For Quick Alerts
ALLOW NOTIFICATIONS  
For Daily Alerts

ಈ 7 ಸಂಬಂಧಗಳ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳು

|

ಒಬ್ಬ ಮನುಷ್ಯನಿಗೆ ಅಪ್ಪ, ಅಮ್ಮ, ಸಹೋದರ, ಸಹೋದರಿ, ಗಂಡ/ಹೆಂಡತಿ, ಅತ್ತೆ, ಮಾವ ಈ ರೀತಿಯ ಸಂಬಂಧಗಳು ಇದ್ದೇ ಇರುತ್ತದೆ. ಎಲ್ಲಾ ಸಂಬಂಧಗಳಿಂದ ಮುಕ್ತನಾದ ವ್ಯಕ್ತಿಯೇ ಇರುವುದಿಲ್ಲ. ಸಂಬಂಧಗಳಲ್ಲಿ ಕೆಲವೊಂದು ಗುಣಗಳನ್ನು ನಿರೀಕ್ಷೆ ಮಾಡುತ್ತೇವೆ, ಮತ್ತೆ ಕೆಲವು ಸಂಬಂಧಗಳು ಹೀಗೇ ಇರುತ್ತವೆ ಎಂದು ನಾವೇ ಭ್ರಮಿಸಿ ಅದರಂತೆ ಇರಲು ಪ್ರಯತ್ನಿಸುತ್ತೇವೆ. ಉದಾಹರಣೆಗೆ ಅತ್ತೆ -ಸೊಸೆ ಅಂದ ಮೇಲೆ ಅವರಿಬ್ಬರ ನಡುವೆ ಸಂಬಂಧ ಸರಿಯಿರುವುದಿಲ್ಲ ಎಂಬ ಅಭಿಪ್ರಾಯ ನಮ್ಮಲ್ಲಿದೆ. ಅತ್ತೆ ಸೊಸೆ ಆತ್ಮೀಯವಾಗಿ ಇರಲು ಸಾಧ್ಯ ಎಂಬ ಯೋಚನೆ ಏಕೆ ನಮ್ಮ ತಲೆಯಲ್ಲಿ ಬರುವುದಿಲ್ಲ.

ಈ ರೀತಿಯ ಅನೇಕ ಏಕಪ್ರಕಾರ ಯೋಚನೆಗಳು ನಮ್ಮ ತಲೆಯಲ್ಲಿವೆ. ಆದರೆ ಎಲ್ಲಾ ಸಮಯದಲ್ಲೂ ನಾವು ಯೋಚಿಸುವಂತೆ ವಾಸ್ತವ ಅಂಶ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಮಾಜದಲ್ಲಿ ಸಂಬಂಧಗಳ ಅನೇಕ ಏಕಪ್ರಕಾರ ಆಲೋಚನೆಗಳಿವೆ. ನಾವು-ನೀವು ಯೋಚಿಸುತ್ತಿರುವ ಆ ಏಕ ಪ್ರಕಾರಗಳಾವುವು ಎಂದು ನೋಡೋಣ ಬನ್ನಿ.

