For Quick Alerts
ALLOW NOTIFICATIONS  
For Daily Alerts

ಆಹಾ ಅವಲಕ್ಕಿ ಲಾಡು, ಒಮ್ಮೆ ಬಾಯಿಗೆ ಹಾಕಿ ನೋಡು!

By Manu
|

ಭಾರತೀಯ ಅಡುಗೆ ಮನೆಗಳಲ್ಲಿ ಅವಲಕ್ಕಿ ಸರ್ವೇ ಸಾಮಾನ್ಯವಾಗಿ ಸಿಗುವ ಆಹಾರ ಪದಾರ್ಥ ಎಂಬುದು ಎಲ್ಲರಿಗೂ ಗೊತ್ತಿರುವ ವಿವಾರ. ಶ್ರೀಕೃಷ್ಣ ಪರಮಾತ್ಮ ಕೂಡ ಕುಚೇಲನ ಒಂದು ಹಿಡಿ ಅವಲಕ್ಕಿಯಿಂದ ಸಂಪ್ರೀತನಾಗಿ ಗೆಳೆತನದ ಮಹತ್ವವನ್ನು ಜಗಕ್ಕೆ ಸಾರಿದ್ದರು. ಇಂತಹ ಅವಲಕ್ಕಿಯೇ ಗಡಿಬಿಡಿಯ ಸಮಯದಲ್ಲಿ ಸಹಾಯಕ್ಕೆ ಬರುವುದು. ಸ್ವಲ್ಪ ಹೊತ್ತು ನೆನೆ ಹಾಕಿ ಅವಲಕ್ಕಿ ಒಗ್ಗರಣೆಯಿಂದ ಹಿಡಿದು, ಕೇಸರಿಭಾತ್, ಉಪ್ಪಿಟ್ಟು, ಬಿಸಿ ಬೇಳೆ ಬಾತ್, ದೋಸೆ ಮೊದಲಾದ ತಿಂಡಿಗಳನ್ನು ಸಿದ್ಧಪಡಿಸಬಹುದಾಗಿದೆ. ಶ್ರಮವಿಲ್ಲದೆ ಮಾಡಿ ಸವಿಯಿರಿ ಸಿಹಿ ಅವಲಕ್ಕಿ

ಅದರಲ್ಲೂ, ಒಂದು ಮುಷ್ಟಿ ಅವಲಕ್ಕಿಗೆ ಸ್ವಲ್ಪ ಹಾಲು ಹಾಕಿ ಸೇವಿಸಿದಲ್ಲಿ ನಿಮ್ಮ ರಾತ್ರಿಯ ಹಗುರ ಆಹಾರ ತಯಾರಾದಂತೆಯೇ. ನಿಮ್ಮ ಹಸಿವನ್ನು ಇಂಗಿಸಿ ಹೊಟ್ಟೆಯನ್ನು ತುಂಬಿಸಿಬಿಡುತ್ತದೆ. ಅವಲಕ್ಕಿಯಿಂದ ಸಿಹಿಯಾದ ರುಚಿಕರ ಲಾಡನ್ನು ತಯಾರಿಸಬಹುದಾಗಿದ್ದು ಇಂದಿನ ಲೇಖನದಲ್ಲಿ ಈ ಲಾಡು ತಯಾರಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 5-6 ನಿಮಿಷಗಳು

Simple And Quick Poha Sweet Recipe

ಸಾಮಾಗ್ರಿಗಳು
1. ಅವಲಕ್ಕಿ - 1 ಕಪ್ (ದಪ್ಪ ಮತ್ತು ತೆಳು ಅವಲಕ್ಕಿಯನ್ನು ಆರಿಸಿಕೊಳ್ಳಬಹುದಾಗಿದೆ)
2. ತೆಂಗಿನ ಹುಡಿ - 1/2 ಕಪ್
3. ರಿಫೈಂಡ್ ಸಕ್ಕರೆ - 1/2 ಕಪ್
4. ಏಲಕ್ಕಿ ಹುಡಿ - 1/4 ಚಮಚ
5. ಗೋಡಂಬಿ - 3-4 ಸಣ್ಣಗೆ ಹೆಚ್ಚಿರುವಂಥದ್ದು
6. ಬಾದಾಮಿ - 3-4 (ಸಣ್ಣಗೆ ಹೆಚ್ಚಿದ್ದು)
7. ಪಿಸ್ತಾ - 3-4 (ಚಿಕ್ಕದಾಗಿ ತುಂಡರಿಸಿದ್ದು)
8. ದ್ರಾಕ್ಷಿ - 8
9. ಬಿಸಿ ಮಾಡಿದ ತುಪ್ಪ - 4-5 ಚಮಚ
10. ಹಾಲು: 1 ಕಪ್ (ಬೇಕಾದಲ್ಲಿ)
11. ರೋಸ್ ವಾಟರ್: 1/2 ಚಮಚ (ಬೇಕಾದಲ್ಲಿ) ಬರೀ ಐದೇ ನಿಮಿಷದಲ್ಲಿ ಮಾಡಿ ಸವಿಯಿರಿ-ಹುಳಿ ಅವಲಕ್ಕಿ!

