For Quick Alerts
ALLOW NOTIFICATIONS  
For Daily Alerts

ವಿಚ್ಛೇದನಕ್ಕೆ ಮುನ್ನ ಈ ರೀತಿ ಮಾಡುವುದರಲ್ಲಿ ತಪ್ಪೇನು?

|

ಡಿವೋರ್ಸ್ ಎಂಬ ಪದ ಕೇಳಿ ಯಾರಾದರೂ ಒಮ್ಮೆ ಬೆಚ್ಚಿ ಬಿದ್ದೇ ಬೀಳುತ್ತೇವೆ. ಮದುವೆಯ ನಂತರ ಜೀವನ ನಾವು ಬಯಸಿದಂತೆ ಇರುವುದಿಲ್ಲ, ಆ ಜೀವನದಲ್ಲಿ ಸಾಕಷ್ಟು ವಿಷಯಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದ ಸರಸ-ವಿರಸಗಳ ಸಮಾಗಮವೇ ಜೀವನ. ಎಲ್ಲಿ ದಂಪತಿಗಳ ನಡುವೆ ವಿರಸ ಮಾತ್ರವಿರುತ್ತದೋ ಅಲ್ಲಿ ವಿಚ್ಛೇದನಕ್ಕೆ ಆವಕಾಶ.

ಸಾಕಷ್ಟು ವಿಷಯಗಳನ್ನು ಮಾತನಾಡಿ ಪರಿಹರಿಸಬಹುದು, ಆದರೆ ವಿಚ್ಛೇದನಕ್ಕೆ ಅರ್ಜಿ ಹಾಕುವ ದಂಪತಿಗಳು ಆ ಬಗ್ಗೆ ಯೋಚಿಸಲು ಹೋಗುವುದೇ ಇಲ್ಲ, ದುಡುಕಿನಲ್ಲಿ ನಿರ್ಧಾರ ಕೈಗೊಂಡಿರುತ್ತಾರೆ. ಕೋರ್ಟ್ ನಲ್ಲಿ ಇವರು ಮನಸ್ಸು ಬದಲಾಯಿಸಿ ಜೀವನ ನಡೆಸಲು ಸ್ವಲ್ಪ ಸಮಯವಕಾಶ ಕೊಟ್ಟಿರುತ್ತದೆ, ಆದರೆ ಮೊಂಡು ಮನಸ್ಸು ಅದಕ್ಕೆ ಸಿದ್ಧವಿರುವುದಿಲ್ಲ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುವುದಿಲ್ಲ.

Relationship Tips To Avoid Divorce

ಈ ವಿಚ್ಚೇದನಕ್ಕೆ ಅರ್ಜಿ ಹಾಕುವವರಲ್ಲಿ ಎರಡು ವರ್ಗದವರು. ಒಂದು ಚಿಕ್ಕ-ಪುಟ್ಟ ವಿಷಯವನ್ನು ದೊಡ್ಡದು ಮಾಡಿ, ಹೊಂದಾಣಿಕೆಯಿಲ್ಲದೆ ಸಂಬಂಧ ಮುರಿದುಕೊಳ್ಳುವ ಹಂತಕ್ಕೆ ಬಂದಿರುತ್ತಾರೆ. ಎರಡನೇಯವರು ವಿಚ್ಛೇದನ ಆದರೆ ಮಾತ್ರ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂಬ ಪರಿಸ್ಥಿತಿ ಇರುತ್ತದೆ. ಈ ಎರಡನೇ ವರ್ಗದಲ್ಲಿ ಹೊಂದಾಣಿಕೆಗಿಂತ ಜೀವನ ಅಮೂಲ್ಯವಾಗಿರುತ್ತದೆ. ಉದಾಹರಣೆಗೆ ಗಂಡ ತುಂಬಾ ಕ್ರೂರಿಯಾಗಿದ್ದರೆ ಅವನನ್ನು ಬದಲಾಯಿಸಲು ಪ್ರಯತ್ನಿಸಿ ಸೋತಿದ್ದರೆ ಅಂತಹವರಿಂದ ಒಳ್ಳೆಯ ಜೀವನ ನಿರೀಕ್ಷಿಸಲು ಸಾಧ್ಯವಿಲ್ಲ. ಅದೇ ಮೊದಲನೇ ವರ್ಗದವರಲ್ಲಿ ಯಾವುದೋ ಚಿಕ್ಕ ವಿಷಯ ಬೆಳೆದು ದೊಡ್ಡದಾಗಿರುತ್ತದೆ. ಅಂತಹವರು ಸ್ವಲ್ಪ ಮನಸ್ಸು ಮಾಡಿದರೆ ಸಂಬಂಧ ಉಳಿಸಿಕೊಳ್ಳಬಹುದು.

