For Quick Alerts
ALLOW NOTIFICATIONS  
For Daily Alerts

ಇಂತವರ ಜೊತೆ ಲಗ್ನವಾದರೆ ಸುಖವಾಗಿರಲು ಸಾಧ್ಯವೇ?

|

ನೂರು ಸುಳ್ಳು ಹೇಳಿ ಒಂದು ಮದುವೆಯನ್ನು ಮಾಡಬಹುದು ಎಂದು ಹೇಳುವುದನ್ನು ಕೇಳಿದ್ದೇನೆ. ಆದರೆ ನನ್ನ ಪ್ರಕಾರ ಮದುವೆಯಲ್ಲಿ ಒಂದು ಸುಳ್ಳೂ ಇರಬಾರದು. ಮದುವೆ ಅನ್ನುವ ಅನುಬಂಧ ಗಟ್ಟಿಯಾಗಿರಬೇಕೆಂದರೆ ದಂಪತಿಗಳ ನಡುವೆ ಪ್ರೀತಿ ಇರಬೇಕು. ಆ ಪ್ರೀತಿಗೆ ಬುನಾದಿ ನಂಬಿಕೆ.

ಮದುವೆ ಗೊತ್ತಾದಾಗ ಪ್ರತಿಯೊಬ್ಬರೂ ಸಂತೋಷ ಪಡುತ್ತಾರೆ. ಆದರೆ ಮದುವೆಗೆ ದಿನಾಂಕ ಗೊತ್ತಾದ ಮೇಲೆ ನಾವು ಬಾಳ ಸಂಗಾತಿ ಆಗಿ ಸ್ವೀಕರಿಸುತ್ತಿರುವವರ ಬಗ್ಗೆ ಏನಾದರೂ ಕೆಟ್ಟ ಸುದ್ಧಿ ಕೇಳಿ ಬಂದರೆ ಏನು ಮಾಡಬೇಕೆಂಬುದು ತೋಚುವುದೇ ಇಲ್ಲ. ಜಾತಕ, ಗೋತ್ರ ಎಲ್ಲಾ ನೋಡುತ್ತೇವೆ, ಆದರೆ ಒಬ್ಬರ ಗುಣದ ಬಗ್ಗೆ ತಿಳಿಯಲು ಯಾರಿಗೂ ಸಾಧ್ಯವಿಲ್ಲ.

Is It Late To Call Off The Wedding?

ಕೆಲವರು ಮದುವೆಗೆ ಮೊದಲು "ಮಹಾ ಪೋಲಿ" ಎಂದು ಬಿರುದು ಗಳಿಸಿದ್ದು, ಮದುವೆಯ ನಂತರ ಶ್ರೀರಾಮ ಚಂದ್ರನಂತೆ ಬದಲಾದವರನ್ನೂ ನೋಡಿದ್ದೇನೆ, ತುಂಬಾ ಒಳ್ಳೆಯವನು/ಳು ಮುಂದೆ ಸಂಸಾರವನ್ನು ಚೆಂದವಾಗಿ ನಡೆಸುತ್ತಾರೆ ಎಂದು ಮನೆಯವರು ಭರವಸೆಯಿಟ್ಟು ಮದುವೆ ಮಾಡಿಸಿ, ಕೊನೆಗೆ ಕೆಟ್ಟ ಚಟಗಳಿಗೆ ದಾಸರಾಗಿ ಸಂಸಾರವನ್ನು ಬೀದಿಗೆ ತಂದಂತಹ ಎಷ್ಟೋ ಜನರು ನಮ್ಮ ನಡುವೆ ಇದ್ದರೆ. ಮನುಷ್ಯನ ಗುಣ ಯಾವಾಗ, ಹೇಗೆ ಬದಲಾಗುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಆದರೆ ಮನುಷ್ಯನ ಕೆಲವೊಂದು ಗುಣಗಳಿಂದ ಅವನು/ಅವಳು ಹೀಗೆಯೇ ಇರುತ್ತಾಳೆ ಎಂದು ಹೇಳಬಹುದು!

ಮದುವೆ ಅನ್ನುವ ಶುಭ ಕಾರ್ಯಕ್ಕೆ ಅನೇಕ ವಿಘ್ನಗಳಿರುತ್ತದೆ. ನಮಗೆ ಆಗದವರು ಅಥವಾ ಅವರಿಗೆ ಆಗದವರು ಬಂದು ನಿಮ್ಮ ಬಾಳ ಸಂಗಾತಿ ಆಗುವವರ ಬಗ್ಗೆ ಇಲ್ಲ ಸಲ್ಲದ ಮಾತು ಹೇಳಬಹುದು. ಇದನ್ನು ಕೇಳಿ ಮದುವೆ ಮುರಿಯುವ ಸಾಹಸಕ್ಕೆ ಕೈ ಹಾಕಬಾರದು, ಆದರೆ ಸತ್ಯ ನಿಮ್ಮ ಟೇಬಲ್ ಮೇಲಿದ್ದರೆ ಅದನ್ನು ನೋಡಿ ಕಣ್ಣು ಮುಚ್ಚಿಕೊಂಡು ಇರಬಾರದು. ನಿಮ್ಮ ಬಾಳಸಂಗಾತಿಯಾಗಿ ಬರುವವರಲ್ಲಿ ಈ ಕೆಳಗಿನ ವರ್ತನೆಗಳು ಕಂಡು ಬಂದರೆ ಅಂತಹವರನ್ನು ಮದುವೆಯಾಗುವುದರ ಬಗ್ಗೆ ಎರಡನೇ ಬಾರಿ ಯೋಚಿಸುವುದು ಒಳ್ಳೆಯದು.

