For Quick Alerts
ALLOW NOTIFICATIONS  
For Daily Alerts

ಮುರಿದು ಹೋದ ನಿಶ್ಚಿತಾರ್ಥ ಕಹಿ ನೆನಪನ್ನು ಮರೆಯಿರಿ

By Super
|

ಜೀವನದಲ್ಲಿ ಕೆಲವೊಮ್ಮೆ ಕೆಲವು ಸಂದರ್ಭಗಳು ಕೆಲವು ಸಮಯದಲ್ಲಿ ಮಾತ್ರ ಬರುತ್ತವೆ. ಅಂತಹ ಸನ್ನಿವೇಶಗಳು ಮರೆಯಲಾಗದಂಥವು. ಅದರಲ್ಲೂ ಯೌವ್ವನಾವಸ್ಥೆಯಲ್ಲಿ ಒದಗಿಬರುವ ನಿಶ್ಚಿತಾರ್ಥ, ಮದುವೆ ಸಂಭ್ರಮಗಳು ಜೀವನದಲ್ಲಿ ಹಿಂದೆಂದೂ ಇಲ್ಲದ ಹೊಸ ಅನುಭವವೊಂದನ್ನು ತಂದು ಕೊಡುತ್ತವೆ. ಅಂತಹ ಅನುಭವವೇ ಕಹಿಯಾದರೆ?

ಕೆಲವರ ಜೀವನದಲ್ಲಿ ಕೆಟ್ಟ ಗಳಿಗೆಗಳು ನಡೆದು ಹೋಗುತ್ತವೆ.ನಡೆದ ನಿಶ್ಚಿತಾರ್ಥ ಮುರಿದು ಬೀಳಬಹುದು! ಆದರೆ ಈ ಮುರಿದು ಬಿದ್ದ ಸಂಬಂಧವನ್ನು ಮರಳಿ ಕೂಡಿಸುವುದು ಬಹಳ ಕಷ್ಟ. ನಿಮ್ಮ ಕನಸು, ಆಸೆ ಮತ್ತು ಭವಿಷ್ಯದ ಆಲೋಚನೆಗಳ ಸೌಧ ಕ್ಷಣಾರ್ಧದಲ್ಲಿ ಕುಸಿದು ಬೀಳಬಹುದು. ಎದುರಿಗೆ ಇನ್ನೂ ಹೊಸದಾಗಿ ಮಿಂಚುತ್ತಿರುವ ಮದುಮಗಳ ಬಟ್ಟೆ, ಇನ್ನೇನು ಮದುವೆಯ ಆಮಂತ್ರಣವನ್ನು ತಯಾರಿಸಬೇಕಷ್ಟೆ ಅಷ್ಟರಲ್ಲಿ ಇಂತಹ ಅನಾಹುತವೊಂದು ನಡೆದು ಹೋಗಿದೆ! ಆದರೆ ಚಿಂತಿಸದಿರಿ. ನಿನ್ನೆಯದು ನಿನ್ನೆಗೆ. ಮುಗಿದು ಹೋದ ವಿಷಯಗಳ ಬಗ್ಗೆ ಯೋಚಿಸಿ ಫಲವಿಲ್ಲ. ಈ ಲೇಖನದ ಮೂಲಕ ನಿಮ್ಮ ಮುರಿದು ಹೋದ ಸಂಬಂಧದಿಂದ ಮರಳಿ ನಿಮ್ಮ ಲವಲವಿಕೆಯನ್ನು ಮರಳಿದರೆ ತುಂಬಾ ಸಂತೋಷ.

ನಿಮ್ಮ ಮುರಿದು ಹೀದ ಸಂಬಂಧದಲ್ಲಿದ್ದ ಅವನು/ಅವಳಷ್ಟೇ ಒಳ್ಳೆಯವರನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಅವುಗಳನ್ನೇಲ್ಲ ಮರೆತು ಹೊಸ ವಿಚಾರದತ್ತ ಹೆಜ್ಜೆ ಹಾಕಿ. ಇಂತಹ ಸಂದರ್ಭದಲ್ಲಿ ನಿಮ್ಮನ್ನು ನೀವು ಗೌರವಿಸುವುದು ತುಂಬಾ ಮುಖ್ಯ.

1. ಹಳೆಯದನ್ನು ಮರೆತುಬಿಡಿ

1. ಹಳೆಯದನ್ನು ಮರೆತುಬಿಡಿ

ನಿಮ್ಮ ಸುತ್ತಮುತ್ತಲೂ ನಿಮ್ಮ ಮಾಜಿ / x ಸಂಗಾತಿಯಾಗಬೇಕಿದ್ದವರ ಬಗೆಗಿನ ವಿಷಯಗಳನ್ನು ಬಿಡುವುದು ಅಗತ್ಯ. ಹೀಗೆ ಮಾಡುವುದರಿಂದ ನೀವು ಆ ದಿನಗಳ ಕಹಿ ನೆನಪುಗಳಿಂದ ಹೊರಬರಲು ಸಾಧ್ಯ.

