For Quick Alerts
ALLOW NOTIFICATIONS  
For Daily Alerts

ಸಸ್ಯಾಹಾರಿಗಳಿಗಾಗಿ 20 ಸೂಪರ್ ಡಯಾಬಿಟಿಕ್ ರೆಸಿಪಿ

|

ಸಕ್ಕರೆ ಕಾಯಿಲೆ ಎಲ್ಲೆಲ್ಲೂ ಪ್ರವರ್ಧಮಾನಕ್ಕೆ ಬಂದಿರುವ ಶ್ರೀಮಂತ ಕಾಯಿಲೆ. ಹೌದು ಬರಿಯ ಶ್ರೀಮಂತರನ್ನು ಮಾತ್ರ ಕಾಡಿಸುತ್ತಿದ್ದ ಈ ಕಾಯಿಲೆ ಈಗೀಗ ಬಡವರತ್ತ ಕೂಡ ತನ್ನ ಚೂಪು ನೋಟ ಹರಿಸಿದೆ. ಆಹಾರದಲ್ಲಿ ಪಥ್ಯ ಮಾಡುತ್ತಾ ಸಿಹಿತಿಂಡಿ ಕಣ್ಣೆದುರೇ ಇದ್ದರೂ ತಿನ್ನಲಾಗದಂತಹ ಸ್ಥಿತಿ ಈ ಸಕ್ಕರೆ ಕಾಯಿಲೆ ಉಂಟು ಮಾಡುತ್ತದೆ. ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಉಪಕಾರಿಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ವಿಧಾನದಿಂದ ಮಧುಮೇಹ ತಡೆಯಬಹುದು

ಸಸ್ಯಾಹಾರಿ ಮಧುಮೇಹಿಗಳಿಗೆ ಆಹಾರಗಳು ವೈವಿಧಯಮಯವಾಗಿ ಇರುವುದಿಲ್ಲ. ಬರಿಯ ತರಕಾರಿಗಳಲ್ಲೇ ವಿವಿಧತೆಯನ್ನು ಮಾಡಿಕೊಂಡು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲುಟ್ಟುಕೊಳ್ಳಬೇಕು. ನೀವು ಒಬ್ಬ ಒಳ್ಳೆಯ ಪಾಕ ಪ್ರವೀಣರಾಗಿದ್ದರೆ ವಿಧ ವಿಧದ ತರಕಾರಿಗಳಿಂದ ಬೇರೆ ಬೇರೆ ಸ್ವಾದಿಷ್ಟ ಆಹಾರಗಳನ್ನು ಸವಿಯಬಹುದು.

ಬರಿಯ ಸಪ್ಪೆ, ರುಚಿಯಿಲ್ಲದ ತಿಂಡಿ ಊಟವನ್ನು ನಿಮ್ಮ ಮಧ್ಯಾಹ್ನದೂಟಕ್ಕೆ ಕೊಂಡೊಯ್ಯುವುದರ ಬದಲಿಗೆ ರುಚಿಯಾದ ಈ ಡಿಶ್‌ಗಳನ್ನು ಟ್ರೈ ಮಾಡಿ. ಮಧುಮೇಹಿಗಳಿಗೆ ಅದರಲ್ಲೂ ಸಸ್ಯಾಹಾರಿಗಳಿಗೆ ಆಹಾರಕ್ಕಾಗಿ ಅನ್ವೇಷಣೆ ಮಾಡಲಾಗುವುದಿಲ್ಲ ಇರುವುದರಲ್ಲೇ ರುಚಿಯಾದ ಆಹಾರಗಳನ್ನು ತಯಾರಿಸಿ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು.

