For Quick Alerts
ALLOW NOTIFICATIONS  
For Daily Alerts

ಸಾಬುದಾನ ಪಾಯಸದ ರೆಸಿಪಿ

|

ನವರಾತ್ರಿ ಸಮಯದಲ್ಲಿ ಸಾಬುದಾನದಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಲಾಗುವುದು. ಇದರಿಂದ ಮಾಡಿದ ಖಾದ್ಯವನ್ನು ನವರಾತ್ರಿಗೆ ವ್ರತ ಮಾಡುವವರು ತಿನ್ನಬಹುದು. ಇದರಿಂದ ಪಾಯಸ ಮಾಡಬಯಸುವುದಾದರೆ ರೆಸಿಪಿ ತುಂಬಾ ಸರಳವಾಗಿದೆ.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Sabudana Kheer:Navratri Recipe

ಬೇಕಾಗುವ ಸಾಮಾಗ್ರಿಗಳು
ಸಾಬುದಾನ 1 ಕಪ್
ಹಾಲು 2 ಕಪ್
ಬೆಲ್ಲ 1 ಕಪ್
ಏಲಕ್ಕಿ ಅರ್ಧ ಚಮಚ
ಒಣದ್ರಾಕ್ಷಿ 10
ಬಾದಾಮಿ 10
ಗೋಡಂಬಿ 10
ತುಪ್ಪ 1 ಚಮಚ
ಚಿಟಿಕೆಯಷ್ಟು ಕೇಸರಿ

ಮಾಡುವ ವಿಧಾನ:

* ಚಿಕ್ಕಗಾತ್ರದ ಸಾಬುದಾನವನ್ನು 1-2 ಗಂಟೆಗಳ ನೀರಿನಲ್ಲಿ ನೆನೆ ಹಾಕಿ.

* ಹಾಲನ್ನು ಕುದಿಸಿ, ಇದೇ ಸಮಯದಲ್ಲಿ ಬೆಲ್ಲದ ಪಾಕ ರೆಡಿ ಮಾಡಿ, ಹಾಲು ಚೆನ್ನಾಗಿ ಕುದಿ ಬರುವಾಗ ಬೆಲ್ಲದ ಪಾಕ ಹಾಕಿ. ಈಗ ಸಾಬುದಾನ ಹಾಕಿ 10-15 ನಿಮಿಷ ಬೇಯಿಸಿ.

* ಈಗ ತುಪ್ಪವನ್ನು ಮತ್ತೊಂದು ಪ್ಯಾನ್ ಗೆ ಹಾಕಿ ಅದರಲ್ಲಿ ಒಣ ದ್ರಾಕ್ಷಿ ಮತ್ತು ಬಾದಾಮಿ, ಗೋಡಂಬಿ ಹಾಕಿ 2 ನಿಮಿಷ ರೋಸ್ಟ್ ಮಾಡಿ, ಪಾಯಸಕ್ಕೆ ಹಾಕಿ, ಏಲಕ್ಕಿ ಪುಡಿ ಮತ್ತು ಕೇಸರಿ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿದರೆ ಸಾಬುದಾನ ಪಾಯಸ ರೆಡಿ.

English summary

Sabudana Kheer:Navratri Recipe

This Navrati fast recipe can also be fed to kids and old people because it is relatively easy to digest. Other than that it is also an oil free recipe good for your health even when you are not fasting. You can try it as a supplement of the normal kheer you make at home.
Story first published: Tuesday, October 8, 2013, 17:15 [IST]
X
Desktop Bottom Promotion