For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಕೇವಲ ತೋರಿಕೆಯಾಗಿ ಉಳಿದುಹೋಗುವುದೇಕೆ?

By Super
|

ಮದುವೆ ಎನ್ನುವುದು ಮಧುರವಾದ ಬಂಧ. ಇದು ಎರಡು ಹೃದಯಗಳ ನಡುವೆ ಬೆಸೆಯುವ ಬೆಸುಗೆ. ಇದು ಇಬ್ಬರು ಜೀವನ ಪೂರ್ತಿ ನಂಬಿಕೆಯ ಮೇಲೆ ಜೊತೆಯಾಗಿ ನಡೆಯುವ ವಿಶೇಷ ಅನುಬಂಧ. ಆಲಿ ಬ್ಲೂಮ್ ಮದುವೆಯ ಬಗ್ಗೆ ಎಷ್ಟು ಅರ್ಥಗರ್ಭಿತವಾಗಿ ಹೇಳುತ್ತಾರೆಂದರೆ, "ಮದುವೆ ಕೇವಲ ಆಚರಣೆಗಳಲ್ಲಿ ಮುಗಿದು ಹೋಗುವಂಥದ್ದಲ್ಲ. ಇದು ದೀರ್ಘವಾದುದು, ಗಹನವಾದುದು, ಜೊತೆಯಲ್ಲಿಯೇ ನಡೆಯುವಂಥದ್ದು.

ಇದನ್ನು ಅರಿತರೆ ಸಂಗಾತಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ದೊಡ್ಡ ವಿಷಯವೇ ಅಲ್ಲ" ಮದುವೆ ಕಾನೂನು ಮತ್ತು ಧರ್ಮದ ಪ್ರಕಾರ ಎರಡು ಪ್ರತ್ಯೇಕ ವ್ಯಕ್ತಿಗಳ ಮಧ್ಯೆ ಏರ್ಪಡುವ ಒಪ್ಪಿಗೆಯ ಸಂಬಂಧ ಎಂದು ವ್ಯಾಖ್ಯಾನಿಸಲಾಗಿದೆ. ಈ ಸಂಬಂಧ ಇತರ ಸ್ಥಳಗಳಿಗೆ ಹೋದಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ.ಪ್ರಥಮ ಪ್ರಣಯದ ನಂತರ ಮಕ್ಕಳು, ಸಂಸಾರ ಎಲ್ಲವನ್ನೂ ನೆಚ್ಚಿಕೊಂಡು ಕೊನೆಯಲ್ಲಿ ಗಂಡ ಹೆಂಡತಿಯರ ಸಂಬಂಧ ಕೇವಲ ತೋರಿಕೆಯಾಗಿ ಉಳಿದುಹೋಗುವುದೇಕೆ? ಸಾಕಷ್ಟು ಮದುವೆ ಸಂಬಂಧಗಳು ಇಂದಿಗೂ ವಿಫಲವಾಗುತ್ತಿರುವುದೇಕೆ?

ಕೆಲವು ಕಾರಣಗಳು:

ಮೂಲ ಕಾರಣ

ಮೂಲ ಕಾರಣ

ಕಾರಣಗಳು ಹಲವಿರಬಹುದು. ಆದರೆ ಮೂಲ ಕಾರಣ ಮದುವೆಗೆ ಮೊದಲು ನಿಮ್ಮ ಸಂಬಂಧದಲ್ಲಿ ನೀವು ಇಲ್ಲಿಯ ತನಕ ಗಮನ ನೀಡದೇ ಇದ್ದ, ಹೆಚ್ಚು ಬೆಲೆ ಕೊಡದ, ನಿರ್ಲಕ್ಷಿಸಿದ ಕಾರಣವೇ ಆಗಿರಬಹುದು. ನಿಮಗೆ ಸೂಚನೆಗಳು ಹಾಗೂ ಲಕ್ಷಣಗಳು ಕಂಡುಬಂದಿರಬಹುದು. ಆದರೆ ನೀವು ಪ್ರೀತಿಯಲ್ಲಿ ಕುರುಡಾಗಿದ್ದು ನಿಮಗೆ ಏನೂ ಗಮನಕ್ಕೇ ಬಾರದಾಗಿತ್ತು. ಸಾಮಾನ್ಯವಾಗಿ ಇರುವ ಕೆಲವು ಕಾರಣಗಳನ್ನೀಗ ನಾವು ನೋಡೋಣ.