ಅದಕ್ಕೆಂದೇ ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಕೆಲವೊಂದು ಆರೋಗ್ಯಕರ ರೆಸಿಪಿಗಳನ್ನು ಹಂಚಿಕೊಳ್ಳುತ್ತಿದೆ. ವಿಶೇಷವಾಗಿ ಸಕ್ಕರೆ ಕಾಯಿಲೆಯುಳ್ಳ ಸಸ್ಯಾಹಾರಿಗಳನ್ನು ಮನದಲ್ಲಿಟ್ಟುಕೊಂಡೇ ಈ ಆಹಾರ ತಯಾರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು

ಹಾಗಲಕಾಯಿ ಸುಕ್ಕಾ:

ಹಾಗಲಕಾಯಿ ಸುಕ್ಕಾ:

ಇದೊಂದು ಸರಳ ಮತ್ತು ತ್ವರಿತವಾಗಿ ಮಾಡಲ್ಪಡುವ ಡಿಶ್ ಆಗಿದೆ. ಹಾಗಲಕಾಯಿಯ ಕಹಿ ಅಂಶವನ್ನು ತೆಗೆದು ಈ ರೆಸಿಪಿಯನ್ನು ಮಾಡಲಾಗುತ್ತದೆ. ಹಾಗಲಕಾಯಿಯನ್ನು ಉಪ್ಪಿನಲ್ಲಿ ನೆನೆಸಿಟ್ಟಾಗ ಅದರ ಕಹಿ ಮಾಯವಾಗುತ್ತದೆ ನಂತರ ಈರುಳ್ಳಿ ಮತ್ತು ತರಕಾರಿಗಳನ್ನು ಮಿಶ್ರ ಮಾಡಿಕೊಂಡು ರುಚಿಯಾದ ಸುಕ್ಕಾ ತಯಾರಿಸಬಹುದು.

ದಾಲ್ ಕಬೀಲಾ:

ದಾಲ್ ಕಬೀಲಾ:

ದಾಲ್ ಕಬೀಲಾ ಎಂದೇ ಹೆಸರುಳ್ಳ ಮಧುಮೇಹಿ ಸಸ್ಯಾಹಾರಿ ಡಿಶ್ ಇದಾಗಿದೆ. ಇದೊಂದು ಮುಘಲಯ್ ಸಿಸ್ವನ್ ಆಗಿದ್ದು ಮಧುಮೇಹಿಗಳನ್ನು ಲಕ್ಷ್ಯವಾಗಿಟ್ಟುಕೊಂಡು ಸಿದ್ದಪಡಿಸಲಾದ ದಾಲ್ ಆಗಿದೆ.

ಕುಂಬಳಕಾಯಿ ಸೂಪ್:

ಕುಂಬಳಕಾಯಿ ಸೂಪ್:

ಕುಂಬಳಕಾಯಿ ಮಧುಮೇಹಿಗಳಿಗೆ ತುಂಬಾ ಉತ್ತಮವಾದುದು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮಧುಮೇಹಿಗಳ ಸಕ್ಕರೆ ಪ್ರಮಾಣವನ್ನು ಏರಿಸುವುದಿಲ್ಲ.

ಲಿಂಬೆ ಓಟ್ಸ್ ರೆಸಿಪಿ:

ಲಿಂಬೆ ಓಟ್ಸ್ ರೆಸಿಪಿ:

ಲಿಂಬೆ ಓಟ್ಸ್ ಅನ್ನು ಬೆಳಗ್ಗಿನ ಸಮಯದಲ್ಲಿ ನೀವು ಸೇವಿಸುವುದು ದೇಹಕ್ಕೆ ಉತ್ತಮವಾದುದು.

ಸ್ಟಫ್‌ಡ್ ಹಾಗಲಕಾಯಿ:

ಸ್ಟಫ್‌ಡ್ ಹಾಗಲಕಾಯಿ:

ಈ ಸ್ಟಫ್ಡ್ ಹಾಗಲಕಾಯಿಯನ್ನು 30 ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಮಧುಮೇಹಿಗಳಿಗೆ ಉತ್ತಮವಾಗಿರುವ ಹಾಗಲಕಾಯಿಯ ಈ ರೆಸಿಪಿ ಆರೋಗ್ಯಕ್ಕೆ ಒಳ್ಳೆಯದು.

