For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ ವಿಶೇಷ; ಬಗೆ ಬಗೆಯ ತಿನಿಸುಗಳು

|

ಮನೆಯಲ್ಲಿ ಗಣೇಶನನ್ನು ಪೂಜಿಸುವವರು ಈಗಾಗಲೇ ತಮ್ಮ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಣೇಶ ದೇವರಿಗೆ ಆಹಾರವೆಂದರೆ ತುಂಬಾ ಪ್ರೀತಿಯೆಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದರಿಂದಾಗಿಯೇ ಗಣೇಶ ಚತುರ್ಥಿಯ ಸಂದರ್ಭ ಮಾಡುವಂತಹ ಪಾಕಗಳಿಗೆ ವಿಶೇಷವಾದ ಮಹತ್ವವಿದೆ.

ವಿಶೇಷವಾದ ಸಿಹಿ ಪಾಕಗಳಿಲ್ಲದೆ ಭಾರತದ ಯಾವುದೇ ಹಬ್ಬಗಳು ಪರಿಪೂರ್ಣವಾಗುವುದಿಲ್ಲ. ಆದರೆ ಗಣೇಶ ಚತುರ್ಥಿಯು ತುಂಬಾ ಭಿನ್ನ. ಇದು ಕೇವಲ ನಮಗೆ ಮಾತ್ರವಲ್ಲ, ಗಣೇಶನಿಗೂ ಕೂಡ.

ಗಣೇಶ ದೇವರು ಕೂಡ ಈ ಪಾಕಗಳನ್ನು ತುಂಬಾ ಇಷ್ಟಪಡುತ್ತಾರೆ. ಇದರಿಂದಾಗಿ ಎಲ್ಲಾ ಪಾಕಗಳನ್ನು ಮೊದಲಿಗೆ ಗಣೇಶ ದೇವರಿಗೆ ಅರ್ಪಿಸಲಾಗುತ್ತದೆ. ಗಣೇಶ ಚತುರ್ಥಿಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಪ್ರಮುಖವಾಗಿ ಆಚರಿಸಲ್ಪಡುವ ಕಾರಣದಿಂದ ಇಲ್ಲಿ ಮಾಡಲ್ಪಡುವಂತಹ ಪಾಕಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಗಣೇಶ ಚತುರ್ಥಿಯ ಕೆಲವೊಂದು ಪಾಕಗಳು ಸಾಮಾನ್ಯವಾಗಿರುತ್ತದೆ. ಉದಾಹರಣೆಗೆ ಗಣೇಶನಿಗೆ ಲಡ್ಡು ತುಂಬಾ ಇಷ್ಟವೆಂದು ನಮಗೆಲ್ಲರಿಗೂ ತಿಳಿದಿದೆ. ಇದರಿಂದ ಲಡ್ಡು ತಯಾರಿಯೂ ಸಾಮಾನ್ಯವಾಗಿ ಒಂದೇ ರೀತಿಯಾಗಿರುತ್ತದೆ.

ಗಣೇಶನಿಗೆ ಅರ್ಪಿಸುವ ಮತ್ತೊಂದು ಆಹಾರವೆಂದರೆ ಅದು ಮೋದಕ. ಮೋದಕದ ಹೊರತಾಗಿ ಗಣೇಶ ಚತುರ್ಥಿಯು ಅಪೂರ್ಣ. ನಾವು ಇಲ್ಲಿ ನಾಲ್ಕು ರೀತಿಯ ವಿಭಿನ್ನ ಮೋದಕ ತಯಾರಿ ಬಗ್ಗೆ ವಿವರಿಸಿದ್ದೇವೆ. ಈ ವರ್ಷ ನೀವು ತಯಾರಿಸಬಹುದಾದ ಕೆಲವೊಂದು ಅತ್ಯುತ್ತಮ ಪಾಕ ವಿಧಾನಗಳು ಇಲ್ಲಿವೆ.

ವಿಘ್ನ ವಿನಾಶಕ ಗಣಪನ ಕೃಪೆಗಾಗಿ ಸಿಹಿಯಾದ ಬಾದಾಮಿ ಪೂರಿ

ಪುಳಿಯೊಗರೆ

ಪುಳಿಯೊಗರೆ

ಇದು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಸ್ಯಹಾರಿ ಆಹಾರ. ಇದು ಕೇವಲ ಮನೆಯಲ್ಲಿ ಊಟಕ್ಕೆ ಮಾತ್ರ ಬಳಸುವುದು ಮಾತ್ರವಲ್ಲದೆ, ಕೆಲವೊಂದು ದೇವಸ್ಥಾನಗಳಲ್ಲಿ ಪ್ರಸಾದವಾಗಿಯೂ ನೀಡಲಾಗುತ್ತದೆ. ಪುಳಿಯೊಗರೆಯನ್ನು ಅಕ್ಕಿ ಮತ್ತು ಕೆಲವೊಂದು ರೀತಿಯ ರುಚಿಕರ ಹಾಗೂ ಪರಿಮಳದ ಸಾಂಬಾರ ಪದಾರ್ಥಗಳನ್ನು ಹಾಕಿ ತಯಾರಿಸಲಾಗುತ್ತದೆ.

