ಪುರುಷರ ಬಗೆಗಿನ ರಹಸ್ಯ: ಸ್ತ್ರೀಯರಿಗೆ ಮಾತ್ರ

By:
Subscribe to Boldsky

Building Relationship
ಪ್ರತಿಯೊಬ್ಬ ಮಹಿಳೆಯ ಮನಸ್ಸಿನಲ್ಲಿ 'ನನ್ನ ಹುಡುಗ ನನನ್ನು ತುಂಬಾ ಪ್ರೀತಿಸಬೇಕು. ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು' ಎಂಬ ಆಸೆ ಇದ್ದೇ ಇರುತ್ತದೆ. ಒಬ್ಬ ಪುರುಷರನ್ನು ಬದಲಾಯಿಸುವ ಶಕ್ತಿ ಹೆಣ್ಣಿಗಿದೆ ಎಂಬ ಮಾತು ಸತ್ಯ.

ತನ್ನ ಬುದ್ಧಿವಂತಿಕೆಯಿಂದ ಮನೆಯನ್ನು ಸುಂದರವಾಗಿ ಬೆಳಗುವ ಅಥವಾ ವಕ್ರ ಬುದ್ಧಿಯಿಂದ ಮನೆಯನ್ನು ಸ್ಮಶಾನ ಮಾಡುವ ಸಾಮರ್ಥ್ಯ ಹೆಣ್ಣಿನಲ್ಲಿದೆ ಎಂದು ಹೇಳಿದರೆ ಸ್ನೇಹಿತರೇ ನೀವು ಕೂಡ ನನ್ನ ಅಭಿಪ್ರಾಯವನ್ನು ಒಪ್ಪುತ್ತೀರಿ ಎಂದು ನನಗೆ ಗೊತ್ತು. ನಿಮ್ಮ ಪುರುಷ ನಿಮ್ಮನ್ನು ತುಂಬಾ ಇಷ್ಟಪಡಬೇಕು ಎಂದು ಬಯಸುತ್ತಿದ್ದೀರಾ? ಈ ಕೆಳಗೆ ಕೆಲವು ಗುಟ್ಟುಗಳನ್ನು ನಿಮಗೋಸ್ಕರ ಹೇಳಲಾಗಿದೆ, ಅವುಗಳನ್ನು ತಿಳಿದುಕೊಂಡರೆ ಸಂತೋಷದ ಬದುಕು ನಿಮ್ಮದಾಗುವುದು.

1. ಪುರುಷರಿಗೆ ನೈತಿಕ ಬೆಂಬಲ ಕೊಡಿ, ಒಂದು ವೇಳೆ ಯಾವುದಾದರೂ ಕಷ್ಟದಲ್ಲಿದ್ದರೆ ಅವರ ಜೊತೆಯಲ್ಲಿಯೇ ಇರಿ. ಅವರನ್ನು ಬಿಟ್ಟು ದೂರ ಹೋಗಲ್ಲ ಎಂಬ ಭಾವನೆಯನ್ನು ನಿಮ್ಮ ನಡುವಳಿಕೆಯಿಂದ ಮನವರಿಕೆ ಮಾಡಿ ಕೊಡಿ. ಹಾಗಂತ ತುಂಬಾ ಪ್ರೀತಿಸುತ್ತೇನೆ ಎಂದು ತೋರಿಸಿಕೊಳ್ಳಲು  ಸದಾ ಅವರ ಹಿಂದೆ, ಮುಂದೆ ಅಲೆಯುತ್ತಿದ್ದರೆ ಅವರಿಗೆ ತುಂಬಾ ಕಿರಿಕಿರಿಯಾಗುತ್ತದೆ.

