For Quick Alerts
ALLOW NOTIFICATIONS  
For Daily Alerts

ನೀವು ಒಳ್ಳೆಯ ಹುಡುಗನ ಹುಡುಕಾಟದಲ್ಲಿ ಇದ್ದೀರಾ?

|

ಜೀವನದಲ್ಲಿ ನಮ್ಮ ಬಾಳ ಸಂಗಾತಿಯ ಆಯ್ಕೆಯಲ್ಲಿ ಎಡವಿದರೆ ಮತ್ತೆ ಚಿಂತಿಸಿ ಫಲವಿಲ್ಲ. " ಮದುವೆಗೆ ನಮ್ಮ ಹುಡುಗಿಗೆ ಹುಡುಗ ಹುಡುಕುತ್ತಿದ್ದೇವೆ" ಎಂದು ಮನೆಯವರು ಹೇಳಿದರೆ ಸಾಕು 'ನನಗೆ ಗೊತ್ತಿರುವ ಒಬ್ಬ ಒಳ್ಳೆಯ ಹುಡುಗ ಇದ್ದಾನೆ, ನಿಮ್ಮ ಮಗಳಿಗೆ ಆಲೋಚಿಸುವಿರಾ' ಎಂದು ಕೇಳಿಕೊಂಡು ಪರಿಚಯಸ್ಥರು ಬರುತ್ತಾರೆ.

ಮನೆಯವರಿಗೆ ತಮ್ಮ ಮಗಳನ್ನು ಒಳ್ಳೆಯ ಹುಡುಗನಿಗೆ ಕೊಟ್ಟು ಮದುವೆ ಮಾಡಿಬಿಡಬೇಕೆಂಬ ಆಸೆ ಇರುತ್ತದೆ. ಹುಡುಗ ಒಳ್ಳೆಯವ ಎಂದು ಕೇಳಿದ ತಕ್ಷಣ ಕಣ್ಣು-ಕಿವಿ ನೆಟ್ಟಗಾಗಿ ಅವನ ಮನೆಯವರ ಬಗ್ಗೆ, ಅವನ ಕೆಲಸದ ಬಗ್ಗೆ ವಿಚಾರಿಸಿ ನಮ್ಮ ಮಗಳಿಗೆ ಅನುರೂಪವಾದ ಹುಡುಗ ಎಂದು ನಿಶ್ಚಯ ಮಾಡಿಯೇ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಹೆಣ್ಣಿಗೆ ಅವನ ಬಗ್ಗೆ ತಿಳಿದುಕೊಳ್ಳುವ ಸಮಯಾವಕಾಶ ತುಂಬಾ ಕಮ್ಮಿ ಇರುತ್ತದೆ.

6 Ways To Find A Good Man For Life

ಹುಡುಗನನ್ನು ಒಳ್ಳೆಯವ ಎಂದು ಗುರುತಿಸುವ ಮಾನದಂಡ ಯಾವುದು? ಅವನ ಹುದ್ದೆಯೇ? ಅವನ ಅಂತಸ್ತೇ? ಅವನ ಮನೆತನವೇ? ಇಲ್ಲ ಅವನ ನಡುವಳಿಕೆಯೇ? ಒಳ್ಳೆಯವ ಎನ್ನಲು ಇವೇ ಮಾನದಂಡವಾದರೆ ಮೊದಲ ಮೂರು ವಿಷಯಗಳನ್ನು ನೋಡಿ ತಿಳಿದುಕೊಳ್ಳಬಹುದು , ಆದರೆ ಗುಣವನ್ನ? ಅವನ ಜೊತೆ ಬಾಳಿಯೇ ತಿಳಿದುಕೊಳ್ಳಬೇಕು. ಎಷ್ಟೋ ಬಾರಿ ಹುಡುಗನ ನೈಜ ಗುಣ ಅವನ ಹೆತ್ತ ತಂದೆ-ತಾಯಿಗೆ ಕೂಡ ಗೊತ್ತಿರುವುದಿಲ್ಲ!

ಹಾಗಾದರೆ ಲವ್ ಮಾಡಿ ಮದುವೆಯಾಗುವುದಾದರೆ ಅವನ ಗುಣ ಸಂಪೂರ್ಣ ತಿಳಿಯಲು ಸಾಧ್ಯವೇ? ಖಂಡಿತವಿಲ್ಲ. ಹಂಗೆ ನೋಡುವುದಾದರೆ ಪ್ರೀತಿಸಿ ಮದುವೆಯಾಗಿ, ಕೊನೆಗೆ ನಂಬಿ ಬಂದವಳಿಗೆ ಮೋಸ ಮಾಡಿ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಎಷ್ಟೋ ಗಂಡಸರನ್ನು(!)ಸುತ್ತ-ಮುತ್ತ ನೋಡುತ್ತಿದ್ದೇವೆ ತಾನೇ?