ಪುಳಿಯೋಗರೆ ಗೊಜ್ಜು ಮಾಡಲು ಸಜ್ಜಾಗಿ

ಆವಿಯಲ್ಲಿ ಬೇಯಿಸಿದ ಮೋದಕ

ಆವಿಯಲ್ಲಿ ಬೇಯಿಸಿದ ಮೋದಕ

ಗಣೇಶ ದೇವರಿಗೆ ಇದು ತುಂಬಾ ಇಷ್ಟವಾಗಿರುವ ಕಾರಣ ಮೋದಕವನ್ನು ಹೆಚ್ಚಿನ ಸಂದರ್ಭದಲ್ಲಿ ತಯಾರಿಸಲಾಗುತ್ತದೆ.

ಈ ಬಾರಿಯ ಗಣೇಶ ಹಬ್ಬವನ್ನು ಮೋದಕ ತಿನಿಸಿನೊಂದಿಗೆ ಸಿಹಿಯಾಗಿಸಿ!
ಪುರನ್ ಪೊಲಿ

ಪುರನ್ ಪೊಲಿ

ಪುರನ್ ಪೊಲಿ ಮಹಾರಾಷ್ಟ್ರದಲ್ಲಿ ಮಾಡುವಂತಹ ಅತ್ಯಂತ ರುಚಿಕರ ಸಿಹಿತಿಂಡಿ. ಇದನ್ನು ಎಲ್ಲಾ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಈ ಸಿಹಿ ತಿಂಡಿಯು ಪರಾಟದಂತೆ ಇದ್ದು, ಅದಕ್ಕೆ ಸಿಹಿ ಹಾಕಲಾಗಿರುತ್ತದೆ.

ಈ ಹೋಳಿಗೆ ಸ್ಪೆಷಲ್ ಪೂರನ್ ಪೋಲಿ
ಗೀ ರೈಸ್

ಗೀ ರೈಸ್

ದಕ್ಷಿಣ ಭಾರತದಲ್ಲಿ ಇದು ಅತ್ಯಂತ ಜನಪ್ರಿಯವಾಗಿರುವಂತಹದ್ದು. ಗೀ ರೈಸ್ ಕೂಡ ಪುಲಾವ್ ನಂತೆ ಇರುವ ಅಕ್ಕಿಯಿಂದ ತಯಾರಿಸಲ್ಪಡುವಂತಹದ್ದು. ಆದರೆ ಸ್ವಲ್ಪ ಭಿನ್ನವಾಗಿರುತ್ತದೆ. ಗೀ ರೈಸ್ ಮತ್ತು ಪುಲಾವ್ ಮಧ್ಯೆ ಇರುವ ಭಿನ್ನತೆಯೆಂದರೆ ಗೀ ರೈಸ್‌ಗೆ ಹೆಚ್ಚಿನ ಬೆಣ್ಣೆಯನ್ನು ಹಾಕಲಾಗುತ್ತದೆ.

ಹಬ್ಬಕ್ಕೆ ಸ್ಪೆಷಲ್ ಗೀರೈಸ್ ಘಮಲು ಹರಡಲಿ

ಚೂರಮ್ ಲಾಡು

ಚೂರಮ್ ಲಾಡು

ಚೂರಮ್‌ನ್ನು ಗೋಧಿಯ ಒರಟಾದ ಪುಡಿಗೆ ಬೆಣ್ಣೆ, ಸಕ್ಕರೆ ಅಥವಾ ಬೆಲ್ಲ ಹಾಕಿ ತಯಾರಿಸಲಾಗುತ್ತದೆ. ಚೂರಮ್ ಲಾಡುವನ್ನು ಕೆಲವೊಂದು ಸಾಮಗ್ರಿಗಳನ್ನು ಹಾಕಿ ಸುಲಭವಾಗಿ ಮಾಡಬಹುದು. ಇದು ರಾಜಸ್ಥಾನಿ ಸಿಹಿ ತಿಂಡಿಯಾಗಿದ್ದು, ಎಲ್ಲಾ ಸಂದರ್ಭಗಳಲ್ಲಿ ಮಾಡಲ್ಪಡುತ್ತದೆ.

ಎಳ್ಳು, ಕೊಬ್ಬರಿ ಹಾಕಿ ಮಾಡುವ ಲಡ್ಡು

ಕರಿದ ಮೋದಕ

ಕರಿದ ಮೋದಕ

ಮೋದಕವು ಗಣೇಶ ದೇವರಿಗೆ ಪ್ರಿಯವಾದ ತಿಂಡಿ ಮತ್ತು ಇದನ್ನು ಎರಡು ವಿಧಗಳಲ್ಲಿ ತಯಾರಿಸಲಾಗುತ್ತದೆ. ಒಂದು ಆವಿಯಲ್ಲಿ ಬೇಯಿಸಿ ಮತ್ತೊಂದು ಕರಿದು ತಯಾರಿಸಲಾಗುತ್ತದೆ. ಕರಿದ ಮೋದಕಗಳನ್ನು ಆವಿಯಲ್ಲಿ ಬೇಯಿಸಿದ ಮೋದಕಕ್ಕಿಂದ ಹೆಚ್ಚು ದಿನ ಇಡಬಹುದು.

