For Quick Alerts
ALLOW NOTIFICATIONS  
For Daily Alerts

ಇಂತಹ ಪುರುಷನೆಂದರೆ ಹೆಣ್ಣಿಗೆ ಅಲರ್ಜಿ!

|

ಕಳೆದ ವಾರ ಹಬ್ಬಕ್ಕೆ ಹೋಗಿ ಬೆಂಗಳೂರಿಗೆ ಬರಲು ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ. ಹಬ್ಬದ ಸಮಯವಾದ ಕಾರಣ ರಿಟರ್ನ್ ಬರುವಾಗ ಸೀಟು ಸಿಗಲ್ಲವೆಂದು ಮುಂಗಡ ಟಿಕೆಟ್ ಮಾಡಿಕೊಂಡ ಕಾರಣ ರಿಲ್ಯಾಕ್ಸ್ ಆಗಿ ನಿಂತಿದ್ದೆ. ಆಗ ಬಸ್ ಹತ್ತಲು ಬಂದ ಹುಡುಗನೊಬ್ಬ ನನ್ನ ಲಗೇಜ್ ಪಕ್ಕ ಅವನ ಲಗೇಜ್ ಇಟ್ಟು, ಅದನ್ನು ಸ್ವಲ್ಪ ನೋಡ್ಕೋ ಎಂದು ನನಗೆ ಹೇಳಿ ಅವನು ಫೋನ್ ನಲ್ಲಿ ಬ್ಯೂಸಿಯಾದ.

ಅವನು ಫೋನ್ ನಲ್ಲಿ ನಾನು ಮೈಸೂರಿಗೆ ಹೊರಟಿದ್ದೇನೆ ಎಂದು ಅವನ ಫ್ರೆಂಡ್ ಹತ್ತಿರ ಹೇಳುವುದನ್ನು ಕೇಳಿದೆ( ನಾನು ಕೇಳಿದೆ ಅನ್ನುವುದಕ್ಕಿಂತ ಉದ್ದೇಶ ಪೂರ್ವಕವಾಗಿ ನನಗೆ ಕೇಳಲಿ ಅಂತಲೇ ಹೇಳಿದ್ದ) ಬಸ್ ಬರಲು 20 ನಿಮಿಷವಿತ್ತು, ಆ 20 ನಿಮಿಷದಲ್ಲಿ ಅವನ ಮಾತನ್ನು ಕೇಳುತ್ತಿದ್ದ ನನಗೆ ಕೋಪ ನೆತ್ತಿಗೇರುತ್ತಿತ್ತು, ಅವನೇನು ಅಂಥ ತಪ್ಪು ಮಾಡಿದ ಎಂಬ ಕುತೂಹಲವಿರಬಹುದು, ಅವನು ನನಗೇನು ಮಾಡಿಲ್ಲ, ಆದರೆ ನಾನು ಕೇಳಲಿ ಅಂತಲೇ ಅವನ ಬಗ್ಗೆ ವಿನಾಕಾರಣ ಹೊಗಳುತ್ತಿದ್ದ. ಮೈಸೂರಿಗೆ ಹೋಗುವ 3 ಬಸ್ ಪಾಸಾದಾರೂ ಅವನು ಹತ್ತಲಿಲ್ಲ, ಅವ ನು ಪೋನ್ ನಲ್ಲಿ ಬಸ್ ಲಕ್ಷುರಿ ಇಲ್ಲ, ಲಕ್ಷುರಿ ಬಸ್ ಗಾಗಿ ಕಾಯುತ್ತಿದ್ದೇನೆ ಎನ್ನುತ್ತಿದ್ದ, ನನ್ನ ಅಮ್ಮ ನಾನು ಬರುವಾಗ ಅತ್ತಳು, ನನ್ನ ಬಾಸ್ ರಜೆ ಕೊಡಲಿಲ್ಲ ಹೀಗೆ ಹೇಳುತ್ತಲೇ ಇದ್ದ. ತುಂಬಾ ಕಿರಿಕಿರಿ ಆಗಿ ಪಕ್ಕದಲ್ಲಿದ್ದ ಅಂಗಡಿ ಮುಂದೆ ಹೋಗಿ ನಿಂತೆ ಅಲ್ಲೂ ಅವನು ಬಂದು ನಿಲ್ಲಬೇಕೆ? ಅವನ ಮಾತುಗಳನ್ನು ಕೇಳಿ ಅವನ ಬಗ್ಗೆ ಆಗಾಗಲೇ ಜಿಗುಪ್ಸೆ ತಾಳಿದ್ದೆ.