ಹಾಗಾದರೆ ಹುಡುಗ ಒಳ್ಳೆಯವ ಎಂದು ಗುರುತಿಸುವುದಾದರೂ ಹೇಗೆ? ಅವರ ನಡುವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ಅವನ ಬಗ್ಗೆ ತಿಳಿದುಕೊಳ್ಳಬಹುದು. ಅದರಲ್ಲೂ ಹುಡುಗನಲ್ಲಿ ಈ ಕೆಳಗಿನ ಗುಣಗಳಿದ್ದರಂತೂ ಅವನು ಒಳ್ಳೆಯವ, ನಿಮ್ಮ ನಂಬಿಕೆಗೆ ಮೋಸ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬಹುದು.

* ಆಕರ್ಷಕವಾಗಿದ್ದಾನಾ?
ಇಲ್ಲಿ ನಾವು ಅವನು ಸುಂದರವಾಗಿ, ಸೆಕ್ಸಿಯಾಗಿ ಕಾಣುತ್ತಿದ್ದಾನಾ ಎಂದು ಕೇಳುತ್ತಿಲ್ಲ. ಅವನ ಗುಣ ಆಕರ್ಷಕವಾಗಿದೆಯಾ ಎಂದು ಗಮನಿಸಿದರೆ ಸಾಕು. ಬೋಲ್ಡ್, ಉತ್ಸಾಹಿ, ಒಳ್ಳೆಯ ಚಿಂತನೆ ಇವೆಲ್ಲಾ ಇದ್ದರೆ ಅವನು ಗುಣದಲ್ಲಿ ಒಳ್ಳೆಯವನಾಗಿರುತ್ತಾನೆ.

*ಸ್ನೇಹಮಯಿ
ಅವನು ಅವನ ಸ್ನೇಹಿತರ ಜೊತೆ ಹಾಗೂ ಅಪರಿಚಿತರ ಜೊತೆ ಹೇಗೆ ವರ್ತಿಸುತ್ತಾನೆ ಎನ್ನುವುದನ್ನು ಗಮನಿಸುತ್ತಾರೆ. ಎಲ್ಲರಿಗೆ ಅವನು ಉತ್ತಮ ಸ್ನೇಹಿತನಾಗಿದ್ದರೆ ಅವನು ನಿಮಗೆ ಒಳ್ಳೆಯ ಗುಣವಿರುವ ಬಾಳ ಸಂಗಾತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

* ಮಾತನಾಡುವ ಶೈಲಿ
ಹೊಂದಾಣಿಕೆ ಇಲ್ಲದಿದ್ದರೆ ಸಂಸಾರ ಕಷ್ಟ. ಅವನ ಮಾತೇ ಸರಿ ಎಂದು ವಾದ ಮಾಡುವುದು, ನಾನೇ ಗ್ರೇಟ್ ಎಂಬ ವರ್ತನೆ ಅವನಲ್ಲಿ ಕಂಡರೆ ಅವನು ಎಂತಹ ದೊಡ್ಡ ಹುದ್ದೆಯಲ್ಲಿರಲಿ, ಎಷ್ಟೇ ಸಂಬಳವಿರಲಿ ಅವನ ಜೊತೆಗಿನ ಜೀವನ ಕಷ್ಟವಾಗಬಹುದು.

* ಸತ್ಯ
ಒಬ್ಬ ಉತ್ತಮ ಸಂಗಾತಿ ತನ್ನ ಬಾಳಾ ಸಂಗಾತಿಯಿಂದ ಯಾವುದೇ ವಿಷಯವನ್ನು ಮರೆ ಮಾಚುವುದಿಲ್ಲ.

ನಿಮ್ಮ ಏಳಿಗೆಯ ಬಗ್ಗೆಯೂ ಯೋಚಿಸುತ್ತಾನಾ?

ಬರೀ ತನ್ನ ಕೆರಿಯರ್ ಬಗ್ಗೆ ಯೋಚಿಸದೆ ನಿಮ್ಮ ಭವಿಷ್ಯದತ್ತ, ನಿಮ್ಮ ಕೆರಿಯರ್ ಬಗ್ಗೆ ಯೋಚಿಸಿ, ಪ್ರೋತ್ಸಾಹ, ಬೆಂಬಲ ನೀಡುವವನನ್ನು ಬಾಳ ಸಂಗಾತಿಯಾಗಿ ಪಡೆಯುವುದು ಪುಣ್ಯ.

ಜವಬ್ದಾರಿ
ಪುರುಷರಿಗೆ ಜವಬ್ದಾರಿಗೆ ಹೆದರುವ ಗುಣವಿರಬಾರದು. ಅವನ ಮನೆಯವರ ಬಗ್ಗೆ ಅವನು ಜವಬ್ದಾರಿಯಿಂದ ವರ್ತಿಸುವವನಾದರೆ ನಿಮ್ಮನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾನೆ, ಅದರಲ್ಲಿ ಸಂಶಯ ಬೇಡ.

English summary

6 Ways To Find A Good Man For Life | Love And Relationship | ಒಳ್ಳೆಯ ಬಾಳ ಸಂಗಾತಿಯ ಹುಡುಕಾಟದಲ್ಲಿ ಇದ್ದೀರಾ? | ಪ್ರೀತಿ ಮತ್ತು ಸಂಬಂಧ

Sharing your love and life with a good man will be the luckiest thing in your life.But, it is not so easy to find out a good man. A smart woman will use not only her soft mindset, but also her wisdom to decide and select the perfect man for her life.
X
Desktop Bottom Promotion