ಚನ್ನಾ ಉಸಲ್

ಚನ್ನಾ ಉಸಲ್

ಚನ್ನಾ ಉಸಲ್ ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯವಾಗಿರುವ ಉಪಹಾರ. ಇದಕ್ಕೂ ಗಣೇಶ ಚತುರ್ಥಿಗೂ ಯಾವುದೇ ಸಂಬಂಧವಿಲ್ಲ. ಆದರೆ ಯಾವುದೇ ಹಬ್ಬಹರಿದಿನಗಳಿಗೆ ಇದನ್ನು ತಯಾರಿಸಬಹುದು. ಮಕ್ಕಳಿಗೆ ಇದು ತುಂಬಾ ಇಷ್ಟವಾಗಬಹುದು.

ರುಚಿಯಾದ ಚನ್ನಾ ಉಸಾಲ್ ರೆಸಿಪಿ

ಬಿಸಿಬೇಳೆ ಬಾತ್

ಬಿಸಿಬೇಳೆ ಬಾತ್

ಬಿಸಿ ಬೇಳೆ ಬಾತ್ ಕರ್ನಾಟಕದ ವಿಶೇಷ ಆಹಾರ. ಇದು ಹಲವಾರು ರೀತಿಯ ತರಕಾರಿ ಮತ್ತು ಮಸಾಲೆ ಹಾಕಿ ತಯಾರಿಸುವಂಹತ ಸಾಂಬಾರ್ ರೈಸ್. ಗಣೇಶ ಚತುರ್ಥಿ ಸಹಿತ ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಬಿಸಿಬೇಳೆಭಾತ್ ನ್ನು ತಯಾರಿಸಲಾಗುತ್ತದೆ.

ಬೇಗನೆ ತಯಾರಿಸಬಹುದು ಬಿಸಿ ಬೇಳೆ ಬಾತ್

ಬಾದಾಮ್ ಲಡ್ಡು

ಬಾದಾಮ್ ಲಡ್ಡು

ಬಾದಾಮ್ ಲಡ್ಡುವನ್ನು ಬಾದಾಮಿ ಮತ್ತು ಗೋಡಂಬಿ ಹಾಕಿ ತಯಾರಿಸಲಾಗುತ್ತದೆ. ಇದಕ್ಕೆ ಬೆಣ್ಣೆ ಸೇರಿಸಲಾಗುತ್ತದೆ. ಇದು ಗಣೇಶ ದೇವರಿಗೆ ಅತೀ ಪ್ರಿಯ.

ಕೇಸರಿ ಮೋದಕ

ಕೇಸರಿ ಮೋದಕ

ಕೇಸರಿ ಮೋದಕವನ್ನು ಎರಡು ವಿಧಗಳಿಂದ ಮಾಡಬಹುದು. ಒಂದು ವಿಧದ ಮೋದಕದಲ್ಲಿ ನಾವು ತೆಂಗಿನ ತುರಿಯನು ತುಂಬಿಸಬಹುದು. ಆದರೆ ಇನ್ನೊಂದರಲ್ಲಿ ಅದು ಸಾಧ್ಯವಿಲ್ಲ. ಬೆಲ್ಲ ಅಥವಾ ಸಕ್ಕರೆಯೊಂದಿಗೆ ತೆಂಗಿನ ತುರಿಯನ್ನು ಕೇಸರಿ ಮೋದಕದೊಳಗೆ ಹಾಕಿದರೆ ಅದರ ರುಚಿಯೇ ಶ್ರೇಷ್ಠ.

 ಹೆಸರುಬೇಳೆ ಮೋದಕ

ಹೆಸರುಬೇಳೆ ಮೋದಕ

ಗಣೇಶ ಚತುರ್ಥಿಯನ್ನು ಮತ್ತಷ್ಟು ವಿಶೇಷವಾಗಿಸಲು ಹೆಸರುಬೇಳೆ ಹಾಕಿ ಭಾರತೀಯ ಸಿಹಿತಿಂಡಿಯನ್ನು ತಯಾರಿಸಲು ಪ್ರಯತ್ನಿಸಿ. ಇದು ಸಾಮಾನ್ಯ ಮೋದಕದಲ್ಲಿ ಮಾಡಬಹುದಾದ ಬದಲಾವಣೆ ಮತ್ತು ಈ ವಿಶೇಷ ಪ್ರಯತ್ನವನ್ನು ಗಣಪತಿ ಬಪ್ಪಾ ಖಂಡಿತವಾಗಿಯೂ ಇಷ್ಟಪಡುತ್ತಾರೆ.


English summary

Special Recipes For Ganesh Chaturthi

Ganesh Chaturthi 2013 begins today. All families who are bringing Ganesha home this year will be already busy with the preparations. We all know that Ganesha is a God who loves to eat. All Indian festivals are incomplete without some really delicious sweet dish recipes. But the Ganesh Chaturthi recipes are different. They are not just for us foodies.
X
Desktop Bottom Promotion