For Quick Alerts
ALLOW NOTIFICATIONS  
For Daily Alerts

ಈ ಸಂದರ್ಭಗಳಲ್ಲಿ ಹೆಣ್ಣು ಸುಳ್ಳು ಹೇಳುವ ಸಾಧ್ಯತೆ ಹೆಚ್ಚು!

|

ನಾನಾ ಕಾರಣಗಳಿಗೆ ಸುಳ್ಳು ಹೇಳುತ್ತೇವೆ, ವಾಸ್ತವತೆಯಿಂದ ಪಾರಾಗಲು, ಯಾರಾನ್ನಾದರೂ ಆಟ ಆಡಿಸಲು, ತಮ್ಮ ತಪ್ಪುಗಳನ್ನು ಮರೆ ಮಾಚಲು ಹೀಗೆ ಸುಳ್ಳು ಹೇಳುವುದು ಸಹಜ. ಸುಳ್ಳು ಹೇಳುವುದು ಸುಲಭ ಎಂದೇ ಭಾವಿಸುತ್ತೇವೆ. ಸುಳ್ಳು ಹೇಳಿದ ಮೇಲೆ ಗೊತ್ತಾಗುತ್ತದೆ ಆ ಸುಳ್ಳನ್ನು ನಾವು ಹೇಳುವ ವ್ಯಕ್ತಿ ನಂಬುವಂತೆ ಮಾಡುವುದು ನಾವು ನೆನೆಸಿದಷ್ಟು ಸುಲಭವಲ್ಲವೆಂದು.

ತಮಾಷೆಗೆ ಸುಳ್ಳು ಹೇಳಿದರೆ , ಅದು ಸುಳ್ಳು ಅಂತ ಗೊತ್ತಾದಾಗ ಯಾರೂ ನಮ್ಮ ಬಗ್ಗೆ ತಪ್ಪು ತಿಳಿಯುವುದಿಲ್ಲ. ಆದರೆ ನಮ್ಮನ್ನು ನಾವೇ ಗುರುತಿಸಿ ಕೊಳ್ಳಲು ಸುಳ್ಳು ಹೇಳುತ್ತಿದ್ದೇವೆ ಎಂದು ನಮ್ಮ ಸ್ನೇಹಿತರ ಬಳಗಕ್ಕೆ ತಿಳಿದರೆ ಅಲ್ಲಗೇ ಮುಗಿಯಿತು, ಮುಂದೆ ನೀವು ನಿಜ ಹೇಳಿದರೂ ನೀವು ಹೇಳುವುದೆಲ್ಲವೂ ಸುಳ್ಳು ಎಂದು ಮದ್ರೆ ಒತ್ತಿ ಬಿಡುತ್ತಾರೆ.

ಇನ್ನು ಸಂಬಂಧದ ವಿಷಯದಲ್ಲಿ ಅಂತೂ ಸುಳ್ಳು ಹೇಳುವುದಾದರೆ ತುಂಬಾ ಕೇರ್ ಫುಲ್ ಆಗಿರಬೇಕು. ನಿಮ್ಮ ಸಂಗಾತಿಗೆ ನೀವು ಸುಳ್ಳುಗಾರರು ಎಂದು ತಿಳಿದರೆ ಅದು ನಿಮ್ಮಿಬ್ಬಿರ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀಳಬಹುದು, ಜೋಕೆ!

ಸುಳ್ಳು ಹೇಳಲು ಕಾರಣ ಮತ್ತು ಪರಿಸ್ಥಿಗಳು ಬೇರೆ-ಬೇರೆಯಾಗಿರಬಹುದು, ಆದರೆ ಸುಳ್ಳು ಯಾವತ್ತಿಗೂ ಸುಳ್ಳೆ. ಅದರಲ್ಲೂ ಸಂಬಂಧದಲ್ಲಿರುವ ಮಹಿಳೆಯರು ಸುಳ್ಳು ಹೇಳಲು ಇವು ಪ್ರಮುಖ ಕಾರಣಗಳಾಗಿವೆ:

ನಿಮ್ಮನ್ನು ಪರೀಕ್ಷಿಸಲು

ನಿಮ್ಮನ್ನು ಪರೀಕ್ಷಿಸಲು

ಇದನ್ನು ತುಂಬಾ ಹೆಣ್ಣು ಮಕ್ಕಳು ಮಾಡುತ್ತಾರೆ. ತಾನು ಆಯ್ಕೆ ಮಾಡಿದ ಹುಡುಗನ ಗುಣ ಪರೀಕ್ಷಿಸಲು ಸುಳ್ಳು ಹೇಳುತ್ತಾರೆ. ತನಗೆ ಹಿಂದೆ ಒಬ್ಬನ ಜೊತೆ ಸ್ನೇಹವಿತ್ತು ಎಂದು ಹೇಳಬಹುದು. ನೀವು ಹೊಟ್ಟೆ ಕಿಚ್ಚು ಪಡುವಂತೆ ಮಾಡುವುದು ಅವಳ ಉದ್ದೇಶವಾಗಿರುತ್ತದೆ. ಅವಳ ಬಯಸಿದ ಪ್ರತಿಕ್ರಿಯೆ ದೊರೆತರೆ ಮತ್ತೆ ಆ ಸುಳ್ಳನ್ನು ಅವಳು ಹೇಳುವುದಿಲ್ಲ.

ನಿಮ್ಮನ್ನು ಆಕರ್ಷಿಸಲು

ನಿಮ್ಮನ್ನು ಆಕರ್ಷಿಸಲು

ಅವಳು ನಿಮ್ಮೆಡೆಗೆ ಆಕರ್ಷಿತಳಾಗಿದ್ದರೆ ನಿಮ್ಮನ್ನು ಆಕರ್ಷಿಸಲು ಸುಳ್ಳು ಹೇಳಬಹುದು.

ಹಳೆಯ ನೆನಪನ್ನು ಮರೆ ಮಾಚಲು

ಹಳೆಯ ನೆನಪನ್ನು ಮರೆ ಮಾಚಲು

ನಿಮ್ಮನ್ನು ಪರಿಚಯವಾಗುವ ಮೊದಲು ಅವಳಿಗೆ ಬೇರೆಯೊಬ್ಬನ ಜೊತೆ ಸ್ನೇಹವಿದ್ದು, ಅದು ಬ್ರೇಕ್ ಅಪ್ ಆಗಿದ್ದರೆ, ಹಳೆಯದನ್ನು ಹೇಳಿ ಹೊಸ ಸಂಬಂಧ ಹಾಳು ಮಾಡಿಕೊಳ್ಳುವುದು ಬೇಡವೆಂದು ತೀರ್ಮಾನಿಸುತ್ತಾಳೆ. ಅದು ನಿಮಗೆ ಗೊತ್ತಾದರೆ ಹಳೆಯದನ್ನು ಹೇಳಿ ಅವಳ ಮನಸ್ಸಿಗೆ ನೋವು ಮಾಡದಿರುವುದು ಒಳ್ಳೆಯದು.

ನಿಮ್ಮ ಚಿಂತೆ ದೂರ ಮಾಡಲು

ನಿಮ್ಮ ಚಿಂತೆ ದೂರ ಮಾಡಲು

ಕೆಲವೊಮ್ಮೆ ನಿಮ್ಮ ಹುಡುಗಿ ನಿಮ್ಮ ಹತ್ತಿರ ಸುಳ್ಳು ಹೇಳುತ್ತಿದ್ದಾಳೆ ಎಂದೆನಿಸುತ್ತದೆ. ಆದರೆ ಅದನ್ನು ಅಷ್ಟು ಸೀರೆಯಸ್ ಆಗಿ ತಗೋಬೇಡಿ. ಏಕೆಂದರೆ ಕೆಲವೊಂದು ವಿಷಯಗಳನ್ನು ಹೇಳಿ ವೃಥಾ ನಿಮ್ಮಲ್ಲಿ ಚಿಂತೆ ತುಂಬುವುದು ಏಕೆ? ನನ್ನ ಸಮಸ್ಯೆಗೆ ನಾನು ಪರಿಹಾರ ಕಂಡುಕೊಳ್ಳುವೆ ಎಂಬ ಧೈರ್ಯದಿಂದ ಅವಳು ಏನಾದರೂ ಸುಳ್ಳು ಹೇಳಿ ವಿಷಯವನ್ನು ಮರೆ ಮಾಚಬಹುದು. ಇಂತಹ ಸಂದರ್ಭದಲ್ಲಿ ಅವಳು ಸುಳ್ಳು ಹೇಳುತ್ತಿದ್ದಾಳೆ ಎಂದು ಗೊತ್ತಾದರೂ ಏನಾಯಿತು? ಎಂದು ಆಗಾಗ ಕೇಳಬೇಡಿ.