2. ಅವರ ಜೊತೆ ಮನಪೂರ್ವಕವಾಗಿ ನಗಾಡಿ, ಅಣುಕು ನಗುವನ್ನು ಯಾವುದೇ ಸಂದರ್ಭಕ್ಕೂ ನೀಡಬೇಡಿ. ತಮಾಷೆಗಾಗಿ ಪರಸ್ಪರ ಛೇಡಿಸುವುದು ಒಳ್ಳೆಯದು, ಆದರೆ ತಮಾಷೆಗೆ ಹೇಳಿದ ಮಾತುಗಳು ಅವರ ಮನಸ್ಸಿಗೆ ಬೇಜರವಾಗದಂತೆ ಎಚ್ಚರವಹಿಸಿ

3. ನಿಮ್ಮ ಪುರುಷನ ಸ್ನೇಹಿತರ ಜೊತೆ ತುಂಬಾ ಸಲುಗೆ ಬೇಡ. ಒಂದು ವೇಳೆ ಅವರ ಸ್ನೇಹಿತರಲ್ಲಿ ಯಾರಾದರೂ ಒಬ್ಬ ನಿಮ್ಮ ಜೊತೆ ಫ್ಲರ್ಟ್ ಮಾಡುತ್ತಿದ್ದಾನೆ ಎಂದು ಅನಿಸಿದರೆ ಅಂತಹವರ ಜೊತೆ ಮಾತನಾಡಲು ಹೋಗಬೇಡಿ. ಅವರ ಸ್ನೇಹಿತರಿಗೆ ನೀವು ಒಬ್ಬ ಒಳ್ಳೆಯ ಸ್ನೇಹಿತಳಾಗಿರಿ.

4. ಮತ್ತೊಂದು ಮುಖ್ಯವಾದ ಅಂಶವೆಂದರೆ ಯಾವುದಾದರೂ ಚಿಕ್ಕ ವಿಷಯಕ್ಕೆ ತುಂಬಾ ಚಿಂತೆ ಮಾಡಬೇಡಿ. ನೀವು ಹಾಗೆ ಮಾಡಿದರೆ 'ಇವಳಿಗೆ ನನ್ನ ಮೇಲೆ ನಂಬಿಕೆಯಿಲ್ಲ' ಎಂಬ ಭಾವನೆ ಬರಲು ಕಾರಣವಾಗುತ್ತದೆ.

5. ಯಾವುದೇ ಕಾರಣಕ್ಕೆ ತುಂಬಾ ಮೇಕಪ್ ಮಾಡಬೇಡಿ, ತುಂಬಾ ಮೇಕಪ್ ಮಾಡಿದರೆ ನಿಮ್ಮವರಿಗೆ ತುಂಬಾ ಇಷ್ಟವಾಗಬಹುದು ಎಂಬ ಕಲ್ಪನೆಯಿದ್ದರೆ  ಅದು ಶುದ್ಧ ತಪ್ಪು, ಏಕೆಂದರೆ ಯಾವುದೇ ಪುರುಷನಿಗೆ ತನ್ನ ಹೆಣ್ಣು ಮಿತಿಮೀರಿ ಮೇಕಪ್ ಮಾಡುವುದು ಇಷ್ಟವಾಗುವುದಿಲ್ಲ.

6. ಮೈಗೆ ಅಧಿಕ ಘಾಟುವಿಲ್ಲದ ಸುಗಂಧ ದ್ರವ್ಯ ಬಳಸಿ, ನೀವು ಅವರ ಹತ್ತಿರ ಹೋಗುವಾಗ ನೀವು ತುಂಬಾ ಒಳ್ಳೆಯ ವಾಸನೆಯ ಸುಗಂಧ ದ್ರವ್ಯ ಬಳಸಿ. ಏಕೆಂದರೆ ನಿಮ್ಮ ಮೈಯಿಂದ ಬರುವ ಆ ಸುಗಂಧದ್ರವ್ಯದ ವಾಸನೆ ಅವರಿಗೆ ತುಂಬಾ ಪ್ರಿಯವಾಗುವುದು.

7. ಕೆಲವೊಂದು ವಿಷಯವನ್ನು ತುಂಬಾ ಚರ್ಚಿಸುತ್ತಿರುವಾಗ ಅವರು ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡಿದರೆ ನಿಮ್ಮ ಮಾತು ಕೇಳಲು ಇಷ್ಟಪಡುತ್ತಾರೆ ಎಂದು ಅರ್ಥ. ದಿನಾ ವಟವಟ ಅನ್ನುವ ಸ್ವಭಾವ ಬೇಡ. ಅವರ ಹತ್ತಿರ ಎಲ್ಲಾ ವಿಷಯವನ್ನು ಮುಚ್ಚುಮರೆಯಿಲ್ಲದೆ ಹೇಳಿ. ಅವರನ್ನು ನಂಬಿ, ಯಾವುದೇ ವ್ಯಕ್ತಿಯನ್ನು ತುಂಬಾ ನಂಬಿದರೆ ಅವರಿಗೆ ನಿಮ್ಮ ನಂಬಿಕೆ ಮೀರಿ ವರ್ತಿಸಲು ಕಷ್ಟವಾಗುತ್ತದೆ, ಆದ್ದರಿಂದ ಅವರಲ್ಲಿ ನಂಬಿಕೆ ಇಡಿ.