ಬದಲಾವಣೆಗೆ ಒಡ್ಡಿಕೊಳ್ಳದಿರುವುದು

ಬದಲಾವಣೆಗೆ ಒಡ್ಡಿಕೊಳ್ಳದಿರುವುದು

ಎರಡು ಪ್ರತ್ಯೇಕ ವ್ಯಕ್ತಿಗಳಾಗಿರುವಾಗ ನಿಮಗೆ ನಿಮ್ಮದೇ ಆದ ಯೋಚನೆ, ಆಲೋಚನೆ ಹಾಗೂ ಅಭಿಪ್ರಾಯಗಳಿರುತ್ತವೆ ಮದುವೆ ಆದ ಮೇಲೆ ಇದು ಬದಲಾಗಲೇ ಬೇಕೆಂಬ ನಿರ್ಬಂಧವಿಲ್ಲ. ಪ್ರೀತಿಯಲ್ಲಿರುವಾಗ ನೀವು ನಿಮ್ಮ ಪ್ರಿಯತಮ/ಮೆ ಯನ್ನು ನಿಮ್ಮ ಆಲೋಚನೆಗಳಿಗೆ ತಕ್ಕಂತೆ ಬದಲಾಯಿಸಿದ್ದೇ ಆದರೆ ಮದುವೆಯ ಸಂಬಂಧದಲ್ಲಿ ಯಾಕೆ ಸಾಧ್ಯವಿಲ್ಲ. ಈ ಬದಲಾವಣೆಗಳನ್ನು ವಿಭಿನ್ನತೆಯನ್ನು ಸಮರ್ಪಕವಾಗಿ ಸ್ವೀಕರಿಸದೇ ಇದ್ದಾಗ ಸಮಸ್ಯೆಗಳು ಖಂಡಿತ. ಇದು ನಿಮ್ಮ ಸಂಬಂಧದ ಬುನಾದಿಯನ್ನು ಅಲುಗಾಡಿಸುತ್ತದೆ.

ಮನಸ್ತಾಪ

ಮನಸ್ತಾಪ

ಒಂದು ವಿಷಯದಲ್ಲಾದ ಮನಸ್ತಾಪ ಇನ್ನೊಂದು ವಿಷಯದ ಮೇಲೂ ಪ್ರಭಾವಿಸುತ್ತದೆ. ಇದೊಂದು ನಿರಂತರ ಕೊಂಡಿಯಂತೆ ಮುಂದುವರಿಯುತ್ತಾ ಹೋಗುತ್ತದೆ. ನಿಮ್ಮಿಬ್ಬರ ನಡುವೆ ಆರಂಭವಾದ ಒಂದು ಮನಸ್ತಾಪ ಹೀಗೇ ಮುಂದುವರಿಯುತ್ತಾ ಹೋಗುತ್ತಲೇ ಇರುತ್ತದೆ. ಹೀಗೆ ಮೊದಲ ಮನಸ್ತಾಪದಲ್ಲೇ ಒಬ್ಬರು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಮನಸ್ತಾಪ ನಿಮ್ಮ ಸಂಗಾತಿಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವತ್ತ ತನ್ನ ದುಷ್ಪರಿಣಾಮ ಬೀರುತ್ತದೆ. ಹೀಗೆ ಸಣ್ಣ ಬಿರುಕು ನಿಮ್ಮ ಸಂಬಂಧದ ಗೋಡೆಯನ್ನು ಬೀಳಿಸುತ್ತದೆ.

ಸಂವಹನದ ಕೊರತೆ

ಸಂವಹನದ ಕೊರತೆ

ದಂಪತಿಗಳ ನಡುವೆ ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಮುಖವಾಗಿ ಅವರ ನಡುವೆ ಉತ್ತಮ ಸಂವಹನವೇರ್ಪಡಬೇಕು. ಸಾಮಾನ್ಯವಾಗಿ, ಸುಮಾರು ಶೇ. 50ವಿವಾಹಗಳು ಸಂವಹನದ ಕೊರತೆಯಿಂದಲೇ ಮುರಿದುಬಿದ್ದಿವೆ. ವಾದವನ್ನು ನಿಲ್ಲಿಸುವುದು ಹಾಗೂ ಬೇರೆ ಬೇರೆ ನಿಲುವುಗಳನ್ನು ಒಂದಾಗಿಸುವುದು ಸಂವಹನವಿಲ್ಲದೇ ಅಸಾಧ್ಯ. ಒಂದು ಚಿಕ್ಕ ಸಮಸ್ಯೆಯನ್ನೂ ಕೂಡ ಸಂವಹನವಿಲ್ಲದಿದ್ದರೆ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ದಂಪತಿಗಳು ಕೂತಿ ಪರಸ್ಪರ ಮಾತನಾಡುವುದು, ಚರ್ಚಿಸುವುದು, ಪರಸ್ಪರ ಅವರವರ ಕನಸುಗಳನ್ನು ಹಂಚಿಕೊಳ್ಳುವುದು, ಆಸೆ, ಸಹಾನುಭೂತಿ ಇವೆಲ್ಲವನ್ನೂ ಹಂಚಿಕೊಳ್ಳುವುದು ತುಂಬಾ ಮುಖ್ಯ.

