For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿ ವಿಶೇಷ : ಎಳ್ಳು ಮತ್ತು ಬೆಲ್ಲದ ಲಾಡು ರೆಸಿಪಿ

|

ಭಾರತೀಯ ಸಂಸ್ಕೃತಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅದರದ್ದೇ ಆದ ವಿಶೇಷತೆಯಿದೆ. ಸಿಹಿ ಕಹಿಯನ್ನು ಸಮನಾಗಿ ಬರಮಾಡಿಕೊಂಡಾಗ ಜೀವನ ಮಧುರ ಎಂಬ ಸಂದೇಶವನ್ನು ಈ ಹಬ್ಬ ತಿಳಿಸುತ್ತದೆ. ಮಕರ ಸಂಕ್ರಾಂತಿ ಹಬ್ಬವನ್ನು ಪ್ರತೀ ವರ್ಷ ಅದೇ ದಿನದಂದು ಅಂದರೆ ಜನವರಿ 14 ರಂದು ಆಚರಿಸಲಾಗುತ್ತದೆ. ಸುಗ್ಗಿ ಕಾಲವೆಂದು ಭಾರತೀಯರು ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳುತ್ತಾರೆ.

ಜ್ಯೋತಿಷಿಗಳ ಪ್ರಕಾರ, ಮಕರ ಸಂಕ್ರಾಂತಿಯಂದು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಾನೆ. ಈ ದಿನವನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ, ಮತ್ತು ಸಂಸ್ಕೃತಿಗಳಲ್ಲಿ ವಿಧ ವಿಧ ಸಂಪ್ರದಾಯಗಳಿಂದ ಆಚರಿಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಕ್ಕರೆ ಪೊಂಗಲ್: ಸಂಕ್ರಾಂತಿ ವಿಶೇಷ

Til n Gur Ladoo: Sankranti Recipe

ಇದು ಹಿಂದೂ ಧರ್ಮದ ಹಬ್ಬವಾದ್ದರಿಂದ ವಿಧ ವಿಧದ ಭಕ್ಷ್ಯಗಳು ಅದರಲ್ಲೂ ಎಳ್ಳು ಬೆಲ್ಲದ ಲಾಡನ್ನು ಈ ದಿನದಂದು ವಿಶೇಷವಾಗಿ ತಯಾರಿಸಲಾಗುತ್ತದೆ. ಈ ಲಾಡಿಗಾಗಿ ಬಳಸುವ ಎಳ್ಳು ಕಪ್ಪು ಮತ್ತು ಬಿಳಿ ಬಣ್ಣದ್ದಾಗಿದೆ . ಈ ಸಂಕ್ರಾಂತಿಯಂದು ನಿಮಗಾಗಿ ನಾವು ನೀಡುತ್ತಿರುವ ಎಳ್ಳು ಬೆಲ್ಲ ಲಾಡು ರೆಸಿಪಿಯೊಂದಿಗೆ ಆಚರಿಸಿ.

ಪ್ರಮಾಣ: 10-15 ಜನರಿಗೆ ಸಾಕಾಗುವಷ್ಟು (ನೀವು ಲಾಡಿನ ಗಾತ್ರಕ್ಕೆ ಹೊಂದಿಕೊಂಡು)
ಸಿದ್ಧತಾ ಸಮಯ: 20-25 ನಿಮಿಷಗಳಿಗೆ

ಸಾಮಾಗ್ರಿಗಳು
1.ಬಿಳಿ ಎಳ್ಳು - 1ಕಪ್
2.ಬೆಲ್ಲ - 1 ಕಪ್
3.ತುಪ್ಪ - 3ಟೇಸ್ಪೂನ್
4.ಏಲಕ್ಕಿ - 2 (ಸಿಪ್ಪೆ ತೆಗೆದು ಹುಡಿ ಮಾಡಿದ್ದು)
5.1/2 ಕಪ್ ನೀರು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಳ್ಳು ಬೆಲ್ಲದ ಬೆಂಡೇ ಗೊಜ್ಜು

ಮಾಡುವ ರೀತಿ

1.ಪ್ಯಾನ್ ಅನ್ನು ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಎಳ್ಳನ್ನು ಬಿಸಿ ಮಾಡಿ. ಎಳ್ಳಿನ ಕಾಳು ಸ್ವಲ್ಪ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ 3-4 ನಿಮಿಷಗಳವರೆಗೆ ಹುರಿದಿಡಿ.

2.ಒಮ್ಮೆ ಆದ ನಂತರ, ಹುರಿದ ಎಳ್ಳನ್ನು ತಟ್ಟೆಗೆ ಹಾಕಿ ತಣಿಯಲು ಬಿಡಿ.

3.ಪಾತ್ರೆಯಲ್ಲಿ ನೀರನ್ನು ಕುದಿಸಿ ಇದಕ್ಕೆ ಬೆಲ್ಲವನ್ನು ಹಾಕಿ. ಆಗಾಗ್ಗೆ ತಿರುಗಿಸಿಕೊಂಡು ಅದನ್ನು ದಪ್ಪ ಮಿಶ್ರಣವಾಗಿಸಿ.

4.ಈ ಮಿಶ್ರಣ ದಪ್ಪಗಾದ ನಂತರ, ಹುರಿದ ಎಳ್ಳಿನ ಕಾಳು ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ.

5.ತುಪ್ಪವನ್ನು ಕರಗಿಸಿ ಮಿಶ್ರಣವಿರುವ ಪಾತ್ರೆಗೆ ಹಾಕಿ.

6.ಉರಿಯನ್ನು ನಿಲ್ಲಿಸಿ.

7.ಈ ಮಿಶ್ರಣ ಬಿಸಿ ಇರುವಾಗಲೇ (ತಣ್ಣಗಾದಲ್ಲಿ ಲಾಡು ಕಟ್ಟಲು ಕಷ್ಟ) ಲಾಡನ್ನು ಉಂಡೆ ಕಟ್ಟಲು ಪ್ರಾರಂಭಿಸಿ. ನಿಮ್ಮ ಕೈಗೆ ಸ್ಪಲ್ಪ ತುಪ್ಪ ಹಚ್ಚಿಕೊಂಡು ಸುಲಭವಾಗಿ ಉಂಡೆ ಮಾಡಿಕೊಳ್ಳಿ.

ಬೆಲ್ಲ ತಣ್ಣಗಾದಾಗ ಗಟ್ಟಿಯಾಗುತ್ತದೆ ಆದ್ದರಿಂದ ಬಿಸಿಯಾಗಿರುವಾಗ ಲಾಡು ಉಂಡೆ ಕಟ್ಟಿ. ಲಾಡನ್ನು ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ 10-15 ದಿನಗಳ ಕಾಲ ಸಂಗ್ರಹಿಸಿಡಿ.

English summary

Til n Gur Ladoo: Sankranti Recipe

Sankranti is a special day in Hinduism and is celebrated in almost all parts of India. Makara Sankranti is perhaps the only Indian festival where the date always falls on the same day every year: 14 January.
Story first published: Monday, January 13, 2014, 15:50 [IST]
X
Desktop Bottom Promotion