For Quick Alerts
ALLOW NOTIFICATIONS  
For Daily Alerts

ನಿಶ್ಚಿತಾರ್ಥದ ನಂತರ ಮದುವೆಗೆ ತಡ ಮಾಡಬಾರದೇ?

By ರೀನಾ ಮಂಜು
|

ನಮ್ಮ ಮನೆಯಲ್ಲಿ ಹಿರಿಯರು "ನಿಶ್ಚಿತಾರ್ಥ ಆದ ಮೇಲೆ ಮದುವೆಗೆ ತುಂಬಾ ಸಮಯವಿರಬಾರದು. ನಿಶ್ಚಿತಾರ್ಥವಾಗಿ 3-4 ತಿಂಗಳ ಒಳಗೆ ಮದುವೆ ಮಾಡಿಬಿಡಬೇಕು" ಎಂದು ಹೇಳುವುದನ್ನು ಕೇಳುದ್ದೇನೆ. ನೀವೂ ಕೇಳಿರಬಹುದು. ತುಂಬಾ ಅಂತರವಿದ್ದರೆ ಮದುವೆ ಮುರಿದು ಹುಡುಗ ಅಥವಾ ಹುಡುಗಿಯ ಬಗ್ಗೆ ಅವರ ಮನೆಯವರಿಗೆ ಚಾಡಿ ಹೇಳಿ ಅಥವಾ ಬೇರೆ ಯಾವುದೋ ಕಾರಣಕ್ಕೆ ಮದುವೆ ತಪ್ಪಿ ಹೋಗಬಹುದು ಎಂಬ ಭಯ ಹಿರಿಯರಲ್ಲಿ ಇರುತ್ತದೆ.

ಆದರೆ ನನ್ನ ಪ್ರಕಾರ ಹೇಳುವುದಾದರೆ ನಿಶ್ಚತಾರ್ಥ ಆದ ಮೇಲೆ ಸ್ವಲ್ಪ ಕಮ್ಮಿಯೆಂದರೂ 6 ತಿಂಗಳ ಕಾಲ ಅಂತರವಿರುವುದು ಒಳ್ಳೆಯದು. ನಿಶ್ಚಿತಾರ್ಥದ ನಂತರ ಮದುವೆಗೆ ಸ್ವಲ್ಪ ಸಮಯಾವಕಾಶವಿದ್ದರೆ ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳಬಹುದು, ಇಬ್ಬರು ಮಧ್ಯ ಒಂದು ಅನುಬಂಧ ಏರ್ಪಡುತ್ತದೆ. ಇಲ್ಲದಿದ್ದರೆ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಮದುವೆಯ ನಂತರ ಸ್ವಲ್ಪ ಕಾಲದವರೆಗೆ ಸಮಯ ತೆಗೆದುಕೊಳ್ಳುತ್ತಾರೆ.

Long Courtship Before Marriage is good?

ರೊಮ್ಯಾನ್ಸ್, ಫ್ರೆಂಡ್ ಶಿಪ್ ಗಟ್ಟಿಯಾಗುತ್ತದೆ. ಮದುವೆಯ ನಂತರ ರೊಮ್ಯಾನ್ಸ್ ಇರುತ್ತದೆ, ಆದರೆ ಫ್ರೆಂಡ್ಸ್ ಗಳಂತೆ ಎಲ್ಲಾ ಗಂಡ- ಹೆಂಡತಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈಗಂತೂ ಫೋನ್, ಇಂಟರ್ ನೆಟ್ ಸೌಲಭ್ಯವಿದೆ. ಇಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಅವರ ನೈಜ ಗುಣ ತಿಳಿಯಬಹುದು.

ಅವರು ನಿಮಗೆ ಹೊಂ ಮದುವೆಯಾಗಿ ನಂತರ ಛೇ, ಇವರ ಬಗ್ಗೆ ಏನೂ ತಿಳಿಯದೆ ನಾನು ದುಡುಕಿ ಬಿಟ್ಟೆ ಎಂದು ಪಶ್ಚಾತಾಪ ಪಡುವವರನ್ನೂ ಕಂಡಿದ್ದೇನೆ. ಆದ್ದರಿಂದ ದುಡುಕಿ ಮದುವೆಯಾಗುವ ಬದಲು ಅವರ ಗುಣಗಳ ಬಗ್ಗೆ ತಿಳಿದುಕೊಂಡರೆ ಅವರಿಗೋಸ್ಕರ ನಾವೂ ಹೇಗೆ ಬದಲಾಗಬೇಕು ಎಂಬ ಐಡಿಯಾ ತಲೆಯಲ್ಲಿರುತ್ತದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರಬೇಕು. ಅದು ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಟವಾಗುವುದು.

ಆದ್ದರಿಂದ ಒಬ್ಬನ/ಳ ಗುಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮದುವೆ ಮಾಡಿಕೊಂಡು ಮುಂದೆ ಪಶ್ಚಾತಾಪ ಪಡುವ ಬದಲು ಅವರನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡು ನಂತರ ಮದುವೆಯಾಗುವುದು ಒಳ್ಳೆಯದು ಅಂತ ನನ್ನ ಅಭಿಪ್ರಾಯ, ನೀವೇನಂತೀರಿ?

English summary

Long Courtship Before Marriage is good? | Love And Relationship | ನಿಶ್ಚತಾರ್ಥದ ನಂತರ ಮದುವೆಗೆ ತುಂಬಾ ಲೇಟ್ ಮಾಡಬಹುದೇ? | ಪ್ರೀತಿ ಮತ್ತು ಸಂಬಂಧ

Both long and short courtships have their own advantages and disadvantages. Like the two sides of a coin, a courtship can be good as well as bad.But i support long courtship
X
Desktop Bottom Promotion