ನಿಮ್ಮನ್ನು ನಂಬದಿದ್ದಾಗ

ನಿಮ್ಮನ್ನು ನಂಬದಿದ್ದಾಗ

ಸಂಬಂಧದ ಪ್ರಾರಂಭದ ದಿನಗಳಲ್ಲಿ ನಿಮ್ಮ ಬಗ್ಗೆ ಹೆಚ್ಚಾಗಿ ಅವಳಿಗೆ ಗೊತ್ತಿಲ್ಲದಿದ್ದರೆ ತನ್ನ ಪರ್ಸನಲ್ ವಿಷಯವನ್ನು ಹೇಳದೆ ಸುಳ್ಳು ಹೇಳಬಹುದು.

ಅವಳ ಸಂತೋಷಕ್ಕಾಗಿ

ಅವಳ ಸಂತೋಷಕ್ಕಾಗಿ

ಕೆಲವರು ತಮ್ಮ ಬಗ್ಗೆ, ತಮ್ಮ ಸಾಧನೆಗಳ ಬಗ್ಗೆ ಸುಳ್ಳು ಹೇಳಿ ಸಂತೋಷ ಪಡುತ್ತಾರೆ. ನಿಮ್ಮ ಹುಡುಗಿಯಲ್ಲಿ ಆ ಲಕ್ಷಣ ಕಂಡು ಬಂದರೆ ಅವಳಲ್ಲಿ ಆತ್ಮ ವಿಶ್ವಾಸದ ಕೊರತೆ ಇದೆಯೆಂದು ಅರ್ಥ.

ಸಂಬಂಧದ ರಕ್ಷಣೆಗಾಗಿ

ಸಂಬಂಧದ ರಕ್ಷಣೆಗಾಗಿ

ಕೆಲವೊಮ್ಮೆ ಸಂಬಂಧದ ರಕ್ಷಣೆಗಾಗಿ ಸುಳ್ಳು ಹೇಳಬೇಕಾಗುತ್ತದೆ. ತನ್ನ ಗಂಡನ ಕೆಲ ಅಭಿರುಚಿ ತನಗೆ ಇಷ್ಟವಿಲ್ಲದಿದ್ದರೂ ಅವನಿಗೆ ನೋವಾಗುವುದು ಎಂದು ಸುಳ್ಳು ಹೇಳುತ್ತಾಳೆ.

(ನೆನಪಿಡಿ: ಇಲ್ಲಿ ನಾವು ಹೆಣ್ಣು ಮಕ್ಕಳು ಸುಳ್ಳು ಹೇಳುವಂತಹ ಸಂದರ್ಭಗಳ ಬಗ್ಗೆ ಹೇಳಿದ್ದೇವೆ ಹೊರತು, ಸುಳ್ಳನ್ನೇ ಜೀವನ ಎಂದು ತಿಳಿದಿರುವ ಹೆಣ್ಣಿನ ಬಗ್ಗೆ ಹೇಳಿಲ್ಲ)

English summary

7 Reason Why Women Lie | Tips Fro Health | ಹೆಣ್ಣು ಸುಳ್ಳು ಹೇಳುವ 7 ಸಂದರ್ಭಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Women are just as guilty of lying as men are. Though the reasons may differ, lies are lies. There are a few reasons why women feel the need to lie.
X
Desktop Bottom Promotion