For Quick Alerts
ALLOW NOTIFICATIONS  
For Daily Alerts

ಕಾಡುವ ಒಂಟಿತನದಿಂದ ಮುಕ್ತಿ ಹೇಗೆ?

By ಲೇಖಕ
|

ಜೀವನದಲ್ಲಿ ಒಂಟಿತನ ಕಾಡಲು ಬಹಳಷ್ಟು ಕಾರಣಗಳಿವೆ. ಅದು ಸಾಮಾಜಿಕ ಜಂಜಡದಿಂದ ಉದ್ಭವಿಸಿದ್ದಾಗಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಸೃಷ್ಟಿಸಿಕೊಂಡ ಒಂಟಿತನವಾಗಿರಬಹುದು. ಜೀವನದಲ್ಲಿ ಪ್ರತಿಯೊಬ್ಬರೂ ಈ ಒಂಟಿತನವನ್ನು ಅನುಭವಿಸುತ್ತಾರೆ. ಸಂತಸದ ಸಂಗತಿ ಏನೆಂದರೆ ಈ ಒಂಟಿತನದಿಂದ ಹೊರ ಬರಲು ಸಾಕಷ್ಟು ದಾರಿಗಳಿವೆ.

ಭಾಗ ಒಂದು

ಮೊದಲನೇ ಹೆಜ್ಜೆ - ನಿಮ್ಮ ಒಂಟಿತನವನ್ನು ಅರ್ಥಮಾಡಿಕೊಳ್ಳುವುದು

ನೆನಪಿಡಿ. ನಾವೆಲ್ಲರೂ ಒಮ್ಮೊಮ್ಮೆ ಒಂಟಿಯಾಗಿಬಿಡುತ್ತೇವೆ. ಆದರೆ ಅದರ ಅರ್ಥ ನಿಮ್ಮಲ್ಲೇನೋ ಲೋಪವಿದೆ ಎಂದಲ್ಲ. ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುವ ಸಮಯದಲ್ಲಿ ಅದರಲ್ಲೂ ಒಳ್ಳೆಯ ಬದಲಾವಣೆಗಳಾಗುವ ಸಮಯದಲ್ಲಿ ನಾವು ಒಂಟಿತನವನ್ನು ಅನುಭವಿಸುದು ಹೆಚ್ಚು. ಜೀವನದಲ್ಲಿ ಹೊಸ ದಾರಿ ಅಥವಾ ಹೊಸ ಪರ್ಯಾಯಗಳನ್ನು ಅನ್ವೇಷಿಸುವ ಯತ್ನದಲಿದ್ದಾಗ ಸ್ವಲ್ಪ ಒಂಟಿ ಎನಿಸುವುದು ಸಹಜ. ಯಾಕಂದರೆ, ನೀವು ನಿಮ್ಮ ಹಾಗೆ ಹೊಸ ಆಸಕ್ತಿಗಳು ಹಾಗು ಆಲೋಚನೆಯನ್ನು ಹೊಂದಿರುವ ಸಮಾನ ಮನಸ್ಕರನ್ನು ಹುಡುಕುವ ಪ್ರಕ್ರಿಯೆಯಲ್ಲಿರುತೀರಿ.

How to Deal With Loneliness

ಒಂಟಿತನವನ್ನು ಏಕಾಂತತೆಯಿಂದ ಪ್ರತ್ಯೇಕಿಸಿ

ಒಂಟಿತನವೆಂದರೆ ನೀವು ಒಂಟಿಯಾಗಿರುವುದರಿಂದ ಅಸಂತುಷ್ಟರಾಗಿರುವುದು. ಆದರೆ ಒಂಟಿಯಾಗಿರುವುದೇ ನಿಮಗೆ ಹಿತವಾಗಿದ್ದರೆ ಅದನ್ನು ಏಕಾಂತ ಎನ್ನಬಹುದು. ನೀವು ಜನಗಳೊಂದಿಗೆ ಬೆರೆಯಬಯಸುವಿರಾದರೆ ನೀವು ಏಕಾಂತ ಪ್ರಿಯರಲ್ಲ. ಈ ಲೋಕದಲ್ಲಿ ನಿಮಗೆ ಆಪ್ತರೆನಿಸುವ ಬಹಳಷ್ಟು ಸ್ನೇಹ ಜೀವಿಗಳಿದ್ದಾರೆ.ಆನ್ಲೈನ್ ಸಮುದಾಯವನ್ನು ಸೇರಿ. ಒಮ್ಮೊಮ್ಮೆ ಅದೂ ಕೂಡ ನಿಮ್ಮ ನೆರವಿಗೆ ಬರಬಹುದು. ನೀವಿರುವ ಸ್ಥಿತಿಯಲ್ಲೇ ಇರುವ ಹಲವರೊಂದಿಗೆ ನಿಮ್ಮ ಆಲೋಚನೆಗಳು ಹಾಗು ಅನುಭವಗಳನ್ನು ಹಂಚಿಕೊಳ್ಳಿ ಅಥವಾ ಪ್ರಶ್ನೆಗಳನ್ನು ಕೇಳಿ.

