For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಬಗ್ಗೆ ಈ ಗಾಸಿಪ್ ಗಳಿಗೆ ನೀವೇನಂತೀರಿ?

|

ಮಹಿಳೆಯರು ಜೊತೆ ಸೇರಿದರೆ ಸಾಕು ಬರೀ ಗಾಸಿಪ್ ಗಳನ್ನು ಹೇಳುತ್ತಾ ಕಾಲ ಕಳೆಯುತ್ತಾರೆ ಎಂಬ ಧೋರಣೆ ಸ್ತ್ರೀಯರ ಬಗ್ಗೆ ಇದೆ. ಅದಲ್ಲದೆ ಸ್ತ್ರೀಯರು ಸ್ನೇಹದ ವಿಷಯದಲ್ಲೂ ಸ್ವಾರ್ಥಿಗಳಾಗಿರುತ್ತಾರೆ. ತನ್ನ ಸ್ನೇಹಿತೆ ಮುಂದೆ ಬರುವುದು ಮತ್ತೊಬ್ಬಳಿಗೆ ಆಗುವುದಿಲ್ಲ ಹೀಗೇ ಸ್ತ್ರೀಯರ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಆ ಅಭಿಪ್ರಾಯಗಳು ಸರಿಯೇ, ತಪ್ಪೇ ಅನ್ನುವುದು ಅವರವರ ಅನುಭವಕ್ಕೆ ಬಿಟ್ಟದ್ದು.

ಅದರಲ್ಲೂ ಸ್ತ್ರೀಯರು ಜೊತೆ ಸೇರಿ ಬಿಟ್ಟರೇ ಬರೀ ಗಾಸಿಪ್ ಮಾತನಾಡುತ್ತಾರೆ ಅನ್ನುವ ಗಾಸಿಪ್ ಸ್ತ್ರೀಯರ ಮೇಲಿದೆ. ಸ್ತ್ರೀಯರ ಬಗ್ಗೆ ಇರುವ ಈ ಗಾಸಿಪ್ ಗಳು ಗಾಸಿಪ್ ಮಾತ್ರವೇ ಅಥವಾ ಸತ್ಯಾಂಶ ಇದೆಯೇ ಅನ್ನುವುದನ್ನು ನೀವೇ ಹೇಳಬೇಕಷ್ಟೆ.

Stereotypes About Women, Women And Life

ಶಾಪಿಂಗ್: ಮಹಿಳೆಯರಿಗೆ ಶಾಪಿಂಗ್ ಅಂದರೆ ತುಂಬಾ ಇಷ್ಟ. ಗಂಟೆಗಟ್ಟಲೆ ಶಾಪಿಂಗ್ ನಲ್ಲಿ ಕಳೆಯುತ್ತಾರೆ ಎಂದೆಲ್ಲಾ ಹೇಳುತ್ತಾರೆ. ಎಲ್ಲರೂ ಈ ರೀತಿಯಲ್ಲ ಅನ್ನುವುದು ನನ್ನ ವಾದ. ಕೆಲ ಪುರುಷರು ಕೂಡ ಸಾಕಷ್ಟು ಸಮಯವನ್ನು ಶಾಪಿಂಗ್ ನಲ್ಲಿ ಕಳೆಯುತ್ತಾರೆ.

ಅಡುಗೆ ಕಲಿಯಲು ಇಷ್ಟ: ಮಹಿಳೆಯರಿಗೆ ಹೊಸ ಅಡುಗೆಯನ್ನು ತಿಳಿಯುವುದು ಅಂದರೆ ತುಂಬಾ ಇಷ್ಟ. ಅಡುಗೆ ಮನೆ ಅಂದರೆ ಅಲರ್ಜಿ ಎನ್ನುವ ಎಷ್ಟೋ ಮಹಿಳೆಯರಿದ್ದಾರೆ.

ತಮ್ಮ ಮಕ್ಕಳ ಬಗ್ಗೆ ತುಂಬಾ ಹೊಗಳುತ್ತಾರೆ: ಪ್ರತಿಯೊಬ್ಬ ತಾಯಿಗೆ ತನ್ನ ಮಕ್ಕಳೇ ಸುಂದರ, ಬುದ್ಧಿವಂತರಾಗಿರುತ್ತಾರೆ. ತಮ್ಮ ಮಕ್ಕಳ ಬಗ್ಗೆ ಇನ್ನೊಬ್ಬರಲ್ಲಿ ಹೊಗಳುವುದು ಎಲ್ಲಾ ಅಮ್ಮಂದಿರಿಗೆ ಪ್ರಿಯವಾದ ಕೆಲಸ ಅನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ.

ಪುರುಷರ ತಪ್ಪು ಕಂಡು ಹಿಡಿಯುವುದು: ಸ್ತ್ರೀಯರು ಜೊತೆ ಸೇರಿದಾಗ ಪುರುಷರ ತಪ್ಪುಗಳನ್ನೇ ಹೇಳುತ್ತಾರೆ ಅನ್ನುವ ಗಾಸಿಪ್ ಇದೆ. ಆದರೆ ಹೆಚ್ಚಿನ ಮಹಿಳೆಯರು ತನ್ನ ಗಂಡನನ್ನು ವೃಥಾ ಇನ್ನೊಬ್ಬರ ಮುಂದೆ ಹೊಗಳುವುದನ್ನು ಕಂಡಿದ್ದೇನೆ.

ಗಾಸಿಪ್: ಗಾಸಿಪ್ ಅಂದರೆ ಮಹಿಳೆಯರಿಗೆ ತುಂಬಾ ಇಷ್ಟ. ಅವಳು ಹೀಗೆ, ಇವನು ಹೀಗೆ ಎಂದೇ ಕಾಲ ಕಳೆಯುತ್ತಾರೆ. ಇದು ಸತ್ಯಕ್ಕೆ ಹತ್ತಿರವಾದ ಮಾತು ಅನ್ನುವುದು ನನ್ನ ಅಭಿಪ್ರಾಯ. ಇವುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.

English summary

Stereotypes About Women | Women And Life | ಮಹಿಳೆಯರ ಬಗ್ಗೆ ಇರುವ ಗಾಸಿಪ್ ಗಳು | ಮಹಿಳೆ ಮತ್ತು ಜೀವನ

Why do women actually gossip over? That is the question that we have tried to answer here. On the occasion of Women's Day, lets find out some facts about female bonding.
X
Desktop Bottom Promotion