ಈ ರೀತಿಯ ಅನೇಕ ಹುಡುಗರನ್ನು ನೋಡಿದ್ದೇನೆ. ಅವರ ಬಗ್ಗೆ ತುಂಬಾ ಹೇಳುವುದು ಹೆಮ್ಮೆ ಎಂದು ತಿಳಿದಿರುತ್ತಾರೆ, ಆದರೆ ಅಂತವರ ಕಡೆ ಹುಡುಗಿಯರು ತಿರುಗಿಯೂ ನೋಡುವುದಿಲ್ಲ ಎಂದು ಅವರಿಗೆ ಗೊತ್ತಿರುವುದಿಲ್ಲ ಪಾಪ. ಸ್ವ ಹೊಗಳಿಕೆ ಮಾತ್ರವಲ್ಲ, ಹುಡುಗರಲ್ಲಿ ಈ ಕೆಳಗಿನ ಗುಣಗಳಿದ್ದರೆ ಅವನ ಜೊತೆ ಯಾವ ಹೆಣ್ಣೂ ಸ್ನೇಹ, ಪ್ರೀತಿಯನ್ನು ತುಂಬಾ ಕಾಲ ಮುಂದುವರೆಸುವುದಿಲ್ಲ.

ಹಿಂಸೆ ಕೊಡುವುದು

ಹಿಂಸೆ ಕೊಡುವುದು

ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುವ ಗುಣ ಕೆಲ ಪುರುಷರಲ್ಲಿ ಇರುತ್ತದೆ. ಇದನ್ನೇ ಪೌರುಷ ಎಂದು ತಿಳಿದಿರುತ್ತಾರೆ. ಆದರೆ ಈ ಗುಣವಿರುವವನನ್ನು ಸ್ತ್ರೀ ಗೌರವಿಸುವುದಿಲ್ಲ.

ದೈಹಿಕ ಆಸೆ

ದೈಹಿಕ ಆಸೆ

ಕೆಲವರು ತಮ್ಮ ದೈಹಿಕ ಆಸೆಗಾಗಿ ಪ್ರೀತಿ-ಪ್ರೇಮದ ನಾಟಕ ಆಡುತ್ತಾರೆ, ಅಲ್ಲದೇ ಅವರು ಹುಡುಗಿಯರನ್ನು ಅದೇ ದೃಷ್ಟಿಯಿಂದ ನೋಡುತ್ತಾರೆ. ಅಂತವರ ಜೊತೆ ಮಾತನಾಡಲು ಸಭ್ಯ ಹುಡುಗಿಯರು ಬಯಸುವುದಿಲ್ಲ.

 ನಾನೇ ಗ್ರೇಟ್

ನಾನೇ ಗ್ರೇಟ್

ಯಾವತ್ತು ನಾನೇ ಗ್ರೇಟ್, ನನ್ನದೇ ಮೇಲು ಗೈ ಆಗಿರಬೇಕು ಎಂಬ ಗುಣವಿರುವವನ ಜೊತೆ ಬಾಳುವುದು ಸ್ವಲ್ಪ ಕಷ್ಟವೆ. ಅಂತವರ ಜೊತೆ ಗುಲಾಮಳಂತೆ ಬದುಕಲು ಯಾವ ಹೆಣ್ಣಿಗೆ ತಾನೆ ಇಷ್ಟವಿರುತ್ತದೆ ಹೇಳಿ?

ಕುಡುಕ

ಕುಡುಕ

'ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ' ಎಂಬ ಜಾನಪದ ಗೀತೆಯನ್ನು ಕೇಳಿರುತ್ತೀರಿ. ಅಪರೂಪಕ್ಕೆ, ಪಾರ್ಟಿಗಳಲ್ಲಿ ಕುಡಿಯುವುದು ಬೇರೆ, ದಿನಾ ಕುಡಿಯುವವರೇ ಬೇರೆ, ಕುಡುಕನ ಜೊತೆ ಬಾಳುವುದರಿಂದ ಕಣ್ಣೀರಲ್ಲದೆ ಮತ್ತೇನು ಸಿಗುವುದಿಲ್ಲ.

