For Quick Alerts
ALLOW NOTIFICATIONS  
For Daily Alerts

ಹೋಳಿ ಸ್ಪೆಶಲ್ ರೆಸಿಪಿ ಥಂಡೈ ಐಸ್‌ಕ್ರೀಂ!

|

ಹೋಳಿ ಹಬ್ಬದ ಘಮಲು ನಮ್ಮ ಸುತ್ತಲೆಲ್ಲಾ ಇನ್ನೂ ಪಸರಿಸುತ್ತಲೇ ಇದೆ. ಹಬ್ಬ ಮುಗಿದಿದ್ದರೂ ಸಿಹಿತಿಂಡಿ, ಖಾದ್ಯಗಳ ತಯಾರಿ ನೆಂಟರಿಷ್ಟರ ಸಮಾರಾಧನೆ ಇನ್ನೂ ನಡೆಯುತ್ತಲೇ ಇದೆ. ಭಾರತದ ಕೆಲವೆಡೆಗಳಲ್ಲಿ ವಾರಗಟ್ಟೆಲೆ ಹೋಳಿಯ ಸಂಭ್ರಮ ಮುಗಿದಿರುವುದಿಲ್ಲ. ದಿನವೂ ಹಬ್ಬವೇ ದಿನದಿನವೂ ಬಣ್ಣಗಳ ಎರಚಾಟದ ಸಂಭ್ರಮ ಮುಗಿದಿರುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಲೂ ಕೋಫ್ತಾ ಸೈಡ್ ಡಿಶ್ ರೆಸಿಪಿ

ಸಿಹಿತಿಂಡಿಗಳು ಖಾರತಿಂಡಿಗಳ ಸಮಾರಾಧನೆಯೊಂದಿಗೆ ಅತಿಥಿಗಳ ಮನತಣಿಸಲು ತಂಪು ತಂಪು ಐಸ್‌ಕ್ರೀಂ ಬೇಕೇ ಬೇಕು. ಅಲ್ಲದೆ ಉರಿವ ಸೂರ್ಯನ ಝಳದಿಂದ ರಕ್ಷಣೆ ಪಡೆಯಲು ನಮ್ಮ ಶರೀರಕ್ಕೆ ತಂಪು ಅತೀ ಅವಶ್ಯಕ. ಅದಕ್ಕೆಂದೇ ಹೋಳಿಗಾಗಿ ವಿಶೇಷವಾಗಿ ತಯಾರಿಸಲ್ಪಡುವ ಥಂಡೈ ಐಸ್‌ಕ್ರಿಂ ತಯಾರಿಯನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

Thandai Ice Cream: Holi Recipe

ನೋಡಲು ಆಕರ್ಷಕ ಮತ್ತು ರುಚಿಕರವಾದ ಥಂಡೈ ಐಸ್‌ಕ್ರೀಂ ರೆಸಿಪಿ ನಿಮ್ಮಲ್ಲಿ ಇನ್ನೂ ಬೇಕೆನ್ನುವ ತುಡಿತವನ್ನು ಉಂಟುಮಾಡುವುದಂತೂ ಖಚಿತ. ಈ ಐಸ್‌ಕ್ರೀಂ ತಯಾರಿ ತುಂಬಾ ಸರಳ ಮತ್ತು ವಿಶಿಷ್ಟವಾದುದು. ಬನ್ನಿ ಮತ್ತೇಕೆ ತಡ, ಈ ವಿಶೇಷ ರೆಸಿಪಿಯನ್ನು ತಿಳಿದುಕೊಂಡು ಟ್ರೈ ಮಾಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೋಳಿ ಹಬ್ಬದ ವಿಶೇಷ ರೆಸಿಪಿ ಪಿಸ್ತಾ ಬರ್ಫಿ

