For Quick Alerts
ALLOW NOTIFICATIONS  
For Daily Alerts

ಫೇಸ್ ಬುಕ್ ನಲ್ಲಿ ಗುಟ್ಟು ರಟ್ಟಾದರೆ ಸಂಬಂಧ ಕಟ್

|

ಫೇಸ್ ಬುಕ್ ನಲ್ಲಿ ವ್ಯವಹರಿಸುವಾಗ ಹುಷಾರ್ ಆಗಿರಬೇಕು. ತಮ್ಮ ಗಂಡ ಹೆಂಡತಿಯ ನಡುವಿನ ವೈಯಕ್ತಿಕ ಜಗಳಗಳು ಫೇಸ್ ಬುಕ್ ಸ್ಟೇಟಸ್ ನಲ್ಲಿ ಬಂದರೆ ಅವರಿಬ್ಬರ ಸಂಬಂಧ ಮತ್ತಷ್ಟು ಹದಗೆಡುವುದು. ಫೇಸ್ ಬುಕ್ ನಿಂದ ಅನೇಕ ಸಂಸಾರಗಳು ಹಾಳಾಗಿವೆ. ಇತ್ತೀಚಿಗಷ್ಟೇ ಭಾರತದಲ್ಲಿ ನಡೆದ ವಿಚ್ಛೇದನ ಕೇಸ್ ಹೀಗೂ ಉಂಟೇ? ಅನ್ನುವಷ್ಟು ಜನರಲ್ಲಿ ಅಚ್ಚರಿಯನ್ನು ಮೂಡಿಸಿತು. ತನ್ನ ಗಂಡ ಫೇಸ್ ಬುಕ್ ನಲ್ಲಿ married ಎಂಬ ಸ್ಟೇಟಸ್ ಅಪ್ ಲೋಡ್ ಎಂಬ ಕಾರಣಕ್ಕೆ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲು ಹತ್ತಿದ್ದಳು.

ಫೇಸ್ ಬುಕ್ ಗಂಡ -ಹೆಂಡತಿಯ ನಡುವೆ ಮಾತ್ರವಲ್ಲ, ಫ್ರೆಂಡ್ಸ್ ಗಳ ನಡುವೆ ವೈಮನಸ್ಸು ತರುತ್ತಿದೆ. ನಾವು ಹಾಕಿದ ಫೋಟೊಗೆ ನನ್ನ ಫ್ರೆಂಡ್ ಲೈಕ್ ಮಾಡಿಲ್ಲವೆಂದು ಕೋಪಗೊಂಡರೆ, ಫೇಸ್ ಬುಕ್ ಸ್ಟೇಟಸ್ ನೋಡಿ ಮುರಿದು ಬಿದ್ದ ಮದುವೆಗಳೆಷ್ಟೋ.

ಅದರಲ್ಲೂ ಫೇಸ್ ಬುಕ್ ನಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೇವೆ, ಅವುಗಳ ಬಗ್ಗೆ ಎಚ್ಚರವಹಿಸದಿದ್ದರೆ ಫೇಸ್ ಬುಕ್ ನಿಂದಾಗಿ ಸಂಬಂಧ ಮುರಿದು ಕೊಲ್ಳುವ ಪರಿಸ್ಥಿತಿ ಬರಬಹುದು ಹುಷಾರ್!

Does FB Relationship Status Haunt You

1. ಫೇಸ್ ಬುಕ್ ನಲ್ಲಿ ನನ್ನ ಜೊತೆ ಚಾಟ್ ಮಾಡಲಿಲ್ಲ
ಆಫೀಸ್ ಗೆ ಹೋದಾಗ ಫೇಸ್ ಬುಕ್ ಓಪನ್ ಮಾಡುವ ಎಂದೆನಿಸಿ ಓಪನ್ ಮಾಡಿದಾಗ ನಿಮ್ಮ ಸಂಗಾತಿ ಆನ್ ಲೈನ್ ನಲ್ಲಿರುತ್ತಾರೆ. ಚಾಟ್ ನಲ್ಲಿ ಏನಾದರೂ ಕಳುಹಿಸುತ್ತೀರಿ, ಆದರೆ ಅವರಿಂದ ರಿಪ್ಲೈ ಬರುವುದಿಲ್ಲ ಇಷ್ಟೆಕ್ಕೆ ಕೋಪ ಬಂದಿರುತ್ತದೆ. ಸಂಜೆ ಮನೆಗೆ ಬರುತ್ತೀರಿ, ನಿಮ್ಮ ಸಂಗಾತಿಯನ್ನು ನೋಡಿದಾಗ ನಾನು ಚಾಟ್ ಮಾಡಿದರೂ ಇವಳಿಗೆ/ನಿಗೆ ಒಂದು ರಿಪ್ಲೈ ಕೊಡಲಾಗಲಿಲ್ಲ ಎಂದು ನಿಮ್ಮ ಕೋಪ ಮತ್ತಷ್ಟು ಹೆಚ್ಚಾಗುತ್ತದೆ. ಅಲ್ಲಗೆ ಆ ದಿನ ಜಗಳದಲ್ಲಿಯೇ ಎಂಡ್.

