For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸುವ ಸೂಪ್ ರೆಸಿಪಿ!

By Manohar V
|

ಚಳಿಗಾಲ ಬಂತೆಂದರೆ ಸಾಕು ಮಾಂಸಹಾರಿ ಪ್ರಿಯರಿಗಂತೂ ತಮ್ಮ ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಎದುರು ನೋಡುವುದು ಸಾಮಾನ್ಯ. ಅದರಲ್ಲೂ ಕೆಲವೊಂದು ಮಾಂಸಹಾರಿ ಸೂಪ್ ಅಂತೂ ನಾನ್ ವೆಜ್ ಪ್ರಿಯರನ್ನು ಇನ್ನಷ್ಟು ಮುದ ನೀಡುವುದರಲ್ಲಿ ಸಂಶಯವೇ ಇಲ್ಲ.

ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಸೂಪ್, ನಿಮ್ಮನ್ನು ಇನ್ನಷ್ಟು ಬೆಚ್ಚಗಿರುಸುತ್ತದೆ ! ಅಲ್ಲದೆ ಇಂತಹ ಸೂಪ್‌ಗೆ ಬ್ರೆಡ್ ಫೀಸ್ ಅನ್ನು ಹಾಕಿ, ಅದರ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿ.

ಅದರಲ್ಲಿಯೂ ನಾನ್ ವೆಜ್ ಪ್ರಿಯರಂತೂ ಇಂತಹ ರುಚಿಕರ ಮತ್ತು ಸ್ವಾದಿಷ್ಟವಾದ ಸೂಪ್ ಸವಿಯಲು ನಿಜವಾಗಿಯೂ ಅದೃಷ್ಟವಂತರು! ಹಾಗಾದರೆ ಇನ್ನೇಕೆ ತಡ ? ಬನ್ನಿ, ಬೋಲ್ಡ್ ಸ್ಕೈ ನಿಮಗಾಗಿ ಕೆಲವೊಂದು ನಾನ್ ವೆಜ್ ಸೂಪ್ ಅನ್ನು ಪರಿಚಯಿಸುತ್ತಿದ್ದು, ಇದನ್ನು ನಿಮ್ಮ ಕುಟುಂಬದವರೊಂದಿಗೆ ಪ್ರಯತ್ನಿಸಿ.

ಸಾಸೇಜ್ ಸೂಪ್:

ಸಾಸೇಜ್ ಸೂಪ್:

ನೀವು ಸಾಸೇಜ್ ಅನ್ನು ಇಷ್ಟಪಡುವಿರಾದರೆ, ಖಂಡಿತವಾಗಿಯೂ ನೀವು ರುಚಿಕರವಾಗಿರುವ ಕೆನೆ ಭರಿತ ಸಾಸೇಜ್ ಸೂಪ್ ಅನ್ನು ಇಷ್ಟಪಡುತ್ತೀರಿ. ಇಟಲಿಯನ್ ಮೂಲದಿಂದ ಬಂದಿರುವ ಈ ಸೂಪ್ ಖಂಡಿತವಾಗಿಯೂ ನಿಮ್ಮ ರುಚಿಯನ್ನು ಕೆರಳಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಚಿಕನ್ ರೈಸ್ ಸೂಪ್:

ಚಿಕನ್ ರೈಸ್ ಸೂಪ್:

ಕೆನೆ ಭರಿತದಿಂದ ಕೂಡಿರುವ ಈ ಚಿಕನ್ ರೈಸ್ ಸೂಪ್, ಚಳಿಗಾಲದಲ್ಲಿ ನಿಮ್ಮನ್ನು ಇನ್ನಷ್ಟು ಬೆಚ್ಚಗಿರಿಸುತ್ತದೆ. ಅಲ್ಲದೆ ಜಗತ್ತಿನಾದ್ಯಂತ ಚಿಕನ್ ರೈಸ್ ಸೂಪ್ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ.

ಚಿಕನ್ ನೂಡಲ್ಸ್ ಸೂಪ್:

ಚಿಕನ್ ನೂಡಲ್ಸ್ ಸೂಪ್:

ಸೂಪ್‌ನ ರುಚಿಯನ್ನು ವಿಭಿನ್ನ ರೀತಿಯಲ್ಲಿ ಸವಿಯಲು ನೀವು ಬಯಸುವಿರಾ ? ಹಾಗಾದರೆ ನಾವು ಇಲ್ಲಿ ಹಂಚಿಕೊಂಡಿರುವ ಸ್ವಾದಿಷ್ಟ ಹಾಗೂ ರುಚಿಕರವಾಗಿರುವ ಚಿಕನ್ ನೂಡಲ್ಸ್ ಸೂಪ್ ಅನ್ನು ಪ್ರಯತ್ನಿಸಿ. ಹುಳಿ ಹಾಗೂ ಕೆನೆ ಭರಿತದಿಂದ ಕೂಡಿರುವ ಈ ಸೂಪ್ ಖಂಡಿತವಾತವಾಗಿಯೂ ಚಳಿಗಾಲದಲ್ಲಿ ಮಾಂಸ ಪ್ರಿಯರ ನಾಲಿಗೆ ರುಚಿಯನ್ನು ತಣಿಸುತ್ತದೆ.