8. ಇಬ್ಬರಿಗೆ ಖುಷಿಕೊಡುವ ಆಟ ಆಡಿ, ಹೊರಗಡೆ ಸುತ್ತಲು ಹೋಗಿ ಇದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.

7. ಅವರಿಗೆ ನಿಮ್ಮ ನೆನೆಪು ಆಗಾಗ ಬರಲು ದಿನಬಳಕೆಯ ವಸ್ತುಗಳನ್ನು ನೀಡಿ, ಉದಾಹರಣೆಗೆ ಗಾಡಿ ಕೀ ಚೈನ್, ಬ್ರಾಸ್ ಲೆಟ್.

8. ಯಾವುದನ್ನು ಕೃತಕವಾಗಿ ಮಾಡಬೇಡಿ ಸಿನಿಮೀಯಾ ಸ್ಟೈಲ್ ನಲ್ಲಿ ವರ್ತಿಸುವುದು ಮಾಡಬೇಡಿ, ಕೃತಕತೆಗೆ ಮನ್ನಣೆ ದೊರೆಯುವುದಿಲ್ಲ.

9. ಮಾತನಾಡುವಾಗ ಕಣ್ಣುಗಳನ್ನು ನೋಡಿ ಮಾತನಾಡಿ, ಬೇರೆ ಕಡೆ ನೋಡಿ ಮಾತನಾಡುವುದು, ಅವರು ಮಾತನಾಡುವಾಗ ಕೇಳಿಸಿ ಕೊಳ್ಳದೇ ಇರುವುದು ಮಾಡಿದರೆ ನಿಮಗೆ ಅವರ ಮಾತುಗಳನ್ನು ಕೇಳಿಸಿಕೊಳ್ಳುವುದು ಇಷ್ಟವಿಲ್ಲ ಎಂದು ಭಾವಿಸಿಬಿಡುತ್ತಾರೆ.

10. ಆಗಾಗ ಪುರುಷರನ್ನು ಹೊಗಳಿದರೆ ಅವರಿಗೆ ತುಂಬಾ ಖುಷಿಯಾಗುತ್ತದೆ, ಅವರ ಹೇರ್ ಸ್ಟೈಲ್ ಚೆನ್ನಾಗಿದೆ, ಇವತ್ತು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ಅಂತ ಹೇಳಿ, ಅವರಲ್ಲಿ ನಿಮಗೆ ಏನಾದರೂ ಸಮಸ್ಯೆ ಕಂಡು ಬಂದರೆ ನೇರವಾಗಿ ಹೇಳಿ ಪರಿಹರಿಸಿಕೊಳ್ಳಿ. ಹೊಗಳಬೇಕೆಂದು ಸುಳ್ಳು-ಸುಳ್ಳು ಹೊಗಳಬಾರದು.

ಈ  ಅಂಶಗಳು ನಿಮ್ಮ ಗಮನದಲ್ಲಿದ್ದರೆ ನಿಮ್ಮ ಹುಡುಗ ನಿಮ್ಮನ್ನು ಖಂಡಿತವಾಗಿಯೂ ಇಷ್ಟಪಡುತ್ತಾನೆ.

Story first published: Friday, July 13, 2012, 17:10 [IST]
English summary

Tips To Make Your Boy To Love You More | Love And Relationship | ನಿಮ್ಮ ಹುಡುಗ ನಿಮ್ಮನ್ನು ತುಂಬಾ ಪ್ರೀತಿಸಲು ಕೆಲ ಸಲಹೆಗಳು | ಪ್ರೀತಿ ಮತ್ತು ಸಂಬಂಧ

Every girl want their boy should love them more. If you want your boy should love you more try these simple tips. This tips help you to build strong relationship.
Please Wait while comments are loading...
Subscribe Newsletter