ಸುಳ್ಳು ಹೇಳುವುದು
ನೀವು ಮದುವೆಯಾಗುವವರೆಗೆ ಈಗಾಲೇ ಒಂದು ಸಂಬಂಧವಿದ್ದು, ಅದು ನಿಮಗೆ ತಿಳಿದು ಬಂದು ಅವರು ಈ ವಿಷಯವನ್ನು ನಿಮ್ಮಿಂದ ಮುಚ್ಚಿಟ್ಟು ಮದುವೆಯಾಗ ಹೊರಟ್ಟಿದ್ದರೆ ಅಂತವರನ್ನು ಮದುವೆಯಾಗದಿರುವುದೇ ಒಳ್ಳೆಯದು. ಬರೀ ಸಂಬಂಧ ಮಾತ್ರವಲ್ಲ ಬೇರೆ ಯಾವುದೇ ವಿಷಯದಲ್ಲಿ ಸುಳ್ಳು ಹೇಳಿದ್ದು ಅದು ನಿಮ್ಮ ಭವಿಷ್ಯಕ್ಕೆ ಬಾಧಿಸುವಂತೆ ಇದ್ದರೆ ನಿಮ್ಮ ಭವಿಷ್ಯವನ್ನು ಹಾಳು ಮಾಡದಿರುವುದು ಒಳ್ಳೆಯದು.

ಮನೆ ಸಮಸ್ಯೆ
ಮದುವೆಯಾಗುವಾಗ ಅವನ/ಅವಳ ಮನೆಯವರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಮದುವೆಯಾಗಿ ಬಾಳುವುದು ನೀವಿಬ್ಬರು ಆದರೂ ಮನೆಯವರ ಪ್ರಭಾವ ನಿಮ್ಮ ಸಂಸಾರದ ಮೇಲೆ ಪರಿಣಾಮ ಬಿದ್ದೇ ಬೀಳುತ್ತದೆ. ಆ ಮನೆಯವರ ನಡುವಳಿಕೆಗಳು ನಿಮಗೆ ಹೊಂದುವಂತೆ ಇದೆಯೇ ಎಂದು ನೋಡಿ ಇಲ್ಲ ಅಂದರೆ ಅಂತವರ ಜೊತೆ ಬಾಳ್ವೆ ಮಾಡುವುದು ನಿಮಗೆ ಕಷ್ಟವಾಗಬಹುದು.

ವರ್ತನೆಯಲ್ಲಿ ಬದಲಾವಣೆ
ನಿಮ್ಮ ಬಾಳ ಸಂಗಾತಿಯನ್ನು ಮೆಚ್ಚಿ ಮದುವೆಗೆ ಓಕೆ ಎಂದಿರುತ್ತೀರಿ. ಆದರೆ ಅವನು/ ಅವಳಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡು ಬಂದರೆ ಅದರ ಕಾರಣ ತಿಳಿದುಕೊಳ್ಳುವುದು ಒಳ್ಳೆಯದು.

ಮನದ ಮಾತು ಕೇಳಿ
ಮದುವೆ ಅನ್ನುವ ವಿಷಯದಲ್ಲಿ ಇತರರ ಮಾತು ಕೇಳುವ ಬದಲು ನಿಮ್ಮ ಮನದ ಮಾತು ಕೇಳಿ. ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಜೀವನ ಪೂರ್ತಿ ನೀವೇ ಕಷ್ಟ ಪಡಬೇಕು. ಆದ್ದರಿಂದ ನಿಮ್ಮ ಬಾಳ ಸಂಗಾತಿಯ ಆಯ್ಕೆ ವಿಷಯದಲ್ಲಿ ಎಚ್ಚರವಾಗಿರಿ.

English summary

Is It Late To Call Off The Wedding? | Marriage And Relationship | ಎಂತಹ ಸಂದರ್ಭದಲ್ಲಿ ಮದುವೆಯಿಂದ ಹಿಂತಿರುಗುವುದು ಒಳ್ಳೆಯದು | ಮದುವೆ ಮತ್ತು ಸಂಬಂಧ

Here are some signs that will tell you that it is better to cancel your wedding instead of getting stuck in a bad relationship forever.
X
Desktop Bottom Promotion