ಬಟಾಣಿ ಪನ್ನೀರ್ ಕರಿ:

ಬಟಾಣಿ ಪನ್ನೀರ್ ಕರಿ:

ಮಧುಮೇಹಿಗಳಿಗೆ ಆರೋಗ್ಯಕರವಾಗಿರುವ ಬಟಾಣಿ ಪನ್ನೀರ್ ಕರಿ ನೈಸರ್ಗಿಕವಾಗಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಕುಂಬಳಕಾಯಿ ಶುಂಠಿ ಬ್ರೆಡ್:

ಕುಂಬಳಕಾಯಿ ಶುಂಠಿ ಬ್ರೆಡ್:

ನಿಮಗೆ ಬ್ರೆಡ್ ತಿನ್ನಬೇಕೆಂಬ ಬಯಕೆ ಆದಾಗಲೆಲ್ಲಾ ಈ ಆರೋಗ್ಯಕರ ಕುಂಬಳಕಾಯಿ ಬ್ರೆಡ್ ಸವಿಯಿರಿ. ಇದು ಸಕ್ಕರೆ ಕಾಯಿಲೆಗೆ ಉತ್ತಮ ಆಹಾರವಾಗಿದೆ.

ಚೀಸ್ ಕ್ಯಾಪ್ಸಿಕಂ ಪರಾಟ:

ಚೀಸ್ ಕ್ಯಾಪ್ಸಿಕಂ ಪರಾಟ:

ಕ್ಯಾಪ್ಸಿಕಂ ರಕ್ತದಲ್ಲಿನ ಸಕ್ಕರೆಯನ್ನು ಇದು ನಿಯಂತ್ರಣದಲ್ಲಿಡುವುದರಿಂದ ಮಧುಮೇಹಿಗಳಿಗೆ ಕ್ಯಾಪ್ಸಿಕಂ ಚೀಸ್ ಪರಾಟ ಉತ್ತಮವಾಗಿದೆ.

ಬದನೆ ಬರ್ತಾ:

ಬದನೆ ಬರ್ತಾ:

ಬದನೆ ಕೂಡ ಮಧುಮೇಹಿಗಳಿಗೆ ಉತ್ತಮ ನ್ಯೂಟ್ರಿಶಿಯನ್ ಆಹಾರವಾಗಿರುವುದರಿಂದ ಇದನ್ನು ನಿತ್ಯದ ಆಹಾರದಲ್ಲಿ ಬಳಸಬಹುದಾಗಿದೆ.

ಸೌತೆಕಾಯಿ ಚನ್ನಾ ದಾಲ್:

ಸೌತೆಕಾಯಿ ಚನ್ನಾ ದಾಲ್:

ಇದೊಂದು ಆರೋಗ್ಯಕರ ಆಹಾರವಾಗಿದ್ದು ಮಧುಮೇಹಿಗಳಿಗೆ ಉತ್ತಮವಾಗಿದೆ.

ಕುಂಬಳಕಾಯಿ ರೆಸಿಪಿ:

ಕುಂಬಳಕಾಯಿ ರೆಸಿಪಿ:

ಕುಂಬಳಕಾಯಿ ಡ್ರೈ ಕರಿ ಇದಾಗಿದ್ದು ಮಧುಮೇಹಿಗಳಿಗೆ ಆರೋಗ್ಯಪೂರ್ಣವಾಗಿದೆ.

ಓಟ್ಸ್ ಮಸಾಲಾ ಇಡ್ಲಿ:

ಓಟ್ಸ್ ಮಸಾಲಾ ಇಡ್ಲಿ:

ಓಟ್ಸ್ ಮಿಶ್ರಿತ ಇಡ್ಲಿ ಮತ್ತು ದೋಸಾಗಳೂ ರುಚಿಕರ ಹಾಗೂ ದೇಹಕ್ಕೆ ಆರೋಗ್ಯಪೂರ್ಣವಾಗಿವೆ.

ಹಾಗಲಕಾಯಿ ರಾಯಿತ:

ಹಾಗಲಕಾಯಿ ರಾಯಿತ:

ಹಾಗಲಕಾಯಿ ರುಚಿಯಲ್ಲಿ ಕಹಿಯಾಗಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಅದನ್ನು ಸಿದ್ದಪಡಿಸಿದರೆ ರುಚಿಯಾಗಿರುತ್ತದೆ. ಇದನ್ನು ಮೊಸರಿನೊಂದಿಗೆ ಬೆರೆಸಿ ರಾಯಿತದಂತೆ ಮಾಡಿ ಸೇವಿಸಬಹುದು.

