For Quick Alerts
ALLOW NOTIFICATIONS  
For Daily Alerts

ನಿಮ್ಮ ವಾರಾಂತ್ಯ ರಮ್ಯವಾಗಿರಬೇಕಾ?

By ಲೇಖಕ
|

ವಾರದ ಕೊನೆಯಲ್ಲಿ ಮಾಡೋದಕ್ಕೆ ಏನೂ ಕೆಲಸವಿಲ್ಲವಾ? ಮನಸ್ಸು ಖಾಲಿ ಖಾಲಿ ಅನಿಸುತ್ತಿದೆಯಾ? ಮತ್ತೆ ಮತ್ತೆ ಅದೇ ಏಕತಾನತೆ ಕೆಲಸಗಳಲ್ಲಿ ಕಳೆದುಹೋಗುತ್ತಿರುವ ಭಾವ ಕಾಡುತ್ತಿದೆಯಾ? ಹಾಗಿದ್ದರೆ, ರಮ್ಯವಾದ ಕಲ್ಪನಾಲೋಕದಲ್ಲಿ ವಾರಾಂತ್ಯವನ್ನು ಕಳೆಯೋದಕ್ಕೆ ಐಡಿಯಾ ಮಾಡಿಕೊಳ್ಳಿ.

ಮಾಡಬೇಕಾದ್ದೇನು?:

ಆರಾಮವಾಗಿ ವಿಶ್ರಾಂತಿಯಿಂದ ರಜೆಯನ್ನು ವ್ಯಯಸಲು ಪ್ಲ್ಯಾನ್ ಮಾಡಿ. ಮನಸಾರೆ ನಿದ್ದೆಯ ಜೊತೆಗೆ ನಿಮ್ಮ ಸನಿಹದಲ್ಲಿಯೇ ಸಿಗುವ ತಿಂಡಿ ತಿನ್ನಿ. ನೀವು ವಾಸ ಮಾಡುವ ಸ್ಥಳದಿಂದ ಸಿಕ್ಕಾಪಟ್ಟೆ ದೂರ ಹೋಗುವ ಸ್ಥಳವನ್ನು ಆರಿಸಿಕೊಳ್ಳಬೇಡಿ. ಸರಳವಾದ, ಪ್ರಶಾಂತವಾದ ಸ್ಥಳ ಸೂಕ್ತವಾದದ್ದು.

How to Plan a Romantic Weekend Getaway

ನೀವು ನಿಮ್ಮ ಸಂಗಾತಿ ಒತ್ತಡವಿಲ್ಲದ ರಮ್ಯವಾದ ಸಮಯ ಕಳೆಯಲು ಸಜ್ಜಾಗಿ. ನಿಮ್ಮಿಷ್ಟದ ವಸ್ತುಗಳನ್ನು, ನೀವಿಬ್ಬರೂ ಕೇಳಿ ಆನಂದಿಸುವ ಸಂಗೀತದ ಸಿಡಿಗಳನ್ನು, ನಿಮಗೆ ಹಿತಕರವೆನಿಸುವ ನೋಡಲು ಚಂದವುಳ್ಳ ಬಟ್ಟೆಗಳನ್ನು, ಸ್ನ್ಯಾಕ್ಸ್ ಗಳನ್ನು ಪ್ರಯಾಣಕ್ಕೆ ತಯಾರು ಮಾಡಿಕೊಳ್ಳಿ. ನಿಮ್ಮ ಜಾಲಿ ಸಮಯ ಶುರುವಾಗೋದು ಮನೆಯ ಬಾಗಿಲಿನಿಂದಲೇ. ಹೀಗಾಗಿ, ಚಿಕ್ಕ ಚಿಕ್ಕ ಸಂಗತಿಗಳನ್ನೂ ಕೂಡ ಮನಸಾರೆ ಅನುಭವಿಸುತ್ತ ಮಾಡಿ. ಡ್ರೈವಿಂಗ್, ಕಾರಿಗೆ ಗ್ಯಾಸ್ ಮತ್ತಿತರ ಸಾಮಾಗ್ರಿ ತುಂಬಿಸುವುದು ಎಲ್ಲವನ್ನೂ ಖುಷಿಯಿಂದಲೇ ಮಾಡಿ. ಇದು ತುಂಬಾ ಸಿಲ್ಲಿ ಎನಿಸಬಹುದು, ಆದರೆ ನಿಮ್ಮನ್ನು ನಿಮ್ಮ ನಿಜವಾದ ವಯಸ್ಸಿಗಿಂತ ಕಡಿಮೆ ವಯಸ್ಸಾದಂತೆ ಮಾಡುವುದು ಇಂಥ ಸಂಗತಿಗಳೇ.

