For Quick Alerts
ALLOW NOTIFICATIONS  
For Daily Alerts

ಪ್ರೇಮಿಯಿದ್ದರೂ ಒಂಟಿತನ ಕಾಡುತ್ತಿದೆಯೇ?

|

ರಿಲೇಷನ್ ಶಿಪ್ ನಲ್ಲಿದ್ದವರಿಗೆ ಒಂಟಿತನ ಕಾಡುವುದೇ ಇಲ್ಲ, ಒಂಟಿಯಾಗಿ ಇದ್ದಾಗಲೂ ತನ್ನ ಪ್ರೇಮಿಯ ಬಗ್ಗೆ ಚಿಂತಿಸುವುದರಿಂದ ಒಂಟಿತನ ಸಾಮಾನ್ಯವಾಗಿ ಕಾಡುವುದಿಲ್ಲ. ಒಂದು ವೇಳೆ ನಿಮ್ಮ ಪ್ರೇಮಿ ನಿಮ್ಮ ಸಮೀಪ ಇದ್ದರೂ ನಿಮ್ಮಲ್ಲಿ ಒಂಟಿತನ ಕಾಡಿದರೆ ನಿಮ್ಮ ಸಂಬಂಧ ಸರಿಯಾಗಿ ಇಲ್ಲವೆಂದು ಅರ್ಥ.

ಸಂಬಂಧ ಸರಿಯಿಲ್ಲ ಅಂದರೆ somethinf wrong ಅನ್ನುವ ಅರ್ಥದಲ್ಲಿ ಹೇಳುತ್ತಿಲ್ಲ. ನೀವಿಬ್ಬರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥೈಸಿಕೊಂಡಿರಬಹುದು, ಆದರೂ ನಿಮ್ಮ ಸಂಬಂಧದಲ್ಲಿ ಏನೋ ಕೊರತೆಯಿಂದ ನಿಮಗೆ ಒಂಟಿತನ ಕಾಡಬಹುದು. ಪ್ರೀತಿಸುವ ವ್ಯಕ್ತಿ ಇದ್ದರೂ ಒಂಟಿ ಅನಿಸಲು ಕಾರಣವೇನು ಮತ್ತು ಅದಕ್ಕೆ ಪರಿಹಾರವೇನು? ಎಂದು ಈ ಕೆಳಗೆ ನೀಡಲಾಗಿದೆ ನೋಡಿ:

Do You Feel Lonely In Your Relationship?

ಫ್ರೆಂಡ್ ಶಿಪ್ : ಇಬ್ಬರು ಗೆಳೆಯರಂತೆ ಇದ್ದರೆ ಒಂಟಿತನ ಕಾಡುವುದಿಲ್ಲ. ಆದರೆ ಹೆಚ್ಚಿನವರು ತಾವು ಗಹಂಡ-ಹೆಂಡತಿಯಂತೆ ಇರುತ್ತಾರೆ ಹೊರತು ಗೆಳೆಯರಂತೆ ಇರುವುದಿಲ್ಲ. ಅದರ ಪರಿಣಾಮ ಚಿಕ್ಕ ಪುಟ್ಟ ವಿಷಯಗಳಿಗೆ ಮನಸ್ಸಿಗೆ ನೋವಾಗುವುದು ಇದರಿಂದ ಒಂಟಿತನ ಕಾಡಲಾರಂಭಿಸುತ್ತದೆ.

ಮಾತುಕತೆ: ಗಂಡ-ಹೆಂಡತಿಯ ನಡುವೆ ಮಾತುಕತೆ ಕಮ್ಮಿಯಿದ್ದರೆ ಅಲ್ಲಿ ಸಮಸ್ಯೆ ಕಂಡು ಬರುತ್ತದೆ. ಏನಿದ್ದರೂ ಇಬ್ಬರು ಮನಸ್ಸು ಬಿಟ್ಟು ಮಾತನಾಡಬೇಕು. ಅಂದರೆ ಮಾತ್ರ ಒಬ್ಬರ ಮನಸ್ಸು ಮತ್ತೊಬ್ಬರಿಗೆ ತಿಳಿಯಲು ಸಾಧ್ಯ.

ದೂರದಲ್ಲಿರುವುದು: ನಿಮ್ಮ ಸಂಗಾತಿ ಕೆಲಸದ ನಿಮಿತ್ತ ತುಂಬಾ ದೂರದಲ್ಲಿದ್ದರೆ ನಾನು ಒಂಟಿಯಾಗಿದ್ದೇನೆ ಎಂದು ಅನಿಸಬಹುದು.

ಪರಿಹಾರ: ಒಂಟಿಯಾಗಿದ್ದೇನೆ ಅನಿಸಿದಾಗ ಸ್ನೇಹಿತರನ್ನು ಭೇಟಿ ಮಾಡಿ ಅಥವಾ ನಿಮ್ಮನ್ನು ನೀವು ಬ್ಯುಸಿಯಾಗಿಸಿಕೊಳ್ಳಿ. ಹವ್ಯಾಸಗಳು ಕೂಡ ಒಂಟಿತನದಿಂದ ಹೊರಬರಲು ಸಹಾಯ ಮಾಡುತ್ತದೆ. ವಾಸ್ತವತೆಯನ್ನು ಅರೆತು ಅದರಂತೆ ನಡೆಯಲು ಕಲಿಯುವುದು ಇವುಗಳಿಂದ ಒಂಟಿತನವನ್ನು ಹೋಗಲಾಡಿಸಬಹುದು.

English summary

Do You Feel Lonely In Your Relationship? | Love And Relationship | ಪ್ರೇಮಿಯಿದ್ದರೂ ಒಂಟಿತನ ಕಾಡುತ್ತಿದೆಯೇ? | ಪ್ರೀತಿ ಮತ್ತು ಸಂಬಂಧ

Do you feel lonely inspite of being in a relationship? It does not mean that there is something wrong with the relationship itself. It could be a passing phase or an indication that you need to let go a little.
X
Desktop Bottom Promotion