ಅತ್ತೆ-ಸೊಸೆ ಸಂಬಂಧ

ಅತ್ತೆ-ಸೊಸೆ ಸಂಬಂಧ

ಅತ್ತೆ ಸೊಸೆ ಸಂಬಂಧದಲ್ಲಿ ಆತ್ಮೀಯತೆ ಇರಲ್ಲ, ಸೊಸೆಯ ತಪ್ಪುಗಳನ್ನು ಕಂಡು ಹಿಡಿಯುವುದೇ ಅತ್ತೆಯ ಕೆಲಸ ಅಂತೆಲ್ಲಾ ಯೋಚಿಸುತ್ತೇವೆ. ತನ್ನ ಸುತ್ತ ಮುತ್ತಲಿನವರಿಂದ ಕೇಳಿ ಬೆಳೆಯುವ ಹೆಣ್ಣು ಮಕ್ಕಳು ಮುಂದೆ ನನ್ನ ಅತ್ತೆ ಕೂಡ ಇವರೆಲ್ಲಾ ಹೇಳಿದ ರೀತಿ ವರ್ತಿಸಬಹುದು ಎಂದು ಯೋಚಿಸಿರುತ್ತಾಳೆ. ಕೊನೆಗೆ ತಾನು ಮದುವೆಯಾಗಿ ಹೋದ ಮೇಲೆ ಅತ್ತೆ ಏನಾದರೂ "ಅದು ಆಗಲ್ಲಮ್ಮ, ಹೀಗೆ" ಅಂದರೆ ಸಾಕು ಅತ್ತೆ ನನಗೆ ಕಿರುಕುಳ ಕೊಡಲುಪ್ರಾರಂಭಿಸಿದಳು ಎಂದು ಅಂದುಕೊಳ್ಳುತ್ತಾಳೆ. ಅಲ್ಲಿಗೆ ಅತ್ತೆ-ಸೊಸೆ ಸಂಬಂಧ ಹೀಗೆ ಇರುತ್ತದೆ ಅನ್ನುವ ಅವಳ ಕಲ್ಪನೆ ನಿಜವಾಗಿ ಬಿಡುತ್ತದೆ.

ಹುಡುಗ-ಹುಡುಗಿ ಬೆಸ್ಟ್ ಫ್ರೆಂಡ್ ಆಗಿರಲು ಸಾಧ್ಯವಿಲ್ಲ

ಹುಡುಗ-ಹುಡುಗಿ ಬೆಸ್ಟ್ ಫ್ರೆಂಡ್ ಆಗಿರಲು ಸಾಧ್ಯವಿಲ್ಲ

ಹುಡುಗ-ಹುಡುಗಿ ಕೊನೆತನಕ ಬರೀ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂಬ ಭಾವನೆ ಜನರಲ್ಲಿದೆ. ಇದರಿಂದ ಪ್ರಾಣ ಸ್ನೇಹಿತರಾಗಿರುವ ಹುಡುಗ-ಹುಡುಗಿಯನ್ನು ಸಮಾಜ ಸಂಶಯ ದೃಷ್ಟಿಯಿಂದ ನೋಡುತ್ತದೆ. ಅವರು ಒಳ್ಳೆಯ ಸ್ನೇಹಿತರೇ ಆಗಿರಬಹುದಲ್ಲಾ? ಅವರನ್ನು ಸಂಶಯ ದೃಷ್ಟಿಯಿಂದ ನೋಡುವ ಸಮಾಜಕ್ಕೆ ತನ್ನ ದೃಷ್ಟಿಕೋನ ಬದಲಾಯಿಸಲು ಸಾಧ್ಯವಿಲ್ಲವೇ?

ಬಾಸ್ ಮತ್ತು ಕೆಲಸಗಾರರು

ಬಾಸ್ ಮತ್ತು ಕೆಲಸಗಾರರು

ಬಾಸ್ ಅಂದರೆ ತುಂಬಾ ಸ್ಟ್ರಿಕ್ಟ್ ಆಗಿರಬೇಕು ಎಂಬ ಭಾವನೆ ಇರುತ್ತದೆ. ಆಫೀಸ್ ನಲ್ಲಿ ಕೆಲಸ ಆಗಲು ಅವರು ಹಾಗೇ ಇರಬೇಕಾಗುತ್ತದೆ. ಆದರೆ ಆಫೀಸ್ ಹೊರಗೆ ಫ್ರೆಂಡ್ಸ್ ಆಗಿರಬಹುದು.

ಮುದುಕ ಮತ್ತು ತರುಣಿ

ಮುದುಕ ಮತ್ತು ತರುಣಿ

ಮುದುಕನ ತರುಣಿ ಮದುವೆಯಾದರೆ ನಾವೆಲ್ಲಾ ಯೋಚಿಸುತ್ತೇವೆ ಅವನ ಹಣ ಕಂಡು ಅವಳು ಅವನ ಜೊತೆ ಇರಬಹುದು. ಆದರೆ ಅವನ ಗುಣ ಅವಳಿಗೆ ಇಷ್ಟವಾಗಿರಬಹುದೆಂದು ಏಕೆ ಯೋಚಿಸುವುದಿಲ್ಲ.

