For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಅಡುಗೆಗಾಗಿ ಈ ನಿಯಮಗಳು ತಿಳಿದಿರಲಿ

|

ಆರೋಗ್ಯಕ್ಕೆ ತಿನ್ನುವ ಅಡುಗೆ ಎಷ್ಟು ಮುಖ್ಯವೋ ಅದನ್ನು ತಯಾರಿಸುವ ವಿಧಾನ ಕೂಡ ಅಷ್ಟೇ ಮುಖ್ಯ ಎಂದು ಹೇಳಬೇಕಾಗಿಲ್ಲ. ಬರೀ ಅಡುಗೆ ಕಲಿತು ಪ್ರಯೋಜನವಿಲ್ಲ, ಸ್ಪೆಷಲ್ ಸ್ಕಿಲ್ ಅಂತಾರಲ್ಲ ಹಾಗೇ ಅಡುಗೆ ಟಿಪ್ಸ್ ಗೊತ್ತಿದ್ದರೆ ಅಡುಗೆಯನ್ನು ಸರಳವಾಗಿ, ರುಚಿಕರವಾಗಿ, ಆರೋಗ್ಯಕರವಾಗಿ ಮಾಡಬಹುದು.

ಅಡುಗೆ ಮಾಡುವಾಗ ಕೆಲವೊಂದು ನಿಯಮಗಳಿವೆ, ಅವುಗಳನ್ನು ಯಾವುದೇ ಕಾರಣಕ್ಕೆ ಮರೆಯಬಾರದು. ಆ ನಿಯಮಗಳಾವುವು, ಅವುಗಳನ್ನು ಏಕೆ ಪಾಲಿಸಬೇಕು ಅನ್ನುವುದನ್ನು ಸ್ಲೈಡ್ ನಲ್ಲಿ ವಿವರಿಸಿದ್ದೇವೆ ನೋಡಿ:

 ಎಣ್ಣೆಯ ಪ್ರಮಾಣ

ಎಣ್ಣೆಯ ಪ್ರಮಾಣ

ಅಡುಗೆಯ ಬಳಸುವ ಎಣ್ಣೆಯ ಪ್ರಮಾಣದ ಪ್ರಭಾವ ನೇರವಾಗಿ ನಮ್ಮ ದೇಹದ ಮೇಲೆ ಬೀರುತ್ತದೆ. ಆದ್ದರಿಂದ ಎಣ್ಣೆಗೆ ಯಾವ ಎಣ್ಣೆ ಬಳಸುತ್ತಿದ್ದೇವೆ, ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇವೆ ಎನ್ನುವುದನ್ನು ಗಮನಿಸುವುದು ಒಳ್ಳೆಯದು. ಅಲ್ಲದೆ ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡದಿರುವುದು ಒಳ್ಳೆಯದು.

ತಾಜಾ ತರಕಾರಿಗಳು

ತಾಜಾ ತರಕಾರಿಗಳು

ಅಡುಗೆಗೆ ಫ್ರಿಜ್ ನಲ್ಲಿಟ್ಟು ಶೀತಲೀಕರಣ ಮಾಡಿದ ಆಹಾರಗಳಿಗಿಂತ ತಾಜಾ ತರಕಾರಿಗಳನ್ನು ಬಳಸುವುದು ಒಳ್ಳೆಯದು.

ಪ್ರೆಶರ್ ಕುಕ್ಕರ್

ಪ್ರೆಶರ್ ಕುಕ್ಕರ್

ಅಡುಗೆ ಮಾಡುವಾಗ ಆಹಾರದಲ್ಲಿನ ಪೋಷಕಾಂಶ ಹಾಳಾಗದಂತೆ ಬೇಯಿಸಿ ತಿನ್ನುವುದು ಒಳ್ಳೆಯದು. ಪೋಷಕಾಂಶ ಹಾಳಾಗದಿರಲು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದು ಕೂಡ ಒಂದು ಉತ್ತಮ ವಿಧಾನ.