ಮೀನಿನ ಸೂಪ್ಸ್:

ಮೀನಿನ ಸೂಪ್ಸ್:

ಚಳಿಗಾಲದಲ್ಲಿ ಸಮುದ್ರ ಆಹಾರವನ್ನು ಇಷ್ಟ ಪಡುವವರು ಖಂಡಿತವಾಗಿಯೂ ಮೀನಿನ ಸೂಪ್ ಅನ್ನು ಇಷ್ಟಪಡಲಿದ್ದಾರೆ. ಚಳಿಗಾದಲ್ಲಿ ರುಚಿಕರವಾದ ಮೀನಿನ ಸೂಪ್ ನಿಮ್ಮನ್ನು ಇನ್ನಷ್ಟು ಬೆಚ್ಚಗಿರಿಸುತ್ತದೆ.

ಟರ್ಕಿ ಸೂಪ್ಸ್:

ಟರ್ಕಿ ಸೂಪ್ಸ್:

ರುಚಿಕರವಾದ ಹಾಗೂ ಸ್ವಾದಿಷ್ಟವಾಗಿರುವ ಮಾಂಸದಿಂದ ಕೂಡಿರುವ ಈ ಟರ್ಕಿ ಸೂಪ್ಸ್ ಖಂಡಿತವಾಗಿಯೂ ನಿಮ್ಮನ್ನು ಚಳಿಗಾಲದಲ್ಲಿಇನ್ನಷ್ಟು ಬೆಚ್ಚಗಿರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ತೂಕವನ್ನು ಕಡಿಮೆಗೊಳಿಸುವವರಿಗೆ ಇದು ಸೂಕ್ತದಾಯಕವಾಗಲಿದೆ.

ಸಲ್ಮೋನ್ ಸೂಪ್

ಸಲ್ಮೋನ್ ಸೂಪ್

ರುಚಿಕರ ಹಾಗೂ ಸ್ವಾದಿಷ್ಟವಾಗಿರುವ ಸಲ್ಮೋನ್ ಮೀನಿನಿಂದ ನೀವು ಸಿಹಿ ಸೂಪ್ ಅನ್ನು ತಯಾರಿಸಬಹುದು. ಒಮೆಗಾ ಕೊಬ್ಬಿನಾಂಶವನ್ನು ಹೊಂದಿರುವ ಈ ಮೀನಿಂದ ಸ್ವಾದಿಷ್ಟವಾದ ಸೂಪ್ ಅನ್ನು ತಯಾರಿಸುವ ಮೊದಲು ಇದನ್ನು ಚೆನ್ನಾಗಿ ಬೇಯಿಸುವುದನ್ನು ಮರೆಯಬೇಡಿ.

ಮಟನ್ ಸೂಪ್:

ಮಟನ್ ಸೂಪ್:

ನೀವು ಮಟನ್ ಪ್ರಿಯರೇ? ಹಾಗಾದರೆ ಭಾರತೀಯ ಶೈಲಿಯಂತೆ ತಯಾರಿಸಲಾಗಿರುವ ಖಾರ (spicy) ಮಟನ್ ಸೂಪ್ ಅನ್ನು ಪ್ರಯತ್ನಿಸಿ. ಅದರಲ್ಲಿಯೂ ವಯಸ್ಸಾದವರ ಆರೋಗ್ಯಕ್ಕೆ ಇದು ಸೂಕ್ತದಾಯಕವಾಗಲಿದೆ.

ವಾಂಟನ್ ಸೂಪ್:

ವಾಂಟನ್ ಸೂಪ್:

ತರಕಾರಿಗಳು ಮತ್ತು ಮಾಂಸದಿಂದ ಕೂಡಿರುವ ಈ ಪೋಷಕಾಂಶ ಸೂಪ್ ರೆಸಿಪಿ, ಸಣ್ಣ ಮಕ್ಕಳಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ. ರುಚಿಕರವಾದ ಹಾಗೂ ಸ್ವಾದಿಷ್ಟವಾದ ಈ ಕೆನೆಭರಿತ ಸೂಪ್ ನಿಮ್ಮ ಮಕ್ಕಳ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ.

English summary

Winter Soups: 8 Best Non-Vegetarian Recipes

It is that time of the year when people look forward to indulging into some of the best winter non-vegetarian soups. Here, we have shared with you eight different creamy winter non-vegetarian soups which you must try out.
Story first published: Thursday, December 26, 2013, 12:08 [IST]
X
Desktop Bottom Promotion