ಮಾಡುವ ವಿಧಾನ
1. ಅವಲಕ್ಕಿಯನ್ನು ಪ್ಲೇಟ್‎ನಲ್ಲಿ ಹರಡಿಕೊಂಡು ಧೂಳು ಮತ್ತು ಇತರೆ ಪದಾರ್ಥಗಳನ್ನು ತೆಗೆದು ಚೊಕ್ಕಟ ಮಾಡಿಕೊಳ್ಳಿ.
2. ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು ಅವಲಕ್ಕಿಯನ್ನು ಹಾಗೆಯೇ ಹುರಿದುಕೊಳ್ಳಿ. ನಿಮಗೆ ಬಿಳಿ ಬಣ್ಣದ ಲಾಡು ಬೇಕಾದಲ್ಲಿ ಇದನ್ನು ಕಂದು ಬಣ್ಣಕ್ಕೆ ಹುರಿದುಕೊಳ್ಳದಿರಿ. ಗ್ಯಾಸ್ ಅನ್ನು ಮಂದ ಉರಿಯಲ್ಲಿಟ್ಟು ಹುರಿದುಕೊಳ್ಳುತ್ತಿರಿ. ಸುವಾಸನೆ ಬಂದಾಗ ಗ್ಯಾಸ್‎ನಿಂದ ಕೆಳಗಿಳಿಸಿ.
3. ಇನ್ನು ತೆಂಗಿನ ತುರಿ ಪೌಡರ್ ಅನ್ನು ಸೇರಿಸಿಕೊಂಡು ಹುರಿದ ಅವಲಕ್ಕಿಯೊಂದಿಗೆ ಮಿಶ್ರ ಮಾಡಿ. ಈಗ ಸಕ್ಕರೆಯನ್ನು ಪುಡಿಯಾಗಿ ಗ್ರೈಂಡ್ ಮಾಡಿಕೊಳ್ಳಿ.
4. ತದನಂತರ ಸಕ್ಕರೆಯನ್ನು ಅವಲಕ್ಕಿಗೆ ಸೇರಿಸಿ ಹಾಗೂ ತೆಂಗಿನ ತುರಿ ಪೌಡರ್ ಅನ್ನು ಬೆರೆಸಿಕೊಳ್ಳಿ ಎಲ್ಲವನ್ನೂ ಗ್ರೈಂಡರ್‎ಗೆ ಹಾಕಿ.
5. ಇಷ್ಟೆಲ್ಲಾ ಆದ ನಂತರ ಎಲ್ಲಾ ಸಾಮಾಗ್ರಿಗಳನ್ನು ಸಂಪೂರ್ಣವಾಗಿ ಹುಡಿ ಮಾಡಿ, ಪಕ್ಕದಲ್ಲಿರಿಸಿಕೊಳ್ಳಿ
6. ಇನ್ನು ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಮಂದ ಉರಿಯಲ್ಲಿ ಹುರಿದುಕೊಳ್ಳಿ.
7. ಅವಲಕ್ಕಿ ಮಿಶ್ರಣಕ್ಕೆ ಈಗ ಎಲ್ಲಾ ಡ್ರೈ ಪ್ರುಟ್ಸ್ ಅನ್ನು ಸೇರಿಸಿಕೊಳ್ಳಿ.
8. ಒಂದು ವೇಳೆ, ನಿಮಗೆ ಹಾಲು ಸೇರಿಸಬೇಕು ಎಂದಾದಲ್ಲಿ, ತುಸು ಬೆಚ್ಚಗೆ ಮಾಡಿಕೊಂಡು ಅದಕ್ಕೆ ಸೇರಿಸಿ.
9. ಇನ್ನು ಲಾಡು ಕಟ್ಟುವುದಕ್ಕಾಗಿ, 1 ಚಮಚದಷ್ಟು ತುಪ್ಪವನ್ನು ಸೇರಿಸಿಕೊಳ್ಳಿ
10. ಇನ್ನಷ್ಟು ಸುಗಂಧಕ್ಕಾಗಿ ರೋಸ್ ವಾಟರ್ ಅನ್ನು ಸೇರಿಸಿಕೊಳ್ಳಿ
11. ಚಪ್ಪಟೆಯ ತಟ್ಟೆಯನ್ನು ತೆಗೆದುಕೊಂಡು ಇದರಿಂದ ಉಂಡೆಯನ್ನು ಸಿದ್ಧಪಡಿಸಿ. ತಾಜಾ ತುಪ್ಪದಿಂದ ತಯಾರಿಸಿಕೊಂಡಲ್ಲಿ, ಒಂದು ವಾರದವರೆಗೆ ಲಾಡು ಕೆಡುವುದಿಲ್ಲ. ಹಲವಾರು ದಿನಗಳವರೆಗೆ ಗಾಳಿಯಾಡದ ಡಬ್ಬದಲ್ಲಿ ಲಾಡನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

English summary

Simple And Quick Poha Sweet Recipe

Poha is one of the popular food items found in any Indian kitchen. You can make several dishes using poha. For snacks, poha pulav is very much in demand. Other than that, you can make poha upma, poha kheer, etc. The recipe is very simple. Have you ever made coconut laddoos or sesame seed laddoos? The recipe of poha laddoo is almost the same. Here is a simple recipe of how to prepare poha laddoo with basic ingredients. You can make it rich by adding dry fruits, condensed milk, khoya, etc.
Story first published: Tuesday, July 19, 2016, 20:07 [IST]
X
Desktop Bottom Promotion