ಆಕಸ್ಮಿಕವಾಗಿ ಗಾಡಿ ನಿಲ್ಲಿಸಿ. ಸ್ನ್ಯಾಕ್ ತಿಂದು, ಫೋಟೋ ಕ್ಲಿಕ್ಕಿಸಿಕೊಂಡು ಫ್ರೆಶ್ ಆಗಿ.

ವಾರದ ಕೊನೆಯಲ್ಲಿ ಏನೇನು ಕೆಲಸ ಮಾಡಬೇಕೋ ಎಲ್ಲವನ್ನೂ ಮೊದಲೇ ಆಯೋಜಿಸಿಕೊಳ್ಳಿ. ಹತ್ತಾರು ಕಾರ್ಯಕ್ರಮಗಳನ್ನು ಒಟ್ಟೊಟ್ಟಿಗೆ ತುರುಕುವುದು ಬೇಡ. ಉಳಿದವರಿಗೂ ಖುಷಿ ನೀಡುವ, ಪ್ರೀತಿ ಹಂಚಿಕೊಳ್ಳುವ ಮುಖ್ಯವಾದ ಕಾರ್ಯಕ್ರಮಗಳಿರಲಿ. ಹೀಗಾಗಿ ಅತಿಯಾದ ಚಟುವಟಿಕೆಗಳಿಗೆ ಕತ್ತರಿ ಹಾಕಿ. ಒಳ್ಳೊಳ್ಳೆಯ ಐಡಿಯಾ ಮಾಡಿ.

ಸರಳವಾದ ಜಾಗಕ್ಕೆ ವಿವರವಾದ ಪರಿಪೂರ್ಣವಾದ ಪ್ರವಾಸ ಉತ್ತಮ. ನದಿ ದಂಡೆಯ ಮೇಲೆ ನಡೆಯುವುದು, ಪಕ್ಷಿ ವೀಕ್ಷಣೆ, ಕೈ ಕೈ ಹಿಡಿದು ಹಾದಿ ಬದಿಯಲ್ಲಿ ಸಾಗುವುದು ಇವುಗಳೂ ಕೂಡ ಮನಸ್ಸಿಗೆ ಹಿತ ನೀಡುತ್ತವೆ. ಸುಂದರವಾದ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ನಿಮ್ಮ ಮನೆಯ ಕಿಟಕಿಯೊಳಗಿಂದ ಕಣ್ತುಂಬಿಕೊಂಡರೂ ಒಳ್ಳೆಯದೇ. ನೀವು ನಿಮ್ಮ ಸಂಗಾತಿಯ ಜೊತೆಗಿರಲು ಹೇಗೆಲ್ಲ ಇಷ್ಟ ಪಡುತ್ತೀರಿ ಎಂಬುದನ್ನು ಮನಬಿಚ್ಚಿ ಮಾತಾಡಿಕೊಳ್ಳಿ. ನಿಮ್ಮ ಜವಾಬ್ದಾರಿಗಳು, ಹಣಕಾಸಿನ ವಿಚಾರಗಳು, ನಿಮ್ಮ ಮುಂಚಿನ ಜಗಳ ಮತ್ತು ಪ್ರೀತಿಯ ಬಗ್ಗೆ ಮಾತಾಡಿಕೊಳ್ಳುವುದು ಬೇಡವೇ ಬೇಡ.

ಒಬ್ಬರಿಗೊಬ್ಬರು ಅಚ್ಚರಿಯನ್ನು ಹಂಚಿಕೊಳ್ಳಿ. ನಿಮ್ಮ ದಾರಿಯಲ್ಲಿರುವ ಅಂಗಡಿಯಿಂದ ಏನಾದರೂ ಚಿಕ್ಕ ಮನಸೆಳೆಯುವ ಉಡುಗೊರೆಗಳನ್ನು ತಂದು ನಿಮ್ಮ ಸಂಗಾತಿಗೆ ನೀಡಿ. ಹೊಸ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ. ಊಟದ ಸಮಯದಲ್ಲಿ ಹೆಚ್ಚೆಚ್ಚು ಖುಷಿಯಿಂದ, ಮಾತಾಡಿಕೊಳ್ಳುತ್ತ ಹೊಸ ವಾತಾವರಣವನ್ನು ಆಸ್ವಾದಿಸಿ.