ಭಾಗ ಎರಡು: ಒಂಟಿತನದಿಂದ ಹೊರಬರುವುದು

ಪರಿಚಿತ ಜನರನ್ನು ಆಹ್ವಾನಿಸಿ ಮತ್ತು ಅವರೊಂದಿಗೆ ಬೆರೆಯಿರಿ. ಅವರು ನಿಮಗೆ ತೀರ ಆಪ್ತರಲ್ಲದಿದ್ದರೂ ಮನುಷ್ಯರೊಂದಿಗಿನ ಸಂಪರ್ಕ ಮತ್ತಷ್ಟು ಹೊಸ ಸಂಪರ್ಕಗಳನ್ನು ಸುಲಭವಾಗಿ ಹೊಂದಲು ಸಹಾಯಕವಾಗುತ್ತದೆ. ನೀವು ಮತಾಡುವುದಕ್ಕಿಂತ ಹೆಚ್ಚಾಗಿ ಕೇಳಿಸಿಕೊಳ್ಳಿ. ಸುಮ್ಮನೆ ಕೊನೆ ಇಲ್ಲದಹಾಗೆ ನಿಮ್ಮ ಬಗ್ಗೆಯೇ ನೀವು ಕೊಚ್ಚಿಕೊಳ್ಳುವ ಬದಲು ಹೆಚ್ಚು ಕೇಳಿಸಿಕೊಳ್ಳುವುದು ಜನರೊಟ್ಟಿಗಿನ ನಿಮ್ಮ ಸಂಭಂದವನ್ನು ಗಾಢವಾಗಿಸುತ್ತದೆ.

ಯಾವುದಾದರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಕ್ರೀಡಾ ಕೂಟ (ಕ್ಲಬ್) ವನ್ನು ಸೇರಿ ಅಥವಾ ಯಾವುದಾದರು ತರಗತಿಗಳನ್ನು ಸೇರಿ. ನಿಮ್ಮ ಸಮಾಜದಲ್ಲಿ ಸ್ವಯಂಸೇವಕರಾಗಿ. ನೀವು ಸಂಕೋಚ ಸ್ವಭಾವದವರಾದರೆ ನಿಮ್ಮದೇ ಸ್ವಭಾವದ ಜನರನ್ನು/ಗುಂಪನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹುಡುಕಿ ಅವರೊಂದಿಗೆ ಸಂಪರ್ಕದಲ್ಲಿರಿ. ಸಾಮಾಜಿಕ ಸಂಭಂದಗಳನ್ನು ನೀವು ನಿಭಾಯಿಸುವ ರೀತಿಯನ್ನು ಬದಲಿಸಿಕೊಳ್ಳಿ. ಜನರೇ ನಿಮ್ಮನ್ನು ಸಮೀಪಿಸಲಿ ಎಂದು ಕಾಯಬೇಡಿ ಬದಲಿಗೆ ನೀವೇ ಜನರನ್ನು ತಲುಪಿ. ನೀವು ಭೇಟಿ ಮಾಡಿದವರನ್ನು ಕಾಫಿಗೆ ಆಹ್ವಾನಿಸಿ. ಜನರು ನಿಮ್ಮ ಬಗ್ಗೆ ಆಸಕ್ತಿ ತೋರುವದಕ್ಕಿಂತ ಮುನ್ನ ನೀವೇ ಅವರ ಬಗ್ಗೆ ಆಸಕ್ತಿ ತೋರಿ. ಈ ಹಿಂದೆ ನಿಮ್ಮ ಕುಟುಂಬದ ಯಾರದರೊಂದಿಗೆ ನಿಮ್ಮ ಸಂಭಂದ ಅಷ್ಟು ಚನ್ನಾಗಿಲ್ಲದಿದ್ದರೂ ನಿಮ್ಮ ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಆಗ ಅವರೂ ಕೂಡ ನಿಮ್ಮೊಟ್ಟಿಗೆ ಬೆರೆಯಲು ಮೊದಲು ಮಾಡಬಹುದು.

ನಿಮ್ಮ ಸ್ನೇಹಿತರನ್ನು ಇತರರಿಗೆ ಪರಿಚಯಿಸಿ ಹಾಗು ಹೊಸ ಜನಗಳನ್ನು ಭೇಟಿ ಮಾಡಿ. ಇದರಿಂದ ಸಮಾಜದಲ್ಲಿ ನೀವು ಒಂಟಿ ಅನಿಸುವ ಭಾವದಿಂದ ಹೊರಬರಲು ಸಹಾಯಕವಾಗುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮನು ತೊಡಗಿಸಿಕೊಳ್ಳಿ. ಬಹಳಷ್ಟು ಸಾರಿ ನೀವು ಹಾತೊರೆಯುವುದು ಸಂಗಾತಿಗಾಗಿಯೋ ಸ್ನೇಹಿತರಿಗಾಗಿಯೋ ಅಲ್ಲ. ಬದಲಿಗೆ ನೀವೇ ಹಿಂದೊಮ್ಮೆ ಹೊಂದಿದ್ದ ಹವ್ಯಾಸಗಳು ಹಾಗು ನೀವು ತೊಡಗಿದ್ದ ಚಟುವಟಿಕೆಗಳಿಗಾಗಿ. ಹೊರಗಡೆ ಸುತ್ತಾಡಿ ಬನ್ನಿ. ಉದಾಹರಣೆಗೆ ಒಳ್ಳೆಯ ರೆಸ್ಟೋರಂಟ್ ನಲ್ಲಿ ಊಟ ಮಾಡಿ ಬನ್ನಿ ಅಥವಾ ಯಾವುದಾದರೂ ಸಿನಿಮಾಗೆ ಹೋಗಿ ಬನ್ನಿ. ನಿಮಗೆ ನೀವೇ ದಿಗ್ಬಂಧನ ವಿಧಿಸಿಕೊಳ್ಳಬೇಡಿ.

