For Quick Alerts
ALLOW NOTIFICATIONS  
For Daily Alerts

ಈ ಮೋಸ ನಿಮ್ಮ ಅರಿವಿಗೆ ಬಂದಿದೆಯೇ?

|

ನೀವು ಒಂದು ಒಳ್ಳೆಯ ಸಂಬಂಧವನ್ನು ಸಂಗಾತಿಯೊಂದಿಗೆ ಹೊಂದಿರುತ್ತೀರಿ. ಆದರೆ ಇದ್ದಕ್ಕಿದ್ದಂತೆ ನಿಮಗೆ ಇದರಲ್ಲೇನೋ ದೋಷವಿದೆ ಅಥವಾ ತಪ್ಪಿದೆ ಎಂಬುದು ನಿಮ್ಮ ಅನುಭವಕ್ಕೆ ಬರುತ್ತದೆ. ಫೀಲ್ ಮಾಡುತ್ತೀರಿ. ನೀವು ನಿಮ್ಮ ಪತಿಯ ವರ್ತನೆಯಲ್ಲಿ ಬದಲಾವಣೆಗಳಾಗಿದ್ದನ್ನು ಗಮನಿಸುತ್ತೀರಿ ! ನಿಮಗೆ ಯಾಕೋ ಅವನು ನನ್ನನ್ನು ಮೋಸಗೊಳಿಸುತ್ತಿದ್ದಾನೆ ಎನದು ಅನಿಸಲಾರಂಭಿಸುತ್ತದೆ. ಹೀಗೆ ಅನಿಸಿದರೆ ಅವರ ಹತ್ತಿರ ನೇರವಾಗಿ ಕೇಳಲು ಸಾಧ್ಯವಿಲ್ಲ. ಆದರೆ ಈ ಕೆಳಗಿನ ಉಪಾಯಗಳಿಂದ ಅವರು ನಿಮಗೆ ಮೋಸ ಮಾಡುತ್ತಿದ್ದಾರೆಯೇ? ಇಲ್ಲವೇ ಎಂದು ಕಂಡು ಹಿಡಿಯಬಹುದು:

ಹಂತಗಳು :
1. ನಿಮ್ಮ ಪತಿಯ ವರ್ತನೆ, ನಡವಳಿಗೆಯಲ್ಲಾದ ಬದಲಾವಣೆಗಳನ್ನು ಗಮನಿಸಿ. ಯಾವಾಗಲೂ ನಿಮಗಾಗಿ ಸಮಯವನ್ನು ಮೀಸಲಿಡುತ್ತಿರುವ, ಆಗಾಗ ಉಡುಗೊರೆಗಳನ್ನು ನೀಡುತ್ತಿರುವ ನಿಮ್ಮ ಪತಿ ಇವುಗಳನ್ನು ಕಡಿಮೆ ಮಾಡಿರಬಹುದು. ಇದನ್ನು ಗಮನಿಸಿ.

2. ಐ ಲವ್ ಯು - ಯಾವಾಗಲೂ ಐ ಲವ್ ಯು (ನಾನು ನಿನ್ನನ್ನು ಪ್ರೀತಿಸುತ್ತೇನೆ) ಎಂದು ಹೇಳುವುದನ್ನು ಒಂದೇ ಸಮನೆ ಕಡಿಮೆ ಮಾಡಬಹುದು. ಅಥವಾ ನೀವು ಹೇಳಿದರೂ ಅದಕ್ಕೆ ಉತ್ತರಿಸದೇ ಇರಬಹುದು. ಅಥವಾ ನೀವು ಐ ಲವ್ ಯು ಟೂ ಎನ್ನುವ ಸಾಮಾನ್ಯ ಸಂದೇಶ (ಮೆಸೆಜ್) ವನ್ನಷ್ಟೇ ಅವರಿಂದ ಸ್ವೀಕರಿಸುತ್ತೀರಿ.

3. ತಪ್ಪುಗಳು - ನಿಮ್ಮ ಹೆಸರು ಅಥವಾ ಅವರೇ ಪ್ರೀತಿಯಿಂದ ಇಟ್ಟ ಹೆಸರೊಂದನ್ನು ಕರೆಯಲು ಮರೆಯಬಹುದು. ನಿಮ್ಮ ಹೆಸರನ್ನು ಕರೆಯಲು ಸಾಕಷ್ಟು ಸಾರಿ ನೆನಪಿಸಿಕೊಳ್ಳಬಹುದು. ಅಥವಾ ಕರೆಯುವಾಗ ತಡವರಿಸಬಹುದು. ನಿಮ್ಮ ಇಷ್ಟಗಳನ್ನೂ ಮರೆಯಬಹುದು.

4. ಅವನ/ಅವಳ ಮೊಬೈಲ್ ಗಳನ್ನು ಪರೀಕ್ಷಿಸಿ - ಕೇವಲ ಅವರ್ ಮೊಬೈಲ್ ಗಳಲ್ಲಿರುವ ಕರೆಗಳು ಅಥವಾ ಸಂದೇಶಗಳು ನಿಮ್ಮೆಲ್ಲ ಅನುಮಾನಗಳಿಗೆ ಸರಿಯಾದ ಉತ್ತರ ನೀಡಬಲ್ಲದು. ಆದ್ದರಿಂದ ಒಮ್ಮೆ ಅದನ್ನು ಪರೀಕ್ಷಿಸಿ.

