For Quick Alerts
ALLOW NOTIFICATIONS  
For Daily Alerts

ಆಹಾ ರಸಗುಲ್ಲಾದಷ್ಟೇ ಸಿಹಿಯಾದ ಸ್ಪೆಷಲ್ ಬರ್ಫಿ!

By Super
|

ದೀಪಗಳ ಹಬ್ಬ ಮತ್ತೊಮ್ಮೆ ಬಂದಿದೆ. ವರ್ಣರಂಜಿತ, ಪಟಾಕಿಗಳ ಆರ್ಭಟದ, ಬಗೆ ಬಗೆಯ ಸಿಹಿತಿಂಡಿ, ವಿಶೇಷ ಪೂಜೆ ಪುನಸ್ಕಾರಗಳ ದೀಪಾವಳಿಯನ್ನು ಸ್ವಾಗತಿಸಲು ಕೆಲವೇ ದಿನಗಳು ಉಳಿದಿವೆ. ಮೂರು ದಿನಗಳ ಅವಧಿಯಲ್ಲಿ ಆಚರಿಸುವ ದೀಪಾವಳಿಯ ಪ್ರತಿ ದಿನಕ್ಕೂ ಪ್ರತ್ಯೇಕವಾದ ವಿಶೇಷತೆಯಿದೆ. ಆದರೆ ಧಾರ್ಮಿಕ ಮಹತ್ವಕ್ಕಿಂತಲೂ ಜನರಿಗೆ ಸಿಹಿತಿಂಡಿಗಳು, ವಿಶೇಷ ಖಾದ್ಯಗಳು ಮತ್ತು ಪಟಾಕಿಗಳೇ ಹೆಚ್ಚು ಆಕರ್ಷಣೀಯವಾಗಿವೆ.

ದೀಪಾವಳಿಗಾಗಿ ಪ್ರತಿ ಮನೆಯಲ್ಲಿಯೂ ವಿಶೇಷ ತಿಂಡಿಗಳು ಮತ್ತು ಖಾದ್ಯಗಳು ತಯಾರಾಗುತ್ತವೆ. ಆದರೆ ಈ ವರ್ಷ ಕೊಂಚ ಭಿನ್ನವಾಗಿರುವ ಬರ್ಫಿಯನ್ನು ಮಾಡುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಬಾರದೇಕೆ? ಸುಲಭವಾಗಿ ಮತ್ತು ಹೆಚ್ಚು ಶ್ರಮವಿಲ್ಲದೇ ತಯಾರಿಸಬಹುದಾದ ಈ ಸ್ವಾದಿಷ್ಟ ಸಿಹಿ ನಿಮ್ಮ ಕುಟುಂಬದವರ ಜೊತೆಗೇ ನಿಮ್ಮ ಅತಿಥಿಗಳಿಗೂ ಮೆಚ್ಚುಗೆಯಾಗುವುದು ಖಂಡಿತ. ಬನ್ನಿ, ಈ ಬರ್ಫಿಯನ್ನು ತಯಾರಿಸುವುದು ಹೇಗೆ ಎಂದು ಕಲಿಯೋಣ:

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹತ್ತು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು ಸಿಹಿ ತಿನಿಸಿನ ಸರದಾರ-ತೆಂಗಿನಕಾಯಿ ಬರ್ಫಿ

Special 7 Cup Barfi Recipe For Diwali

ಅಗತ್ಯವಿರುವ ಸಾಮಾಗ್ರಿಗಳು:
*ಕಡ್ಲೆಹಿಟ್ಟು: ಒಂದು ಕಪ್
*ಸಕ್ಕರೆ: ಎರಡು ಕಪ್
*ಹಾಲು ಒಂದು ಕಪ್
*ತುಪ್ಪ: ಒಂದು ಕಪ್
*ಕಾಯಿತುರಿ: ಒಂದು ಕಪ್
*ಬಾದಾಮಿ: ಒಂದು ಕಪ್

ತಯಾರಿಕಾ ವಿಧಾನ:
1) ಒಂದು ದಪ್ಪತಳದ ಪಾತ್ರೆ ಅಥವಾ ಕಾವಲಿಯಲ್ಲಿ ಕಾಲು ಚಿಕ್ಕಚಮಚ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೆಹಿಟ್ಟು ಹಾಕಿ ಚಿಕ್ಕ ಉರಿಯಲ್ಲಿ ಹುರಿಯಿರಿ. ನಯವಾಗಿ ತಿರುವುತ್ತಾ ಕೊಂಚ ಕಂದುಬಣ್ಣ ಬರುತ್ತಿದ್ದಂತೆ ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
2) ಹಾಲು ಚೆನ್ನಾಗಿ ಮಿಶ್ರಣವಾದ ಬಳಿಕ ಸಕ್ಕರೆ ಹಾಕಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಅಥವಾ ಸಕ್ಕರೆ ಪೂರ್ತಿಯಾಗಿ ಹಾಲಿನಲ್ಲಿ ಮಿಶ್ರಣಗೊಳ್ಳುವವರೆಗೆ ತಿರುವುತ್ತಾ ಇರಿ.
3) ಇನ್ನು ಉಳಿದ ತುಪ್ಪ ಮತ್ತು ಕಾಯಿತುರಿ ಹಾಕಿ ಮಿಶ್ರಣ ಮಾಡಿ
4) ತದನಂತರ ಈ ಮಿಶ್ರಣವನ್ನು ಚಿಕ್ಕ ಉರಿಯಲ್ಲಿ ಸುಮಾರು ಹತ್ತು ನಿಮಿಷ ತಿರುವಿ. ಈ ಮಿಶ್ರಣ ಜೇನಿನಷ್ಟು ಗಾಢವಾದ ಬಳಿಕ ಇನ್ನೊಂದು ಪಾತ್ರೆಗೆ ಸುರಿದು ತಣಿಯಲು ಬಿಡಿ
5) ಸುಮಾರು ಅರ್ಧ ಗಂಟೆಯ ಬಳಿಕ ಚಾಕು ಉಪಯೋಗಿಸಿ ನಿಮಗೆ ಸೂಕ್ತವೆನಿಸಿದ ಆಕೃತಿಯಲ್ಲಿ ಕತ್ತರಿಸಿ. ಪ್ರತಿ ತುಂಡಿನ ಮೇಲೆ ಒಂದು ಬಾದಾಮಿಯನ್ನು ಹುದುಗಿಸಿ. ಇದನ್ನು ಪೂರ್ಣವಾಗಿ ತಣಿಯಲು ಬಿಡಿ. ಇದಕ್ಕೆ ಸುಮಾರು ಆರರಿಂದ ಏಳು ಗಂಟೆ ಬೇಕು.
6) ಹಬ್ಬದ ಸಂತೋಷದ ಸಮಯದಲ್ಲಿ ಈ ಬರ್ಫಿಯನ್ನು ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ಸಂತೋಷವನ್ನು ಹೆಚ್ಚಿಸಿ.
ಈ ಬರ್ಫಿ ಹೇಗಿನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಸ್ಥಳದಲ್ಲಿ ಬರೆದು ತಿಳಿಸಿ.

English summary

Special 7 Cup Barfi Recipe For Diwali

The festival of lights is back. We are left with just a few more days to welcome the most colourful and joyful festival, Diwali. Diwali is celebrated for two days with each day having it's own significance. The main highlights of the festival are the crackers and food.
X
Desktop Bottom Promotion