2. ನಿಮ್ಮ ಭಾವನೆಗಳನ್ನು ಹೊರದೂಡಿ

2. ನಿಮ್ಮ ಭಾವನೆಗಳನ್ನು ಹೊರದೂಡಿ

ನಿಮ್ಮ ಮನಸ್ಸಿಗೆ ಸಮಾಧಾನವಾಗುವಂತಿದ್ದರೆ ಕೆಲವು ಗಂಟೆ/ದಿನಗಳವರೆಗೆ ಅತ್ತುಬಿಡಿ. ಆದಾರೂ ನೀವು ಇದರಿಂದ ಹೊರಬರಲು ಸಾಧ್ಯವಾಗದಿದ್ದರೆ ಹೊಸ ಜೀವನವನ್ನು ಕಂಡುಕೊಳ್ಳುವುದಕ್ಕೆ ತಯಾರಾಗಿ. ಪ್ರತಿ ಅಂತ್ಯವೂ ಒಂದು ಆರಂಭವನ್ನು ಹೊಂದಿರಲೇಬೇಕು. ಇದು ಜಗತ್ತಿನ, ಜೀವನದ ನಿಯಮ.

3. ಬೇರೆಯವರಿಗೂ ತಿಳಿಯುವಂತೆ ಮಾಡಿ

3. ಬೇರೆಯವರಿಗೂ ತಿಳಿಯುವಂತೆ ಮಾಡಿ

ನಿಮ್ಮ ಬಗ್ಗೆ ನೀವು ಆತ್ಮವಿಶ್ವಾಸವನ್ನು ಬೆಳೆಸಿಕೊಂಡ ನಂತರ ಇತರರಿಗೆ ಮದುವೆ ನಡೆಯದೆ ಇರುವ ವಿಷಯದ ಬಗ್ಗೆ ಹೇಳಿ. ಈ ಕೆಲಸವನ್ನು ಅತ್ಯಂತ ಬೇಗ ಹೇಳಿದರೆ ದೂರದಿಂದ ಬರುವವರಿಗೆ ಅತ್ಯಂತ ಸಹಾಯವಾಗುತ್ತದೆ. ನೆಂಟರಿಗಾಗಿ ಗೊತ್ತು ಮಾಡಿರುವ ವಸತಿ ವ್ಯವಸ್ಥೆಯನ್ನು ನಿಲ್ಲಿಸಿ. ಬೇರೆಯವರು ಮುಂಚಿತವಾಗಿ ಕೊಟ್ಟ ಗಿಫ್ಟ್ ಗಳನ್ನೂ ಹಿಂತಿರುಗಿಸಿ. ಜೊತೆಗೆ ಅವರಿಗೆ ಧನ್ಯವಾದ ಸಂದೇಶವನ್ನು ಹೇಳಲೂ ಮರೆಯದಿರಿ.

4. ನಿಮ್ಮ ಬಗ್ಗೆ ಕೇರ್ ಇರುವ ವ್ಯಕ್ತಿಗಳೊಂದಿಗೆ ಸಮಯ ಕಳೆಯಿರಿ

4. ನಿಮ್ಮ ಬಗ್ಗೆ ಕೇರ್ ಇರುವ ವ್ಯಕ್ತಿಗಳೊಂದಿಗೆ ಸಮಯ ಕಳೆಯಿರಿ

ನಿಮ್ಮ ಮನಸ್ಸಿನ ಸಮಾಧಾನಕ್ಕೋಸ್ಕರ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಮಯವನ್ನು ಕಳೆಯಿರಿ. ನಿಮ್ಮನ್ನು ಪ್ರೀತಿಸುವ, ಪ್ರೋತ್ಸಾಹಿಸುವ ನಿಮ್ಮನ್ನು ನಗಿಸುವ ವ್ಯಕ್ತಿಗಳ ಸಾಂಗತ್ಯ ನಿಮಗೀಗ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದಂತೆ ಯಾರಾದರೂ ಹತ್ತಿರವಾಗುತ್ತಾರೆ ಮತ್ತು ಅವರಲ್ಲಿ ನಿಮ್ಮೊಂದಿಗೆ ಹೇಳಿಕೊಳ್ಳುವಂತಹ ಸಾಕಷ್ಟು ವಿಷಯಗಳಿರಬಹುದು. ಇದು ನಿಮ್ಮನ್ನು ಉತ್ಸಾಹಿಗಳನ್ನಾಗಿ ಮಾಡುತ್ತದೆ.