ಪ್ರಮಾಣ: 8
ಸಿದ್ಧತಾ ಸಮಯ: 15 - 20 ನಿಮಿಷಗಳು

ಸಾಮಾಗ್ರಿಗಳು:
1.ಹಾಲು - 1 ಲೀಟರ್
2.ಸಕ್ಕರೆ - 300 ಗ್ರಾಮ್ಸ್
3.ಕೋರ್ನ್‌ಫ್ಲೋರ್ - 1/2 ಕಪ್
4. ಶುದ್ಧ ಕ್ರೀಂ - 1 1/2 ಕಪ್
5.ಕೇಸರಿ - ಸ್ವಲ್ಪ ತುಂಡುಗಳು
6.ಬಾದಾಮಿ - 1/2 ಕಪ್
7.ಜೀರಿಗೆ ಕಾಳು - 1 ಸ್ಪೂನ್
8.ಏಲಕ್ಕಿ - 3-4 (ಹುಡಿಮಾಡಿದ್ದು)

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀರೂರಿಸುವ ಸ್ಪೈಸಿ ಆಚಾರಿ ಪನೀರ್ ರೆಸಿಪಿ

ಮಾಡುವ ವಿಧಾನ:
1. ಸಣ್ಣ ಬೌಲ್‌ನಲ್ಲಿ, ಕೋರ್ನ್‍‌ಫ್ಲೋರ್ ಅನ್ನು 1/4 ಕಪ್ ತಂಪು ಹಾಲಿನಲ್ಲಿ ಕರಗಿಸಿ ಪಕ್ಕಕ್ಕಿಡಿ.

2.ಇನ್ನೊಂದು ಸಣ್ಣ ಬೌಲ್‌ನಲ್ಲಿ, ಹಾಲನ್ನು ಬಿಸಿ ಮಾಡಿ. ಅದು ಬೆಚ್ಚಗಾದಾಗ ಕೇಸರಿ ಎಸಳುಗಳನ್ನು ಹಾಕಿ ಪಕ್ಕಕ್ಕಿಡಿ.

3.ತಳವಿರುವ ಪಾತ್ರೆ ತೆಗೆದುಕೊಂಡು ಉಳಿದ ಹಾಲನ್ನು ಬಿಸಿ ಮಾಡಿ. ಸಕ್ಕರೆ ಹಾಕಿ ಚೆನ್ನಾಗಿ ಕರಗಿಸಿ.

4.ಕರಗಿದ ಹಾಲಿನೊಂದಿಗೆ ಕೋರ್ನ್‌ಫ್ಲೋರ್ ಸುರಿಯಿರಿ ಮತ್ತು ಮಿಶ್ರಣ ತುಸು ದಪ್ಪವಾಗುವವರಗೆ ನಿರಂತರವಾಗಿ ತಿರುಗಿಸುತ್ತಿರಿ.

5.ಗ್ಯಾಸ್ ಆಫ್ ಮಾಡಿ ಮತ್ತು ಮಿಶ್ರಣ ತಣ್ಣಗಾಗಲು ಬಿಡಿ.

6.ಬಾದಾಮಿ, ಜೀರಿಗೆ ಬೀಜ, ಏಲಕ್ಕಿ ಸೇರಿಸಿ ಚೆನ್ನಾಗಿ ಕಲಸಿ. ಮತ್ತು ಜರಡಿ ಹಿಡಿಯಿರಿ.

7.ಈಗ ಕೇಸರಿ ಮತ್ತು ಕ್ರೀಂ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ಥಂಡೈ ಮಿಶ್ರಣವನ್ನು ಫ್ರೀಜರ್ - ಪಾತ್ರೆಯಲ್ಲಿ ಹಾಕಿ. 5-6 ಗಂಟೆಗಳವರೆಗೆ ಚೆನ್ನಾಗಿ ಫ್ರೀಜ್ ಆಗಲಿ.

ಥಂಡೈ ಐಸ್‌ಕ್ರೀಂ ಸವಿಯಲು ಸಿದ್ಧವಾಗಿದೆ. ಈ ತಂಪಾದ ಐಸ್‌ಕ್ರೀಂನೊಂದಿಗೆ ನಿಮ್ಮ ಹಬ್ಬದ ಆಚರಣೆ ಮುಂದುವರಿಯಲಿ.

English summary

Thandai Ice Cream: Holi Recipe

Holi is almost here. The Hindu festival of colours is incomplete without special delicacies. From Bhang to Thandai, there are numerous Holi recipes that are prepared in every household.
Story first published: Monday, March 17, 2014, 12:56 [IST]
X
Desktop Bottom Promotion