ಹುಡುಗಿಯರ ನಡುವೆ ಹೊಟ್ಟೆಕಿಟ್ಟು ಇರುತ್ತದೆ

ಹುಡುಗಿಯರ ನಡುವೆ ಹೊಟ್ಟೆಕಿಟ್ಟು ಇರುತ್ತದೆ

ಫ್ರೆಂಡ್ ಶಿಪ್ ಇದ್ದರೂ ಹುಡುಗಿಯರಿಗೆ ತಮ್ಮ ಸ್ನೇಹಿತೆಯ ಏಳಿಗೆಯನ್ನು ಹೊಟ್ಟೆಕಿಚ್ಚು ಆಗುವುದು ಖಂಡಿತ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಎಲ್ಲಾ ಹುಡುಗಿಯರು ಹೀಗೆ ಅಂತ ಹೇಳಲು ಸಾಧ್ಯವಿಲ್ಲ. ಕೆಲ ಹುಡುಗಿಯರು ಹುಡುಗರಷ್ಟೇ ತಮ್ಮ ಫ್ರೆಂಡ್ ಶಿಪ್ ಗೆ ಬೆಲೆ ಕೊಡುತ್ತಾರೆ.

ನಿಜವಾದ ಪ್ರೇಮದಲ್ಲಿ ಯಾವುದೇ ನಿರೀಕ್ಷೆ ಇರಬಾರದು

ನಿಜವಾದ ಪ್ರೇಮದಲ್ಲಿ ಯಾವುದೇ ನಿರೀಕ್ಷೆ ಇರಬಾರದು

ಪ್ರೀತಿಸುತ್ತಿರುವ ವ್ಯಕ್ತಿಯ ಹತ್ತಿರದಿಂದ ಯಾವುದೇ ವಸ್ತುವನ್ನು ನಿರೀಕ್ಷಿಸಬಾರದು. ಸದಾ ಅವನ / ಅವಳ ಪ್ರೀತಿ ಮಾತ್ರ ಇದ್ದರೆ ಸಾಕು ಅನ್ನುವುದು ಶುದ್ಧ ಸುಳ್ಳು. ಪ್ರೀತಿಸುವ ವ್ಯಕ್ತಿಯಿಂದ ವಸ್ತುಗಳನ್ನು ನಿರೀಕ್ಷಿಸುವುದು, ತನ್ನ ಇಷ್ಟದ ಸ್ಥಳಗಳಿಗೆ, ಸಿನಿಮಾಕ್ಕೆ ಕರೆದುಕೊಂಡು ಹೋಗಬೇಕೆಂದು ನಿರೀಕ್ಷಿಸುವುದು ತಪ್ಪಲ್ಲ(ಅತಿಯಾಸೆ ಸಲ್ಲದು).

 ನೀನೊಂದು ತೀರ, ನಾನೊಂದು ತೀರ

ನೀನೊಂದು ತೀರ, ನಾನೊಂದು ತೀರ

ದಂಪತಿಗಳು ಮದುವೆಯಾದ ಮೇಲೆ ಜೊತೆಯಲ್ಲಿರಬೇಕು ಎಂದು ಹೇಳುತ್ತಾರೆ. ಇಲ್ಲದಿದ್ದರೆ ದಂಪತಿಗಳ ನಡುವೆ ಪ್ರೀತಿ ಕಡಿಮೆಯಾಗುತ್ತದೆ. ಆದರೆ ತಮ್ಮ ಭವಿಷ್ಯ ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಲು ದೂರ-ದೂರ ಇರಬೇಕಾಗಿ ಬರಬಹುದು. ನಿಜವಾದ ಪ್ರೀತಿ ಇದ್ದರೆ ವ್ಯಕ್ತಿ ಎಷ್ಟು ದೂರವಿದ್ದರೂ ಅವರ ಮೇಲಿನ ಪ್ರೀತಿ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

English summary

7 Relationship Stereotypes | Love And Relationship | 7 ಸಂಬಂಧಗಳ ಬಗ್ಗೆ ಸಮಾಜದ ಅಭಿಪ್ರಾಯಗಳು | ಪ್ರೀತಿ ಮತ್ತು ಸಂಬಂಧ

In our society even the relationship between a married couple is stereotyped. Husbands and wives are expected to play out their well defined roles. They are not expected to be friends but conjugal partners. Sticking labels on relationships often leads to creation of these stereotypes.
X
Desktop Bottom Promotion