2. ಸಂದೇಹ
ಇನ್ನು ಕೆಲವರಿಗೆ ತನ್ನ ಬಾಳ ಸಂಗಾತಿ ತುಂಬಾ ಹೊತ್ತು ಆನ್ ಲೈನ್ ನಲ್ಲಿರುತ್ತಾರೆ, ಬೇರೆಯವರ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆಯೇ ಎಂಬ ಸಂದೇಹವಿರುತ್ತದೆ. ಸಂದೇಹ ಒಮ್ಮೆ ಬಂದರೆ ಮುಗಿಯಿತು. ತಮ್ಮ ಸಂಗಾತಿ ಫೇಸ್ ಬುಕ್ ಪಾಸ್ ವರ್ಡ್ ಕೇಳಿದರೆ ಕೊಡುವುದು ಒಳ್ಳೆಯದು. ಕೊಡದಿದ್ದರೆ ಸಂದೇಹ ಮತ್ತಷ್ಟು ಹೆಚ್ಚಾಗುವುದು. ಸಂದೇಹ ಸಂಸಾರದಲ್ಲಿ ಒಳ್ಳೆಯದಲ್ಲ.

3. ಗೆಳೆತನ
ಇನ್ನು ಫ್ರೆಂಡ್ಸ್ ಗಳ ಮಧ್ಯೆ ಸಾಕಷ್ಟು ಸಮಸ್ಯೆ ತರುತ್ತದೆ. ಅವಳು/ನು ನನ್ನ ಫೋಟೊ ಮಾತ್ರ ಟ್ಯಾಗ್ ಮಾಡಿಲ್ಲ ಅಂತ ಕೆಲವರು ಬೇಸರ ಪಟ್ಟುಕೊಂಡರೆ, ಕೆಲವರು ಗೆಳೆಯರು ಟ್ರಿಪ್ ಹೋದ ಫೋಟೊ ಹಾಕಿದನ್ನು ನೋಡಿ ಓ.. ನನಗೆ ಮಾತ್ರ ತಿಳಿಸಲಿಲ್ಲ ಎಂದು ಕೋಪ ಪಟ್ಟುಕೊಳ್ಳುತ್ತಾರೆ.

4. ಕುರುಡು ಪ್ರೀತಿ
ಫೇಸ್ ಬುಕ್ ನಲ್ಲಿ ಫ್ರೆಂಡ್ ಮಾಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಎಷ್ಟೋ ಜನರು ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿ ಮೋಸ ಹೋಗಿದ್ದಾರೆ, ಲೈಫ್ ಹಾಳು ಮಾಡಿ ಕೊಂಡಿದ್ದಾರೆ.

ಫೇಸ್ ಬುಕ್ ಒಂದು ಸಾಮಾಜಿಕ ತಾಣ, ನಿಮ್ಮ ನೆಟ್ ವರ್ಕ್ ಬೆಳೆಸಲು, ಹೊಸ ವಿಷಯನ್ನು ತಿಳಿಯಲು ಫೇಸ್ ಬುಕ್ ಬಳಸಿದರೆ ಒಳ್ಳೆಯದು. ವೈಯಕ್ತಿಕ ವಿಷಯಗಳ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕುವಾಗ ಎಚ್ಚರವಾಗಿರಿ. ವೈಯಕ್ತಿಕ ವಿಷಯ ಸಾಮಾಜಿಕವಾಗದಿದ್ದರೆ ಸಂಬಂಧ ಚೆನ್ನಾಗಿರುತ್ತದೆ ಅನ್ನುವುದೇ ನನ್ನ ಅಭಿಪ್ರಾಯ.

English summary

Does FB Relationship Status Haunt You? | Relationship And Facebook | ಫೇಸ್ ಬುಕ್ ಸಂಬಂಧವನ್ನು ಹಾಳು ಮಾಡುತ್ತಿದೆಯೇ? | ಸಂಬಂಧ ಮತ್ತು ಫೇಸ್ ಬುಕ್

There are lot of people who are stressed about their Facebook relationship status. Here are some incidences to show how our obsession with the 'relationship status' options is ruining our real relationships.
X
Desktop Bottom Promotion