For Quick Alerts
ALLOW NOTIFICATIONS  
For Daily Alerts

ಮದುವೆಯಾದವರು ಈ ಚಿಕ್ಕ ತಪ್ಪುಗಳನ್ನು ಮಾಡಲೇಬಾರದು!

By ರೀನಾಮಂಜು
|

ಮದುವೆ ಅನ್ನುವುದು ಒಂದು ಪವಿತ್ರವಾದ ಬಂಧ. ಯಾವುದೇ ಹತ್ತಿರದ ರಕ್ತ ಸಂಬಂಧ ಇಲ್ಲದ ವ್ಯಕ್ತಿಗಳಿಬ್ಬರು ಮದುವೆ ಅನ್ನುವ ಬಂಧದ ಮುಂಖಾಂತರ ಜೀವನ ಪೂರ್ತಿ ಜೊತೆಯಲ್ಲಿ ಕಳೆಯುತ್ತಾರೆ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಕಂಡು ಬರಬಹುದು, ಆದರೆ ಆ ಭಿನ್ನಾಭಿಪ್ರಾಯಗಳು ಬೆಳೆಯದಂತೆ, ದಂಪತಿಗಳ ನಡುವೆ ಪ್ರೀತಿ, ವಿಶ್ವಾಸ ಕುಂದದಂತೆ ನೋಡಿಕೊಳ್ಳಬೇಕು.

ಮದುವೆಯಾದ ನಂತರ ಯಾವುದೇ ವಿಷಯವನ್ನು ತನ್ನದೇ ದೃಷ್ಟಿಕೋನದಿಂದ ಚಿಂತಿಸದೇ ಅವರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕಾಗುತ್ತದೆ, ಇಲ್ಲದಿದ್ದರೆ ದಾಂಪತ್ಯ ಜೀವನ ನರಕವಾಗಿ ಬಿಡುತ್ತದೆ.

ನಮಗೆ ಅರಿವಿಲ್ಲದೆಯೇ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತಿರಬಹುದು. ಆದರೆ ಅಂತಹ ತಪ್ಪುಗಳನ್ನು ಪುನರಾವರ್ತಿಸುವುದರಿಂದ ಸಂಬಂಧದಲ್ಲಿ ಬಿರುಕು ಮೂಡುತ್ತದೆ ಎಂದು ನಮ್ಮ ಅರಿವುಗೆ ಬರುವುದೇ ಇಲ್ಲ. ಕೊನೆಗೆ ಸಂಸಾರ ಬೀದಿಗೆ ಬಿದ್ದಾಗ ಅದರ ಬಗ್ಗೆ ಚಿಂತಿಸುತ್ತೇವೆ. ಅದರಲ್ಲೂ ಈ ಕೆಳಗಿನ ತಪ್ಪುಗಳು ಚಿಕ್ಕ ತಪ್ಪುಗಳಂತೆ ಕಂಡರೂ ಅದನ್ನು ನೀವು ಮಾಡುತ್ತಿದ್ದರೆ ಇಂದೇ ಅದಕ್ಕೆ ಗುಡ್ ಬೈ ಹೇಳಿ ಬಿಡಿ, ಇಲ್ಲದಿದ್ದರೆ ನಿಮ್ಮ ಸಂಗಾತಿ ನಿಮಗೆ ಗುಡ್ ಬೈ ಹೇಳಬಹುದು!

Married People Never Do These Mistake

ಪ್ರತಿಯೊಂದು ವಿಷಯವನ್ನು ಹೆತ್ತವರ ಜೊತೆ ಚರ್ಚಿಸುವುದು: ಮದುವೆಯಾದ ನಂತರ ಹೆತ್ತವರ ಹತ್ತಿರ ಏನೂ ಹೇಳಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ ಎಲ್ಲಾ ವಿಷಯವನ್ನು ಅವರ ಜೊತೆ ಚರ್ಚಿಸಬೇಡಿ ಅನ್ನುವುದು ನನ್ನ ಸಲಹೆ. ಏಕೆಂದರೆ ಅದು ನಿಮ್ಮ ಸಂಗಾತಿಗೆ ಹಿಡಿಸದೆ ಹೋಗಬಹುದು . ಆದರೆ ನಿಮ್ಮ ಪರ್ಸನಲ್ ವಿಷಯವನ್ನೂ ಅವರ ಹತ್ತಿರ ಚರ್ಚಿಸಬೇಡಿ. ಹೆಂಡತಿ ತನ್ನ ಗಂಡನ ಮನೆಯಲ್ಲಿ ನಡೆದ ಸಣ್ಣ ಪುಟ್ಟ ವಿಷಯಗಳನ್ನು ತನ್ನ ಹೆತ್ತವರ ಬಳಿ ಹೇಳಿದರೆ ಗಂಡನಿಗೆ ಇಷ್ಟವಾಗುವುದಿಲ್ಲ. ಒಂದು ಟ್ರಿಪ್ ಹೋಗ ಬಯಸುವುದಾದರೂ, ಒಂದು ಸಿನಿಮಾಕ್ಕೆ ಹೋಗುವುದಾದರೂ ಹೆತ್ತವರ ಬಳಿ ಚರ್ಚಿಸಿ ಹೋಗುವುದು ಹೆಂಡತಿಗೆ ಇಷ್ಟವಾಗುವುದಿಲ್ಲ. ನಿಮ್ಮ ಪರ್ಸನಲ್ ವಿಷಯದಲ್ಲಿ ಮೂರನೆಯವರು ಅದು ಹೆತ್ತವರು ಆಗಿರಲಿ ಅಥವಾ ಯಾರೇ ಆಗಿರಲಿ ಮೂಗು ತೋರಿಸಲು ಅವಕಾಶ ಕಲ್ಪಿಸಬೇಡಿ.

