For Quick Alerts
ALLOW NOTIFICATIONS  
For Daily Alerts

ಸವಿರುಚಿಯ ಸಿಹಿಕುಂಬಳಕಾಯಿಯ ಪಾಯಸ

|

ಶಿವರಾತ್ರಿ ಹಬ್ಬದಲ್ಲಿ ದಿನವಿಡೀ ಉಪವಾಸವಿದ್ದು, ಶಿನ ನಾಮ ಜಪಿಸುತ್ತಾ ಜಾಗರಣೆ ಕೂರುವುದು ವಾಡಿಕೆ. ಶಿವರಾತ್ರಿಗೆ ಶ್ಯಾವಿಗೆ ಪಾಯಸ ಬದಲು ಅಕ್ಕಿ ಪಾಯಸ, ಸಿಹಿ ಕುಂಬಳಕಾಯಿಯ ಪಾಯಸವನ್ನು ಹೆಚ್ಚಾಗಿ ಮಾಡಲಾಗುವುದು. ಸಿಹಿ ಕುಂಬಳಕಾಯಿ ಪಾಯಸ ತಿನ್ನಲು ರುಚಿಕರವಾಗಿರುತ್ತದೆ.

ನೀವು ಕೂಡ ಸಿಹಿ ಕುಂಬಳಕಾಯಿಯ ಪಾಯಸ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Pumpkin Payasa Recipe

ಬೇಕಾಗುವ ಪದಾರ್ಥಗಳು ಹಾಲು:
2 ಕಪ್ ಸಕ್ಕರೆ
1 ಕಪ್ ಸಿಹಿಕುಂಬಳ ಕಾಯಿ
ಏಲಕ್ಕಿ2
ಚಿಟಿಕೆ ಕೇಸರಿ
ಇಂಗಿಸಿದ ಹಾಲು 2 ಚಮಚ
2 ಟೀ ಚಮಚ ತುಪ್ಪ
2 ಟೀ ಚಮಚ ಗೋಡಂಬಿ
ಸ್ವಲ್ಪಒಣ ದ್ರಾಕ್ಷಿ

ಮಾಡುವ ವಿಧಾನ
ಬಟ್ಟಲಿನಲ್ಲಿ ಹಾಲು ಹಾಕಿ ಕುದಿಯಲು ಬಿಡಿ.

5 ನಿಮಿಷಗಳ ನಂತರ ಸಿಹಿಕುಂಬಳದ ತುರಿಯನ್ನು ಹಾಲಿಗೆ ಸೇರಿಸಿ ಬೇಯಲು ಬಿಡಿ.

ಸಿಹಿಕುಂಬಳ ಬೇಗ ಬೇಯುತ್ತದೆ. ಹಾಲು, ಕುಂಬಳಕಾಯಿ ಬೆಂದ ನಂತರ ಸಕ್ಕರೆ ಮತ್ತ್ತು ಏಲಕ್ಕಿಯನ್ನು ಹಾಕಿ.

ಸ್ವಲ್ಪ ಸಮಯದ ಬಳಿಕ ಕೇಸರಿ ಹಾಗೂ ಇಂಗಿದ ಹಾಲನ್ನು ಸೇರಿಸಿ.

ಕೆಲ ನಿಮಿಷ ಕುದಿಸಿದ ನಂತರ ಒಲೆಯ ಉರಿಯನ್ನು ನಂದಿಸಿ, ಪಾತ್ರೆಯನ್ನು ಕೆಳಗಿಳಿಸಿ. ಈಗ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ, ಬಿಸಿಯಾಗಿರುವಂತೆಯೇ ಬಡಿಸಿ.

English summary

Pumpkin Payasa Recipe | Shivarathri And Recipes | ಸಿಹಿ ಕುಂಬಳಕಾಯಿ ಪಾಯಸ | ಶಿವರಾತ್ರಿ ಮತ್ತು ರೆಸಿಪಿ

During Shivaratri after fasting people prefer to eat pumpkin recipe. Here we have given the one such yammi recipe is pumpkin payasa.
X
Desktop Bottom Promotion