For Quick Alerts
ALLOW NOTIFICATIONS  
For Daily Alerts

ಹತ್ತೇ ನಿಮಿಷದಲ್ಲಿ ರೆಡಿ ರವೆ ಕೇಸರಿಬಾತ್

|

ಮನೆಗೆ ಅಥಿತಿಗಳು ಕೆಲವರು ಬರುವ ಮೊದಲೇ ಹೇಳಿ ಬಂದರೆ, ಮತ್ತೆ ಕೆಲವರು ದಿಢೀರ್ ಭೇಟಿ ಕೊಟ್ಟು ಬಿಡುತ್ತಾರೆ. ಮನೆಗೆ ಬಂದ ಅಥಿತಿಗೆ ಏನಾದರೂ ಸಿಹಿ ಕೊಡಿದಿದ್ದರೆ ಹೇಗೆ? ಬೇಕರಿಯಿಂದ ತಂದಿಟ್ಟ ಸಿಹಿ ಪದಾರ್ಥಗಳನ್ನು ಕೊಡಬಹುದು, ಆದರೆ ನೀವೇ ಕೈಯಾರೆ ಮಾಡಿಕೊಟ್ಟರೆ ಇನ್ನೂ ಚೆನ್ನ ಅಲ್ಲವೇ?

ಬರೀ ಅಥಿತಿ ಬಂದಾಗ ಮಾತ್ರವಲ್ಲ, ಮಕ್ಕಳು ಸ್ಪೋರ್ಟ್ಸ್ ಗೆ ಭಾಗವಹಿಸುವಾಗ ಇದನ್ನು ಮಾಡಿ ಕೊಡಿ. ಬೆಳಗ್ಗೆ ಸ್ವಲ್ಪ ಕೇಸರಿ ಬಾತ್ ತಿಂದರೆ ಬೇಗನೆ ಸುಸ್ತಾಗುವುದಿಲ್ಲ, ದಿನಾಪೂರ್ತಿ ಚಟುವಟಿಕೆಯಿಂದ ಇರಬಹುದು. ಸಿಹಿ ಪದಾರ್ಥಗಳಲ್ಲಿ ಕೇಸರಿಬಾತ್ ಮಾಡುವುದು ಸರಳ, ಆದರೆ ಮಾಡುವ ವಿಧಾನ ತಪ್ಪಿದರೆ ಅದರ ರುಚಿ ಕಮ್ಮಿಯಾಗುವುದು. ಅತ್ಯಂತ ರುಚಿಕರವಾದ ರವೆ ಕೇಸರಿಬಾತ್ ಮಾಡುವ ವಿಧಾನದ ವೀಡಿಯೋ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು :
ಸಣ್ಣರವೆ 2 ಕಪ್ ನಂದಿನಿ ತುಪ್ಪ
3 ಸ್ಪೂನ್ ಡಾಲ್ಡ ತುಪ್ಪ
1/2 ಕಪ್ ಸನ್‌ಫ್ಲವರ್ ಆಯಿಲ್
ಸಕ್ಕರೆ 2 ಕಪ್
ಗೋಡಂಬಿ
ಸ್ವಲ್ಪ ಒಣದ್ರಾಕ್ಷಿ
ಸ್ವಲ್ಪ ಕೇಸರಿ ಬಣ್ಣ

ರವೆ ಕೇಸರಿ ಬಾತ್ ತಯಾರಿಸುವ ವಿಧಾನ
* ಮೊದಲು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ, ತುಪ್ಪ ಕಾದ ಮೇಲೆ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಕೈಯಾಡಿಸಿ (ಜಾಸ್ತಿಹೊತ್ತು ಬಿಟ್ಟರೆ ದ್ರಾಕ್ಷಿ ಕಪ್ಪಾಗಾಗುತ್ತದೆ).

* ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ ಬಿಸಿಯಾದ ಮೇಲೆ ರವೆಯನ್ನು ಹಾಕಿ, ನಂತರ ಡಾಲ್ಢ ತುಪ್ಪ ಮತ್ತು ಸನ್‌ಫ್ಲವರ್ ಆಯಿಲ್‌ನ್ನು (ಸ್ವಲ್ಪ) ಹಾಕಿ ಎಲ್ಲೂ ಗಂಟಾಗದಂತೆ ಕೈಯಾಡಿಸಿ. ನೀವು ಹಾಕಿದ ಪ್ರಮಾಣವು,ಬಾಣಲಿಯಲ್ಲಿ ರವೆ ಪಾಯಸದ ತರ ಇರಬೇಕು. ರವೆಯನ್ನು ಕಡಿಮೆ ಉರಿಯಲ್ಲಿ ತಿರುವುತ್ತಾ ಇರಬೇಕು.

* ಇನ್ನೊಂದು ಕಡೆ ಎರಡು ಕಪ್‌ನಷ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ರವೆ ಇರುವ ಬಾಣಲಿಗೆ ಕಾದ ಬಿಸಿನೀರನ್ನು ಹಾಕಿ. ರವೆ ಪ್ರಮಾಣ ಮತ್ತು ನೀರಿನ ಪ್ರಮಾಣ ಸಮ ಇರಬೇಕು. ನಂತರ ಸ್ವಲ್ಪ ಕೇಸರಿಯನ್ನು ಹಾಕಿ.

ನಂತರ 2 ಲೋಟ ಸಕ್ಕರೆಯನ್ನು ಹಾಕಿ ಮತ್ತೆ ಕೈಯಾಡಿಸಿ. ದಟ್ಸಾಲ್, ದಿಢೀರ್ ಕೇಸರಿ ಬಾತ್ ರೆಡಿ.

<center><center><center><center><center>Embed code: <style type='text/css'>#vogroll_4{border:none;margin:0px;}</style><iframe src='http://www.indiavideo.org/video-embed.php?f=NjM1My4=' height='369' width='640' align='center' frameborder='0' marginwidth='0' marginheight='0'></iframe></center></center></center></center></center>

English summary

Sweet Delight: Rava Kesari | Video Special

The recipe for rava kesari is pretty easy. In fact, rava kesari is a recipe that can be prepared in just 10 minutes if you follow the right procedure.
X
Desktop Bottom Promotion