For Quick Alerts
ALLOW NOTIFICATIONS  
For Daily Alerts

ದಾಲ್ ಕರಿ-ಬ್ಯಾಚುಲರ್ ರೆಸಿಪಿ

|

ನಮ್ಮ ಬ್ಯಾಚುಲರ್ ಸ್ಪೆಷಲ್ ಅಡುಗೆಯಲ್ಲಿ ಮೊದಲಿಗೆ ಸರಳವಾದ ಬೇಳೆ ಸಾರಿನ ರೆಸಿಪಿ ನೀಡುತ್ತಿದ್ದೇವೆ. ಈ ರೆಸಿಪಿ ನೀಡಲು ಕಾರಣವೆಂದರೆ ಮೊದಲ ಬಾರಿಗೆ ಸಾರು ಮಾಡುವವರು ಇದನ್ನು ಟ್ರೈ ಮಾಡಿದರೆ, ಈ ದಾಲ್ ಸಾರಿನ ರುಚಿ ಅವರಲ್ಲಿ ಇತರ ಅಡುಗೆಗಳನ್ನು ಕಲಿಯಲು ಆತ್ಮವಿಶ್ವಾಸ ತುಂಬುವುದಂತೂ ಖಂಡಿತ.

ಈ ಅಡುಗೆ ಮಾಡಿದರೆ ಖಂಡಿತ ರುಚಿಯಾದ ಸಾರನ್ನು ನೀವು ರೆಡಿ ಮಾಡಬಹುದು, ರುಚಿಯಾದ ಬೇಳೆ ಸಾರಿಗಾಗಿ ನೀವು ಏನು ಮಾಡಬೇಕೆಂದು ವಿವರವಾಗಿ ಹೇಳಿದ್ಧೇನೆ ನೋಡಿ.

Tasty Dal Recipe- Bachelor Recipe

ಬೇಕಾಗುವ ಸಾಮಾಗ್ರಿಗಳು

ಹೆಸರು ಬೇಳೆ ಅರ್ಧ ಕಪ್ (3-4 ಜನಕ್ಕೆ ಸಾಕಾಗುತ್ತದೆ)
ಈರುಳ್ಳಿ 1

ಎಣ್ಣೆ ಒಂದೂವರೆ ಚಮಚ
ಒಣ ಮೆಣಸು 2
1/4 ಚಮಚ ಸಾಸಿವೆ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಸ್ವಲ್ಪ ಕರಿಬೇವಿನ ಎಲೆ(8-10 ಎಸಳು)
ರುಚಿಗೆ ತಕ್ಕ ಉಪ್ಪು

ಅರ್ಧ ಚಮಚ ಮೆಂತೆ ಮೆಂತೆ
ಅರ್ಧ ಚಮಚ ಉದ್ದಿನ ಬೇಳೆ
ಜೀರಿಗೆ 1/4 ಚಮಚ
ಅರ್ಧ ಚಮಚ ಕಡಲೆ ಬೇಳೆ

ಅರ್ಧ ಚಮಚ ಮೆಣಸಿನ ಪುಡಿ
ಅರ್ಧ ಚಮಚ ಗರಂ ಮಸಾಲ ಪುಡಿ
ಅರಿಶಿಣ ಪುಡಿ ಅರ್ಧ ಚಮಚ
ಸಂಬಾರ ಪುಡಿ 1/4 ಚಮಚ

ತಯಾರಿಸುವ ವಿಧಾನ:

* ಮೊದಲು ಕುಕ್ಕರ್ ನಲ್ಲಿ ಬೇಳೆಯನ್ನು ತೊಳೆದು ಹಾಕಿ, ಈರುಳ್ಳಿಯನ್ನು ಕತ್ತರಿಸಿ ಹಾಕಿ, ಚಿಕ್ಕ ಚಮಚದಲ್ಲಿ ಮುಕ್ಕಾಲು ಚಮಚ ಉಪ್ಪು ಹಾಕಿ, ಒಂದೂವರೆ ಕಪ್ ನೀರು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ. ನಂತರ ಉರಿಯಿಂದ ಇಳಿಸಿ 10 ನಿಮಿಷ ತಣ್ಣಗಾಗಲು ಇಡಿ. (ಈ ಸಮಯದಲ್ಲಿ ಉಳಿದ ಪದಾರ್ಥಗಳನನ್ನು ಜೋಡಿಸಿಡಿ).