ಈ ಇಡೀ ಪ್ರಪಂಚ ಸಂಪೂರ್ಣ ಭೀನ್ನವಾಗಿದೆ ಎಂಬಂತೆ ಭಾವಿಸಿಕೊಳ್ಳಿ, ಮತ್ತು ಭಿನ್ನವಾದ ಪ್ರಪಂಚದಲ್ಲಿ ನೀವು ಈ ಸ್ಥಳವನ್ನು ಬಿಟ್ಟು ಹೊರಡುವ ಮುನ್ನ ಪೂರ್ತಿಯಾಗಿ ಆಸ್ವಾದಿಸಬೇಕು ಎಂಬಂತೆ ಭಾವಿಸಿಕೊಳ್ಳಿ.

ನಿಮ್ಮ ಪ್ರೀತಿ ಪ್ರೇಮದ ಹಳೆಯದ ದಿನಗಳನ್ನು ನೆನೆಸಿಕೊಳ್ಳಿ ಮತ್ತು ಒಬ್ಬರಿಗೊಬ್ಬರು ಹೇಗೆ ಭಾವಿಸಿದ್ದೀರಿ ಎಂಬ ವಿಯಷಗಳನ್ನು ಹಂಚಿಕೊಳ್ಳಿ.

ಕೆಲವೊಮ್ಮೆ, ಸುಮ್ಮನೆ ಮೌನವಾಗಿ ಕುಳಿತು ನಿಮ್ಮಿಷ್ಟದ ಕೆಲಸಗಳನ್ನೇ ಮಾಡುತ್ತ ಮೌನವನ್ನೇ ಆಸ್ವಾದಿಸಿ.

ಸಲಹೆಗಳು:

ಇಬ್ಬರೂ ಕೈ ಕೈ ಹಿಡಿದುಕೊಂಡು ಮೃದುವಾದ ಮುತ್ತು ಹಂಚಿಕೊಳ್ಳಿ.

ಮುಖದಲ್ಲಿ ನಗೆಯಿರಲಿ. ನಿಮ್ಮ ನಗು ಉತ್ಸಾಹವನ್ನು ಚಿಮ್ಮಿಸುತ್ತದೆ ಮತ್ತು ನಿಮ್ಮನ್ನು ಮತ್ತಷ್ಟು ಸುಂದರಗೊಳಿಸುತ್ತದೆ.

ಜೋಕ್ ಗಳನ್ನು ಸಿಡಿಸಿ.ಹಿರಿದಾದ ನಗೆ ಕೊಳಕಲ್ಲ.

ಕಿರಿಕಿರಿ ನೀಡುವ ಗ್ಯಾಜೆಟ್ ಗಳನ್ನು ದೂರವಿಡಿ. ಮೊಬೈಲ್ ಫೋನ್, ಲ್ಯಾಟ್ ಟಾಪ್ಗಳನ್ನು ಅನವಶ್ಯಕವಾಗಿ ಹತ್ತಿರಕ್ಕೆ ತಂದುಕೊಳ್ಳಬೇಡಿ.

ಖುಷಿ ಖುಷಿಯಾಗಿರಿ. ನಿಮ್ಮ ವಾರಾಂತ್ಯ ರಮ್ಯವಾಗಿರಲಿ.

English summary

How to Plan a Romantic Weekend Getaway | Love And Relationship | ನಿಮ್ಮ ವಾರಾಂತ್ಯ ರಮ್ಯವಾಗಿರಬೇಕಾ? | ಪ್ರೀತಿ ಮತ್ತು ಸಂಬಂಧ

Got a weekend and there is nothing much on your plate to work on? Also, you feel you are reliving the same day again and again and want to break the monotony? Plan for a romantic weekend getaway
Story first published: Saturday, February 2, 2013, 12:38 [IST]
X
Desktop Bottom Promotion