ಗೆಳೆಯರಿಗೆ ಹಚ್ಚಿನ ಮಹತ್ವ ಕೊಡುವುದು: ನಿಮ್ಮ ವೈಯಕ್ತಿಕ ವಿಷಯವನ್ನು ನಿಮ್ಮ ಸ್ನೇಹಿತರ ಜೊತೆ ಚರ್ಚಿಸುವುದು ಅಥವಾ ಇಬ್ಬರು ಹೊರಗಡೆ ಸುತ್ತಾಡಿ ಬರೋಣ ಎಂದು ನಿರ್ಧರಿಸಿರುತ್ತೀರಿ ಅಷ್ಟು ಹೊತ್ತಿಗೆ ಫ್ರೆಂಡ್ಸ್ ಕರೆದರು ಎಂದು ಅವರ ಜೊತೆ ಹೋಗಲು ತೀರ್ಮಾನಿಸುವುದು. ಒಂದು ಸಲ ಹೀಗೆ ಮಾಡಿದರೆ ಓಕೆ ಆದರೆ ಇದನ್ನೇ ಪದೇ ಪದೇ ಮಾಡಿದರೆನಿಮ್ಮ ಸಂಗಾತಿಯ ಮನಸ್ಸಿಗೆ ನೋವು ತರುವುದು.

ಅಮ್ಮನ ಮಗ: ಕೆಲವರು ಅಮ್ಮನ ಮುದ್ದಿನ ಮಗನಾಗಿರುತ್ತಾರೆ. ಪ್ರತಿಯೊಂದು ವಿಷಯಕ್ಕೂ ಅಮ್ಮ ಹೇಳಿದಂತೆ ನಡೆದುಕೊಳ್ಳುತ್ತಾರೆ. ಆದರೆ ಮದುವೆಯಾದ ಮೇಲೆ ತನ್ನ ಹೆಂಡತಿಗೆ ಒಂದು ಸೀರೆ ತರುವುದಾದರೂ ಅಮ್ಮನ ಹತ್ತಿರ ಅನುಮತಿ ತರುವ ಗುಣ ಯಾವ ಹೆಂಡತಿಗೂ ಇಷ್ಟವಾಗುವುದಿಲ್ಲ.

ಗೌರವ ನೀಡದಿರುವುದು: ನಮ್ಮ ಸಂಗಾತಿಯ ಮನೆಯವರ ಜೊತೆ ಗೌರವದಿಂದ ವರ್ತಿಸಬೇಕು. ಸಂಗಾತಿ ಜೊತೆಯೂ ಅಷ್ಟೆ, ಅವರ ಭಾವನೆಗಳನ್ನು ನಾವು ಗೌರವಿಸದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.

ಸ್ವಾರ್ಥ: ಮದುವೆಯ ನಂತರ ನಾನು ಅಂತ ಚಿಂತಿಸುವ ಬದಲು ನಾವು ಎಂದು ಚಿಂತಿಸಬೇಕು. ಸ್ವಾರ್ಥ ಬುದ್ಧಿಯಿಂದ ಯಾವುದೇ ವಿಷಯವನ್ನು ಚಿಂತಿಸಬಾರದು.

English summary

Married People Never Do These Mistake | Love And Relationship | ಮದುವೆಯಾದವರು ಈ ಚಿಕ್ಕ ತಪ್ಪುಗಳನ್ನು ಮಾಡಲೇಬಾರದು | ಪ್ರೀತಿ ಮತ್ತು ಸಂಬಂಧ

Want to know what are the common mistakes that put the relationship after marriage on the rocks? Lets check out the commonest mistakes that couples make after marriage.
X
Desktop Bottom Promotion