ಒಂಟಿಯಾಗಿ ಬಿಟ್ಟು ಹೋಗುವವ

ಒಂಟಿಯಾಗಿ ಬಿಟ್ಟು ಹೋಗುವವ

ಮಾತನಾಡದೆ ಒಂಟಿಯಾಗಿ ಇರುವವ, ನಮ್ಮನ್ನು ಬಿಟ್ಟು ಒಂಟಿಯಾಗಿ ಬಿಟ್ಟು ಅವನಿಷ್ಟಕ್ಕೇ ಫ್ರೆಂಡ್ಸ್ ಎಂದು ಸುತ್ತುವವ ಮಹಿಳೆಯರಿಗೆ ಇಷ್ಟವಾಗುವುದಿಲ್ಲ.

ಸೈಕೋ

ಸೈಕೋ

ಸೈಕೋ ಜೊತೆ ಸಂಬಂಧವಿಟ್ಟುಕೊಳ್ಳುವ ಸಾಹಸ ಮಾಡದಿರುವುದೇ ಒಳ್ಳೆಯದು. ಯಾವ ಸಮಯದಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತಾರೆ ಎಂದೇ ಹೇಳಲು ಸಾಧ್ಯವಿಲ್ಲ.

ಸ್ವ ಹೊಗಳಿಕೆ

ಸ್ವ ಹೊಗಳಿಕೆ

ತನ್ನ ಬಗ್ಗೆ ವಿಪರೀತ ಹೊಗಳುವವನ ಜೊತೆ ಸಂಬಂಧವನ್ನು ಇಟ್ಟು ಕೊಳ್ಳಲು ಯಾವ ಹೆಣ್ಣು ಬಯಸುವುದಿಲ್ಲ. ಅಂತವನಿಗೆ ಬೇಗನೆ ಗುಡ್ ಬೈ ಹೇಳುತ್ತಾರೆ. ಬೇರೆಯವರು ನಿಮ್ಮ ಬಗ್ಗೆ ಹೊಗಳುವುದನ್ನು ಹೆಣ್ಣು ಬಯಸುತ್ತಾಳೆ, ನೀವೆ ಸ್ವ ಹೊಗಳುತ್ತಿದ್ದರೆ ಅವಳು ನಿಮ್ಮ ಬಗ್ಗೆ ಕೀಳು ಅಭಿಪ್ರಾಯ ತಾಳಬಹುದು.

ಕೆಲಸ..ಕೆಲಸ..ಕೆಲಸ

ಕೆಲಸ..ಕೆಲಸ..ಕೆಲಸ

ದಿನದ 24 ಗಂಟೆ ಕೆಲಸ ಎಂದು ಕೂರುವವನೂ ಇಷ್ಟವಾಗುವುದಿಲ್ಲ. ರಜಾ ದಿನಗಳಲ್ಲಿ ಸುತ್ತಾಡಿಸಬೇಕು, ನನ್ನ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು, ಅವನ ಭಾವನೆಯನ್ನೂ ಹಂಚಿಕೊಳ್ಳಬೇಕು, ನನ್ನ ಜೊತೆ ಸ್ವಲ್ಪ ಸಮಯ ಕಳೆಯಬೇಕೆಂದು ಬಯಸುತ್ತಾಳೆ. ದಿನಾ ಕೆಲಸ ಅಂತ ಕೂತರೆ ನೀವು ದುಡಿದದ್ದನ್ನು ಸಂತೋಷವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ.

 ಸೋಮಾರಿ

ಸೋಮಾರಿ

ಉದ್ಯೋಗಂ ಪುರುಷ ಲಕ್ಷಣಂ... ಸೋಮಾರಿಯಾಗಿ ಕಾಲ ಕಳೆಯುವವನ ಕಡೆ ಹೆಣ್ಣು ಅಸಡ್ಡೆಯಿಂದ ನೋಡುತ್ತಾಳೆ. ಆದ್ದರಿಂದ ನಿಮ್ಮ ಸೋಮಾರಿತನಕ್ಕೂ ಮಿತಿಯಿರಲಿ.