* ಈಗ ಸಾರು ಪಾತ್ರೆಯನ್ನು ಉರಿ ಮೇಲೆ ಇಟ್ಟು ಪಾತ್ರೆ ಸ್ವಲ್ಪ ಬಿಸಿಯಾದಾಗ ಎಣ್ಣೆ ಹಾಕಿ 1 ನಿಮಿಷ ಬಿಸಿ ಮಾಡಿ(ತುಂಬಾ ಬಿಸಿ ಮಾಡಿದರೆ ಎಣ್ಣೆಗೆ ಬೆಂಕಿ ಹತ್ತಿಕೊಳ್ಳುತ್ತದೆ) ಆದ್ದರಿಂದ ಎಣ್ಣೆ ಬಿಸಿಯಾಗುವಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಬರುವಾಗ ಕರಿಬೇವಿನ ಎಲೆ ಹಾಕಿ ಉದ್ದಿನ ಬೇಳೆ, ಜೀರಿಗೆ, ಕಡಲೆ ಬೇಳೆ, ಮೆಂತೆ ಹಾಕಿ 1 ನಿಮಿಷ ಆಡಿಸಿ.

* ಈಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ಒಣ ಮೆಣಸನ್ನು ಮುರಿದು ಹಾಕಿ, 2 ನಿಮಿಷ ಸೌಟ್ ನಿಂದ ಆಡಿಸಿ.

* ಈಗ ಬೇಯಿಸಿದ ಬೇಳೆಯನ್ನು ಪಾತ್ರೆಗೆ ಹಾಕಿ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಸ್ವಲ್ಪ ಸಂಬಾರ ಪುಡಿ ಹಾಕಿ ಸೌಟ್ ನಿಂದ ಆಡಿಸಿ, ನಂತರ ಉಪ್ಪು ನೋಡಿ, ಬೇಕಿದ್ದರೆ ಅರ್ಧ ಚಮಚ ಉಪ್ಪು ಹಾಕಿ ಮತ್ತೆ 3-4 ನಿಮಿಷ ಕುದಿಸಿ, ಹೀಗೆ ಕುದಿಸುವಾಗ ತಳ ಹಿಡಿಯದಿರಲು ಸೌಟ್ ನಿಂದ ಆಗಾಗ ಆಡಿಸಿ (ಉಪ್ಪು ತುಂಬಾ ಹಾಕಬೇಡಿ, ಉಪ್ಪು ಕಡಿಮೆಯಾದರೆ ಸೇರಿಸಬಹುದು, ಆದರೆ ಜಾಸ್ತಿಯಾದರೆ ಕಷ್ಟ, ಅಡುಗೆಯ ರುಚಿಯೇ ಕೆಡುವುದು). ಇಷ್ಟು ಮಾಡಿದರೆ ಸಾಕು ಅನ್ನದ ಜೊತೆ ತಿನ್ನಲು ದಾಲ್ ಕರಿ ರೆಡಿ. ಎಂಜಾಯ್ ಯುವರ್ ಫಸ್ಟ್ ಕುಕ್ಕಿಂಗ್. ಆಲ್ ದಿ ಬೆಸ್ಟ್.

English summary

Tasty Dal Recipe- Bachelor Recipe

This Dal recipe is very easy to prepare. If you are a Bachelor, want learn cooking start from this dal recipe. We are here to help you. 
X
Desktop Bottom Promotion