ನಂಬಿಕೆ

ನಂಬಿಕೆ

ಪಾಲಕರು ಮತ್ತು ಮಕ್ಕಳು, ಗುರು ಮತ್ತು ಶಿಷ್ಯ, ಗಂಡ ಮತ್ತು ಹೆಂಡತಿ ಈ ಎಲ್ಲಾ ಸಂಬಂಧಗಳೂ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ಇರಬೇಕಾದದ್ದು "ನಂಬಿಕೆ" ನೀವು ನಿಧಾನವಾಗಿ ನಂಬಿಕೆಯನ್ನು ಬೆಳೆಸಬೇಕು. ಸಂಗಾತಿಗಳ ನಡುವೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ನಂಬಿಕೆಯ ಆಧಾರದ ಮೇಲೆ ಪರಿಹಾರ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಈ ನಂಬಿಕೆಯನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ನಂಬಿಕೆಯಿಲ್ಲದ ಮೇಲೆ ಸಂಬಂಧಗಳಲ್ಲಿ ಯಾವ ಬಾಂಧವ್ಯವೂ ಉಳಿಯುವುದಿಲ್ಲ.

ಹೊಂದಾಣಿಕೆ

ಹೊಂದಾಣಿಕೆ

ಜೀವನ ಸಂಗಾತಿಗಳಾಗಿ ನೀವು ಒಬ್ಬರು ಇನ್ನೊಬ್ಬರ ಜೊತೆಗೆ ಸರಿಯಾಗಿ ಹೊಂದಾಣಿಕೆಯನ್ನು ಹೊಂದಿರಬೇಕು. ಹೊಂದಾಣಿಕೆಯಾಗದ ಅಭಿಪ್ರಾಯ ಮತ್ತು ಆಲೋಚನೆಗಳು, ಅಪನಂಬಿಕೆ, ದಾಂಪತ್ಯ ದ್ರೋಹ ಮುಂತಾದುವು ಹೊಂದಾಣಿಕೆ ಇರದ ಸಂಬಂಧಗಳಲ್ಲಿ ಕಂಡುಬರುತ್ತದೆ. ಲಿಯೋ ಟಾಲ್ ಸ್ಟಾಯ್ ಹೇಳುವಂತೆ "ನಿಮ್ಮ ಮದುವೆಯ ಬಂಧದಲ್ಲಿ ನೀವು ಎಷ್ಟು ಹೊಂದಾಣಿಕೆಯಿಂದ ಇದ್ದೀರಿ ಎನ್ನುವುದು ಮುಖ್ಯವಲ್ಲ ಬದಲಾಗಿ ಹೊಂದಾಣಿಕೆ ಬಿಗಡಾಯಿಸಿದಾಗ ನೀವು ಹೇಗೆ ಅದನ್ನು ನಿಭಾಯಿಸುತ್ತೀರಿ ಎನ್ನುವುದು ಮುಖ್ಯ."

ಸಂಬಂಧ ಬಿಗಡಾಯಿಸದ ಹಾಗೆ ಇರುವ ದಾರಿ

ಸಂಬಂಧ ಬಿಗಡಾಯಿಸದ ಹಾಗೆ ಇರುವ ದಾರಿ

ಮದುವೆಗಳು ಸ್ವರ್ಗದಲ್ಲೇ ನಿಶ್ಚಯಿಸಲಾಗುತ್ತದೆ ಎಂಬ ಮಾತನ್ನು ನಾವು ಕೇಳುತ್ತಲೇ ಇರುತ್ತೇವೆ ಆದರೆ ಅದನ್ನು ಇಲ್ಲಿ ನಿಜ ಮಾಡುವುದು ಬಹಳ ಅಗತ್ಯ. ಇದಕ್ಕೆ ನೀವು ಈ ಮೂರು 'ಎಫ್' (F) ಗಳನ್ನು ನೆನಪಿನಲ್ಲಿಡಿ.

friendship, freedom, forgiveness.

English summary

Reasons Why Many Marriages don’t work

Marriage is a wonderful institution and the union of two hearts. It is the beginning of a lifetime journey with each other and a promise of togetherness.But why do then some marriages reach rocky grounds? Why do many marriages fail?
X
Desktop Bottom Promotion