜಿಸುವ ಸಾಧ್ಯತೆ ಇದೆ. ಏಕೆಂದರೆ ಯಾವುದೇ ಒಬ್ಬ ಗಂಡಸು ತನ್ನ ಸಂಗಾತಿಯು ಬಾಹ್ಯ ಸೌಂದರ್ಯದ ಜೊತೆಗೆ ಬುದ್ಧಿ ಸೌಂದರ್ಯವನ್ನೂ ಹೊಂದಿರಬೇಕೆಂದು ಬಯಸುವುದು ಸಹಜ.

ಸ್ವತಂತ್ರ ಮನೋಭಾವದವಳು

ಸ್ವತಂತ್ರ ಮನೋಭಾವದವಳು

ಪುರುಷರು ಯಾವಾಗಲೂ ಸ್ವತಂತ್ರವಾಗಿ ಆಲೋಚಿಸುವ, ಸ್ವಾವಲಂಭಿ ಮಹಿಳೆಯರನ್ನು ಇಷ್ಟಪಡುತ್ತಾರೆ. ಪತ್ನಿಯರ ಅತಿಯಾದ ಅವಲಂಬನೆಯಿಂದ ಪತಿಗೆ ಇರಿಸು-ಮುರಿಸಾಗುವ ಸಂಭವವಿದೆ. ಅದರಲ್ಲೂ ಈಗಿನ ಕಾಲದಲ್ಲಿ ಕುಟುಂಬದ ಆಯವ್ಯಯದಲ್ಲಿ ಭಾಗಿಯಾಗಬಲ್ಲ,ಆರ್ಥಿಕತೆಯ ಹೊರೆಗೆ ಪತಿಯೊಂದಿಗೆ ಹೆಗಲು ಕೊಡಬಲ್ಲ ಮಹಿಳೆಯನ್ನೇ ಪುರುಷರು ಹೆಚ್ಚು ಇಷ್ಟ ಪಡುವರು.

ಮತ್ತೊಬ್ಬಳ ಬಗ್ಗೆ ಆಸಕ್ತಿ

ಮತ್ತೊಬ್ಬಳ ಬಗ್ಗೆ ಆಸಕ್ತಿ

ಪುರುಷ ಇನ್ನೊಬ್ಬ ಮಹಿಳೆಯಿಂದ ಆಕರ್ಷಿತಗೊಂಡಾಗ ಪ್ರಸ್ತುತ ಅವನೊಟ್ಟಿಗಿರುವ ಮಹಿಳೆಯನ್ನು ತ್ಯಜಿಸುವನು. ಅವನು ಮೊದಲಿನವಳಿಗಿಂತ ಸೆಕ್ಸಿ ಇರುವವಳನ್ನು ಅಥವಾ ಅವಳಿಗಿಂತ ತಾರುಣ್ಯವತಿಯನ್ನೂ ಬಯಸಿರಬಹುದು. ಹೀಗೆ ಬಯಸಿದವಳು ಸಿಕ್ಕಾಗ ಪುರುಷನು ಮೊದಲ ಪತ್ನಿ ಅಥವಾ ಗೆಳತಿಯನ್ನು ಅಕಾರಣವಾಗಿ ಬಿಟ್ಟುಬಿಡುತ್ತಾನೆ.ಇಂತಹ ಪುರುಷರು ತುಂಬಾ ಅಪಾಯಕಾರಿ.

English summary

Why a man leaves woman

Men abandon women without any feelings of remorse and give flimsy reasons for it. Women are left in the lurch and have to fend for themselves. In the developing countries, many women face this problem and since they are economically dependent upon their spouses, they face a lot of hardships.
X
Desktop Bottom Promotion