5. ಔಟಿಂಗ್ ಹೋಗಿ

5. ಔಟಿಂಗ್ ಹೋಗಿ

ನೀವು ಇದುವರೆಗೆ ಯಾವುದೇ ಸ್ಥಳಕ್ಕೆ ಹೋಗಲು ನಿರ್ಧರಿಸದಿದ್ದರೆ ಇದು ಸರಿಯಾದ ಸಮಯ. ನಿಮ್ಮ ನೆಚ್ಚಿನ ಸ್ನೇಹಿತರು ಅಥವಾ ನೀವೊಬ್ಬರೆ ಯಾವುದಾದರೂ ಸ್ಥಳಕ್ಕೆ ಕೆಲವು ದಿನಗಳ ಮಟ್ಟಿಗೆ ಪ್ರವಾಸಕ್ಕೆ ಹೊರಡಿ. ಮನೆಯಿಂದ ಸ್ವಲ್ಪ ದಿನ ದೂರವಿದ್ದರೆ ನಿಮಗೆ ನಡೆದ ಘಟನೆಗಳನ್ನು ಮರೆಯಲೂ ಸಾಧ್ಯ. ಈ ಸ್ಥಳದ ಬದಲಾವಣೆ ನಿಮ್ಮಲ್ಲಿ ಧನಾತ್ಮಕ ಬದಲಾವಣೆಯನ್ನು ತರಬಲ್ಲದು. ಜೊತೆಗೆ ನಿಮ್ಮನ್ನು ನೀವು ಸಂಪೂರ್ಣವಾಗಿ ಇಷ್ಟಪಟ್ಟು ಆತ್ಮ ವಿಶ್ವಾಸವನ್ನೂ ಬೆಳೆಸಿಕೊಳ್ಳಬಹುದು.

6. ಕ್ಷಮಿಸಲು ಮತ್ತು ಬೆಳೆಯಲು ಕಲಿಯಿರಿ

6. ಕ್ಷಮಿಸಲು ಮತ್ತು ಬೆಳೆಯಲು ಕಲಿಯಿರಿ

ನಿಶ್ಚಿತಾರ್ಥ ಎನ್ನುವುದು ಇಬ್ಬರನ್ನು ಬೆಸೆಯುವ ಬಂಧ. ಇಲ್ಲಿ ಯಾವುದೇ ಲೋಪದೋಷಗಳಾದರೂ ಇಬ್ಬರ ಕಡೆಯಿಂದಲೂ ತಪ್ಪುಗಳಾಗಬಹುದು. ಆದ್ದರಿಂದ ನಡೆದ ಘಟನೆಯನ್ನು ವಿಶ್ವೇಷಿಸಿ. ತಪ್ಪುಗಳು ಕ್ಷಮಿಸುವಂತದ್ದಾಗಿದ್ದರೆ ಖಂಡಿತ ಕ್ಷಮಿಸಿ. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ನೀವು ನಿಮ್ಮ ಸಂಗಾತಿಯಾಗಬೇಕಾಗಿದ್ದವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿ.

7. ಅವನಿಗೆ/ ಅವಳಿಗೆ ನಿಶ್ಚಿತಾರ್ಥದ ಉಂಗುರವನ್ನು ಹಿಂತಿರುಗಿಸಿ

7. ಅವನಿಗೆ/ ಅವಳಿಗೆ ನಿಶ್ಚಿತಾರ್ಥದ ಉಂಗುರವನ್ನು ಹಿಂತಿರುಗಿಸಿ

ನಿಮ್ಮಲ್ಲಿ ಅವರು ಹಾಕಿದ ಉಂಗುರವಿದ್ದರೆ ಅದನ್ನು ಹಿಂತಿರುಗಿಸಿ. ನಿಮಗೆ ಅದನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಲು ಇಷ್ಟವಿಲ್ಲದೇ ಇರಬಹುದು. ಹಾಗೆ ಇಟ್ಟುಕೊಳ್ಳುವುದು ಸರಿಯೂ ಅಲ್ಲ. ಆದ್ದರಿಂದ ಅದನ್ನು ಹಿಂತಿರುಗಿಸಿ.

ಒಟ್ಟಿನಲ್ಲಿ ಬೆಸೆಯ ಬೇಕಾಗಿದ್ದ ಪವಿತ್ರ ಬಂಧ ಒಂದುವೇಳೆ ಮುರಿದು ಬಿದ್ದರೆ ಅದನ್ನೇ ಮನಸ್ಸಿನಲ್ಲಿಟ್ಟು ಕೊರಗುವುದಕ್ಕಿಂತ ಜೀವನ ಬಂದ ಹಾಗೆ ಸ್ವೀಕರಿಸಿ ಮುಂದಿನ ಜೀವನವನ್ನು ಉತ್ತಮವಾಗಿಸಿಕೊಳ್ಳುವುದರ ಕಡೆಗೆ ಗಮನ ಹರಿಸಿ, ಆಲ್ ದಿ ಬೆಸ್ಟ್.

English summary

How to Get Over a Broken Engagement

Getting over a broken engagement is never easy - your dreams, hopes, and future wishes are all completely dashed in a moment.This article suggests ways in which you can begin to emerge from the shock and start to forge a new and different future for yourself after a broken engagement.
X
Desktop Bottom Promotion