For Quick Alerts
ALLOW NOTIFICATIONS  
For Daily Alerts

ಮೆಂತೆ ಸೊಪ್ಪಿನ ಅನ್ನ-ಬ್ಯಾಚುಲರ್ ರೆಸಿಪಿ

|

ಬ್ಯಾಚುಲರ್ ಮಾಡಬಹುದಾದ ಮತ್ತೊಂದು ಸರಳ ಬ್ರೇಕ್ ಫಾಸ್ಟ್ ಅಂದರೆ ಮೆಂತೆ ಸೊಪ್ಪಿನ ಅನ್ನ(Methi rice). ಇದನ್ನು ಮಾಡುವುದು ತುಂಬಾ ಸುಲಭ ಕಣ್ರೀ. ಇದನ್ನು ಮಾಮೂಲಿ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ ಅರ್ಧ ಗಂಟೆಯ ಒಳಗೆ ತಯಾರಿಸಬಹುದು.

ಮೆಂತೆ ಸೊಪ್ಪನ್ನು ಸೋಸುವುದು ಕೂಡ ಸುಲಭವೇ. ಬನ್ನಿ ಮೆಂತೆ ಸೊಪ್ಪಿನಿಂದ ವಂಡರ್ ಫುಲ್ ರೈಸ್ ಬಾತ್ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಅಕ್ಕಿ 1 ಕಪ್
ಮೆಂತೆ ಸೊಪ್ಪಿನ ಕಟ್ಟು 2-3
ಬೆಳ್ಳುಳ್ಳಿ 7-8 ಎಸಳು
ಶುಂಠಿ 1 ಚಿಕ್ಕ ಪೀಸ್
ಹಸಿ ಮೆಣಸು 3 (ಎರಡು ಭಾಗವಾಗಿ ಮಾಡಿರಬೇಕು)
ಈರುಳ್ಳಿ 1(ಕತ್ತರಿಸಿದ್ದು)
ಅರಿಶಿಣ ಪುಡಿ ಅರ್ಧ ಚಮಚ
ಉಪ್ಪು
ಎಣ್ಣೆ 2 ಚಮಚ
ಉದ್ದಿನ ಬೇಳೆ ಅರ್ಧ ಚಮಚ
ಸ್ವಲ್ಪ ಸಾಸಿವೆ
ನಿಂಬೆರಸ ಅರ್ಧ ಚಮಚ

ತಯಾರಿಸುವ ವಿಧಾನ:

* ಮೊದಲು ಮೆಂತೆ ಸೊಪ್ಪನ್ನು ಕ್ಲೀನ್ ಮಾಡಿ ಇಡಿ.

* ನಂತರ ಅಕ್ಕಿಯನ್ನು ತೊಳೆದು 1 ಕಪ್ ಅಕ್ಕಿಗೆ 2 ಕಪ್ ನೀರು ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ. ನಂತರ ಉರಿಯಿಂದ ಇಳಿಸಿ ಆರಲು ಇಡಿ.

* ಈಗ ಫ್ರೈನ್ ಪ್ಯಾನ್ ತೆಗೆದು ಅದರಲ್ಲಿ ಎಣ್ಣೆ ಹಾಕಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಉದ್ದಿನ ಬೇಳೆ ಹಾಕಿ, ಈರುಳ್ಳಿ ಮತ್ತು ಬೆಳ್ಳುಳ್ಳಿ, ಹಸಿ ಮೆಣಸು, ಜಜ್ಜಿದ ಶುಂಠಿ ಹಾಕಿ ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬದಲಾಗುವವರೆಗೆ ಫ್ರೈ ಮಾಡಿ.

* ನಂತರ ಮೆಂತೆ ಸೊಪ್ಪು ಹಾಕಿ, ಅರಿಶಿಣ ಪುಡಿ, ಅರ್ಧ ಚಮಚ ಉಪ್ಪು ಹಾಕಿ ಫ್ರೈ ಮಾಡಿ, ಮೆಂತೆ ಸೊಪ್ಪು ಬೆಂದು ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಉಪ್ಪು ನೋಡಿ, ಉಪ್ಪು ಬೇಕಿದ್ದರೆ ಸ್ವಲ್ಪ ಹಾಕಿ, ಉಪ್ಪು ಸ್ವಲ್ಪ ಅಧಿಕ ಅನಿಸುವಷ್ಟು ಇರಬೇಕು, ಆಗ ಅನ್ನದ ಜೊತೆ ಕಲೆಸಿದಾಗ ಉಪ್ಪು ಸರಿಯಾಗಿರುತ್ತದೆ. ನಂತರ ಉರಿಯಿಂದ ಇಳಿಸಿ.

* ಈಗ ಅನ್ನವನ್ನು ಸ್ವಲ್ಪ ದೊಡ್ಡ ಪಾತ್ರೆಗೆ ಹಾಕಿ, ಆ ಪಾತ್ರೆಗೆ ಫ್ರೈ ಮಾಡಿಟ್ಟ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ, 1 ಚಮಚ ನಿಂಬೆ ರಸ ಹಾಕಿ ಮತ್ತೆ ಮಿಕ್ಸ್ ಮಾಡಿದರೆ ಸವಿ ರುಚಿಯ ಮೆಂತೆ ಸೊಪ್ಪಿನ ಅನ್ನ ರೆಡಿ.

English summary

Methi Rice Recipe

This is a wonderful recipe for the breakfast. To prepare this food not required more than 30 minutes. Try it, I am sure you will like the taste of this breakfast.
X
Desktop Bottom Promotion