ಅರಸಿಕ

ಅರಸಿಕ

ಅರಸಿಕ ಗಂಡನನ್ನು ಹೆಂಡತಿ ಇಷ್ಟಪಡುವುದಿಲ್ಲ. ಈ ರೀತಿಯಿದ್ದರೆ ಸಂಸಾರದಲ್ಲಿ ಜಗಳ ಉಂಟಾಗುವುದು, ವಿಚ್ಛೇದನ ಕೂಡ ಉಂಟಾಗಬಹುದು.

ತುಂಬಾ ಸೆಕ್ಸ್ ವಿಷಯಗಳಿಗೆ ಮಾತನಾಡುವವನು

ತುಂಬಾ ಸೆಕ್ಸ್ ವಿಷಯಗಳಿಗೆ ಮಾತನಾಡುವವನು

ಪ್ರೇಮಿಗಳ ನಡುವೆ, ಗಂಡ-ಹೆಂಡತಿಯ ನಡುವೆ ಸೆಕ್ಸ್ ಮಾತು ಬರುವುದು ಸಹಜ. ಆದರೆ ಬರೀ ಅದರ ಬಗ್ಗೇ ಮಾತನಾಡುತ್ತಿದ್ದರೆ ಅಂತವನ ಜೊತೆ ಜೀವನ ಮಾಡುವುದು ಹೆಣ್ಣಿಗೆ ಮುಜುಗರದ ಸಂಗತಿಯಾಗಿದೆ.

ಬೇಜಾವ್ದಾರಿ

ಬೇಜಾವ್ದಾರಿ

ಪುರುಷನಾದರೆ ಜವಬ್ದಾರಿ ಇರಬೇಕೆಂದು ಬಯಸುತ್ತಾರೆ. ಆದರೆ ಬೇಜಾವ್ದಾರಿಯಿಂದ ಇದ್ದರೆ ಅಂತಹ ಸಂಸಾರದಲ್ಲಿ ಜಗಳ, ವಿರಸ ಕಂಡು ಬಂದು ಸಂಬಂಧ ಹಾಳಾಗಬಹುದು. ತನಗೆ ರಕ್ಷಣೆ ಕೊಡುವ, ಜವಬ್ದಾರಿಯಿಂದ ವರ್ತಿಸುವ ಗಂಡನನ್ನೇ ಪ್ರತಿಯೊಂದು ಹೆಣ್ಣು ಬಯಸುವುದು.

ಸಂಶಯ

ಸಂಶಯ

ಸಂಶಯ ಸಂಬಂಧದಲ್ಲಿ ಯಾರಿಗೆ ಇದ್ದರೂ ಆ ಸಂಸಾರ ನೆಟ್ಟಗೆ ಇರುವುದಿಲ್ಲ. ಆದ್ದರಿಂದ ಸಂಶಯ ಅನ್ನುವುದು ಇಬ್ಬರ ಮನಸ್ಸಿನಲ್ಲಿ ಇಲ್ಲದಿರಲಿ.

<blockquote class="twitter-tweet blockquote"><p>ಸಂಬಂಧದಲ್ಲಿ ಹೊಂದಾಣಿಕೆ ಮಾಡಬಾರದ ವಿಷಯಗಳಿವು! <a href="http://t.co/vhs9hbTqxJ" title="/relationship/2013/04/things-that-should-not-be-tolerated-005125.html">kannada.boldsky.com/relationship/2…</a> <a href="https://twitter.com/search/%23Marriage">#Marriage</a></p>— Boldsky Kannada (@BoldskyKa) <a href="https://twitter.com/BoldskyKa/status/321570192398364672">April 9, 2013</a></blockquote> <script async src="//platform.twitter.com/widgets.js" charset="utf-8"></script>
English summary

Types Of Men Women Hate! | Love And Relationship | ಇಂತಹ ಪುರುಷನೆಂದರೆ ಹೆಣ್ಣಿಗೆ ಅಲರ್ಜಿ! |ಪ್ರೀತಿ ಮತ್ತು ಸಂಬಂಧ

Women have some choice in liking a man. These are few stereotypes of men that can make a woman develop hatred towards them. Here is a list of types of men women hate the most.&#13;
X
Desktop Bottom Promotion