ಹೈದ್ರಾಬಾದಿ ಮೊಸರು ಬೆಂಡೆಕಾಯಿ ಮಸಾಲಾ:

ಹೈದ್ರಾಬಾದಿ ಮೊಸರು ಬೆಂಡೆಕಾಯಿ ಮಸಾಲಾ:

ಬೆಂಡೆಕಾಯಿ ಮಸಾಲಾವನ್ನು ಹೈದ್ರಾಬಾದ್ ವಿಧಾನದಲ್ಲಿ ತಯಾರಿಸಲು ಸಾಧ್ಯ. ಇದು ಕೂಡ ರುಚಿಯಾದ ಒಂದು ಆಹಾರವಾಗಿದೆ.

ಚನ್ನಾ ದಾಲ್:

ಚನ್ನಾ ದಾಲ್:

ಚನ್ನಾ ದಾಲ್ ಒಂದು ಭಾರತೀಯ ಸ್ನೇಕ್ ಆಗಿದ್ದು ಸಕ್ಕರೆ ಕಾಯಿಲೆಯವರು ತಿನ್ನಬಹುದಾದ ಆಹಾರವಾಗಿದೆ.

ಓಟ್ಸ್ ಬಿಸಿಬೇಳೆ ಬಾತ್:

ಓಟ್ಸ್ ಬಿಸಿಬೇಳೆ ಬಾತ್:

ನೀವು ಓಟ್ಸ್ ತೊಗರಿಬೇಳೆ ಬಿಸಿಬೇಳೆ ಬಾತ್ ರೆಸಿಪಿಯನ್ನು ಆಸ್ವಾದಿಸಿದ್ದರೆ ಇದರ ರುಚಿಯನ್ನು ಎಂದಿಗೂ ಮರೆತಿರಲಾರಿರಿ. ಮಧುಮೇಹಿಗಳಿಗೆ ಅಗತ್ಯವಾಗಿ ಈ ರೆಸಿಪಿ ಸಹಕಾರಿ.

ಮುಳ್ಳು ಸೌತೆ ಸಲಾಡ್:

ಮುಳ್ಳು ಸೌತೆ ಸಲಾಡ್:

ನಿರ್ಜಲೀಕರಣದ ವಿರುದ್ಧ ಹೋರಾಡುವ ಉತ್ತಮ ಗುಣ ಮುಳ್ಳು ಸೌತೆಗಿದೆ. ಇದು ದೇಹವನ್ನು ಸ್ವಚ್ಛಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಮೊಸರು ಚನ್ನಾ ಸಬ್ಜಿ:

ಮೊಸರು ಚನ್ನಾ ಸಬ್ಜಿ:

ಮೊಸರು ಚನ್ನಾ ಮಿಶ್ರತ ಸಬ್ಜಿ ರೆಸಿಪಿ ಆರೋಗ್ಯಕರವಾಗಿರುವ ಡಿಶ್ ಆಗಿದ್ದು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವ ಉತ್ತಮ ಆಹಾರವಾಗಿದೆ.

ಮುಳ್ಳು ಸೌತೆ ಚೀಸ್ ಸ್ಯಾಂಡ್‌ವಿಚ್:

ಮುಳ್ಳು ಸೌತೆ ಚೀಸ್ ಸ್ಯಾಂಡ್‌ವಿಚ್:

ಇದೊಂದು ಸರಳ ಮತ್ತು ತ್ವರಿತವಾಗಿ ಮಾಡುವಂತಹ ಪಾಕವಾಗಿದೆ. ಇದು ನ್ಯೂಟ್ರಿಶಿಯನ್, ಪೋಷಕಾಂಶ ಭರಿತವಾಗಿದ್ದು ಮಧುಮೇಹಿಗಳಿಗೆ ರುಚಿಯಾದ ಪಥ್ಯಾಹಾರವಾಗಿದೆ.

English summary

20 Diabetic Recipes For Vegetarians

Living with diabetes is not easy. When you have diabetes, you have to make a lot of adjustments to your diet. Anything remotely high in sugar or starch can be dangerous for diabetic patients. That is why diabetic recipes have to be chosen very carefully.
Story first published: Friday, February 21, 2014, 17:37 [IST]
X
Desktop Bottom Promotion