For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಹೊಂದಾಣಿಕೆ ಮಾಡಬಾರದ ವಿಷಯಗಳಿವು!

|

ಒಬ್ಬರ ಗುಣದಂತೆ ಮತ್ತೊಬ್ಬರ ಗುಣ ಇರಲು ಸಾಧ್ಯವೇ? ಆದ್ದರಿಂದ ನಮ್ಮ ಬಾಳ ಸಂಗಾತಿ ಆಗುವವರು ನಮ್ಮ ಗುಣದಂತೆ ಇರಲ್ಲ ಅಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣವಿದ್ದರೆ ಸಾಕಪ್ಪ ಎಂದಷ್ಟೇ ಬಯಸುತ್ತೇವೆ. ಆದರೆ ಈ ಹೊಂದಾಣಿಕೆಗೂ ಒಂದು ಮಿತಿ ಇರಬೇಕು!

ಸುಂದರವಾದ ಬದುಕಿಗಾಗಿ ಹೊಂದಾಣಿಕೆ ಗುಣ ಇರಬೇಕು. ಆದರೆ ಕೆಲವೊಂದು ವಿಷಯಗಳನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವೆ ಎನ್ನುವುದಾದರೆ ನಿಮ್ಮ ಜೀವನ ನರಕವಾಗಬಹುದು, ನೆನಪಿರಲಿ.

ನಿಮ್ಮ ಪ್ರೇಮಿ/ಸಂಗಾತಿಯಲ್ಲಿ ಈ ಕೆಳಗಿನ ಗುಣಗಳಿದ್ದರೆ ಹೊಂದಾಣಿಕೆಯ ಅಗತ್ಯವಿಲ್ಲ ಅನ್ನುವುದು ನನ್ನ ಅನಿಸಿಕೆ, ನೀವೇನಂತೀರಿ?

Things That Should Not Be Tolerated

ನಡುವಳಿಕೆ ಮತ್ತು ಹಿಂಸೆ
ಸಣ್ಣ ಪುಟ್ಟ ಜಗಳ, ವಿರಸ ಇವೆಲ್ಲಾ ಪ್ರತಿಯೊಂದು ಜೋಡಿಗಳ ನಡುವೆ ಕಂಡು ಬರುವುದು ಸಹಜ. ಕೆಲವೊಮ್ಮೆ ಜೋರು ಜಗಳ ಕೂಡ ಉಂಟಾಗಬಹುದು. ಆದರೆ ಅದು ಕೆಲವು ಕ್ಷಣಗಳಲ್ಲಿ ಅಥವಾ ದಿನಗಳಲ್ಲಿ ಕೋಪ, ತಾಪಗಳನ್ನು ಮರೆತು ಒಂದಾಗಿ ಬಾಳುವುದು ಸಹಜ. ಆದರೆ ಏನು ಮಾಡಿದರೂ ತಮ್ಮ ಕೆಟ್ಟ ನಡುವಳಿಕೆ ತಿದ್ದಿಕೊಳ್ಳದವರ ಜೊತೆಗೆ, ಹಿಂಸೆ ಕೊಡುವವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವ ಅವಶ್ಯಕತೆಯೂ ಇಲ್ಲ ಅಲ್ಲವೇ?

ಕೆಟ್ಟ ಪದಗಳ ಬಳಕೆ
ಆಡಿದ ಮಾತನ್ನು ತಿರುಗಿಸಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೈಯ್ಯುವಾಗ ಪದಗಳ ಬಳಕೆ ಬಗ್ಗೆ ಗಮನ ಇರಬೇಕು. ನಮ್ಮ ಮಾತಿನಲ್ಲೂ ನಿಗಾ ಇರಬೇಕು. ಕೆಟ್ಟ ಪದಗಳಿಂದ ನಿಮ್ಮನ್ನು ಹೀಯಾಳಿಸುತ್ತಾ ಇರುವವರ ಜೊತೆ ಬಾಳ್ವೆ ಮಾಡುವುದು ಅಂದರೆ ಆಗದ ಮಾತು.

ಮೋಸ
ಸಂಬಂಧದಲ್ಲಿ ಮುಖ್ಯವಾಗಿ ಇರಬೇಕಾದದು ನಂಬಿಕೆ. ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಂಡು ನಮ್ಮ ನಂಬಿಕೆಗೆ ಅರ್ಹರಾಗದ ವ್ಯಕ್ತಿಯ ಜೊತೆ ಹೊಂದಾಣಿಕೆಯ ಅವಶ್ಯಕತೆ ಇದೆಯೇ?

ನಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡುವುದು
ಈ ನಡುವಳಿಕೆ ಸಾಮಾನ್ಯವಾಗಿ ಕೆಲ ಪುರುಷರಲ್ಲಿ ಕಂಡು ಬರುತ್ತದೆ. ಅವರ ಜೊತೆ ಹಲವು ವರ್ಷ ಬಾಳಿರುತ್ತೇವೆ. ಮಧ್ಯದಲ್ಲಿ ಯಾರೋ ಒಬ್ಬಳು ಅವನಿಗೆ ಮುಖ್ಯವಾಗುತ್ತಾಳೆ. ಏನು ಹೇಳಿದರೂ ಸೀರಿಯಸ್ ಆಗಿ ತೆಗೆದುಕೊಳ್ಳದೇ ಇದ್ದರೆ ಅಂತವರ ಜೊತೆ ಬಾಳುವುದು ಕಷ್ಟ. ಈ ರೀತಿ ಕಂಡು ಬಂದರೆ ನಿಮ್ಮ ಸಂಗಾತಿ ಜೊತೆ ಇದರ ಬಗ್ಗೆ ಹೇಳಿ. ಆಗಲೂ ಕೇಳದಿದ್ದರೆ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ಇರುತ್ತೀರಾ? ಇದರ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.

ಸಂಶಯ
ಪೊಸೆಸಿವ್ ನೆಸ್ ಸಾಮಾನ್ಯವಾಗಿ ಇರುತ್ತದೆ. ಅದೇ ಮಿತಿ ಮೀರಿ ಸಂಶಯಕ್ಕೆ ತಿರುಗಿದರೆ ಅವರ ಜೊತೆ ಸಂಸಾರ ನಡೆಸುವುದು ತುಂಬಾ ಕಷ್ಟವಾಗುವುದು.

ನಿಮ್ಮನ್ನು ಕೀಳಾಗಿ ನೋಡುವುದು, ಸುಳ್ಳು ಹೇಳುವುದು
ನಮ್ಮನ್ನು ಕೀಳಾಗಿ ನೋಡುವವರು ನಮಗೆ ಯಾವತ್ತೂ ಗೌರವ ಕೊಡುವುದಿಲ್ಲ ಅನ್ನುವುದು ನೆನೆಪಿರಲಿ. ಗಂಡ-ಹೆಂಡತಿಯ ನಡುವೆ ಸುಳ್ಳು ಇರಬಾರದು, ಅಲ್ಲಿ ನಂಬಿಕೆ ಮಾತ್ರ ಇರಬೇಕು. ನಮ್ಮ ಸಂಗಾತಿ ಒಬ್ಬ ಸುಳ್ಳುಗಾರ ಎಂದು ಗೊತ್ತಾದ ತಕ್ಷಣ ಕ್ಷಣದಿಂದ ಅವರ ಮೇಲೆ ಇಟ್ಟ ನಂಬಿಕೆ ಕಡಿಮೆಯಾಗುತ್ತಾ ಬರುತ್ತದೆ.

ನೀವು ಸಾಕು, ಮಕ್ಕಳು ಬೇಡ
ಇದು ಎರಡನೇ ಮದುವೆಯಲ್ಲಿ , ಮೊದಲನೇ ಸಂಬಂಧದಿಂದ ಮಕ್ಕಳಾಗಿದ್ದರೆ ಆ ವ್ಯಕ್ತಿ ನಿಮ್ಮ ಜೊತೆ ಮಕ್ಕಳನ್ನು ಸ್ವೀಕರಿಸಲು ತಯಾರಿಲ್ಲದಿದ್ದರೆ ಮದುವೆಯಾದರೂ ನೆಮ್ಮದಿಯಿರುವುದಿಲ್ಲ.

English summary

Things That Should Not Be Tolerated In a Relationship | ಸಂಬಂಧದಲ್ಲಿ ಈ ಹೊಂದಾಣಿಕೆ ಮಾಡಲೇಬಾರದ ವಿಷಯಗಳಿವು

There could be many things about your partner that you don’t like. However for a successful relationship you need to have trust, understanding, compromise & patience. If this stuff is not proper, then it’s time to think seriously.
X
Desktop Bottom Promotion