5. ದಿನ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಗಮನಿಸಿ - ದಿನವೂ ಮಾಡುತ್ತಿರುವ ಅವರ ಕೆಲಸಗಳಲ್ಲಿ ಏನು ಬದಲಾವಣೆಯಾಗಿದೆ ಎಂಬುದನ್ನು ಮೊದಲು ಪರೀಕ್ಷಿಸಿ. ಏನು ಮಾಡುತ್ತಿದ್ದಾನೆ/ಳೆ, ಮುಂದೇನು ಮಾಡುತ್ತಾನೆ/ಳೆ ಎನ್ನುವುದನ್ನು ಸರಿಯಾಗಿ ನೋಡುತ್ತೀರಿ.

6. ಹಿಂಬಾಲಿಸಿ - ಅವರಿಗೆ ತಿಳಿಯದ ಹಾಗೆ ಅವರು ಹೊರಗೆ ಹೊರಟಾಗ ಅವರನ್ನು ಹಿಂಬಾಲಿಸಿ. ಆಗ ಅವರು ಎಲ್ಲೆಲ್ಲಿ ಹೋಗುತ್ತಾರೆಂಬುದು ನಿಮಗೆ ಸ್ಪಷ್ಟವಾಗುತ್ತದೆ.

7. ಸ್ನೇಹಿತರು - ಅವರ ಸ್ನೇಹಿತರೊಂದಿಗೆ ಅವರ ಬಗ್ಗೆ ಮಾತನಾಡಿ, ಹಾಗೆಯೇ ನಿಮ್ಮ ಸ್ನೇಹಿತರನ್ನೂ ಈ ವಿಷಯದಲ್ಲಿ ಅಳವಡಿಸಿ.

How to Catch a Cheating Partner

ಟಿಪ್ಸ್ :
ಯಾವುದೇ ಕೆಲಸವನ್ನು (ಪರೀಕ್ಷಿಸುವ) ಹರಿಬರಿಯಲ್ಲಿ ಮಾಡಬೇಡಿ ಇದರಿಂದ ಅನಾಹುತಗಳಾಗಬಹುದು.
ನಿಮ್ಮ ಪತಿ/ ಪತ್ನಿ ನಿಮ್ಮನ್ನು ಮೋಸಗೊಳಿಸಿದ್ದು ತಿಳಿದು ಬಂದರೆ ಬೇಜಾರಾಗಬೇಡಿ. ಅವರಿಗೆ ಬುದ್ಧಿ ಹೇಳಿ ಸರಿ ದಾರಿಗೆ ತರಲು ಸಾಧ್ಯವೇ ಎಂದು ಪ್ರಯತ್ನಿಸಿ.
ನೀವು ಏನೆ ಮಾಡಿದರೂ ಏಗರಾಡದೆ ಶಾಂತವಾಗಿ ಮಾಡಿ.
ನಿಮ್ಮ ಸ್ನೇಹಿತರಿಂದ ಸಲಹೆ ಹಾಗೂ ಸಹಾಯಗಳನ್ನು ಪಡೆಯಿರಿ.

ಸೂಚನೆಗಳು :
ನೀವು ನಿಮ್ಮ ಸಂಗಾತಿಯನ್ನು ಹಿಂಬಾಲಿಸುತ್ತಿರುವ ವಿಷಯ ಯಾವುದೇ ಕಾರಣಕ್ಕೂ ಅವರಿಗೆ ಗೊತ್ತಾಗದ ಹಾಗೆ ನೋಡಿಕೊಳ್ಳಿ. ಇಲ್ಲವಾದರೆ ನಿಮ್ಮ ಸಂಬಂಧಗಳಲ್ಲಿ ಬಿರುಕು ಮೂಡಬಹುದು.
ನೇಹಿತರಿಂದ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಸಹಾಯವನ್ನು ತೆಗೆದುಕೊಳ್ಳಿ. ಆದರೆ ಆ ಸ್ಬೇಹಿತರು ನಿಮ್ಮಗೆ ನಂಬಿಕಸ್ಥರಾಗಿರಲಿ. ಅವರಿಂದಲೇ ನಿಮ್ಮ ಸಂಬಂಧಗಳು ಮತ್ತಷ್ಟು ಹಾಳಾಗುವುದು ಬೇಡ.
ಒಟ್ಟಿನಲ್ಲಿ ನಿಮ್ಮ ಸಂಗಾತಿ ನಿಮ್ಮನ್ನು ಮೋಸಗೊಳಿಸಿದರೆ ಅದನ್ನು ನೀವೆ ಖಚಿತ ಪಡಿಸಿಕೊಂಡು ಸರಿಪಡಿಸಿಕೊಳ್ಳಿ. ಇಲ್ಲವಾದರೆ ಚೆನ್ನಾಗಿ ನಡೆಯಬೇಕಾಸ ಸಂಸಾರ ಸೂತ್ರ ಹರಿದ ಗಾಳಿಪಟ ದಂತಾಗಬಹುದು.

English summary

How to Catch a Cheating Partner | ಈ ಮೋಸ ನಿಮ್ಮ ಅರಿವಿಗೆ ಬಂದಿದೆಯೇ?

You have a lovely relationship but suddenly you start feeling that something is wrong... you feel your partner has changed! Watch Out! He may be cheating on you.
Story first published: Thursday, January 17, 2013, 11:23 [IST]
X
Desktop Bottom Promotion