 ಉಳಿದ ಪದಾರ್ಥಗಳು

ಉಳಿದ ಪದಾರ್ಥಗಳು

ಪದಾರ್ಥಗಳು ಉಳಿದರೆ ಅದನ್ನು ಹಾಗೇ ಇಟ್ಟು ಹಾಳು ಮಾಡುವ ಬದಲು ಅದರಿಂದ ಸೂಪ್, ಪಲ್ಯ ಅಂತ ಮಾಡಿ ತಿನ್ನುವುದು ಒಳ್ಳೆಯದು.

ಧಾನ್ಯಗಳನ್ನು ನೆನೆ ಹಾಕಿ

ಧಾನ್ಯಗಳನ್ನು ನೆನೆ ಹಾಕಿ

ಧಾನ್ಯಗಳನ್ನು ಅಡುಗೆ ಮಾಡುವ ಮುನ್ನ ಒಂದು ರಾತ್ರಿ ನೆನೆ ಹಾಕಿ. ಹೀಗೆ ಮಾಡಿದರೆ ಅದು ಬೇಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಸಮಯ ಉಳಿಸಿದಂತಾಗುವುದು ಅಲ್ಲದೆ ಧಾನ್ಯದಲ್ಲಿರುವ ಬೇಡದ ರಾಸಾಯನಿಕಗಳು ತುಂಬಾ ಹೊತ್ತು ನೆನೆ ಹಿಟ್ಟು ತೊಳೆದಾಗ ಸಂಪೂರ್ಣವಾಗಿ ಹೋಗುವುದು.

ಸಿಪ್ಪೆ

ಸಿಪ್ಪೆ

ನಾವು ತುಂಬಾ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಸೇಬು, ದ್ರಾಕ್ಷಿ, ಸೀಬೆಕಾಯಿ ಈ ರೀತಿಯ ಹಣ್ಣುಗಳಲ್ಲಿ ಹಾಗೂ ಆಲೂಗಡ್ಡೆ, ಸೌತೆಕಾಯಿಯಂತಹ ತರಕಾರಿಗಳ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶ ಇರುತ್ತದೆ. ಆದ್ದರಿಂದ ಸಿಪ್ಪೆ ಬಿಸಾಡುವ ಮುನ್ನ ಯೋಚಿಸಿ.

ಆಹಾರಗಳ ಆಯ್ಕೆ

ಆಹಾರಗಳ ಆಯ್ಕೆ

ಯಾವ ರೀತಿಯ ಆಹಾರ ತಿನ್ನಬೇಕೆಂಬ ನಿಮ್ಮ ಆಯ್ಕೆ ಕೂಡ ಆರೊಗ್ಯದ ಮೇಲೆ ನೇರ ಪರಿಣಾಮ ಬೀಳುತ್ತದೆ. ವಿಟಮಿನ್ , ಪ್ರೊಟೀನ್, ನಾರಿನಂಶ, ಸ್ವಲ್ಪ ಕಾರ್ಬೋಹೈಡ್ರೇಟ್ ಈ ರೀತಿ ಎಲ್ಲಾ ಬಗೆಯ ಪೋಷಕಾಂಶವಿರುವ ಆಹಾರಗಳು ನಿಮ್ಮ ಅಡುಗೆಯಲ್ಲಿರಲಿ.

English summary

7 Rules Of Healthy Cooking | Cooking Tips | ಆರೋಗ್ಯಕರ ಅಡುಗೆಗೆ ಕೆಲ ನಿಯಮಗಳು | ಅಡುಗೆ ಟಿಪ್ಸ್

It is said that, ‘You are what you eat’. In order to live an energetic and long life, ensuring that your cooking style is healthy is of immense importance. The following are a few rules that you must keep in mind when cooking for yourself or your family and friends.
X
Desktop Bottom Promotion