For Quick Alerts
ALLOW NOTIFICATIONS  
For Daily Alerts

ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳಲು ಕಾರಣವೇನು?

|

ಅನೈತಿಕ ಸಂಬಂಧದಿಮದ ನಮ್ಮ ಮಾನ ಮರ್ಯಾದೆ ನಷ್ಟವಾಗುತ್ತದೆ, ನಮ್ಮನ್ನು ಸಮಾಜ ನೋಡುವ ದೃಷ್ಟಿಕೋನ ಬೇರೆ ರೀತಿಯಾಗುತ್ತದೆ, ಮನೆಯವರಿಂದ ಗೌರವ ಸಿಗುವುದಿಲ್ಲ ಈ ಎಲ್ಲಾ ಅಂಶಗಳು ಗೊತ್ತಿದ್ದೂ ಅನೈತಿಕ ಸಂಬಂಧದಲ್ಲಿ ಬೀಳುತ್ತಾರೆ.

ಅನೈತಿಕ ಸಂಬಂಧದಲ್ಲಿರುವವರು ಯಾರೂ ಹದಿ ಹರೆಯದವರಾಗಿರುವುದಿಲ್ಲ. ಹುಚ್ಚು ಪ್ರೇಮದ ವಯಸ್ಸೂ ಆಗಿರುವುದಿಲ್ಲ. ಹದಿಹರೆಯದವರಿಗಾದರೆ ಸರಿ, ತಪ್ಪುಗಳ ಬಗ್ಗೆ ತಿಳಿವಳಿಕೆ ಕಮ್ಮಿ ಇರುತ್ತವೆ. ಆದರೆ ಅನೈತಿಕ ಸಂಬಂಧದಲ್ಲಿ ಬೀಳುವವರು ಮದುವೆಯಾಗಿರುತ್ತಾರೆ, ಕೆಲವರಿಗಂತೂ ಮಕ್ಕಳು ದೊಡ್ಡವರಾಗಿರುತ್ತಾರೆ. ಆದರೂ ತಪ್ಪಾದ ದಾರಿ ಹಿಡಿದಿರುತ್ತಾರೆ. ಅದು ಗೊತ್ತಾದ ತಕ್ಷಣ ಮನೆಯವರಿಗೆ ಅವರ ಮೇಲೆ ಇದ್ದ ಮರ್ಯಾದೆ ಕಡಿಮೆಯಾಗುತ್ತದೆ. ಕೆಲವರು ಮನೆಯಿಂದ ದೂರವಾಗುತ್ತಾರೆ ಮತ್ತೆ ಕೆಲವರನ್ನು ಮನೆಯವರು ದೂರ ಮಾಡುತ್ತಾರೆ.

Why People Stay In Bad Relationships?

ಮನೆ ಪರಿಸರ ಚೆನ್ನಾಗಿ ಇದ್ದರೆ ಯಾವ ವ್ಯಕ್ತಿಯೂ ಅಡ್ಡ ಹಾದಿ ತುಳಿಯುವುದಿಲ್ಲ ಅನ್ನುವುದು ನನ್ನ ಬಲವಾದ ನಂಬಿಕೆ. ಏಕೆಂದರೆ ಎಷ್ಟೋ ಜನರು ಮನೆಯಲ್ಲಿ ಪ್ರೀತಿ, ನೆಮ್ಮದಿ ಸಿಗದೆ ಈ ರೀತಿ ಅಡ್ಡ ಹಾದಿ ಹಿಡಿಯುತ್ತಾರೆ. ಒಂಟಿತನ, ವಿರಹ, ಕಳೆದುಕೊಳ್ಳುತ್ತೇನೆ ಎಂಬ ಭಯ, ಮನೆಯವರ ಮೇಲೆ ಸೇಡು, ಪ್ರೀತಿಯ ವ್ಯಕ್ತಿ ಮೋಸ ಮಾಡಿದಾಗ, ಬಯಸಿದ ಪ್ರೀತಿ ಸಿಕ್ಕದೇ ಹೋದಾಗ, ಸಂಗಾತಿಯ ಸಂಶಯ ಪ್ರವೃತ್ತಿ ಈ ಕಾರಣಗಳಿಂದ ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳುತ್ತಾನೆ/ಳೆ.

ಅವರಿಗೂ ಅವರು ಮಾಡುತ್ತಿರುವುದು ತಪ್ಪು ಎಂಬ ಅರಿವು ಇರುತ್ತದೆ. ಆದರೆ ಆ ಸಂಬಂಧದಿಂದ ಹೊರಬರಲು ಸಿದ್ಧವಿರುವುದಿಲ್ಲ. ಆದ್ದರಿಂದಲೇ ಹೇಳುವುದು ದಂತಿಗಳು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳಿದರೆ ಕೊನೆಯವರಿಗೂ ಇಬ್ಬರ ಸಂಬಂಧ ಚೆನ್ನಾಗಿ ಇರುತ್ತದೆ. ಯಾರೂ ತಪ್ಪು ಹಾದಿ ಹಿಡಿಯುವುದಿಲ್ಲ.

ಮತ್ತೆ ಒಂದು ಮುಖ್ಯವಾದ ವಿಷಯ. ನಿಮ್ಮ ಸಂಗಾತಿ ಮೇಲೆ ವಿನಾ ಕಾರಣ ಸಂಶಯ ಪಡಬೇಡಿ. ನಿಮ್ಮ ಸಂಶಯ ಬುದ್ಧಿ ಅವರನ್ನು ನಿಮ್ಮಿಂದ ದೂರ ಮಾಡಬಹುದು.

English summary

Why People Stay In Bad Relationships? | Love And relationship | ಅನೈತಿಕ ಸಂಬಂಧ ಬೆಳೆಸಲು ಕಾರಣಗಳು | ಪ್ರೀತಿ ಮತ್ತು ಸಂಬಂಧ

If you too are finding it difficult to let go of a relationship that is unhealthy for you, then face your fears. This is the first step to getting over a bad relationship.
X
Desktop Bottom Promotion