ಒಂದು ಸಾಕು ಪ್ರಾಣಿಯನ್ನು ತಂದುಕೊಳ್ಳಿ. ನೀವು ನಿಜವಾಗಿಯೂ ಯಾರ ಒಡನಾಟವೂ ಇಲ್ಲದೆ ಹೆಣಗುತ್ತಿದ್ದರೆ ಒಂದು ನಾಯಿಯೋ ಅಥವಾ ಬೆಕ್ಕನ್ನೋ ಸಾಕಿಕೊಳ್ಳಿ. ಸಾಕು ಪ್ರಾಣಿಗಳು ಶತಮಾನಗಳಿಂದ ಮಾನವರ ಒಡನಾಡಿಗಳಾಗಿವೆ ಹಾಗು ಒಂದು ಪ್ರಾಣಿಯ ನಂಬಿಕೆ ಮತ್ತು ವಿಶ್ವಾಸ ಗಳಿಸುವ ಪ್ರಕ್ರಿಯೆ ನಿಮಗೆ ಅದ್ಭುತ ಅನುಭವ ನೀಡಬಹುದು.

ನಿಮ್ಮ ಇರುವಿಕೆ ಎಲ್ಲರಿಗೂ ಹಿತವಾಗಿರುವಂತಿರಲಿ. ಉತ್ತಮವಾದ ಒಡನಾಟದಿಂದ ಜನರನ್ನು ನಿಮ್ಮೆಡೆಗೆ ನೀವೇ ಆಕರ್ಶಿಸಿ. ಹೆಚ್ಚಾಗಿ ಟೀಕಿಸುವ ಬದಲು ಒಳ್ಳೆಯದನ್ನು ಪ್ರಶಂಶೆ ಮಾಡಿ. ಇತರರ ಬಟ್ಟೆ, ಹವ್ಯಾಸ ಅಥವಾ ಅವರ ಕೂದಲ ಬಗ್ಗೆ ಸುಖಾ ಸುಮ್ಮನೆ ಟೀಕೆ ಮಾಡಬೇಡಿ. ಅವರು ಈಗ ಏನೂ ಮಾಡಲು ಆಗದ ಅವರ ಶರ್ಟ್ ಮೇಲಿನ ಕಲೆಯನ್ನು ಎತ್ತಿ ತೋರಿಸಬೇಡಿ. ಬದಲಿಗೆ ಅವರು ತೊಟ್ಟಿರುವ ತಮ್ಮ ಸ್ವೆಟರ್ ಬಗ್ಗೆ ಅಥವಾ ನೀವು ಓದಿದ ಅವರ ಲೇಖನದ ಬಗ್ಗೆ ನಿಮ್ಮಿಂದ ಒಳ್ಳೆಯ ಅಭಿಪ್ರಾಯವನ್ನು ಎದುರು ನೋಡುತ್ತಿರುತ್ತಾರೆ. ನಿಮಗೇನಾದರೂ ಹಿಡಿಸಿದರೆ ಅತಿಯಾಗಿ ಹೊಗಳಲು ನಿಲ್ಲಬೇಡಿ. ಬದಲಿಗೆ ಹಾಗೆಯೆ ಪ್ರಾಸಂಗಿಕವಾಗಿ ನಿಮ್ಮ ಮೆಚ್ಚುಗೆ ವ್ಯಕ್ತಪಡಿಸಿ. ಇದರಿಂದ ಇತರರಿಗೆ ನೀವು ಸುಖಾ ಸುಮ್ಮನೆ ಅವರನ್ನು ಟೀಕಿಸುವುದಿಲ್ಲ ಎಂದು ಅರ್ಥವಾಗುತ್ತದೆ ಹಾಗು ಜನರೊಂದಿಗೆ ಸಂಬಂಧಗಳು ಹೆಚ್ಚು ಗಾಢಗೊಳಿಸಲು ಸಹಾಯಕವಾಗುತ್ತದೆ.

English summary

How to Deal With Loneliness | Love And Relationship | ಕಾಡುವ ಒಂಟಿತನದಿಂದ ಮುಕ್ತಿ ಹೇಗೆ?

People feel lonely for a number of reasons, including simple social awkwardness or intentional isolation. Everyone experiences loneliness. Luckily, though, there are a number of ways to overcome it.
X
Desktop Bottom Promotion