ವಿಚ್ಛೇದನಕ್ಕೆ ಮುನ್ನ ಈ ಕೆಳಗಿನಂತೆ ಮಾಡಿ ನೋಡಿ, ಆಗಲೂ ಆ ದಂಪತಿಗಳೂ ಕೂಡಿ ಬಾಳಲು ಸಾಧ್ಯವಿಲ್ಲ ಎಂದಾದರೆ ಕೂಡಿ ಬಾಳ ಬೇಕೆ? ಬೇಡ್ವೆ? ಎಂಬ ತೀರ್ಮಾನ ಡಿವೋರ್ಸ್ ಬಯಸುತ್ತಿರುವ ದಂಪತಿಗಳಿಗೆ ಬಿಟ್ಟದ್ದು.

ಚರ್ಚಿಸಿ
ವಿಚ್ಛೇದ ಬಯಸುವ ದಂಪತಿಗಳು ಮಾತ್ರ(ಅವರ ಮಧ್ಯೆ ಮನೆಯವರು ಪ್ರವೇಶಿಸಬಾರದು) ಒಂದು ಕಡೆ ಕುಳಿತು ನಿಮ್ಮ ನಡುವೆ ಇರುವ ಸಮಸ್ಯೆಯೇನು ಎಂದು ಚರ್ಚಿಸಿ. ನಿಮ್ಮ ಬಾಳಸಂಗಾತಿ ನಿಮ್ಮ ಜೊತೆ ಮಾತನಾಡಲು ಇಷ್ಟಪಡದಿದ್ದರೂ ಪ್ರಯತ್ನಿಸಿ. ಆಗ ಪರಸ್ಪರ ನಾವು ಮಾಡುತ್ತಿರುವ ಸರಿ-ತಪ್ಪುಗಳ ಬಗ್ಗೆ ಅವಲೋಕನ ಮಾಡಲು ಅವಕಾಶ ಸಿಗುತ್ತದೆ.

ಪರಿಹಾರ
ಆ ಸಮಸ್ಯೆಗೆ ನಿಮ್ಮಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂದು ಯೋಚಿಸಿ. ನಿಮಗೆ ಪರಿಹಾರ ಹುಡುಕಲು ಸಾಧ್ಯವಾಗದಿದ್ದರೆ ಈಗ ನಿಮ್ಮ ಆಪ್ತರ ಸಹಾಯ ಪಡೆಯಿರಿ.

ಯೋಚನೆ
ಒಬ್ಬರು ನಮಗೆ ಆಗದಿದ್ದರೆ ಅವರು ಏನೂ ಮಾಡಿದರೂ ತಪ್ಪಾಗಿ ಕಾಣುತ್ತದೆ. ಮೊದಲು ಆ ಮನಸ್ಥಿತಿಯಿಂದ ಹೊರಬರಬೇಕು. ಧನಾತ್ಕವಾಗಿ ಯೋಚಿಸಿ. ಇವನಿಂದ/ಇವಳಿಂದ ಬೇರೆಯಾಗಲೇ ಬೇಕೆಂಬ ಮನಸ್ಥಿತಿಯಿಂದ ಯೋಚಿಸಿದರೆ ನಾವು ಮಾಡುವ ಪ್ರಯತ್ನ ಫಲಕಾರಿಯಾಗುವುದಿಲ್ಲ. ನಾವು ಬೇರೆಯಾಗಬಾರದೆಂದು ಯೋಚಿಸಿದರೆ ನಿಮ್ಮ ಜೀವನದಲ್ಲಿ ವಸಂತ ಮರುಕಳಿಸಬಹುದು.

ತಪ್ಪು ಕಲ್ಪನೆ
ತಪ್ಪು ಕಲ್ಪನೆಗಳಿದ್ದರೆ ಅದನ್ನು ಅವರ ಮುಂದೆ ಹೇಳಿ. ಅವರ ಪ್ರತಿಕ್ರಿಯೆ ನೋಡಿ. ಆಗ ನಿಮಗೆ ನಿಮ್ಮದು ತಪ್ಪುಕಲ್ಪನೆಯೇ, ಅಲ್ಲವೇ? ಅನ್ನುವುದು ತಿಳಿಯುತ್ತದೆ.

ಬದಲಾಗಿ
ನಾನು ಹೀಗೆ ಇರುವ ಅನ್ನುವ ಮನೋಭಾವವಿದ್ದರೆ ಅಂತಹವರಿಗೆ ಹೊಂದಾಣಿಕೆಯ ಬುದ್ಧಿ ಇರುವುದಿಲ್ಲ. ಸುಂದರ ಸಂಸಾರ ಬೇಕೆಂದು ಬಯಸುವವರು ಬದಲಾದರೆ ಒಳ್ಳೆಯದು.

ವಿಚ್ಛೇದನ ಕೊಟ್ಟ ಮೇಲೆ ಕೊರಗುವ ಬದಲು, ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ, ಹೌದು ತಾನೇ?

English summary

Relationship Tips To Avoid Divorce | Love And Relationship | ವಿಚ್ಚೇದನಕ್ಕೆ ಮುನ್ನ ಈ ರೀತಿ ಮಾಡುವುದರಲ್ಲಿ ತಪ್ಪೇನು | ಪ್ರೀತಿ ಮತ್ತು ಸಂಬಂಧ

No relationship can always show a positive angle. Even friendship goes through a lot of hustles and breakdowns. However, it all depends on how you cope with it and try to make things work.
X
Desktop Bottom Promotion