For Quick Alerts
ALLOW NOTIFICATIONS  
For Daily Alerts

ಚೆನ್ನಾ ಗ್ರೇವಿ- ಬ್ಯಾಚುಲರ್ ರೆಸಿಪಿ

|

ಈ ಚೆನ್ನಾ ಗ್ರೇವಿ ತಿನ್ನಲು ರುಚಿಯಾಗಿರುತ್ತೆ , ಮಾತ್ರವಲ್ಲ ಇದನ್ನು ಮಾಡುವುದು ಕೂಡ ಸುಲಭ. ಸಾಮಾನ್ಯವಾಗಿ ಚೆನ್ನಾದಿಂದ ನಾನಾ ಬಗೆಯ ಅಡುಗೆ ಮಾಡಬಹುದಾದರೂ, ಸರಳವಾದ ಪದಾರ್ಥಗಳನ್ನು ಬಳಸಿ, ಅಚ್ಚುಕಟ್ಟಾಗಿ ಗ್ರೇವಿ ಮಾಡುವ ವಿಧಾನವನ್ನು ನನ್ನ ಬ್ಯಾಚುಲರ್ ಫ್ರೆಂಡ್ಸ್ ಆಗಿರುವ ನಿಮಗೆ ತಿಳಿಸಲು ಇಷ್ಟ ಪಡುತ್ತೇನೆ.

ಬನ್ನಿ ಈ ಚೆನ್ನಾ ಗ್ರೇವಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಚೆನ್ನಾ( ದೊಡ್ಡ ಕಡಲೆ) ಅರ್ಧ ಕಪ್
ಆಲೂಗಡ್ಡೆ 2
ಈರುಳ್ಳಿ 1
ಬೆಳ್ಳುಳ್ಳಿ 2-3 ಎಸಳು
ಗರಂ ಮಸಾಲ 1 ಚಮಚ
ಖಾರದ ಪುಡಿ ಅರ್ಧ ಚಮಚ(ಖಾರ ಬೇಕೆಂದರೆ 1 ಚಮಚ)
ಕೊತ್ತಂಬರಿ ಪುಡಿ ಅರ್ಧಚಮಚ
ಅರಿಶಿಣ ಪುಡಿ ಅರ್ಧ ಚಮಚ
ಎಣ್ಣೆ 2 ಚಮಚ
ಸಾಸಿವೆ ಅರ್ಧ ಚಮಚ
ಕರಿ ಬೇವಿನ ಎಲೆ
ಉದ್ದಿನ ಬೇಳೆ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ
* ಚೆನ್ನಾವನ್ನು ಕಡಿಮೆಯೆಂದರೂ 3-4 ಗಂಟೆಗಳ ನೆನೆ ಹಾಕಿ (ಇಲ್ಲದಿದ್ದರೆ ಬೇಗನೆ ಬೇಯುವುದಿಲ್ಲ).

* ನಂತರ ಚೆನ್ನಾ ಮತ್ತು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ, ಈರುಳ್ಳಿಯನ್ನು ಕತ್ತರಿಸಿ ಹಾಕಿ, ನಂತರ ಎರಡು ಕಪ್ ನೀರು ಸೇರಿಸಿ ಚಿಕ್ಕ ಚಮಚದಲ್ಲಿ ಅರ್ಧ ಚಮಚ ಉಪ್ಪು ಹಾಕಿ, ಕುಕ್ಕರ್ ನ ಬಾಯಿ ಮುಚ್ಚಿ 3 ವಿಶಲ್ ಬರುವವರೆಗೆ ಬೇಯಿಸಿ. ನಂತರ ಕುಕ್ಕರ್ ಅನ್ನು ಉರಿಯಿಂದ ಇಳಿಸಿ ಹತ್ತು ನಿಮಿಷ ಇಡಿ.

* ನಂತರ ಬಾಣಲೆ ಅಥವಾ ಪಾತ್ರೆಯನ್ನು ಉರಿ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾಗುವಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಮಾಡುವಾಗ ಜೀರಿಗೆ, ಉದ್ದಿನ ಬೇಳೆ ಹಾಕಿ ನಂತರ ಕರಿ ಬೇವಿನ ಎಲೆ ಹಾಕಿ 1 ನಿಮಿಷ ಸೌಟ್ ನಿಂದ ಆಡಿಸಿ. ನಂತರ ಬೆಳ್ಳುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ.

* ಈಗ ಬೇಯಿಸಿ, ಕಡಲೆ , ಆಲೂಗಡ್ಡೆಯನ್ನು ಹಾಕಿ, ನಂತರ ಅರಿಶಿಣ ಪುಡಿ, ಗರಂ ಮಸಾಲ, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ, ಚಿಕ್ಕ ಚಮಚದಲ್ಲಿ ಅರ್ಧ ಚಮಚ ಉಪ್ಪು ಹಾಕಿ ಕುದಿಸಿ. ಆದರೆ ಹೀಗೆ ಕುದಿಸುವಾಗ ಪಾತ್ರೆಯ ಬಾಯಿ ಮುಚ್ಚಬೇಡಿ, ಆಗ ನೀರು ಬೇಗನೆ ಆವಿಯಾಗುತ್ತದೆ. (ಸೌಟ್ ನಿಂದ ಆಗಾಗ ಆಡಿಸಲು ಮರೆಯಬೇಡಿ).

* ಚೆನ್ನಾ ಗ್ರೇವಿ ರೀತಿ ಬೇಕೆಂದರೆ ಮಾತ್ರ ನೀರು ಆವಿಯಾಗಿ, ಗ್ರೇವಿ ರೀತಿ ಆಗುವವರೆಗೆ(10-15 ನಿಮಿಷ ಬೇಕಾಗುವುದು) ಬೇಯಿಸಿ, ಸಾರು ರೀತಿ ಬೇಕೆಂದು ಬಯಸುವುದಾದರೆ 2-3 ನಿಮಿಷ ಕುದಿಸಿದರೆ ಸಾಕು. ನಿಮಗೆ ಹೇಗೆ ಬೇಕೋ ಹಾಗೆ (ಸಾರು ಅಥವಾ ಗ್ರೇವಿ) ತಯಾರಿಸಿದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿ-ರುಚಿಯಾದ ಚೆನ್ನಾ ಗ್ರೇವಿ ರೆಡಿ.

ಟಿಪ್ಸ್: ಉಪ್ಪು ಮಾತ್ರ ಮಿತಿಯಲ್ಲಿ ಹಾಕಿ, ಬೇಕಿದ್ದರೆ ಸೇರಿಸಬಹುದು.

English summary

Chenna Gravy Bachelor Recipe

Chenna gravy you can prepare in a variety of taste. But here i am giving the very easy recipe for my bachelor friends. Come lets check how to prepare this gravy.
X
Desktop Bottom Promotion